Amazon Great Indian Festival 2020:ಪವರ್‌ ಬ್ಯಾಂಕ್‌ಗಳಿಗೆ ಭರ್ಜರಿ ಡಿಸ್ಕೌಂಟ್!


ಈಗಾಗ್ಲೆ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಭಾರತದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 19 ರಿಂದ ಜನವರಿ 22 ರವರೆಗೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೆಲ್‌ ಮೇಳ ಆರಂಬಿಸಿದೆ. ಲಭ್ಯವಿರುವ ಎಲ್ಲಾ ಪ್ರಾಡಕ್ಟ್‌ಗಳ ಮೇಲೂ ಆಕರ್ಷಕ ರಿಯಾಯಿತಿ ಘೋಷಿಸಿರುವುದರಿಂದ ಗ್ರಾಹಕರು ತಮ್ಮ ನೆಚ್ಚಿನ ಪ್ರಾಡಕ್ಟ್‌ಗಳನ್ನ ಖರೀದಿಸುತ್ತಿದ್ದಾರೆ. ಇನ್ನು ಈ ಮೇಳದಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌,ಸ್ಮಾರ್ಟ್‌ಟಿವಿ, ಅಷ್ಟೇ ಯಾಕೆ ಪ್ರಸಿದ್ದ ಕಂಪೆನಿಗಳ ಪವರ್‌ ಬ್ಯಾಂಕ್‌ಗಳ ಮೇಲೂ ರಿಯಾಯಿತಿ ನೀಡಲಾಗಿದೆ. ಅದರಲ್ಲೂ ಕೆಲ ಪವರ್‌ ಬ್ಯಾಂಕ್‌ಗಳು ಕೇವಲ 1,500 ರೂ ಒಳಗಿನ ಬೆಲೆ ಲಭ್ಯವಾಗ್ತಿವೆ.

ಹೌದು, ಪ್ರಸಿದ್ದ ಇ-ಕಾಮರ್ಸ್‌ ತಾಣ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2020ರಲ್ಲಿ ನಿರೀಕ್ಷೆಗೂ ಮೀರಿದ ರಿಯಾಯಿತಿ ದರದಲ್ಲಿ ಪ್ರಾಡಕ್ಟ್‌ಗಳನ್ನ ಖರೀದಿಸಬಹುದಾಗಿದ್ದು, ಸದ್ಯ 1,500ರೂ ಒಳಗಿನ ಬೆಲೆಯಲ್ಲೂ ಭಾರತದಲ್ಲಿನ ಅತ್ಯುತ್ತಮ ಪವರ್‌ ಬ್ಯಾಂಕ್‌ಗಳನ್ನ ಖರೀದಿಸಬಹುದಾಗಿದೆ. ಸದ್ಯ ರಿಯಾಯಿತಿ ದರದಲ್ಲಿ ಲಭ್ಯವಾಗ್ತಿಉರುವ ಭಾರತದಲ್ಲಿನ ಅತ್ಯುತ್ತಮ ಪವರ್‌ ಬ್ಯಾಂಕ್‌ಗಳು ಯಾವುವು.?ಅವುಗಳ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಶಿಯೋಮಿ ಮಿ 10000mAh

ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಪವರ್‌ ಬ್ಯಾಂಕ್‌ಗಳಲ್ಲಿ ಒಂದಾದ ಶಿಯೋಮಿ ಕಂಪೆನಿಯ ಮಿ 10000mAh ಪವರ್‌ ಬ್ಯಾಂಕ್‌ ಇದೀಗ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಕೇವಲ 899 ರೂ ಗಳಿಗೆ ಲಭ್ಯವಾಗಲಿದೆ. ಇನ್ನು ಈ ಪವರ್‌ ಬ್ಯಾಂಕ್‌ 18W ಫಾಸ್ಟ್‌ ಚಾರ್ಜಿಂಗ್‌ ಸಾಮರ್ಥ್ಯವನ್ನ ಹೊಂದಿದ್ದು, 5V/2A, 9V/ 2A ಮತ್ತು 12V/1.5A ಚಾರ್ಜಿಂಗ್‌ ಔಟ್‌ಪುಟ್‌ ನೀಡಲಿದೆ. ಇದು ಅಲ್ಯೂಮಿನಿಯಮ್‌ ಕೇಸಿಂಗ್‌ ಕವಚವನ್ನ ಹೊಂದಿದ್ದು, ಒವರ್‌ ಚಾರ್ಜಿಂಗ್‌, ಶಾರ್ಟ್‌ ಸರ್ಕ್ಯುಟ್‌ ನಂತಹ ಇತರೆ ಎಲ್ಲಾ ರೀತಿಯಲ್ಲು ರಕ್ಷಣೆ ನೀಡಲು 9 ಲೇಯರ್ಸ್‌ ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ.

