Home
ಸುದ್ದಿಜಾಲ

Google I/O 2026 ಕಾನ್ಫರೆನ್ಸ್ ದಿನಾಂಕ ಘೋಷಣೆ, ಜೆಮಿನಿ ಆಟಗಳಿಂದ ಆರಂಭಿಕ ಝಲಕ್!

ಟೆಕ್ ದೈತ್ಯ ಗೂಗಲ್ 2026ರ ತನ್ನ ಬಹುನಿರೀಕ್ಷಿತ ವಾರ್ಷಿಕ ಡೆವಲಪರ್ ಸಮ್ಮೇಳನ ದಿನಾಂಕಗಳನ್ನು (ಗೂಗಲ್ ಐ/ಒ 2026) ಅಧಿಕೃತವಾಗಿ ಪ್ರಕಟಿಸಿದೆ. 2026ರಲ್ಲಿ ಮೇ 19 ಮತ್ತು 20 ರಂದು ಗೂಗಲ್ ವಾರ್ಷಿಕ ಡೆವಲಪರ್ ಸಮ್ಮೇಳನ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಮುಖ ಕೇಂದ್ರಬಿಂದುವಾಗಿರಲಿದೆ ಎಂಬ ಸೂಚನೆಗಳು ಈಗಾಗಲೇ ದೊರಕಿವೆ. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸುವವರಿಗೆ ಈ ಘೋಷಣೆ ಮಹತ್ವದ್ದಾಗಿದೆ. ಹಾಗಾದರೆ, ಮುಂಬರುವ ಗೂಗಲ್‌ನ ವಾರ್ಷಿಕ ಡೆವಲಪರ್ ಸಮ್ಮೇಳನದ ಕುರಿತ ಪ್ರಮುಖ ಅಂಶಗಳು ಯಾವು ಎಂಬುದನ್ನು ನೋಡೋಣ ಬನ್ನಿ.

ಗೂಗಲ್ ಪ್ರತಿ ವರ್ಷದಂತೆ ಈ ಬಾರಿ ಕೂಡ ವಿಭಿನ್ನವಾಗಿ ಸಮ್ಮೇಳನದ ದಿನಾಂಕಗಳನ್ನು ಪ್ರಕಟಣೆ ಮಾಡಿದೆ. I/O ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಆನ್‌ಲೈನ್ ಪಜಲ್ ಪರಿಹರಿಸಿದ ಬಳಿಕ "Save the Date" ಮಾಹಿತಿ ಅನಾವರಣಗೊಂಡಿತು. ವಿಶೇಷವೆಂದರೆ, ಈ ಪುಟದಲ್ಲಿ AI ಆಧಾರಿತ ಮಿನಿ-ಗೇಮ್‌ಗಳನ್ನು ಸೇರಿಸಲಾಗಿದೆ. ವರ್ಡ್ ವೀಲ್ ಸ್ವಯಂಚಾಲಿತವಾಗಿ ಸಮತೋಲಿತ ಪದ ಮಟ್ಟವನ್ನು ವಿನ್ಯಾಸಗೊಳಿಸಲು ಜೆಮಿನಿ 3 ಅನ್ನು ಬಳಸುತ್ತದೆ. ಗೂಗಲ್‌ನ ಮಾದರಿಯ ಸಹಾಯದಿಂದ ರೂಪಿಸಲಾದ ಈ ಗೇಮ್‌ಗಳು, AI ತಂತ್ರಜ್ಞಾನವು ಮನರಂಜನೆ ಕ್ಷೇತ್ರದಲ್ಲೂ ಹೇಗೆ ಬಳಸಬಹುದು ಎಂಬುದನ್ನು ತೋರಿಸುತ್ತವೆ.

"Hole in One" ಎಂಬ ಮಿನಿ ಗಾಲ್ಫ್ ಆಟದಲ್ಲಿ AI ಮಾರ್ಗದರ್ಶನ ನೀಡುತ್ತದೆ. "Nonogram" ಲಾಜಿಕ್ ಪಜಲ್‌ಗಳಲ್ಲಿ ಹೊಸ ಸವಾಲುಗಳು ನಿರಂತರವಾಗಿ ಸೃಷ್ಟಿಯಾಗುತ್ತವೆ. "Word Wheel" ಪದಗಳನ್ನು ಸಮತೋಲನದಿಂದ ರಚಿಸುತ್ತದೆ. ಜೊತೆಗೆ ಧ್ವನಿಯ ಆಧಾರದ ಮೇಲೆ ನಿಯಂತ್ರಿಸಬಹುದಾದ "Super Sonicbot" ಮತ್ತು ವಿಭಿನ್ನ ಕಠಿಣತೆ ಮಟ್ಟಗಳನ್ನು ಹೊಂದಿರುವ "Stretchy Cat" ಆಟಗಳು ಕೂಡ ಗಮನ ಸೆಳೆಯುತ್ತಿವೆ. ಈ ಅನುಭವವು AI ತಂತ್ರಜ್ಞಾನವು ಹೇಗೆ ಬಳಕೆದಾರರ ಜೊತೆ ಸಂವಹನ ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ.

