ನಿಮಗೆ ಗೊತ್ತಾ..? ಮುಂದಿನ 48 ಗಂಟೆ ಇಂಟರ್‌ನೆಟ್‌ ಇರಲ್ಲ..!


ಮುಂದಿನ 48 ಗಂಟೆಗಳಲ್ಲಿ ಜಾಗತಿಕವಾಗಿ ಅಂತರ್ಜಾಲ ಬಳಕೆದಾರರು ಇಂಟರ್‌ನೆಟ್‌ ಸಮಸ್ಯೆಯನ್ನು ಎದುರಿಸಲಿದ್ದು, ಅಂತರ್ಜಾಲ ಜಗತ್ತು ಮುಂದಿನ ಎರಡು ದಿನಗಳ ಕಾಲ ಸ್ಥಬ್ಧಗೊಳ್ಳುವ ಸಾಧ್ಯತೆಯಿದೆ. ವೇಗದ ಜಗತ್ತಿನಲ್ಲಿ ಎಲ್ಲವೂ ಆನ್‌ಲೈನ್‌ ಆಗಿರುವಾಗ ಎರಡು ದಿನ ಇಂಟರ್‌ನೆಟ್‌ ಇರುವುದಿಲ್ಲ ಎನ್ನುವ ಸುದ್ದಿಯು ನೆಟ್ಟಿಗರನ್ನು ಕಂಗೆಡಿಸಿದೆ.

Advertisement

ಹೌದು, ಮುಂದಿನ 48 ಗಂಟೆಗಳಲ್ಲಿ ICANN ಸಂಸ್ಥೆ ಕೀ ಡೋಮೆನ್‌ ಸರ್ವರ್‌ಗಳ ವಾಡಿಕೆಯ ನಿರ್ವಹಣೆ ಕಾರ್ಯ ನಡೆಸಲಿದ್ದು, ಆ ಸಮಯದಲ್ಲಿ ಇಂಟರ್‌ನೆಟ್‌ನಲ್ಲಿ ಜಾಗತಿಕವಾಗಿ ಸಮಸ್ಯೆ ಎದುರಾಗಲಿದೆ ಎಂದು ರಷ್ಯಾ ಟುಡೇ ವರದಿ ಮಾಡಿದ್ದು, ಇಂಟರ್‌ನೆಟ್‌ ಬಳಕೆದಾರರನ್ನು ಆತಂಕಕ್ಕಿಡು ಮಾಡಿದೆ. ಆಗಿದ್ರೇ, ಇಂಟರ್‌ನೆಟ್‌ ಸ್ಥಗಿತಕ್ಕೆ ಏನು ಕಾರಣ..? ಈ ಸ್ಥಗಿತ ಅನಿವಾರ್ಯನಾ..? ಸಮಸ್ಯೆಯನ್ನು ಯಾರು ಅನುಭವಿಸಲಿದ್ದಾರೆ ಎಂಬುದನ್ನು ಮುಂದೆ ನೋಡಿ..

Advertisement

ಸರ್ವರ್‌ ಡೌನ್‌ ಆಗಲಿದೆ

ರಷ್ಯಾ ಟುಡೇ ವರದಿ ಮಾಡಿರುವಂತೆ ಮುಂದಿನ 48 ಗಂಟೆಗಳ ಕಾಲ ನೆಟ್‌ವರ್ಕ್‌ ಸಂಪರ್ಕದಲ್ಲಿ ಸಮಸ್ಯೆ ಎದುರಾಗಲಿದೆ. ಮುಖ್ಯ ಡೋಮೆನ್‌ ಸರ್ವರ್‌ಗಳು ಮತ್ತು ಅದಕ್ಕೆ ಸಂಬಂಧಿಸಿದ ಸೌಲಭ್ಯಗಳ ಸರ್ವರ್‌ಗಳು ಕೂಡ ಡೌನ್‌ ಆಗಲಿರುವುದು ಇಂಟರ್‌ನೆಟ್‌ ಸಮಸ್ಯೆಗೆ ಕಾರಣವಾಗಲಿದೆ.

ಕ್ರಿಪ್ಟೋಗ್ರಾಫಿಕ್‌ ಕೀ ಬದಲಾವಣೆ

The Internet Corporation of Assigned Names and Numbers (ICANN) ಸಂಸ್ಥೆಯು ನಿರ್ವಹಣೆ ಕಾರ್ಯದ ಅವಧಿಯಲ್ಲಿ ಇಂಟರ್‌ನೆಟ್‌ ಅಡ್ರಸ್ ಬುಕ್‌ ಅಥವಾ ಡೋಮೆನ್‌ ನೇಮ್‌ ಸಿಸ್ಟಮ್‌ ರಕ್ಷಣೆಗೆ ಅನುಕೂಲವಾಗುವಂತೆ ಕ್ರಿಪ್ಟೋಗ್ರಾಫಿಕ್‌ ಕೀ ಬದಲಾವಣೆಯನ್ನು ಮಾಡುತ್ತದೆ.

ಸೈಬರ್‌ ದಾಳಿಗಳ ನಿಯಂತ್ರಣ

ICANN ಮುಂದಿನ 48 ಗಂಟೆಗಳಲ್ಲಿ ತೆಗೆದುಕೊಳ್ಳುತ್ತಿರುವ ನಿರ್ವಹಣೆ ಹಾಗೂ ಕ್ರಿಪ್ಟೋಗ್ರಾಫಿಕ್‌ ಕೀಯ ಬದಲಾವಣೆ ಅನಿವಾರ್ಯವಾಗಿದೆಯಂತೆ. ಇದರಿಂದ ಹೆಚ್ಚುತ್ತಿರುವ ಸೈಬರ್‌ ದಾಳಿಗಳನ್ನು ನಿಯಂತ್ರಿಸಬಹುದೆಂಬುದು ICANN ಹೇಳಿದೆ.

