Home
ಸುದ್ದಿಜಾಲ

ASUS ಗ್ರಾಹಕರಿಗೆ ಗುಡ್ ನ್ಯೂಸ್: ಮನೆಬಾಗಿಲಿಗೆ ಉಚಿತ ಸರ್ವಿಸ್ ಸೌಲಭ್ಯ!

ಜನಪ್ರಿಯ ಟೆಕ್ ಬ್ರ್ಯಾಂಡ್ ಆಸುಸ್ (ASUS) ಭಾರತದಲ್ಲಿ ತನ್ನ ಗ್ರಾಹಕ ಅನುಭವವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಹೊಸದಾಗಿ "PUR (Pickup and Return)" ಸೇವೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ವಾರಂಟಿಯೊಳಗಿನ ಆಕ್ಸೆಸರಿಗಳಿಗೆ ಉಚಿತವಾಗಿ ಮನೆಬಾಗಿಲಿಗೆ ಪಿಕಪ್ ಹಾಗೂ ರಿಟರ್ನ್ ಸೌಲಭ್ಯ ನೀಡಲಾಗುತ್ತದೆ ಎಂದು ಕಂಪೆನಿ ತಿಳಿಸಿದ್ದು, ಇದರಿಂದ ಆಸುಸ್ ಗ್ರಾಹಕರು ಸರ್ವಿಸ್ ಸೆಂಟರ್‌ಗೆ ಹೋಗುವ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು ಮತ್ತು ಸುಲಭವಾಗಿ ವಾರಂಟಿ ಬದಲಾವಣೆಯನ್ನು ಪಡೆಯಬಹುದು.

ಇಂದಿನ ದಿನಗಳಲ್ಲಿ ಲ್ಯಾಪ್‌ಟಾಪ್, ಮೌಸ್, ಕೀಬೋರ್ಡ್, ಚಾರ್ಜರ್ ಮುಂತಾದ ಉಪಕರಣಗಳು ದೈನಂದಿನ ಕೆಲಸ ಮತ್ತು ಗೇಮಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಆಕ್ಸೆಸರಿಗಳಲ್ಲಿ ದೋಷ ಉಂಟಾದಾಗ ಸರ್ವಿಸ್ ಪ್ರಕ್ರಿಯೆ ಸರಳವಾಗಿರಬೇಕು ಎಂಬುದು ಗ್ರಾಹಕರ ನಿರೀಕ್ಷೆ. ASUS PUR ಸೇವೆ ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ. ದೇಶದಾದ್ಯಂತ 17,000ಕ್ಕೂ ಹೆಚ್ಚು ಪಿನ್‌ಕೋಡ್‌ಗಳಲ್ಲಿ ಈ ಸೌಲಭ್ಯ ಲಭ್ಯವಿದೆ ಎಂದು ಆಸುಸ್ ಕಂಪೆನಿ ತಿಳಿಸಿದೆ. ಇದು ಗ್ರಾಹಕರನ್ನು ಸೆಳೆಯುವ ಉದ್ದೇಶವಾಗಿದ್ದರೂ ಅತ್ಯುತ್ತಮ ಸೇವೆಯಾಗಿದೆ.

ಈ PUR ಸೇವೆಯನ್ನು ಪಡೆಯುವ ವಿಧಾನ ಸರಳವಾಗಿದೆ. ಮೊದಲು ಗ್ರಾಹಕರು ASUS ಕಸ್ಟಮರ್ ಕೇರ್‌ಗೆ ಕರೆ ಮಾಡಿ ವಾರಂಟಿ ರಿಪ್ಲೇಸ್‌ಮೆಂಟ್ ವಿನಂತಿಯನ್ನು ದಾಖಲಿಸಬೇಕು. ನಂತರ ಕಂಪನಿ ಉತ್ಪನ್ನದ ವಾರಂಟಿ ಸ್ಥಿತಿ ಮತ್ತು ಸೇವಾ ವ್ಯಾಪ್ತಿಯನ್ನು ಪರಿಶೀಲಿಸುತ್ತದೆ. ಅರ್ಹತೆ ದೃಢಪಟ್ಟ ಬಳಿಕ ಕೂರಿಯರ್ ಮೂಲಕ ಉತ್ಪನ್ನವನ್ನು ಮನೆಬಾಗಿಲಿನಿಂದ ಸಂಗ್ರಹಿಸಿ, ಬದಲಾವಣೆ ಅಥವಾ ದುರಸ್ತಿ ಪೂರ್ಣಗೊಂಡ ನಂತರ ಅದನ್ನು ಮತ್ತೆ ಗ್ರಾಹಕರ ವಿಳಾಸಕ್ಕೆ ತಲುಪಿಸಲಾಗುತ್ತದೆ. ಈ ಪ್ರಕ್ರಿಯೆ ಸಂಪೂರ್ಣವಾಗಿ ವ್ಯವಸ್ಥಿತವಾಗಿದ್ದು, ಗ್ರಾಹಕರ ಸಮಯ ಮತ್ತು ಪ್ರಯತ್ನವನ್ನು ಉಳಿಸುತ್ತದೆ.

