5,200mAh ಬ್ಯಾಟರಿ, IP64 ರೇಟಿಂಗ್, ಫೇಸ್ ಅನ್‌ಲಾಕ್: 7,599 ರೂ.ಗೆ ಹೊಸ ಫೋನ್!
Itel ಬ್ರ್ಯಾಂಡ್ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ Itel City 100 ಅನ್ನು ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಜುಲೈ 5 ರಂದು ಬಿಡುಗಡೆಯಾದ ಈ ಹೊಸ ಫೋನ್ ಇದೀಗ ದೇಶದಲ್ಲಿ ಮಾರಾಟಕ್ಕೆ ಬಂದಿದ್ದು, ಇದರ 4GB RAM ಮತ್ತು 128GB ಶೇಖರಣಾ ಮಾದರಿಯ ಬೆಲೆ 7,599 ರೂ. ಎಂಬುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಖಚಿತಪಡಿಸಿದೆ. ಇದರೊಂದಿಗೆ, ಗ್ರಾಹಕರಿಗೆ ರೂ. 2,999 ಮೌಲ್ಯದ ಉಚಿತ ಮ್ಯಾಗ್ನೆಟಿಕ್ ಸ್ಪೀಕರ್ ಮತ್ತುಒಂದು ಬಾರಿ ಉಚಿತ ಸ್ಕ್ರೀನ್ ಬದಲಿ ಸೌಲಭ್ಯವನ್ನು ಸಹ ನೀಡುತ್ತಿದೆ.
Itel City 100 : ಪ್ರಮುಖ ಫೀಚರ್ಸ್ ಮತ್ತು ವೈಶಿಷ್ಟ್ಯಗಳು
ಹೊಸ Itel City 100 ಫೋನ್ 6.75-ಇಂಚಿನ HD+ IPS LCD ಪರದೆಯನ್ನು ಹೊಂದಿದ್ದು, ಇದು 90Hz ರಿಫ್ರೆಶ್ ರೆಟ್ ಮತ್ತು 700 ನಿಟ್ಸ್ ಗರಿಷ್ಠ ಹೊಳಪು ಮಟ್ಟವನ್ನು ನೀಡುತ್ತದೆ. ಇದು ಉತ್ತಮ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಕಾರ್ಯಕ್ಷಮತೆ ವಿಭಾಗದಲ್ಲಿ ಈ ಫೋನ್ 4GB RAM ಮತ್ತು 128GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾದ ಆಕ್ಟಾ-ಕೋರ್ ಯುನಿಸಾಕ್ T7250 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಮತ್ತು ಈ ಫೋನ್ ಆಂಡ್ರಾಯ್ಡ್ 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ Itel City 100 ಫೋನಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದೆಂದರೆ ಅದರ AI ವೈಶಿಷ್ಟ್ಯಗಳು. ಇದು Itel ನ AI ಸಹಾಯಕವಾದ ಐವಾನಾ 3.0 ಅನ್ನು ಒಳಗೊಂಡಿದೆ. AI ವೈಶಿಷ್ಟ್ಯಗಳು ಬಳಕೆದಾರರಿಗೆಚಿತ್ರಗಳಿಂದ ಪಠ್ಯವನ್ನು ಹೊರತೆಗೆಯಲು ಅನುಮತಿಸುತ್ತದೆ. ಇದು ಚಿತ್ರಗಳನ್ನು ಸಂಪಾದಿಸಬಹುದಾದ ವರ್ಡ್, ಪಿಡಿಎಫ್, ಅಥವಾ ಎಕ್ಸೆಲ್ ಫೈಲ್‌ಗಳಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ, ಇದು AI ಬರವಣಿಗೆ ಸೂಟ್ ಅನ್ನು ಸಹ ನೀಡುತ್ತದೆ. ಇದು ವಿಭಿನ್ನ ಸ್ವರಗಳಲ್ಲಿ ಪಠ್ಯವನ್ನು ರಚಿಸಲು, ಪ್ರೂಫ್ ರೀಡ್ ಮಾಡಲು, ಸಾರಾಂಶಿಸಲು ಅಥವಾ ಪುನಃ ಬರೆಯಲು ಸಹಾಯ ಮಾಡುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, Itel City 100 ಫೋನಿನಲ್ಲಿ 13-ಮೆಗಾಪಿಕ್ಸೆಲ್ ಮುಖ್ಯ ಹಿಂಭಾಗದ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 5,200mAh ಬ್ಯಾಟರಿಯನ್ನು ಹೊಂದಿದ್ದು, 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನುಳಿದಂತೆ, ಧೂಳು ಮತ್ತು ನೀರಿನ ಸ್ಪ್ಲಾಶ್‌ಗಳಿಂದ ರಕ್ಷಣೆಗಾಗಿ IP64 ರೇಟಿಂಗ್, ಒಂದೇ ಬಿಲ್ಟ್-ಇನ್ ಸ್ಪೀಕರ್, ದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, IR ಬ್ಲಾಸ್ಟರ್ ನಂತಹ ಫೀಚರ್ಸ್ ಹೊಂದಿರುವ ಈ ಫೋನ್ ಫೇಸ್ ಅನ್‌ಲಾಕ್ ಅನ್ನು ಸಹ ಬೆಂಬಲಿಸುತ್ತದೆ.
Itel City 100 :ಬೆಲೆ, ಬಣ್ಣ ಮತ್ತು ಲಭ್ಯತೆ
ಮೊದಲೇ ಹೇಳಿದಂತೆ, ರ 4GB RAM ಮತ್ತು 128GB ಶೇಖರಣಾ ಮಾದರಿಯ Itel City 100 ಫೋನ್ ಬೆಲೆ 7,599 ರೂ.ಗಳುಇದರೊಂದಿಗೆ, ಗ್ರಾಹಕರಿಗೆ ರೂ. 2,999 ಮೌಲ್ಯದ ಉಚಿತ ಮ್ಯಾಗ್ನೆಟಿಕ್ ಸ್ಪೀಕರ್ ಮತ್ತು 100 ದಿನಗಳೊಳಗೆ ಒಂದು ಬಾರಿ ಉಚಿತ ಸ್ಕ್ರೀನ್ ಬದಲಿ ಸೌಲಭ್ಯವು ದೊರೆಯಲಿ ಎಂದು ಕಂಪೆನಿಯು ಹೇಳಿಕೊಂಡಿದೆ.
ಇನ್ನು Itel City 100 ಫೋನ್ ಫೇರಿ ಪರ್ಪಲ್, ನೇವಿ ಬ್ಲೂ ಮತ್ತು ಪ್ಯೂರ್ ಟೈಟಾನಿಯಂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದ್ದು, ದೇಶಾದ್ಯಂತ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಿದೆ ಎಂದು ಕಂಪೆನಿಯು ತಿಳಿಸಿದೆ. ಹಾಗಾದರೆ, ಈ ಫೋನ್ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications