Home
ಸುದ್ದಿಜಾಲ

ಬಹು ನಿರೀಕ್ಷಿತ ಹುವಾವೇ ಪಾಕೆಟ್ 2 ಫೋನ್‌ ಬಿಡುಗಡೆ: ಬೆಂಕಿಯಂತಹ ಫೀಚರ್ಸ್‌

ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಹುವಾವೇ ಪಾಕೆಟ್ 2 ಫೋಲ್ಡಬಲ್ ಸ್ಮಾರ್ಟ್‌ಫೋನ್‌ ಟೆಕ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ಫೋಲ್ಡಬಲ್ ಆಗಿದ್ದು, ಕೆಲವು ಉನ್ನತ ದರ್ಜೆಯ ಸ್ಪೆಕ್ಸ್ ಮತ್ತು ಸುಧಾರಿತ ಫೋಲ್ಡಿಂಗ್ ವಿನ್ಯಾಸವನ್ನು ಹೊಂದಿದೆ. ಇದು ಕಿರಿನ್ 9000S ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಹುವಾವೇ ಪಾಕೆಟ್ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಇದು XMAGE ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಕ್ಲಾಮ್‌ಶೆಲ್ ಫೋಲ್ಡಿಂಗ್ ವಿನ್ಯಾಸವನ್ನು ಹೊಂದಿದೆ. ರೌಂಡ್ ಕವರ್ ಡಿಸ್‌ಪ್ಲೇಗಾಗಿ ಡ್ಯುಯಲ್ ಸರ್ಕ್ಯುಲರ್ ಮಾಡ್ಯೂಲ್‌ಗಳನ್ನು ಉಳಿಸಿಕೊಂಡಿದೆ. ಹಾಗಾದ್ರೆ ಹುವಾವೇ ಪಾಕೆಟ್ 2 ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಬಹು ನಿರೀಕ್ಷಿತ ಹುವಾವೇ ಪಾಕೆಟ್ 2 ಫೋನ್‌ ಬಿಡುಗಡೆ: ಬೆಂಕಿಯಂತಹ ಫೀಚರ್ಸ್‌

ಹುವಾವೇ ಪಾಕೆಟ್ 2 ಫೋಲ್ಡಬಲ್‌ ಫೀಚರ್ಸ್‌ ಹೇಗಿದೆ?
ಹುವಾವೇ ಪಾಕೆಟ್ 2 ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಮೇನ್‌ ಡಿಸ್‌ಪ್ಲೇ 6.94 ಇಂಚಿನ LTPO OLED ಪ್ಯಾನೆಲ್ ಆಗಿದೆ. ಈ ಡಿಸ್‌ಪ್ಲೇಯು 2690 x 1136 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯು 2200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದ್ದು, 420 PPI ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದೆ. ಇದರ ರಿಯರ್‌ ಪ್ಯಾನಲ್‌ 1.15 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 296 PPI ಪಿಕ್ಸೆಲ್ ಸಾಂದ್ರತೆಯನ್ನು ಪಡೆದುಕೊಂಡಿದೆ.

ಹುವಾವೇ ಪಾಕೆಟ್ 2 ಫೋಲ್ಡಬಲ್‌ ಪ್ರೊಸೆಸರ್‌ ಯಾವುದು?
ಹುವಾವೇ ಪಾಕೆಟ್ 2 ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಕಿರಿನ್ 9000S ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು HarmonyOS 4.0 ನಲ್ಲಿ ರನ್ ಆಗಲಿದೆ. ಹಾಗೆಯೇ 12GB RAM ಮತ್ತು 256GB, 12GB RAM ಮತ್ತು 512GB ಹಾಗೂ 12GB RAM ಮತ್ತು 1TB ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯಲ್ಲಿ ಬರಲಿದೆ. ಈ ಫೋನ್‌ NM ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಶೇಖರಣಾ ವಿಸ್ತರಣೆಯನ್ನು ಬೆಂಬಲಿಸಲಿದೆ.

ಬಹು ನಿರೀಕ್ಷಿತ ಹುವಾವೇ ಪಾಕೆಟ್ 2 ಫೋನ್‌ ಬಿಡುಗಡೆ: ಬೆಂಕಿಯಂತಹ ಫೀಚರ್ಸ್‌

ಹುವಾವೇ ಪಾಕೆಟ್ 2 ಫೋಲ್ಡಬಲ್‌ ಕ್ಯಾಮೆರಾ ಸೆಟಪ್‌ ಏನಿದೆ?
ಹುವಾವೇ ಪಾಕೆಟ್ 2 ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ XMAGE ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಹೊಂದಿದೆ. ನಾಲ್ಕನೇ ಕ್ಯಾಮೆರ AI ಚಾಲಿತ 2-ಮೆಗಾಪಿಕ್ಸೆಲ್ ಹೈಪರ್‌ಸ್ಪೆಕ್ಟ್ರಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 10.7 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಹುವಾವೇ ಪಾಕೆಟ್ 2 ಫೋಲ್ಡಬಲ್‌ ಬ್ಯಾಟರಿ ಮತ್ತು ಇತರೆ
ಹುವಾವೇ ಪಾಕೆಟ್ 2 ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ 4,520mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 66W ವೈರ್ಡ್ ಫಾಸ್ಟ್ ಚಾರ್ಜಿಂಗ್, 40W ವಾಯರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಮತ್ತು 7.5W ವಾಯರ್‌ಲೆಸ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಬ್ಯಾಂಡ್ ವೈಫೈ, ಬ್ಲೂಟೂತ್ 5.2, ಯುಎಸ್‌ಬಿ ಟೈಪ್ ಸಿ ಮತ್ತು ಎನ್‌ಎಫ್‌ಸಿ ಬೆಂಬಲವನ್ನು ಹೊಂದಿದೆ.

ಹುವಾವೇ ಪಾಕೆಟ್ 2 ಫೋಲ್ಡಬಲ್‌ ಬೆಲೆ ಮತ್ತು ಲಭ್ಯತೆ
ಹುವಾವೇ ಪಾಕೆಟ್ 2 ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರಿಂದ ಇದರ ಬೇಸ್ ಮಾಡೆಲ್‌ 256GB ಮಾದರಿಗೆ 7,499 ಯುವಾನ್ (ಸುಮಾರು 86,415ರೂ) ನಿಂದ ಪ್ರಾರಂಭವಾಗುತ್ತದೆ. ಆದರೆ 512GB ಸ್ಟೋರೇಜ್‌ ಆಯ್ಕೆಯು 7,999 ಯುವಾನ್ (ಸುಮಾರು 92,177ರೂ) ಮತ್ತು 1TB ಕಾನ್ಫಿಗರೇಶನ್‌ಗಳ ಬೆಲೆ 8,999 ಯುವಾನ್ (ಸುಮಾರು 1,05,338ರೂ)ಬೆಲೆಯಲ್ಲಿ ಬರಲಿದೆ. ಇದು ಟಹೀಟಿಯನ್ ಗ್ರೇ, ರೊಕೊಕೊ ವೈಟ್, ಟ್ಯಾರೊ ಪರ್ಪಲ್ ಮತ್ತು ಲಲಿತ ಕಪ್ಪು ಬಣ್ಣದ ಆಯ್ಕೆಯಲ್ಲಿ ಬರಲಿದೆ.

Best Mobiles in India

English summary
Huawei Pocket 2 flip phone with a 50MP quad camera launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+