IPL 2025: ಐಪಿಎಲ್ಗೆ ಕೌಂಟ್ಡೌನ್! 3 ತಿಂಗಳು LIVE ಉಚಿತ.. ಅಗ್ಗದ ದರ.. ಈಗಲೇ ರೀಚಾರ್ಜ್ ಮಾಡಿ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಯಶಸ್ವಿಯಾಗಿ ಮುಗಿಯಿತು. ನಿರೀಕ್ಷೆಯಂತೆಯೇ ಭಾರತ ಟ್ರೋಫಿಗೆ ಮುತ್ತಿಟ್ಟಿದೆ. ಇದೀಗ, ಕ್ರಿಕೆಟ್ ಪ್ರೇಮಿಗಳ ಚಿತ್ತ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನತ್ತ (IPL) ನೆಟ್ಟಿದೆ. ಹೌದು, ಕೆಲವೇ ದಿನಗಳಲ್ಲಿ ಐಪಿಎಲ್ 2025 (IPL 2025) ಹಂಗಾಮ ಆರಂಭವಾಗಲಿದೆ. ಇದಕ್ಕಾಗಿ ಎಲ್ಲ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಸೆಳೆಯಲು ಹೊಸ ಹೆಜ್ಜೆ ಇಟ್ಟಿವೆ. ಕೈಗೆಟುಕುವ ದರಗಳಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹೊಸ ಯೋಜನೆಗಳನ್ನು ಘೋಷಿಸಿವೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು, ಐಪಿಎಲ್ ಸೀಸನ್ 2025 ಬಂದೇ ಬಿಟ್ಟಿದೆ. ಟೆಲಿಕಾಂ ಕಂಪನಿಗಳು ಸಹ ಬಳಕೆದಾರರನ್ನು ಸೆಳೆಯಲು ಹೊಸ ಪ್ಲಾನ್ಗಳನ್ನು ಪರಿಚಯಿಸಿವೆ. ಈ ಪೈಕಿ ಜಿಯೋ ಮತ್ತು ವೋಡಾಫೋನ್ ಐಡಿಯಾ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳನ್ನು ಪ್ರಕಟಿಸಿವೆ. ಪ್ರಸ್ತುತ, ಜಿಯೋದ ಎರಡು ರೀಚಾರ್ಜ್ ಪ್ಲಾನ್ಗಳಲ್ಲಿ ಮೂರು ತಿಂಗಳ ಕಾಲ ಜಿಯೋ ಹಾಟ್ಸ್ಟಾರ್ (JioHotstar) ಉಚಿತ ಸಬ್ ಸ್ಕ್ರಿಪ್ಷನ್ ನೀಡಲಾಗುತ್ತಿದೆ. ಅದೂ ಸಹ 200 ರೂ.ಗಿಂತ ಕಡಿಮೆ ಬೆಲೆಯಲ್ಲಿ ಎನ್ನುವುದು ವಿಶೇಷ. ವೊಡಾಫೋನ್ ಐಡಿಯಾ ಸಹ ತನ್ನ ಪ್ಲಾನ್ಗಳಲ್ಲಿ ಈ ಸೌಲಭ್ಯ ಒದಗಿಸುತ್ತಿದೆ.

ಜಿಯೋ ತನ್ನ ಹೊಸ ಪ್ರಿಪೇಯ್ಡ್ ಯೋಜನೆಯನ್ನು (ಮೊಬೈಲ್ ಸಬ್ ಸ್ಕ್ರಿಪ್ಷನ್) ಘೋಷಿಸಿದೆ. ಇತ್ತೀಚೆಗೆ ಜಿಯೋ ಮತ್ತು ಹಾಟ್ಸ್ಟಾರ್ ಒಟ್ಟಾಗಿ ಜಿಯೋ ಹಾಟ್ಸ್ಟಾರ್ ಆಗಿ ಹೊರಹೊಮ್ಮಿದೆ. ಜಿಯೋ ಗ್ರಾಹಕರು ಇದರಲ್ಲಿ ಹೊಸ ಓಟಿಟಿ (OTT) ಪ್ಲಾಟ್ಫಾರ್ಮ್ ಜಿಯೋ ಹಾಟ್ಸ್ಟಾರ್ (JioHotstar Subscription) ಪ್ಲಾಟ್ಫಾರ್ಮ್ಗೆ ಸಬ್ ಸ್ಕ್ರಿಪ್ಷನ್ ಪಡೆಯಬಹುದು. ಈ ಓಟಿಟಿ ಪ್ಲಾಟ್ಫಾರ್ಮ್ನ ಉಚಿತ ಸಬ್ ಸ್ಕ್ರಿಪ್ಷನ್ ಅನೇಕ ರೀಚಾರ್ಜ್ ಯೋಜನೆಗಳೊಂದಿಗೆ ಬರುತ್ತದೆ.
ಜಿಯೋ 100 ರೂ. ಪ್ರಿಪೇಯ್ಡ್ ಪ್ಲಾನ್
ಜಿಯೋ 100 ರೂ.ಗೆ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇದು 90 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ನೀವು 5GB ಡೇಟಾ ಬಳಸಬಹುದು. ಈ ಡೇಟಾ ಮುಗಿದ ನಂತರ 64 GBPS ವೇಗದ ಡೇಟಾ ಲಭ್ಯವಿರುತ್ತದೆ. ಜಿಯೋ ಹಾಟ್ಸ್ಟಾರ್ನ ಸಬ್ಸ್ಕ್ರೀಪ್ಶನ್ ಸಹ ಲಭ್ಯವಿರುತ್ತದೆ. ನೀವು ಸ್ಮಾರ್ಟ್ಫೋನ್ಗಳು ಅಥವಾ ಸ್ಮಾರ್ಟ್ ಟಿವಿಗಳಲ್ಲಿ ಜಿಯೋ ಹಾಟ್ಸ್ಟಾರ್ ಅನ್ನು ಉಚಿತವಾಗಿ ವೀಕ್ಷಿಸಬಹುದು.