Google I/O 2026 ಕಾನ್ಫರೆನ್ಸ್ ದಿನಾಂಕ ಘೋಷಣೆ, ಜೆಮಿನಿ ಆಟಗಳಿಂದ ಆರಂಭಿಕ ಝಲಕ್!

Google I/O 2026 ನಲ್ಲಿ AI ಕ್ಷೇತ್ರದ ಹೊಸ ಘೋಷಣೆಗಳು ನಿರೀಕ್ಷಿಸಲ್ಪಡುತ್ತಿವೆ. ಕಳೆದ ವರ್ಷಗಳಲ್ಲಿ ಗೂಗಲ್ ತನ್ನ Search, Chrome, Workspace ಹಾಗೂ Pixel ಸಾಧನಗಳಲ್ಲಿ AI ವೈಶಿಷ್ಟ್ಯಗಳನ್ನು ಹಂತ ಹಂತವಾಗಿ ವಿಸ್ತರಿಸಿದೆ. ಈ ಬಾರಿ ಡೆವಲಪರ್‌ಗಳಿಗೆ ಹೊಸ ಸಾಧನಗಳು, ಅಪ್‌ಡೇಟ್‌ಗಳು ಮತ್ತು ಮುಂದಿನ ತಲೆಮಾರಿನ AI ಪರಿಹಾರಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಸ್ಟಾರ್ಟ್‌ಅಪ್‌ಗಳು ಮತ್ತು ಆಪ್ ಅಭಿವೃದ್ಧಿಪರರಿಗೆ ಇದು ಪ್ರಮುಖ ವೇದಿಕೆಯಾಗಿದೆ.

ಗೂಗಲ್ ಐ/ಒ 2026 ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಜಾಗತಿಕವಾಗಿ ಲೈವ್ ಸ್ಟ್ರೀಮ್ ಮಾಡುವ ಸಾಧ್ಯತೆ ಇದೆ, ಇದರಿಂದ ಭಾರತ ಸೇರಿದಂತೆ ವಿಶ್ವದಾದ್ಯಂತದ ತಂತ್ರಜ್ಞಾನ ಅಭಿಮಾನಿಗಳು ಉಚಿತವಾಗಿ ವೀಕ್ಷಿಸಬಹುದು. ಸಾಮಾನ್ಯವಾಗಿ ಈ ಸಮ್ಮೇಳನ ಕ್ಯಾಲಿಫೋರ್ನಿಯಾದ ಮೌಂಟನ್ ವ್ಯೂ ನಗರದಲ್ಲಿರುವ ನಲ್ಲಿ ನಡೆಯುತ್ತದೆ. ಈ ವರ್ಷವೂ ಅದೇ ಸ್ಥಳದಲ್ಲಿ ಆಯೋಜನೆಯಾಗುವ ನಿರೀಕ್ಷೆ ಇದ್ದರೂ, ಅಧಿಕೃತ ದೃಢೀಕರಣ ಇನ್ನಷ್ಟೇ ಬಾಕಿಯಿದೆ. ಡೆವಲಪರ್ ನೋಂದಣಿ ಈಗಾಗಲೇ ಪ್ರಾರಂಭವಾಗಿದೆ
.
ಭಾರತೀಯ ತಂತ್ರಜ್ಞಾನ ಸಮುದಾಯದ ದೃಷ್ಟಿಯಿಂದ Google I/O 2026 ವಿಶೇಷ ಮಹತ್ವ ಹೊಂದಿದೆ. AI ಆಧಾರಿತ ಉಪಕರಣಗಳು, ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮತ್ತು ಡೆವಲಪರ್‌ಗಳಿಗೆ ಅನುಕೂಲಕರ ವೈಶಿಷ್ಟ್ಯಗಳು ಭಾರತೀಯ ಮಾರುಕಟ್ಟೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಮುಂದಿನ ತಲೆಮಾರಿನ ಡಿಜಿಟಲ್ ಸಾಧನಗಳು ಮತ್ತು ಸೇವೆಗಳ ದಿಕ್ಕು ಯಾವತ್ತಿಗೆ ಸಾಗುತ್ತದೆ ಎಂಬುದಕ್ಕೆ ಈ ಸಮ್ಮೇಳನ ಸ್ಪಷ್ಟ ಚಿತ್ರಣ ನೀಡುವ ನಿರೀಕ್ಷೆಯಿದೆ. ನೀವು ಕೂಡ ತಂತ್ರಜ್ಞಾನ ಕ್ಷೇತ್ರದ ಆಳವಾದ ಬೆಳವಣಿಗೆಗಳನ್ನು ಗಮನಿಸುತ್ತೀರಾ?..ಹಾಗಾದರೆ, ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Google has officially announced that Google I/O 2026 will be held on May 19 and 20. The company revealed the dates after users solved an online puzzle on its website, featuring Gemini-powered minigames. The annual developer conference is expected to highlight major updates in artificial intelligence, software, and new tools for developers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+