Home
ಸುದ್ದಿಜಾಲ

ಗೂಗಲ್‌ ಮ್ಯಾಪ್ಸ್‌ಗೆ ಬರುತ್ತಿದೆ ಮತ್ತೊಂದು ಕ್ರಾಂತಿಕಾರಿ ಫೀಚರ್!

ಗೂಗಲ್ ಒಡೆತನದ ಜನಪ್ರಿಯ ನ್ಯಾವಿಗೇಶನ್ ಆ್ಯಪ್ ಗೂಗಲ್ ಮ್ಯಾಪ್ಸ್‌ನಲ್ಲಿ(Google Maps) ಜೆಮಿನಿ (Gemini) ಕೃತಕ ಬುದ್ಧಿಮತ್ತೆ ಸಹಾಯಕವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಇದೀಗ ಗೂಗಲ್ ಪರಿಚಯಿಸಿರುವ ಹೊಸ ಕೃತಕ ಬುದ್ಧಿಮತ್ತೆ ಅಪ್‌ಡೇಟ್‌ನ ಮೂಲಕ ನಡೆದು ಹೋಗುವವರು ಹಾಗೂ ಸೈಕಲ್ ಸವಾರರಿಗೆ ಹ್ಯಾಂಡ್ಸ್-ಫ್ರೀ ನ್ಯಾವಿಗೇಶನ್ ಅನುಭವ ಲಭ್ಯವಾಗಿದೆ. ಜೆಮಿನಿ ಬೆಂಬಲಿತ ಎಲ್ಲಾ ಪ್ರದೇಶಗಳಲ್ಲಿ Android ಮತ್ತು iOS ಸಾಧನಗಳಿಗೆ ಈ ಕ್ರಾಂತಿಕಾರಿ ವೈಶಿಷ್ಟ್ಯವನ್ನು ಜಾಗತಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ.

ಗೂಗಲ್ ಮ್ಯಾಪ್ಸ್‌ನಲ್ಲಿ ಜೆಮಿನಿ ಈಗ ನಡೆದು ಹೋಗುವವರಿಗೆ ಒಂದು ರೀತಿಯಲ್ಲಿ ವೈಯಕ್ತಿಕ ಪ್ರವಾಸ ಮಾರ್ಗದರ್ಶಿಯಂತೆ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು "ನಾನು ಈಗ ಯಾವ ಪ್ರದೇಶದಲ್ಲಿದ್ದೇನೆ?", "ಇಲ್ಲಿ ಹತ್ತಿರದ ಪ್ರಮುಖ ಸ್ಥಳಗಳು ಯಾವುವು?" ಎಂಬಂತಹ ಪ್ರಶ್ನೆಗಳನ್ನು ಕೇಳಿದರೆ, ಜೆಮಿನಿ ತಕ್ಷಣವೇ ಉತ್ತರ ನೀಡುತ್ತದೆ. ಇದಕ್ಕಿಂತ ಹೆಚ್ಚಾಗಿ, ಮಾರ್ಗದಲ್ಲೇ ಇರುವ ರೆಸ್ಟೋರೆಂಟ್‌ಗಳು, ಕ್ಯಾಫೆ, ಶಾಪಿಂಗ್ ಸ್ಥಳಗಳು ಅಥವಾ ಪ್ರವಾಸಿ ತಾಣಗಳ ಬಗ್ಗೆ ಶಿಫಾರಸುಗಳನ್ನು ಸಹ ಒದಗಿಸುತ್ತದೆ.

ಈ ಹೊಸ ಅಪ್‌ಡೇಟ್‌ನಲ್ಲಿ ಸೈಕಲ್ ಪ್ರಯಾಣಿಕರಿಗಾಗಿ ಜೆಮಿನಿ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸವಾರರು ಹ್ಯಾಂಡಲ್‌ಬಾರ್ ಮೇಲೆ ಕೈಗಳನ್ನು ಇಟ್ಟುಕೊಂಡೇ ಅಂದಾಜು ತಲುಪುವ ಸಮಯ (ETA), ಮುಂದಿನ ಮೀಟಿಂಗ್ ಮಾಹಿತಿ ಅಥವಾ ತ್ವರಿತ ಸಂದೇಶಗಳನ್ನು ಧ್ವನಿಯ ಮೂಲಕ ಕಳುಹಿಸಬಹುದು.ಉದಾಹರಣೆಗೆ, ತಡವಾಗುತ್ತಿದೆ ಎಂದು ತಿಳಿಸಲು ಮಾತಿನಲ್ಲೇ ಸಂದೇಶವನ್ನು ಹೇಳಿದರೆ, ಜೆಮಿನಿ ಅದನ್ನು ಸ್ವಯಂಚಾಲಿತವಾಗಿ ಕಳುಹಿಸುತ್ತದೆ. ಇದರಿಂದ ಸ್ಕ್ರೀನ್‌ ಕಡೆ ನೋಡುವ ಅಗತ್ಯವಿಲ್ಲದೆ, ರಸ್ತೆ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

ಗೂಗಲ್‌ ಮ್ಯಾಪ್ಸ್‌ಗೆ ಬರುತ್ತಿದೆ ಮತ್ತೊಂದು ಕ್ರಾಂತಿಕಾರಿ ಫೀಚರ್!

