Home
ಸುದ್ದಿಜಾಲ

ಬೆಂಗಳೂರಿನಲ್ಲಿ ಭಾರತದ ಮೊದಲ 'ನಥಿಂಗ್ ಸ್ಟೋರ್' ಪ್ರಾರಂಭ: ಒಳಗೆ ಹೇಗಿದೆ ಗೊತ್ತಾ?

ಭಾರತದ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ನಥಿಂಗ್ (Nothing) ಬೆಂಗಳೂರಿನಲ್ಲಿ ತನ್ನ ಮೊದಲ "Nothing Store Bengaluru" ಫ್ಲ್ಯಾಗ್‌ಶಿಪ್ ಸ್ಟೋರ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಿದೆ. ನಗರದ ಇಂದಿರಾನಗರದ 100 ಫೀಟ್ ರಸ್ತೆಯಲ್ಲಿ ಸ್ಥಾಪಿತವಾದ ಈ ವಿಶಿಷ್ಟ ಅನುಭವ ಕೇಂದ್ರವು ಲಂಡನ್‌ನ ಹೊರಗೆ ತೆರೆದ ಕಂಪೆನಿಯ ಮೊದಲ ಕೇದ್ರವಾಗಿದ್ದು, ಇದನ್ನು Nothing ಕಂಪನಿಯ ಭಾರತ ವಿಸ್ತರಣೆ ಯೋಜನೆಯಲ್ಲಿ ಪ್ರಮುಖ ಹಂತವೆಂದು ಪರಿಗಣಿಸಲಾಗಿದೆ. ಸುಮಾರು 5,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಸ್ಟೋರ್ ಭಾರೀ ಗಮನಸೆಳೆದಿದೆ.

ಬೆಂಗಳೂರಿನಲ್ಲಿ ಭಾರತದ ಮೊದಲ 'ನಥಿಂಗ್ ಸ್ಟೋರ್' ಪ್ರಾರಂಭ: ಒಳಗೆ ಹೇಗಿದೆ ಗೊತ್ತಾ?

ಇದುವರೆಗೆ ಮುಖ್ಯವಾಗಿ ಆನ್‌ಲೈನ್ ಮಾರಾಟದ ಮೇಲೆ ಅವಲಂಬಿತವಾಗಿದ್ದ ಬ್ರ್ಯಾಂಡ್, ಈಗ ಗ್ರಾಹಕರೊಂದಿಗೆ ನೇರ ಸಂಪರ್ಕ ಬೆಳೆಸುವ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಸುಮಾರು 5,000 ಚದರ ಅಡಿಗಳ ವಿಸ್ತೀರ್ಣ ಹೊಂದಿರುವ ಈ ಫ್ಲ್ಯಾಗ್‌ಶಿಪ್ ಸ್ಟೋರ್‌ನಲ್ಲಿ Nothing ಉತ್ಪನ್ನಗಳು ಮತ್ತು ಮರ್ಚೆಂಡೈಸ್‌ಗಳು ಲಭ್ಯವಿವೆ. ಈ ಸ್ಟೋರ್ ಸಾಮಾನ್ಯ ಮಾರಾಟ ಕೇಂದ್ರವಲ್ಲ. ಬದಲಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ನೇರವಾಗಿ ಅನುಭವಿಸಲು ಅವಕಾಶ ನೀಡುವ 'ಎಕ್ಸ್‌ಪೀರಿಯನ್ಸ್ ಹಬ್' ಆಗಿದೆ. ಇಲ್ಲಿ Nothing ಮತ್ತು ಅದರ ಉಪಬ್ರ್ಯಾಂಡ್ CMF ಉತ್ಪನ್ನಗಳ ಸಂಪೂರ್ಣ ಸರಣಿಯು ಪ್ರದರ್ಶನಕ್ಕೆ ಲಭ್ಯವಿದೆ.