ಆಂಬ್ರೇನ್ ಪಿಪಿ -11 10000mAh

ಇದು ಪಾಲಿಮರ್‌ ಲಿಥಿಯಂ ಬ್ಯಾಟರಿ ಒಳಗೊಂಡಿರುವ ಪವರ್‌ ಬ್ಯಾಂಕ್‌ ಆಗಿದ್ದು, 10000mAh ಬ್ಯಾಟರಿ ಪ್ಯಾಕಪ್‌ ನೀಡಲಿದೆ. ಇನ್ನು ಈ ಪವರ್‌ ಬ್ಯಾಂಕ್‌ ಹೆಚ್ಚಿನ ದಕ್ಷತೆ ಹಾಗೂ ಉತ್ತಮ ಗುಣಮಟ್ಟದ ಪವರ್‌ಬ್ಯಾಂಕ್‌ ಆಗಿದೆ. ಇದು ಡ್ಯುಯೆಲ್‌ ಯುಎಸ್‌ಬಿ ಪೋರ್ಟ್‌ ಹೊಂದಿದ್ದು, ಒಂದೇ ಬಾರಿಗೆ ಎರಡು ಡಿವೈಸ್‌ಗಳನ್ನ ಚಾರ್ಜ್‌ ಮಾಡಬಹುದಾಗಿದೆ. ಅಲ್ಲದೆ ಇದು 2.1A ಪವರ್‌ ಔಟ್‌ಪುಟ್‌ ನೀಡಲಿದೆ. ಇನ್ನು ಈ ಪವರ್‌ ಬ್ಯಾಂಕ್‌ ಲೈಟ್‌ವೇಟ್‌ ತೂಕವನ್ನ ಹೊಂದಿದ್ದು ಕ್ಯಾರಿ ಮಾಡುವುದಕ್ಕೆ ಆರಾಮದಾಯಕವಾಗಿದೆ. ಸದ್ಯ ರಿಯಾಯಿತಿ ದರದಲ್ಲಿ ಕೇವಲ 549 ರೂ,ಗಳಿಗೆ ಲಭ್ಯವಿದೆ.

ಮಿ 20000mAH ಪವರ್‌ ಬ್ಯಾಂಕ್‌ 2i

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಕೇವಲ 10000mAH ಪವರ್‌ ಬ್ಯಾಂಕ್‌ ಮಾತ್ರವಲ್ಲ 20000mAH ಸಾಮರ್ಥ್ಯದ ಪವರ್‌ ಬ್ಯಾಂಕ್‌ಗಳ ಮೇಲೂ ಕೂಡ ಡಿಸ್ಕೌಂಟ್‌ ನೀಡಲಾಗಿದೆ. ಸದ್ಯ ಶಿಯೋಮಿ ಕಂಪೆನಿಯ Mi 20000mAH ಪವರ್‌ ಬ್ಯಾಂಕ್‌ ರಿಯಾಯಿತಿ ದರದಲ್ಲಿ ಕೇವಲ 1,499 ರೂ ಗಳಿಗೆ ಲಭ್ಯವಾಗಲಿದೆ. ಈ ಪವರ್‌ ಬ್ಯಾಂಕ್ 18W ಫಾಸ್ಟ್‌ ಚಾರ್ಜಿಂಗ್‌ ಸಾಮರ್ಥ್ಯವನ್ನ ಹೊಂದಿದ್ದು, 5V/2A, 9V/ 2A ಮತ್ತು 12V/1.5A ಚಾರ್ಜಿಂಗ್‌ ಔಟ್‌ಪುಟ್‌ ಅನ್ನ ನೀಡಲಿದೆ. ಶಾರ್ಟ್‌ ಸರ್ಕ್ಯುಟ್‌, ಓವರ್‌ ಕರೇಂಟ್‌, ಒವರ್‌ ವೋಲ್ಟೇಜ್‌, ಓವರ್‌ ಚಾರ್ಜ್‌, ಮತ್ತು ಡಿಸ್ಚಾರ್ಜ್‌ ಪ್ರೊಟೆಕ್ಷನ್‌ ನೀಡಲಿದೆ.

