ಟಿಕ್‌ಟಾಕ್‌ಗೆ ಸೆಡ್ಡು ಹೊಡೆಯಲಿದೆ ಫೇಸ್‌ಬುಕ್‌ನ ಈ ಹೊಸ ಆಪ್!


ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಟೆಕ್ನಾಲಜಿ ಮುಂದುವರೆದಷ್ಟು ಟೆಕ್‌ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅಲ್ಲದೆ ಸಾಕಷ್ಟು ವಿಭಿನ್ನ ಮಾದರಿಯ ಆಪ್‌ ಆಧಾರಿತ ಸೇವೆಗಳು ಕೂಡ ಇಂದು ಲಭ್ಯವಿವೆ. ಅಷ್ಟೇ ಅಲ್ಲ ಸೊಶೀಯಲ್‌ ಮಿಡಿಯಾ ಆಪ್‌ಗಳು ಕೂಡ ಇವತ್ತಿನ ಜಮಾನದಲ್ಲಿ ಸಾಕಷ್ಟು ಜನಪ್ರಿಯತೆಯನ್ನ ಸಹ ಪಡೆದುಕೊಂಡಿವೆ. ಸದ್ಯ ಪ್ರಸ್ತುತ ದಿನಗಳಲ್ಲಿ ಫೇಸ್‌ಬುಕ್‌, ಟಿಕ್‌ಟಾಕ್‌ನಂತಹ ಆಪ್‌ಗಳು ಸಾಕಷ್ಟು ಜನಪ್ರಿಯತೆಯನ್ನ ಪಡದುಕೊಂಡಿದ್ದು, ಸದ್ಯ ಇದೀಗ ಫೇಸ್‌ಬುಕ್‌ ತನ್ನ ಮತ್ತೊಂದು ಹೊಸ ಆಪ್‌ ಅನ್ನು ಪರಿಚಯಿಸಿದೆ.

Advertisement

ಹೌದು, ಇದು ಸೊಶೀಯಲ್‌ ಮೀಡಿಯಾ ಆಪ್‌ಗಳ ಜಮಾನ. ಹೇಳಿಕೇಳಿ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಸಾಮಾನ್ಯ ವಿಚಾರವೂ ಕೂಡ ಕ್ಷಣಾರ್ಧದಲ್ಲಿ ಎಲ್ಲಾ ಕಡೆ ವೈರಲ್‌ ಆಗಿ ಬಿಡುತ್ತೆ. ಇನ್ನು ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಹೊಸ ಮಾದರಿಯ ಆಪ್‌ ಒಂದನ್ನ ಪರಿಚಯಿಸಿದ್ದು, ಈ ಆಪ್‌ ಟಿಕ್‌ಟಾಕ್‌ ಆಪ್‌ಗೆ ಸೆಡ್ಡು ಹೊಡೆಯಲಿದೆ ಎನ್ನಲಾಗ್ತಿದೆ. ಅಷ್ಟಕ್ಕೂ ಈ ಆಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Advertisement

ಸೊಶೀಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್ ಕೊಲ್ಲಾಬ್ ಎಂಬ ಹೊಸ ಆಪ್ ಅನ್ನು ಪರಿಚಯಿಸಿದ್ದು. ಇದು ಜನಪ್ರಿಯ ವಿಡಿಯೋ-ಶೇರಿಂಗ್‌ ಅಪ್ಲಿಕೇಶನ್ ಟಿಕ್‌ಟಾಕ್‌ಗೆ ಪೈಫೋಟಿಯನ್ನ ನೀಡಲಿದೆ ಎನ್ನಲಾಗ್ತಿದೆ. ಇದು ಫೇಸ್‌ಬುಕ್‌ನ ಪ್ರಾಯೋಗಿಕ ಅಪ್ಲಿಕೇಶನ್ ಆಗಿದ್ದು, ಅಪ್ಲಿಕೇಶನ್ ಪ್ರಸ್ತುತ ಐಒಎಸ್ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ ಮಾತ್ರ ಲಭ್ಯವಿದೆ. ಇನ್ನು ಈ ಆಪ್‌ ಮ್ಯೂಸಿಕ್‌ನಿಂದ ಪ್ರಾರಂಭವಾಗುವ ಮೂಲ ವೀಡಿಯೊಗಳನ್ನು ಕ್ರಿಯೆಟ್‌ ಮಾಡಲು, ವೀಕ್ಷಿಸಲು ಮತ್ತು ಕೊಲೇಜ್‌ ಮಾಡಲು ಹಾಗೂ ಹೊಂದಿಸಲು ಅವಕಾಶ ನಿಡುತ್ತದೆ.

