Home
ಸುದ್ದಿಜಾಲ

ನಾಳೆ ಇನ್ಫಿನಿಕ್ಸ್‌ ಹಾಟ್‌ 40i ಖರೀದಿಗೆ ಲಭ್ಯ...ಬೆಲೆ ಎಷ್ಟು?

ಇನ್ಫಿನಿಕ್ಸ್‌ ಸಂಸ್ಥೆಯ ಹೊಸ ಇನ್ಫಿನಿಕ್ಸ್‌ ಹಾಟ್‌ 40i ಫೋನ್‌ ಜನಪ್ರಿಯ ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ ತಾಣದ ಮೂಲಕ ನಾಳೆ (ಫೆಬ್ರುವರಿ 21 ರಂದು) ಮಾರಾಟ ಪ್ರಾರಂಭ ಮಾಡಲಿದೆ. ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಈ ಫೋನ್‌ ಈಗಾಗಲೇ ಮೊಬೈಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ಹೌದು, ಇನ್ಫಿನಿಕ್ಸ್‌ ಹಾಟ್‌ 40i ಫೋನ್‌ ಸೇಲ್‌ ಇದೇ ಫೆಬ್ರುವರಿ 21 ರಂದು ಶುರುವಾಗಿದ್ದು, ಗ್ರಾಹಕರು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ ಖರೀದಿ ಮಾಡಬಹುದಾಗಿದೆ. ಈ ಫೋನ್‌ ಯುನಿಸೋಕ್‌ T606 SoC ಪ್ರೊಸೆಸರ್‌ ಪಡೆದಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿದೆ.

ನಾಳೆ ಇನ್ಫಿನಿಕ್ಸ್‌ ಹಾಟ್‌ 40i ಖರೀದಿಗೆ ಲಭ್ಯ...ಬೆಲೆ ಎಷ್ಟು?

ಇನ್ಫಿನಿಕ್ಸ್‌ ಹಾಟ್‌ 40i ಫೋನ್‌ 8GB RAM ಮತ್ತು 256GB ಸ್ಟೋರೇಜ್‌ ಸೌಲಭ್ಯ ಪಡೆದಿದ್ದು, ಇದರೊಂದಿಗೆ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್‌ ಹಾಟ್‌ 40i ಫೀಚರ್ಸ್‌ ಮಾಹಿತಿ
ಇನ್ಫಿನಿಕ್ಸ್‌ ಹಾಟ್‌ 40i ಮೊಬೈಲ್‌ ಫೋನ್‌ 6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 480 ನಿಟ್ಸ್‌ ಬ್ರೈಟ್‌ನೆಸ್‌ ಬೆಂಬಲದೊಂದಿಗೆ ಬರಲಿದ್ದು, 1500:1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಹಾಗೂ 180Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಒಳಗೊಂಡಿದೆ.

ಈ ಇನ್ಫಿನಿಕ್ಸ್‌ ಹಾಟ್‌ 40i ಸ್ಮಾರ್ಟ್‌ಫೋನ್‌ ಅಕ್ಟಾ ಕೋರ್‌ ಯುನಿಸೋಕ್‌ T606 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಜೊತೆಗೆ ಮಾಲಿ G57 MP1 GPU ಸಪೋರ್ಟ್‌ ಅನ್ನು ಪಡೆದಿದೆ. ಈ ಫೋನ್‌ ಆಂಡ್ರಾಯ್ಡ್‌ 13 ಸಪೋರ್ಟ್ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಜೊತೆಗೆ 8GB ವರ್ಚುವಲ್ RAM ಅನ್ನು ಸಹ ಬೆಂಬಲಿಸಲಿದೆ. ಇದರೊಂದಿಗೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಹಾಗೆಯೇ ಈ ಇನ್ಫಿನಿಕ್ಸ್‌ ಹಾಟ್‌ 40i ಮೊಬೈಲ್‌ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಹಿಂಭಾಗದ ಕ್ಯಾಮರಾವನ್ನು ಹೊಂದಿದೆ. ಜೊತೆಗೆ AI ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ವಾಡ್ LED ರಿಂಗ್ ಫ್ಲಾಶ್ ಹಾಗೂ ಡ್ಯುಯಲ್ LED ಫ್ಲ್ಯಾಶ್ ಅನ್ನು ಸಹ ಪಡೆದುಕೊಂಡಿದೆ.

ಇನ್ಫಿನಿಕ್ಸ್‌ ಹಾಟ್‌ 40i ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, Wi-Fi 802.11 ac, ಬ್ಲೂಟೂತ್ 5.0, GPS + GLONASS, USB ಟೈಪ್-C ಅನ್ನು ಪಡೆದಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್‌ಗಳನ್ನು ಹೊಂದಿದೆ. ಅಲ್ಲದೆ ಮ್ಯಾಜಿಕ್ ರಿಂಗ್ ಫೇಸ್ ಅನ್‌ಲಾಕ್, ಬ್ಯಾಕ್‌ಗ್ರೌಂಡ್ ಕಾಲ್, ಚಾರ್ಜಿಂಗ್ ಅನಿಮೇಷನ್, ಚಾರ್ಜ್ ಕಂಪ್ಲೀಷನ್ ರಿಮೈಂಡರ್ ಮತ್ತು ಲೋ ಬ್ಯಾಟರಿ ರಿಮೈಂಡರ್‌ನಂತಹ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ 9,999ರೂ ಬೆಲೆಗೆ ಲಭ್ಯ ಇದ್ದು, ಆರಂಭಿಕ ಕೊಡುಗೆ ಆಗಿ 8,999ರೂ. ಗಳಿಗೆ ಲಭ್ಯ ಆಗಲಿದೆ. ಫೆಬ್ರುವರಿ 21 ರಂದು ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಗೆ ಲಭ್ಯ ಆಗಲಿದೆ.

Best Mobiles in India

English summary
Infinix hot 40i sale starts from february 21 in india. price and more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+