2019ರ ನಾಲ್ಕನೇ ತ್ರೈಮಾಸಿಕದಲ್ಲಿ ಗೂಗಲ್‌ ಆಪ್ಸ್‌ ಹಿಂದಿಕ್ಕಿದ ಫೇಸ್‌ಬುಕ್‌!


ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೂಗಲ್ 2019ರ 4ನೇ ತ್ರೈಮಾಸಿಕದಲ್ಲಿ ಫೇಸ್‌ಬುಕ್ ಅನ್ನು ಮೊಬೈಲ್ ಅಪ್ಲಿಕೇಶನ್‌ಗಳ ಪೈಕಿ ಟಾಪ್‌ ಪಬ್ಲಿಷರ್‌ ಆಗಿ ಆಯ್ಕೆ ಮಾಡಿಲ್ಲ. 2019 ರ ಕೊನೆಯ ತ್ರೈಮಾಸಿಕದಲ್ಲಿ ಯುಎಸ್ ಮೂಲದ ಸರ್ಚ್ ಎಂಜಿನ್ ದೈತ್ಯ ಗೂಗಲ್‌ ಹೆಚ್ಚಿನ ಪ್ರಮಾಣದ ಡೌನ್‌ಲೋಡ್‌ಗಳನ್ನು ಕಂಡಿದೆ. ಅದರಲ್ಲೂ ಫೇಸ್‌ಬುಕ್‌ನ ಸುಮಾರು 800 ಮಿಲಿಯನ್ ಡೌನ್‌ಲೋಡ್‌ಗೆ ಹೋಲಿಸಿದರೆ ಸುಮಾರು 850 ಮಿಲಿಯನ್‌ ಡೌನ್‌ಲೋಡ್‌ಗಳನ್ನ ದಾಖಲಿಸಿದೆ ಎಂದು ವಿಶ್ಲೇಷಣಾ ಸಂಸ್ಥೆ ಸೆನ್ಸರ್ ಟವರ್ ಮಾಹಿತಿ ಬಹಿರಂಗಪಡಿಸಿದೆ.

ಈ ವರದಿಯ ಪ್ರಕಾರ ಒಟ್ಟಾರೆ ಡೌನ್‌ಲೋಡ್‌ಗಳ ವಿಷಯಕ್ಕೆ ಬಂದಾಗ, ಗೂಗಲ್ ಇನ್ನೂ ಫೇಸ್‌ಬುಕ್‌ನ ಹಿಂದೆ ಇದೆ. ಗೂಗಲ್ ಸುಮಾರು 2.3 ಬಿಲಿಯನ್ ಡೌನ್‌ಲೋಡ್‌ಗಳನ್ನು ಗಳಿಸಿದರೆ, ಕಳೆದ 12 ತಿಂಗಳುಗಳಲ್ಲಿ ಫೇಸ್‌ಬುಕ್ ಸುಮಾರು 3 ಬಿಲಿಯನ್ ಡೌನ್‌ಲೋಡ್‌ಗಳನ್ನು ಗಳಿಸಿದೆ. ಅಷ್ಟೇ ಯಾಕೆ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಸೇರಿದಂತೆ ವಿಶ್ವದಾದ್ಯಂತ ಹೆಚ್ಚು ಡೌನ್‌ಲೋಡ್ ಮಾಡಲಾದ ಅಗ್ರ ಐದು ಅಪ್ಲಿಕೇಶನ್‌ಗಳಲ್ಲಿ ನಾಲ್ಕು ಆಪ್‌ಗಳು ಫೇಸ್‌ಬುಕ್ ಒಡೆತನದ ಆಪ್‌ಗಳಾಗಿವೆ.