ಸ್ಮಾರ್ಟ್‌ಫೋನ್‌ಗಳು, ವೈರ್‌ಲೆಸ್ ಇಯರ್‌ಬಡ್ಸ್, ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ವಿವಿಧ ಗ್ಯಾಜೆಟ್‌ಗಳನ್ನು ಗ್ರಾಹಕರು ಕೈಯಲ್ಲಿ ಹಿಡಿದು ಪರೀಕ್ಷಿಸಬಹುದು. ಅಧಿಕೃತ ಮರ್ಚೆಂಡೈಸ್ ಹಾಗೂ ಬ್ರ್ಯಾಂಡ್ ಉಡುಪುಗಳನ್ನೂ ಇಲ್ಲಿ ಖರೀದಿಸಲು ಸಾಧ್ಯವಿದೆ. ಈ ಸ್ಟೋರ್‌ನ ವಿನ್ಯಾಸ ವಿಶೇಷ ಗಮನ ಸೆಳೆಯುತ್ತದೆ. 1970ರ ದಶಕದ ಕಾರ್ಖಾನೆ ಶೈಲಿಯಿಂದ ಪ್ರೇರಿತವಾದ ರೆಟ್ರೋ-ಫ್ಯೂಚರಿಸ್ಟಿಕ್ ಥೀಮ್ ಅನ್ನು ಬಳಸಲಾಗಿದೆ. ಕಾಂಕ್ರೀಟ್, ಉಕ್ಕು, ಅಲ್ಯೂಮಿನಿಯಂ ಮತ್ತು ಗಾಜು ಮುಂತಾದ ವಸ್ತುಗಳನ್ನು ಬಯಲಿಗೆ ತೋರಿಸುವ ಮೂಲಕ ಬ್ರ್ಯಾಂಡ್‌ನ ಪಾರದರ್ಶಕತೆ ತತ್ವವನ್ನು ಹೈಲೈಟ್ ಮಾಡಲಾಗಿದೆ.

ಗ್ರಾಹಕರ ಅನುಭವವನ್ನು ಇನ್ನಷ್ಟು ಆಕರ್ಷಕಗೊಳಿಸಲು ಹಲವು ವಿಶೇಷ ವ್ಯವಸ್ಥೆಗಳು ಮಾಡಲಾಗಿದೆ. ಖರೀದಿಸಿದ ಫೋನ್‌ಗಳಿಗೆ ಸ್ಥಳದಲ್ಲೇ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವ ಸೇವೆ ಲಭ್ಯವಿದೆ. ಜೊತೆಗೆ ವೆಂಡಿಂಗ್ ಮೆಷಿನ್‌ಗಳು, ಕ್ಲಾ ಗೇಮ್‌ಗಳು ಮತ್ತು ಕನ್ವೇಯರ್ ಬೆಲ್ಟ್ ಡಿಸ್ಪ್ಲೇಗಳಂತಹ ವಿನೂತನ ಅಂಶಗಳು ಸ್ಟೋರ್‌ಗೆ ವಿಭಿನ್ನತೆ ನೀಡುತ್ತವೆ. ಇದಕ್ಕೂ ಮೀರಿಸಿ, ಈ ಫ್ಲ್ಯಾಗ್‌ಶಿಪ್ ಸ್ಟೋರ್ ಸಮುದಾಯ ಚಟುವಟಿಕೆಗಳಿಗೆ ವೇದಿಕೆಯಾಗಿದೆ. ಕಂಟೆಂಟ್ ಕ್ರಿಯೇಟರ್‌ಗಳಿಗೆ ವಿಶೇಷ ಸ್ಟುಡಿಯೋ ಸ್ಥಳವಿದ್ದು, ಅನ್ಬಾಕ್ಸಿಂಗ್ ಅಥವಾ ಹ್ಯಾಂಡ್ಸ್-ಆನ್ ವಿಡಿಯೋ ಚಿತ್ರೀಕರಣಕ್ಕೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಭಾರತದ ಮೊದಲ 'ನಥಿಂಗ್ ಸ್ಟೋರ್' ಪ್ರಾರಂಭ: ಒಳಗೆ ಹೇಗಿದೆ ಗೊತ್ತಾ?

