ಈ 42 ಆಪ್‌ಗಳು ನಿಮ್ಮ ಫೋನಿನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿ!


ಬಳಕೆದಾರರ ಸುರಕ್ಷತೆ ವಿಷಯದಲ್ಲಿ ಗೂಗಲ್ ಏನೇ ಕ್ರಮ ಕೈಗೊಂಡರೂ ಸಹ ಗೂಗಲ್ ಪ್ಲೇ ಸ್ಟೋರ್ ಸುರಕ್ಷಿತವಾಗಿಲ್ಲ ಎನ್ನುವುದು ಇತ್ತೀಚಿಗೆ ಜಗಜ್ಜಾಹೀರಾಗಿದೆ.! ಗೂಗಲ್ ಪ್ಲೇ ಸ್ಟೋರ್ ಸುರಕ್ಷತೆ ವಿಷಯದಲ್ಲಿ ತನ್ನ ಗ್ರಾಹಕರ ವಿಶ್ವಾಸ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಂಪನಿ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೂಡ ಇದೆ. ಏಕೆಂದರೆ, ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಪ್ಲೇ ಸ್ಟೋರ್‌ನಿಂದ ಕೈಬಿಟ್ಟಿರುವ ಆಪ್‌ಗಳ ಸಂಖ್ಯೆಯನ್ನು ಗಮನಿಸಿದರೆ ಗೂಗಲ್ ಪ್ಲೇ ಸ್ಟೋರ್ ಸಾಕಷ್ಟು ಸುರಕ್ಷಿತವಲ್ಲ ಎಂದೇ ಹೇಳಬಹುದು.

Advertisement

ಹೌದು, ಮೊಬೈಲ್‌ನ ಮಾಹಿತಿಗಳೆಲ್ಲವನ್ನೂ ಕದಿಯುತ್ತಿದ್ದ ನೂರಾರು ಆಂಡ್ರಾಯ್ಡ್ ಮೊಬೈಲ್ ಆಪ್‌ಗಳನ್ನು ಇತ್ತೀಚಿನ ಕೆಲ ತಿಂಗಳುಗಳಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಇನ್ನು ಇತ್ತೀಚಿಗಷ್ಟೇ ಮೊಬೈಲ್‌ನ ಮಾಹಿತಿಗಳೆಲ್ಲವನ್ನೂ ಕದಿಯುತ್ತಿದ್ದ 42 ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಈ ಆಪ್‌ಗಳು ಬಳಕೆದಾರರ ಸಂಪೂರ್ಣ ಮಾಹಿತಿಗಳನ್ನು ಕದಿಯುತ್ತಿದ್ದವು ಎಂದು ಸೈಬರ್ ಸುರಕ್ಷತಾ ಸಂಸ್ಥೆ ಇಎಸ್ಇಟಿ ತಿಳಿಸಿರುವುದು ಗೂಗಲ್ ಗೂಗಲ್ ಪ್ಲೇ ಸ್ಟೋರ್ ಮೇಲೆ ಗ್ರಾಹಕರು ನಂಬಿಕೆ ಕಳೆದಕೊಳ್ಳುವಂತೆ ಮಾಡಿದೆ.

Advertisement

ಈ ಆಪ್‌ಗಳು ಮೊಬೈಲ್ ಸ್ಕ್ರೀನ್‌ನ ಪೂರ್ತಿ ಭಾಗದಲ್ಲಿಯೂ ಜಾಹೀರಾತು ಕಾಣಿಸಿಕೊಳ್ಳುವಂತೆ ಮಾಡುತ್ತಿದ್ದವು. ಅಲ್ಲದೆ, ಯಾವ ಮೊಬೈಲ್, ಅದರಲ್ಲಿ ಇರುವ ಒಎಸ್ ಯಾವುದು?, ಫೇಸ್‌ಬುಕ್‌ ಮತ್ತು ಫೇಸ್‌ಬುಕ್‌ ಮೆಸೆಂಜರ್‌ ಇನ್‌ಸ್ಟಾಲ್‌ ಆಗಿದೆಯೇ?, ಬಳಸುತ್ತಿರುವ ಭಾಷೆ, ಎಷ್ಟು ಆಪ್‌ಗಳು ಇನ್‌ಸ್ಟಾಲ್ ಆಗಿವೆ, ಮೊಬೈಲ್‌ನಲ್ಲಿ ಎಷ್ಟು ಖಾಲಿ ಜಾಗ ಉಳಿದಿದೆ, ಬ್ಯಾಟರಿ ಎಷ್ಟು ಖಾಲಿಯಾಗಿದೆ ಎಂಬುದು ಸೇರಿದಂತೆ ಹೀಗೆಯೇ ಇನ್ನೂ ಹಲವು ಮಾಹಿತಿಗಳನ್ನು ಕದಿಯುತ್ತಿದ್ದವು ಎಂದು ಸೈಬರ್ ಸುರಕ್ಷತಾ ಸಂಸ್ಥೆ ಇಎಸ್ಇಟಿ ತಿಳಿಸಿದೆ.

ಪ್ರಸ್ತುತ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಕಲಾಗಿರುವ 42 ಆಪ್‌ಗಳು ಒಟ್ಟಾರೆ 80 ಲಕ್ಷ ಡೌನ್‌ಲೋಡ್‌ ಆಗಿವೆ. ಇವುಗಳು ಮಾಹಿತಿ ಕದಿಯುತ್ತಿರುವುದು ಗೂಗಲ್‌ನ ಸುರಕ್ಷತಾ ವ್ಯವಸ್ಥೆಯ ಗಮನಕ್ಕೆ ಬಾರದೇ ಇರುವ ರೀತಿಯಲ್ಲಿ ಈ ಆಪ್‌ಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಹೀಗಾಗಿ, ಮಾಹಿತಿ ದುರ್ಬಳಕೆ ಆಗುತ್ತಿರುವುದನ್ನು ಕಂಡುಕೊಳ್ಳಲು ಒಂದು ವರ್ಷವೇ ಬೇಕಾಯಿತು ಎಂದು ಹೇಳಲಾಗುತ್ತಿದೆ. ಹಾಗಾದರೆ, ಇಂತಹ ಮೊಬೈಲ್ ಆಪ್‌ಗಳು ಕದ್ದಿರುವ ಗ್ರಾಹಕರ ಮಾಹಿತಿಗೆ ಹೊಣೆ ಯಾರು ಎಂಬುದನ್ನು ಮಾತ್ರ ಗೂಗಲ್ ತಿಳಿಸುತ್ತಿಲ್ಲ.

ಇನ್ನು ನಾವು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಕಲಾಗಿರುವ 42 ಆಪ್‌ಗಳ ವಿಷಯಕ್ಕೆ ಬಂದರೆ ಈ ಕೆಳಕಂಡ ಆಪ್‌ಗಳು ನಿಮ್ಮ ಫೋನಿನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿಬಿಡಿ. video donwloader master, alarm clock, calculator, Free magnifying Glass, super-bright flashlight, super-bright led falshlight, Smart Gallery, Savinsta, Free Radio FM, Smart Note, Free social video, Mp4 video downloader, Flat music players, Water drink reminder.

Best Mobiles in India

English Summary

Google Play Removes 42 Malicious Apps With 8 Million Collective Downloads