ರಿಯಲ್‌ಮಿ 10,000mAHಪವರ್‌ಬ್ಯಾಂಕ್‌

ರಿಯಲ್‌ಮಿ ಕಂಪೆನಿಯ ರಿಯಲ್‌ಮಿ 10,000mAHಪವರ್‌ ಬ್ಯಾಂಕ್‌ ಕೂಡ ಅತ್ಯುತ್ತಮ ಪವರ್‌ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, ಈ ಪವರ್‌ ಬ್ಯಾಂಕ್‌ ರಿಯಾಯಿತಿ ದರದಲ್ಲಿ ಕೇವಲ 1,299 ರೂ,ಗಳಿಗೆ ಲಭ್ಯವಿದೆ. ಇನ್ನು ಈ ಪವರ್‌ ಬ್ಯಾಂಕ್‌ ಟು ವೇ 18W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಅನ್ನ ಹೊಂದಿದ್ದು, ಟೈಪ್‌ ಸಿ ಮತ್ತು ಟೈಪ್‌ ಎ ಡ್ಯುಯೆಲ್‌ ಔಟ್‌ಪುಟ್‌ ಅನ್ನ ಒಳಗೊಂಡಿದೆ. ಜೊತೆಗೆ ಒವರ್‌ ಚಾರ್ಜಿಂಗ್‌, ಶಾರ್ಟ್‌ ಸರ್ಕ್ಯುಟ್, ಸೇರಿದಂತೆ 12 ಲೇಯರ್ಸ್‌ ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಸ್ಯಾಮ್‌ಸಂಗ್‌ 10000mAH ಪವರ್‌ ಬ್ಯಾಂಕ್‌

ಇನ್ನು ಸ್ಯಾಮ್‌ಸಂಗ್‌ ಕಂಪೆನಿಯ ಸ್ಯಾಮ್‌ಸಂಗ್‌ 10000mAH ಪವರ್‌ ಬ್ಯಾಂಕ್‌ ಕೂಡ ಅತ್ಯುತ್ತಮವಾದ ಪವರ್‌ ಬ್ಯಾಂಕ್‌ ಆಗಿದೆ. ಈ ಪವರ್‌ ಬ್ಯಾಂಕ್‌ ಲಿಥಿಯಂ ಇಯನ್‌ ಬ್ಯಾಟರಿ ಹೊಂದಿದ್ದು,ಉತ್ತಮ ದಕ್ಷತೆಯನ್ನ ಹೊಂದಿದೆ. ಅಲ್ಲದೆ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆಯನ್ನ ಸಹ ಹೊಂದಿದೆ. ಇನ್ನು ಇನ್‌ ಆಂಡ್‌ ಔಟ್‌ ಡ್ಯುಯೆಲ್‌ ಫೋರ್ಟ್‌ ಸಪೊರ್ಟ್‌ ಮಾಡಲಿದ್ದು, ಇದು ಮಲ್ಟಿಪಲ್‌ ಫಾಸ್ಟ್‌ ಚಾರ್ಜಿಂಗ್‌ ಹೊಂದಿದೆ. ಇದು ಮೆಟಾಲಿಂಗ್‌ ಸ್ಲಿಮ್‌ ಡಿಸೈನ್‌ ಚಾರ್ಜಿಂಗ್‌ ಪಾಯಿಂಟ್‌ ಹೊಂದಿದ್ದು, ಒಂದು ವರ್ಷದ ವಾರೆಂಟಿಯನ್ನ ಹೊಂದಿದೆ. ಸದ್ಯ ರಿಯಾಯಿತಿ ದರದಲ್ಲಿ ಕೇವಲ 1,299 ರೂಗಳಿಗೆ ಲಭ್ಯವಿದೆ.

Most Read Articles
Best Mobiles in India
Read More About: power banks technology amazon sale

Have a great day!
Read more...

English Summary

Amazon Great Indian Festival 2020:Power banks from Xiaomi, Realme, Samsung and others under Rs 1,500.to know more visit to kannada.gizbot.com