ಜಾಗತಿಕವಾಗಿ ಅತಿ ಹೆಚ್ಚು ಡೌನ್‌ಲೋಡ್‌ ಆದ ಆಪ್ಲಿಕೇಶನ್‌ಗಳಲ್ಲಿ ವಾಟ್ಸಾಪ್‌ ಮೊದಲ ಸ್ಥಾನದಲ್ಲಿದ್ದರೆ, ಇನ್ನು ಬೈಟ್‌ಡ್ಯಾನ್ಸ್ ಒಡೆತನದ ವೀಡಿಯೊ ಹಂಚಿಕೆ ಅಪ್ಲಿಕೇಶನ್ ಟಿಕ್‌ಟಾಕ್ 2019 ರಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್ ಆಗಿದೆ. ಅಲ್ಲದೆ 2019 ರ ನಾಲ್ಕನೇ ತ್ರೈಮಾಸಿಕದಲ್ಲಿ ಟಿಕ್‌ಟಾಕ್ ಡೌನ್‌ಲೋಡ್‌ ಪ್ರಮಾಣದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಸುಮಾರು 220 ಮಿಲಿಯನ್ ನಷ್ಟು ಡೌನ್‌ಲೋಡ್‌ ಆಗಿದ್ದು, ಇದು 2019ರ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 24 ರಷ್ಟು ಹೆಚ್ಚಳವನ್ನು ಹೊಂದಿದೆ.

ಇನ್ನು 2019 ರ ನಾಲ್ಕನೇ ತ್ರೈಮಾಸಿಕದಲ್ಲಿ ಟಿಕ್‌ಟಾಕ್‌ನ ಆದಾಯವು ವರ್ಷಕ್ಕೆ 540 ರಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸೆನ್ಸಾರ್ ಟವರ್ ವರದಿ ಮಾಡಿದೆ. ಅಷ್ಟೇ ಅಲ್ಲ ಇನ್ನು

ಹೆಚ್ಚುವರಿಯಾಗಿ, ಯುಎಸ್‌ನಲ್ಲಿ 2019ರ ನಾಲ್ಕನೇ ತ್ರೈಮಾಸಿಕದಲ್ಲಿ ಡಿಸ್ನಿ ಪ್ಲಸ್‌ ಆಪ್‌ ಅನ್ನು 30 ಮಿಲಿಯನ್‌ಗಿಂತ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ, ಇದು ಅದರ ಪ್ರತಿಸ್ಪರ್ಧಿ ಟಿಕ್‌ಟಾಕ್‌ಗಿಂತ ಎರಡು ಪಟ್ಟು ಹೆಚ್ಚಾಗಿದೆ.

ಅಲ್ಲದೆ ಆದಾಯದ ಪ್ರಮಾಣದಲ್ಲಿ ಡಿಸ್ನಿ + ಆಪ್‌ ತನ್ನ ಮೊದಲ 30 ದಿನಗಳಲ್ಲಿ 50 ಮಿಲಿಯನ್‌ ಗಿಂತ ಹೆಚ್ಚಿನ ಹಣವನ್ನು ಗಳಿಸಿದೆ, ಈ ಮೂಲಕ HBO NOW ಮತ್ತು Showtime ನಂತಹ ಇತರ ಚಂದಾದಾರಿಕೆ ವಿಡಿಯೋ ಆನ್ ಡಿಮ್ಯಾಂಡ್ ಆಪ್‌ಗಳನ್ನ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಒಟ್ಟಾರೆ ನೋಡೋದಾದ್ರೆ ಟಾಪ್‌ ಐದು ಸ್ಥಾನಗಳಲ್ಲಿ ಪೇಸ್‌ಬುಕ್‌ ಒಡೆತನದ ಆಪ್‌ಗಳಿದ್ದರೂ ಸಹ ಗೂಗಲ್‌ ಫೇಸ್‌ಬುಕ್‌ ಟಾಪ್‌ ಪಬ್ಲಿಷರ್‌ ಆಗಿ ಉಳಿದಿಲ್ಲ ಅನ್ನೊ ಅಭಿಪ್ರಾಯಕ್ಕೆ ಬಂದಿದೆ.

Most Read Articles
Best Mobiles in India
Read More About: Download google Report tiktok

Have a great day!
Read more...

English Summary

Google has, for the first time in five years, unseated Facebook as the top publisher of mobile apps in Q4 2019. The US-based search engine giant in the last quarter of 2019 amassed close to 850 million downloads compared to Facebook‘s nearly 800 million, analytics firm Sensor Tower revealed recently.