ಬೆಂಗಳೂರಿನಲ್ಲಿ ಆರಂಭವಾದ ಈ ಪ್ರಯತ್ನವು Nothing ಬ್ರ್ಯಾಂಡ್‌ಗೆ ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ. ಗ್ರಾಹಕರೊಂದಿಗೆ ನೇರ ಸಂಪರ್ಕ ಬೆಳೆಸಿ, ಬ್ರ್ಯಾಂಡ್ ಅನುಭವವನ್ನು ಹೆಚ್ಚಿಸುವ ದಿಟ್ಟ ಹೆಜ್ಜೆಯಾಗಿ ಈ ಫ್ಲ್ಯಾಗ್‌ಶಿಪ್ ಸ್ಟೋರ್ ಗಮನ ಸೆಳೆಯುತ್ತಿದೆ. "ನಮ್ಮ ಬಳಕೆದಾರರಲ್ಲಿ ಬಹುತೇಕರು ಭಾರತದಲ್ಲಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲಿ ನಮ್ಮ ಸಮುದಾಯ ಹೆಚ್ಚು ಸಕ್ರಿಯವಾಗಿದೆ. ಆದ್ದರಿಂದ ಇಲ್ಲಿ ಆರಂಭಿಸುವುದು ಸಹಜ ಆಯ್ಕೆಯೇ," ಎಂದು ನಥಿಂಗ್ ಕಂಪೆನಿಯ ಸಿಇಒ ಕಾರ್ಲ್‌ ಪೀ ಹೇಳಿರುವುದು ನಮ್ಮ ಬೆಂಗಳೂರು ದೇಶದಲ್ಲೇ ಸ್ಮಾರ್ಟ್‌ಫೋನ್ ಹಬ್ ಆಗುವ ಲಕ್ಷಣವನ್ನು ತೋರಿದೆ.

ಬೆಂಗಳೂರಿನಲ್ಲಿ ಭಾರತದ ಮೊದಲ 'ನಥಿಂಗ್ ಸ್ಟೋರ್' ಪ್ರಾರಂಭ: ಒಳಗೆ ಹೇಗಿದೆ ಗೊತ್ತಾ?

ಒಟ್ಟಾರೆಯಾಗಿ, ಒಟ್ಟಿನಲ್ಲಿ, ನಮ್ಮ ಬೆಂಗಳೂರಿನಲ್ಲಿ ಆರಂಭವಾದ Nothing ಫ್ಲ್ಯಾಗ್‌ಶಿಪ್ ಸ್ಟೋರ್ ಕೇವಲ ಮತ್ತೊಂದು ರಿಟೇಲ್ ಅಂಗಡಿ ಅಲ್ಲ. ಬದಲಾಗಿ ಇದು ಬ್ರ್ಯಾಂಡ್ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಟ್ಟುವ ಹೊಸ ಪ್ರಯೋಗವಾಗಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಎರಡನ್ನೂ ಸಮತೋಲನವಾಗಿ ಬಳಸುವ ಮೂಲಕ Nothing ಭಾರತದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಸಜ್ಜಾಗಿದೆ. ಜನರು ಈಗ ಕೇವಲ 'ವ್ಯಾಲ್ಯೂ ಫಾರ್ ಮನಿ' ಉತ್ಪನ್ನಗಳನ್ನು ಮಾತ್ರ ಹುಡುಕುವುದಿಲ್ಲ. ಅವರಿಗೆ ಆಸ್ಪದ ನೀಡುವ, ವಿಭಿನ್ನ ಬ್ರ್ಯಾಂಡ್ ಅನುಭವ ಬಯಸುತ್ತಾರೆ ಎಂಬ Nothing ಕಂಪೆನಿ ಮಾತಿನಲ್ಲಿ ಅರ್ಥವಿದೆ.

Best Mobiles in India

English summary
Nothing has opened its first exclusive retail store in India at Indiranagar, Bengaluru. Spanning 5,000 sq ft, the flagship outlet serves as an experience hub where customers can explore and test Nothing and CMF products, along with official merchandise, in a unique retro-futuristic setting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+