ASUS ಗ್ರಾಹಕರಿಗೆ ಗುಡ್ ನ್ಯೂಸ್: ಮನೆಬಾಗಿಲಿಗೆ ಉಚಿತ ಸರ್ವಿಸ್ ಸೌಲಭ್ಯ!

ASUS ಇಂಡಿಯಾದ "4A" ಆಫ್ಟರ್-ಸೇಲ್ಸ್ ಮಾದರಿಯಡಿ ಈ PUR ಯೋಜನೆ ಕಾರ್ಯನಿರ್ವಹಿಸುತ್ತದೆ. Assured Quality, Always-on Support, All-around Coverage ಮತ್ತು Added-value Services ಎಂಬ ನಾಲ್ಕು ಅಂಶಗಳ ಆಧಾರದ ಮೇಲೆ ಗ್ರಾಹಕ ಸೇವೆಯನ್ನು ಬಲಪಡಿಸುವುದು ಇದರ ಉದ್ದೇಶ. ವಿಶೇಷವಾಗಿ Added-value Services ಭಾಗದಲ್ಲಿ PUR ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಕಂಪ್ಯೂಟರ್‌ಗಳಷ್ಟೇ ಅಲ್ಲ, ಆಕ್ಸೆಸರಿಗಳಿಗೂ ಸಮಾನ ಮಹತ್ವ ನೀಡಲಾಗುತ್ತಿದೆ ಎಂದು ಆಸುಸ್ ಕಂಪೆನಿ ಹೇಳಿಕೊಂಡಿದೆ.

ಈ PURಸೇವೆಯಡಿ ವೈರ್‌ಲೆಸ್ ಮತ್ತು ಬ್ಲೂಟೂತ್ ಮೌಸ್‌ಗಳು, ವೈರ್‌ಲೆಸ್ ಕೀಬೋರ್ಡ್‌ಗಳು, ಬ್ಯಾಕ್‌ಪ್ಯಾಕ್‌ಗಳು, ಪವರ್ ಅಡಾಪ್ಟರ್‌ಗಳು, GaN ಚಾರ್ಜರ್‌ಗಳು, ಡಾಕ್‌ಗಳು, ಡಾಂಗಲ್‌ಗಳು, ಜೊತೆಗೆ RAM ಮತ್ತು SSD ಸಂಗ್ರಹ ಸಾಧನಗಳು ಒಳಗೊಂಡಿವೆ. ಇನ್ನು ಗ್ರಾಹಕರು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 6ರೊಳಗೆ 1800 209 0365 ಸಂಖ್ಯೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ವಾರಂಟಿ ಅವಧಿಯೊಳಗಿನ ಆಕ್ಸೆಸರಿಗಳಿದ್ದರೆ, ಉಚಿತ ಡೋರ್‌ಸ್ಟೆಪ್ ಸೇವೆ ಪಡೆಯಲು ಇದು ಉತ್ತಮ ಅವಕಾಶವಾಗಿದೆ.

"ASUS PUR ನೊಂದಿಗೆ, ದೈನಂದಿನ ಕೆಲಸ ಮತ್ತು ಆಟಕ್ಕೆ ಅಗತ್ಯವಾದ ಪರಿಕರಗಳಿಗೆ ಸಾಧನಗಳನ್ನು ಮೀರಿ ಅನುಕೂಲತೆ ಮತ್ತು ವಿಶ್ವಾಸಾರ್ಹತೆಗೆ ನಾವು ನಮ್ಮ ಬದ್ಧತೆಯನ್ನು ವಿಸ್ತರಿಸುತ್ತಿದ್ದೇವೆ. ವಾರಂಟಿ ಬದಲಿಗಳಿಗಾಗಿ ಉಚಿತ ಮನೆ ಬಾಗಿಲಿಗೆ ಪಿಕಪ್ ಮತ್ತು ವಿತರಣೆಯನ್ನು ನೀಡುವ ಮೂಲಕ, ನಮ್ಮ ಗ್ರಾಹಕರಿಗೆ ಡೌನ್‌ಟೈಮ್ ಅನ್ನು ಕಡಿಮೆ ಮಾಡಲು ಮತ್ತು ನಿಜವಾಗಿಯೂ ಚಿಂತೆ-ಮುಕ್ತ ಮಾಲೀಕತ್ವದ ಅನುಭವವನ್ನು ನೀಡಲು ನಾವು ಗುರಿಯನ್ನು ಹೊಂದಿದ್ದೇವೆ ಎಂದು ASUS ಟೆಕ್ನಾಲಜಿ ಇಂಡಿಯಾದ ಗ್ರಾಹಕ ಮತ್ತು ಗೇಮಿಂಗ್ ಪಿಸಿಯ ರಾಷ್ಟ್ರೀಯ ಸೇವಾ ವ್ಯವಸ್ಥಾಪಕ ವಿಶಾಲ್ ಎಂ ಅವರು ಹೇಳಿದ್ದಾರೆ.

Best Mobiles in India

English summary
ASUS has launched its new Pickup and Return (PUR) service in India, offering free doorstep pickup and return for in-warranty accessories. The service is available across 17,000+ pin codes, making warranty replacements easier and hassle-free for customers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+