ಮೊದಲು ಜೆಮಿನಿ ಕಾರು ಚಾಲಕರಿಗಾಗಿ Google Maps ನ್ಯಾವಿಗೇಶನ್‌ನಲ್ಲಿ ಪರಿಚಯಿಸಲಾಗಿತ್ತು. ಅಲ್ಲಿ ಇದು ಒಂದು ಧ್ವನಿ ಆಧಾರಿತ ಸಹಾಯಕನಂತೆ ಕಾರ್ಯನಿರ್ವಹಿಸುತ್ತಿತ್ತು. ಈಗ ಅದೇ ಸಂಭಾಷಣಾತ್ಮಕ ಅನುಭವವನ್ನು ನಡೆ ಮತ್ತು ಸೈಕಲ್ ಪ್ರಯಾಣಕ್ಕೂ ವಿಸ್ತರಿಸಲಾಗಿದೆ. ಇದರಿಂದ ಎಲ್ಲ ರೀತಿಯ ಸಂಚಾರಕ್ಕೂ ಒಂದೇ ರೀತಿಯ ಸ್ಮಾರ್ಟ್ ಅನುಭವ ದೊರೆಯಲಿದೆ. ಈ ಸಲಹೆಗಳು Google Maps‌ನ ನವೀಕರಿಸಲಾದ ಡೇಟಾ, ನೈಜ ಸ್ಥಳ ಮಾಹಿತಿ ಮತ್ತು ಬಳಕೆದಾರರ ವಿಮರ್ಶೆಗಳ ಆಧಾರದ ಮೇಲೆ ಸಿಗುತ್ತವೆ. ಇದರಿಂದ ನಗರದಲ್ಲಿ ಹೊಸದಾಗಿ ಸಂಚರಿಸುವವರಿಗೆ ಅನುಭವ ಇನ್ನಷ್ಟು ಉಪಯುಕ್ತವಾಗುತ್ತದೆ.

ಈ ಹೊಸ ಅಪ್‌ಡೇಟ್ ಕುರಿತಂತೆ ಗೂಗಲ್‌ನ ಜ್ಞಾನ ಮತ್ತು ಮಾಹಿತಿ (Vice President of Knowledge and Information) ವಿಭಾಗದ ಹಿರಿಯ ಉಪಾಧ್ಯಕ್ಷರಾದ ನಿಕ್ ಫಾಕ್ಸ್ ಅವರು, ಈ ಹೊಸ ವೈಶಿಷ್ಟ್ಯವನ್ನು ಸಾಮಾಜಿಕ ಮಾಧ್ಯಮದ ಮೂಲಕ ದೃಢಪಡಿಸಿದ್ದಾರೆ. ಅವರು ಜೆಮಿನಿಯನ್ನು "ನೆರೆಹೊರೆಯ ಡಿಜಿಟಲ್ ಟೂರ್ ಗೈಡ್" ಎಂದು ವಿವರಿಸಿದ್ದು, ಸಂಚಾರದ ಮಧ್ಯೆಯೇ ತಲುಪುವ ಸಮಯ ಹಂಚಿಕೊಳ್ಳುವಂತಹ ಕಾರ್ಯಗಳನ್ನು ಇದು ಸುಲಭಗೊಳಿಸುತ್ತದೆ ಎಂದು ಹೇಳಿದ್ದಾರೆ.

ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶ, ರಸ್ತೆ ಮೇಲೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಬಳಕೆದಾರರ ಸುರಕ್ಷತೆ ಮತ್ತು ಸೌಲಭ್ಯವನ್ನು ಹೆಚ್ಚಿಸುವುದು. ಫೋನ್ ಅನ್ನು ಕೈಯಲ್ಲಿ ಹಿಡಿಯದೇ ಧ್ವನಿಯ ಮೂಲಕವೇ ದಿಕ್ಕುಗಳು, ಮಾಹಿತಿ, ಸಂದೇಶಗಳು ಮತ್ತು ಇತರೆ ಕಾರ್ಯಗಳನ್ನು ನಿರ್ವಹಿಸಲು ಜೆಮಿನಿ ಸಹಾಯ ಮಾಡುತ್ತದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಗೂಗಲ್ ಪ್ರಕಾರ, ನಡೆ ಮತ್ತು ಸೈಕಲ್ ನ್ಯಾವಿಗೇಶನ್‌ಗಾಗಿ ಜೆಮಿನಿ ವೈಶಿಷ್ಟ್ಯವು ಈಗ ಜಾಗತಿಕವಾಗಿ ಹಂತ ಹಂತವಾಗಿ ಲಭ್ಯವಾಗುತ್ತಿದೆ. ಭಾರತೀಯ ಬಳಕೆದಾರರಿಗೆ ಇದು ದಿನನಿತ್ಯದ ಪ್ರಯಾಣವನ್ನು ಇನ್ನಷ್ಟು ಸುರಕ್ಷಿತ, ಸ್ಮಾರ್ಟ್ ಮತ್ತು ಅನುಕೂಲಕರವಾಗಿಸುವ ಸಾಧ್ಯತೆ ಇದೆ. ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Google Maps has expanded its Gemini AI integration, introducing hands-free navigation for pedestrians and cyclists. The new update, rolling out globally on Android and iOS, enables voice-based guidance for a safer and more convenient navigation experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+