ತಂದೆ, ತಾಯಿ ಮತ್ತು ತಂಗಿಯನ್ನು ಇರಿದು ಕೊಂದ ಪಬ್​ಜಿ ಗೇಮ್ ವ್ಯಸನಿ!


ವಿಶ್ವದಾದ್ಯಂತ ಯುವಕರನ್ನು ಆಕರ್ಷಿಸಿರುವ ಆನ್​ಲೈನ್​ ಗೇಮ್ ಪಬ್​ಜಿ ವ್ಯಸನಕ್ಕೆ ಸಿಲುಕಿದ್ದ 19 ವರ್ಷದ ಯುವಕನೋರ್ವ ತನ್ನ ತಂದೆ, ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕಿಡಾಗಿದ್ದಾನೆ. ನೆನ್ನೆ ಬುಧವಾರ ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದ ಸೂರಜ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

12ನೇ ತರಗತಿಯಲ್ಲಿ ಓದುತ್ತಿರುವ ಸೂರಜ್ ಅಲಿಯಾಸ್ ಸರ್ನಾಮ್ ವರ್ಮಾ ಎಂಬ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದು, ತನ್ನ ತಂದೆ ಮಿಥಿಲೇಶ್, ತಾಯಿ ಸಿಯಾ ಹಾಗೂ ತಂಗಿಯನ್ನು ಕೊಲೆ ಮಾಡಿದ್ದಾನೆ. ಸಿಟ್ಟಿನಿಂದಾಗಿ ತನ್ನ ಕುಟುಂಬವನ್ನೇ ಬಲಿ ತೆಗೆದುಕೊಂಡಿರುವ ಈತ ಬ್ಯಾಟಲ್ ಗೇಮ್ ಪಬ್‌ಜಿ ವ್ಯಸನಕ್ಕೆ ಸಿಲುಕಿದ್ದಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

ಕಲಿಕೆಯಲ್ಲಿ ಮನಸ್ಸಿರದ ಸೂರಜ್ ಶೋಕಿ ಹಾಗೂ ಐಶಾರಾಮಿ ಜೀವನಕ್ಕೆ ಮಾರು ಹೋಗಿ ಬೇಜವಾಬ್ದಾರಿಯಿಂದ ನಡೆಯುತ್ತಿದ್ದ. ಈ ಬಗ್ಗೆ ಪೋಷಕರು ಎಷ್ಟೇ ಬುದ್ಧಿ ಹೇಳಿದರೂ ಸುಧಾರಿಸದ ಮಗನ ಬಗ್ಗೆ ರೋಸಿ ಹೋಗಿ ಮನೆಯಲ್ಲಿ (ಆ.15ರಂದು) ಚೆನ್ನಾಗಿ ಬಾರಿಸಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಮಗ ಇಡಿಯ ಕುಟುಂಬವನ್ನೇ ಕೊಲ್ಲಲು ಅಂದೇ ನಿರ್ಧರಿಸಿದ್ದ ಎಂದು ಹೇಳಲಾಗಿದೆ.

ಆದರೆ, ಯಾವಾಗಲೂ ತನ್ನ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದ ಸೂರಜ್ ಸದಾ ಪಬ್ಬಿ ಆನ್​ಲೈನ್​ ಆಟದಲ್ಲೇ ಮುಳುಗಿರುತ್ತಿದ್ದ. ಕಾಲೇಜಿಗೆ ಚಕ್ಕರ್​ ಹಾಕಿ, ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಆನ್​ಲೈನ್​ ಆಟವನ್ನೇ ಆಡುತ್ತಿದ್ದ. ಆತ ಪಬ್​ಜಿ ವ್ಯಸನಕ್ಕೆ ಸಿಲುಕಿದ್ದರಿಂದಲೇ ತನ್ನ ಪೋಷಕರನ್ನು ಹತ್ಯೆಗೈಯಲು ಸಾಧ್ಯವಾಗಿದೆ ಎಂದು ಎಂದು ಪೊಲೀಸರು ಅನುಮಾನ ಪಟ್ಟಿದ್ದಾರೆ.

Advertisement

ಕೊಲೆ ಮಾಡುವ ಮುಂಚೆ ಸೂರಜ್​ ನಡವಳಿಕೆ ಸಹಜವಾಗಿಯೇ ಇತ್ತು ಎನ್ನಲಾಗಿದೆ. ಕೊಲೆ ಮಾಡುವ ಮುನ್ನ ಪೋಷಕರ ಜೊತೆಗೆ ಇರುವ ಫೋಟೋ ಆಲ್ಬಂ ಸಹ ನೋಡಿದ್ದಾನೆ. ನಂತರ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ತಂದೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ಪಕ್ಕದಲ್ಲೇ ಮಲಗಿದ್ದ ತಾಯಿ ಹಾಗೂ ತಂಗಿಗೂ ಚಾಕುವಿನಿಂದ ಚುಚ್ಚಿದ್ದಾನೆ.

ಇನ್ನು ಸೂರಜ್​ ವಾಟ್ಸಾಪ್ ಗ್ರೂಪ್​ವೊಂದರಲ್ಲಿ ಯುವತಿಯೂ ಸೇರಿದಂತೆ ಒಂಬತ್ತರಿಂದ ಹತ್ತು ಮಂದಿ ಸ್ನೇಹಿತರು ಕಾಲೇಜಿಗೆ ಬಂಕ್​ ಹಾಕುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಮತ್ತು ಕಾಲ ಕಳೆಯುವ ಬಗ್ಗೆಯೂ ಉಪಾಯಗಳನ್ನು ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಕೊಲೆ ಎಸಗಿದ ನಂತರ ಸೂರಜ್​ ತನ್ನನ್ನು ಕಾನೂನಿನಿಂದ ರಕ್ಷಿಸಿ ಎಂದು ಗೋಳಿಡುತ್ತಿದ್ದಾನೆ.

Best Mobiles in India

Advertisement

English Summary

While family members told police that they found Suraj to be a "quiet and nice" fellow, his neighbours said there were frequent quarrels in the family over his behaviour. to know more visit to kannada.gizbot.com