ಏ.18ಕ್ಕೆ ಹೊಸ infinix ಫೋನ್ ಲಾಂಚ್; 50MP ಕ್ಯಾಮೆರಾ.. 5500mAh ಬ್ಯಾಟರಿ.. ಬೆಲೆ ಎಷ್ಟು ಗೊತ್ತಾ?
ಇನ್ಫಿನಿಕ್ಸ್ ಮತ್ತೊಂದು ಹೊಸ ಫೋನ್ ಬಿಡುಗಡೆಗೆ ಸಜ್ಜಾಗಿದೆ. ಇದೀಗ ಆ ಮೊಬೈಲ್‌ನ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಿದೆ. ಹೌದು, ಇನ್ಫಿನಿಕ್ಸ್ ಕಳೆದ ತಿಂಗಳು (ಮಾರ್ಚ್ 27 ರಂದು) ಭಾರತದಲ್ಲಿ 'ನೋಟ್ 50' ಸರಣಿಯಲ್ಲಿ ಇನ್ಫಿನಿಕ್ಸ್ ನೋಟ್ 50x 5G+ ಫೋನನ್ನು ಬಿಡುಗಡೆ ಮಾಡಿತ್ತು. ಇದು ಮೊದಲ ಫೋನ್ ಆಗಿದೆ. ಈ ಮೊಬೈಲ್‌ನ ಬೆಲೆ 11,499 ರೂ. ಆಗಿದೆ. ಇದು ಡೈಮೆನ್ಸಿಟಿ 7300 ಅಲ್ಟಿಮೇಟ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಇದೀಗ ಕಂಪನಿಯು ಈ ಸರಣಿಯನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಬನ್ನಿ, ಆ ಹೊಸ ಫೋನ್ ಯಾವುದು? ಬಿಡುಗಡೆ ದಿನಾಂಕ ಮತ್ತು ಇತರೆ ವಿವರಗಳನ್ನು ತಿಳಿಯೋಣ.
ಹೌದು, ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 50s 5G+ (Infinix Note 50s 5G+) ಫೋನನ್ನು ಲಾಂಚ್ ಮಾಡುವುದಾಗಿ ಇನ್ಫಿನಿಕ್ಸ್ ಘೋಷಿಸಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಇರುತ್ತದೆ. ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರಲಿದೆ. ಹಾಗೆಯೇ 5,500mAh ಬ್ಯಾಟರಿ, 8GB RAM ಮತ್ತು 128GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಇನ್ಫಿನಿಕ್ಸ್ ನೋಟ್ 50s 5G+ ಬಿಡುಗಡೆ ದಿನಾಂಕ
ಇನ್ಫಿನಿಕ್ಸ್ ನೋಟ್ 50s 5G+ ಮೊಬೈಲ್ ಇದೇ ಏಪ್ರಿಲ್ 18 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಕಂಪನಿಯು ಇದನ್ನು 5G ಪ್ಲಸ್ ಫೋನ್ ಎಂದು ಕರೆದಿದೆ. ಈ ಫೋನ್ ಬಿಡುಗಡೆ ದಿನಾಂಕದ ಜೊತೆಗೆ, ಫೋಟೋವನ್ನು ಸಹ ಹಂಚಿಕೊಳ್ಳಲಾಗಿದೆ. ಈ 5G+ ಫೋನ್ ಟೈಟಾನಿಯಂ ಗ್ರೇ (ಮೆಟಾಲಿಕ್ ಫಿನಿಶ್), ರೂಬಿ ರೆಡ್ (ಮೆಟಾಲಿಕ್ ಫಿನಿಶ್) ಮತ್ತು ಮೆರೈನ್ ಡ್ರಿಫ್ಟ್ ಬ್ಲೂ (ವೆಗನ್ ಲೆದರ್, ಸೆಂಟ್-ಟೆಕ್) ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಇನ್ಫಿನಿಕ್ಸ್ ನೋಟ್ 50s 5G+ ಬೆಲೆ (ನಿರೀಕ್ಷಿತ)
ಇನ್ಫಿನಿಕ್ಸ್ ನೋಟ್ 50s 5G+ ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಇದು 6GB RAM + 128GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್ ರೂಪಾಂತರದಲ್ಲಿ ಬರುತ್ತದೆ. ಇದರ ಮೂಲ ರೂಪಾಂತರದ ಬೆಲೆ 11,499 ರೂ. ಮತ್ತು 8GB RAM ಬೆಲೆ 12,999 ರೂ.ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಇನ್ಫಿನಿಕ್ಸ್ ನೋಟ್ 50x 5G+ ವೈಶಿಷ್ಟ್ಯಗಳು
ಇನ್ಫಿನಿಕ್ಸ್ ನೋಟ್ 50X ಸ್ಮಾರ್ಟ್‌ಫೋನ್ 6.78 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಸ್ಕ್ರೀನ್ ಆಗಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ದರದಬೆಂಬಲ ಪಡೆದಿದೆ. ಈ ಇನ್ಫಿನಿಕ್ಸ್ ನೋಟ್ 50x 5G+ ಫೋನ್, ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್ ಗ್ರಾಫಿಕ್ಸ್‌ಗಾಗಿ ಮಾಲಿ G615 ಜಿಪಿಯು ಸಹ ಹೊಂದಿದೆ.
ಇನ್ಫಿನಿಕ್ಸ್ ನೋಟ್ 50X 5G ಪ್ಲಸ್ ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಈ ಫೋನಿನ ಹಿಂಭಾಗದ ಫಲಕದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಬರುತ್ತದೆ. ಇದರೊಂದಿಗೆ ಎಐ ಲೆನ್ಸ್‌ನೊಂದಿಗೆ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಸಹ ಹೊಂದಿದೆ. ಈ 5G ಮೊಬೈಲ್ 5,500mAh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಸ್ಮಾರ್ಟ್‌ಫೋನ್‌ಗೆ 45W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ.


Click it and Unblock the Notifications