ಅಲ್ಲದೆ ಈ ಅಪ್ಲಿಕೇಶನ್ ಕ್ರಿಯೆಟರ್ಸ್‌ ಮತ್ತು ಅಭಿಮಾನಿಗಳನ್ನು ಒಂದೇ ವೇದಿಕೆಗೆ ತರಲಿದೆ. ಕೊಲ್ಲಾಬ್‌ ಆಪ್ಲಿಕೇಶನ್‌ನಲ್ಲಿ ಹೊಸ ಮಾದರಿಯ ಮ್ಯೂಸಿಕ್‌ ವೀಡಿಯೊಗಳನ್ನು ಕ್ರಿಯೆಟ್‌ ಮಾಡಬಹುದಾಗಿದ್ದು, ಇತರೆ ವ್ಯಕ್ತಿಗಳನ್ನ ಅನ್ಲಾಕ್ ಮಾಡಲು ಸಹ ಅವಕಾಶ ನೀಡಿದೆ. ಜೊತೆಗೆ ಬಳಕೆದಾರರು ಸಿಂಕ್‌ನಲ್ಲಿ ಪ್ಲೇ ಆಗುತ್ತಿರುವ ಸಣ್ಣ ವೀಡಿಯೊಗಳನ್ನು ಮೂರ ವಿಭಾಗದಲ್ಲಿ ವಿಭಜಿಸಬಹುದಾಗಿದೆ. ಅಪ್ಲಿಕೇಶನ್‌ನೊಂದಿಗೆ, ನಿಮ್ಮ ಸ್ವಂತ ರೆಕಾರ್ಡಿಂಗ್‌ನಲ್ಲಿ ಕ್ರಿಯೆಟ್‌ ಮಾಡಿರುವ ವೀಡಿಯೋವನ್ನ ಸಹ ಸೇರಿಸಬಹದು. ಅಥವಾ ನೀವೇ ಸಂಯೋಜನೆ ಮಾಡಿರುವ ವೀಡಿಯೋವನ್ನು ಪೂರ್ಣಗೊಳಿಸುವ ವ್ಯವಸ್ಥೆಯನ್ನು ಸಹ ನೀಡಲಾಗಿದೆ.

ಇನ್ನು ಈ ಅಪ್ಲಿಕೇಶನ್ ಬಳಸಲು ಅಥವಾ ವೀಡಿಯೊ ರಚಿಸಲು ನಿಮಗೆ ಯಾವುದೇ ಸಂಗೀತ ಅನುಭವದ ಅಗತ್ಯವಿಲ್ಲ. ಒಮ್ಮೆ ನೀವು ಕೊಲಾಬ್ ಬಳಸಿ ವೀಡಿಯೊವನ್ನು ರಚಿಸಿದ ನಂತರ, ಇತರರು ಅದನ್ನು ವೀಕ್ಷಿಸಲು ಮತ್ತು ಮತ್ತಷ್ಟು ಸುದಾರಣೆ‌ ಮಾಡಲು ನೀವು ಅದನ್ನು ಪ್ರಕಟಿಸಬಹುದಾಗಿದೆ. ಇದಲ್ಲದೆ ನಿಮ್ಮ Instagram, Facebook ನಲ್ಲಿಯೂ ಸಹ ಇದನ್ನ ಹಂಚಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ನೋಡುವುದಾದರೆ ಟಿಕ್‌ಟಾಕ್‌ ಹೇಗೆ ಕಾರ್ಯನಿರ್ವಹಿಸಯತ್ತಿದೆಯೋ ಅದೇ ಮಾದರಿಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವತ್ತ ಈ ಆಪ್‌ ಅನ್ನು ಅಭಿವೃದ್ದಿ ಪಡಿಸಲಾಗ್ತಿದೆ.

Best Mobiles in India

English Summary

Social networking giant Facebook has introduced a new app that will give competition to the popular video-sharing app TikTok.to know more visit to kannada.gizbot.com