ನೀವು ಮೊಬೈಲ್ನಲ್ಲಿ ಮಾತ್ರವಲ್ಲದೆ ಸ್ಮಾರ್ಟ್ ಟಿವಿಯಲ್ಲಿ 90 ದಿನಗಳ ವ್ಯಾಲಿಡಿಟಿಯೊಂದಿಗೆ ಜಿಯೋ ಹಾಟ್ಸ್ಟಾರ್ ಚಂದಾದಾರಿಕೆಯ ಲಾಭ ಪಡೆಯಬಹುದು. ಆದಾಗ್ಯೂ, ಜಿಯೋ ಹಾಟ್ಸ್ಟಾರ್ ಚಂದಾದಾರಿಕೆಯು ಜಿಯೋ 195 ರೂ. ಮತ್ತು 949 ರೂ. ಪ್ರಿಪೇಯ್ಡ್ ಪ್ಲಾನ್ಗಳೊಂದಿಗೆ ಉಚಿತವಾಗಿ ಲಭ್ಯವಿದೆ.
ಜಿಯೋ 195 ರೂ. ಪ್ರಿಪೇಯ್ಡ್ ಪ್ಲಾನ್
ಜಿಯೋ 195 ರೂ. ಪ್ರಿಪೇಯ್ಡ್ ಯೋಜನೆಯು 90 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ 15GB ಡೇಟಾ ಸಿಗುತ್ತದೆ. ನೀವು 90 ದಿನಗಳವರೆಗೆ ಜಿಯೋ ಹಾಟ್ಸ್ಟಾರ್ (JioHotstar) ಮೊಬೈಲ್ನ ಸಬ್ ಸ್ಕ್ರಿಪ್ಷನ್ ಪಡೆಯಬಹುದು. ಜಿಯೋ ಹಾಟ್ಸ್ಟಾರ್ ಮೊಬೈಲ್ ಚಂದಾದಾರಿಕೆಗೆ ತಿಂಗಳಿಗೆ 149 ರೂ. ಇದೆ. ಒಂದು ವರ್ಷಕ್ಕೆ 499 ರೂ. ಪಾವತಿಸಬೇಕು. ನೀವು ಮೊಬೈಲ್ನಲ್ಲಿ 720p ವಿಡಿಯೋ ಕ್ವಾಲಿಟಿಯೊಂದಿಗೆ ಐಪಿಎಲ್ ವೀಕ್ಷಿಸಬಹುದು.
ಜಿಯೋ 949 ರೂ. ಪ್ರಿಪೇಯ್ಡ್ ಪ್ಲಾನ್
ಜಿಯೋ 949 ರೂ. ಪ್ರಿಪೇಯ್ಡ್ ಯೋಜನೆಯು 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ನೀವು ದಿನಕ್ಕೆ 2GB ಡೇಟಾ ಬಳಸಬಹುದು. 84 ದಿನಗಳಲ್ಲಿ ಒಟ್ಟು 168GB ಡೇಟಾದ ಲಾಭ ಪಡೆಯಬಹುದು. ಇದರಲ್ಲಿ ಅನ್ಲಿಮಿಟೆಡ್ ಧ್ವನಿ ಕರೆ, 5G ಕನೆಕ್ಟ್ ಮತ್ತು ನಿತ್ಯ 100 ಎಸ್ಎಂಎಸ್ (SMS) ಸೌಲಭ್ಯ ನೀಡಲಾಗುತ್ತದೆ. ಇದರೊಂದಿಗೆ ಜಿಯೋ ಹಾಟ್ಸ್ಟಾರ್, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ನ ಚಂದಾದಾರಿಕೆಯನ್ನೂ ಪಡೆಯಬಹುದು.
Vi 469 ರೂ. ರೀಚಾರ್ಜ್ ಪ್ಲಾನ್
ಜಿಯೋದಂತೆ ವೊಡಾಫೋನ್ ಐಡಿಯಾ ಕೂಡ ತನ್ನ ರೀಚಾರ್ಜ್ ಪ್ಲಾನ್ನಲ್ಲಿ ಜಿಯೋ ಹಾಟ್ಸ್ಟಾರ್ ಉಚಿತ ಚಂದಾದಾರಿಕೆ ನೀಡುತ್ತಿದೆ. ಇದು ಅನ್ಲಿಮಿಟೆಡ್ ಕರೆ, ನಿತ್ಯ 2.5GB ಡೇಟಾ, 100 100 ಎಸ್ಎಂಎಸ್ (SMS) ಸೌಲಭ್ಯ ಹೊಂದಿದೆ. ಇದರಲ್ಲಿ 3 ತಿಂಗಳವರೆಗೆ ಜಿಯೋ ಹಾಟ್ಸ್ಟಾರ್ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ವ್ಯಾಲಿಡಿಟಿ 28 ದಿನಗಳಾಗಿದ್ದರೂ, ಚಂದಾದಾರಿಕೆಯು ಮೂರು ತಿಂಗಳವರೆಗೆ ಲಭ್ಯವಿರುತ್ತದೆ.


Click it and Unblock the Notifications