ಇಂಟರ್‌ನೆಟ್‌ ಸ್ಥಗಿತ ಅನಿವಾರ್ಯ

ಸಂವಹನ ನಿಯಂತ್ರಣ ಪ್ರಾಧಿಕಾರ [Communication Regularity Authority (CRA)] ಹೇಳುವಂತೆ ಜಾಗತಿಕವಾಗಿ ಇಂಟರ್‌ನೆಟ್‌ ಸ್ಥಗಿತ ಮಾಡುವುದು ಅನಿವಾರ್ಯವಾಗಿದ್ದು, ಭದ್ರತೆ, ಸುಸ್ಥಿರ ಹಾಗೂ ಚೇತರಿಕೆಯ ಡೋಮೆನ್‌ ನೇಮ್‌ ಸಿಸ್ಟಮ್‌ಗಳಿಗಾಗಿ ಕೀ ಡೋಮೆನ್‌ ಸರ್ವರ್‌ಗಳ ನಿರ್ವಹಣೆ ಅವಶ್ಯವಾಗಿದೆಯಂತೆ.

ಯಾರ ಮೇಲೆ ಪ್ರಭಾವ..?

ಈ ಬದಲಾವಣೆಗೆ ಪೂರ್ವ ತಯಾರಿಯಾಗದ ನೆಟ್‌ವರ್ಕ್‌ ಆಪರೇಟರ್‌ ಮತ್ತು ಇಂಟರ್‌ನೆಟ್‌ ಸರ್ವಿಸ್‌ ಪ್ರಾವಿಡಾರ್‌ಗಳ ಬಳಕೆದಾರರು ಇಂಟರ್‌ನೆಟ್‌ನ ಸಮಸ್ಯೆಗೆ ಒಳಗಾಗಲಿದ್ದಾರೆ ಎಂದು ಸಂವಹನ ನಿಯಂತ್ರಣ ಪ್ರಾಧಿಕಾರ [Communication Regularity Authority (CRA)] ಹೇಳಿದೆ. ಆದರೂ, ಸೂಕ್ತ ಸಿಸ್ಟಮ್ ಭದ್ರತಾ ವಿಸ್ತರಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮುಂದಿನ 48 ಗಂಟೆಗಳ ಕಾಲ ಆಗುವ ಇಂಟರ್‌ನೆಟ್‌ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಹೇಳಿದೆ.

ಎಲ್ಲೆಲ್ಲಿ ಸಮಸ್ಯೆಯಾಗಲಿದೆ..?

ಇಂಟರ್‌ನೆಟ್‌ ಬಳಕೆದಾರರು ಮುಂದಿನ 48 ಗಂಟೆಗಳಲ್ಲಿ ವೆಬ್ ಪುಟಗಳನ್ನು ಅಕ್ಸೆಸ್‌ ಮಾಡುವಾಗ ಅಥವಾ ಯಾವುದೇ ಆನ್‌ಲೈನ್‌ ವ್ಯವಹಾರಗಳನ್ನು ಮಾಡುವಾಗ ತೊಂದರೆ ಅನುಭವಿಸಬಹುದು. ಅಲ್ಲದೇ, ಹಳೆಯ ISP ಬಳಸಿಕೊಂಡು ಇಂಟರ್‌ನೆಟ್‌ ಬಳಸುತ್ತಿದ್ದರೆ ಇಂಟರ್‌ನೆಟ್‌ ಸಮಸ್ಯೆಯನ್ನು ಎದುರಿಸುವುದು ಖಚಿತ ಎಂದು ಸಂವಹನ ನಿಯಂತ್ರಣ ಪ್ರಾಧಿಕಾರ [Communication Regularity Authority (CRA)] ಹೇಳಿದೆ.

ಭಾರತದಲ್ಲಿ ಆಗಾಗ ನಡೆಯುತ್ತಿರುತ್ತೆ..!

The Software Freedom Law Centre (SFLC) ಹೇಳುವಂತೆ ಭಾರತದಲ್ಲಿ ಇಂಟರ್‌ನೆಟ್‌ ಸ್ಥಗಿತ ಪ್ರಕರಣಗಳು ಆಗಾಗ ನಡೆಯುತ್ತಿರುತ್ತದೆಯಂತೆ. ಹೌದು, SFLC ವರದಿಯಂತೆ 2012ರಿಂದ 2016ರವರೆಗೆ 72 ಬಾರಿ ಭಾರತದಲ್ಲಿ ಇಂಟರ್‌ನೆಟ್‌ ಸ್ಥಗಿತಗೊಂಡಿದೆ.

ಅಪಾರ ನಷ್ಟ

ಬ್ರೂಕಿಂಗ್‌ ಸಂಸ್ಥೆ ವರದಿಯಂತೆ 2016ರ ಒಂದು ವರ್ಷದಲ್ಲಿಯೇ ಭಾರತ ಇಂಟರ್‌ನೆಟ್‌ ಶಟ್‌ಡೌನ್‌ನಿಂದ 968 ಮಿಲಿಯನ್‌ ಡಾಲರ್‌ ನಷ್ಟವಾಗಿದೆಯೆಂದು ಹೇಳಿರುವುದು ಇಂಟರ್‌ನೆಟ್‌ ಸ್ಥಗಿತತೆಯ ನಷ್ಟದ ಪರಿಣಾಮವನ್ನು ತಿಳಿಸುತ್ತದೆ.

Best Mobiles in India

English Summary

Global Internet Shutdown Likely in Next 48 Hours: Report. To know more this visit kannada.gizbot.com