Home
ಸುದ್ದಿಜಾಲ

ಅಗ್ಗದ ಬೆಲೆಯ ಐಟೆಲ್‌ A70 ಸ್ಮಾರ್ಟ್‌ಫೋನಿಗೆ ಈಗ ಬಿಗ್‌ ಡಿಸ್ಕೌಂಟ್‌!

ಜನಪ್ರಿಯ ಅಮೆಜಾನ್‌ ತಾಣದಲ್ಲಿ ಐಟೆಲ್‌ ಡೇಸ್‌ ಸೇಲ್‌ ಪ್ರಾರಂಭವಾಗಿದ್ದು, ಈ ಮಾರಾಟದಲ್ಲಿ ಆಯ್ದ ಕೆಲವು ಫೋನ್‌ಗಳು ಭರ್ಜರಿ ರಿಯಾಯಿತಿ ಪಡೆದಿವೆ. ಅದರಲ್ಲಿಯೂ ಮುಖ್ಯವಾಗಿ ಐಟೆಲ್‌ ಸಂಸ್ಥೆಯು ಅಗ್ಗದ ಬೆಲೆಯಿಂದ ಗಮನ ಸೆಳೆದಿರುವ ಐಟೆಲ್‌ A70 ಸ್ಮಾರ್ಟ್‌ಫೋನ್‌ ಈಗ ಬೊಂಬಾಟ್‌ ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಲಭ್ಯ ಇದೆ.

ಹೌದು, ಅಮೆಜಾನ್‌ ತಾಣವು ಐಟೆಲ್‌ ಡೇಸ್‌ ಪ್ರಾರಂಭಿಸಿದೆ. ಈ ಮೇಳವು ಮಾರ್ಚ್‌ 11 ರಿಂದ 17 ರ ವರೆಗೂ ನಡೆಯಲಿದೆ. ಈ ಮಾರಾಟದಲ್ಲಿ ಐಟೆಲ್‌ A70 ಫೋನ್‌ 12GB* RAM + 128GB ವೇರಿಯಂಟ್‌ ಶೇ. 32% ರಷ್ಟು ರಿಯಾಯಿತಿ ಪಡೆದುಕೊಂಡಿದ್ದು, 6,799ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಇತರೆ ಕೆಲವು ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದಾಗಿದೆ.

ಅಗ್ಗದ ಬೆಲೆಯ ಐಟೆಲ್‌ A70 ಸ್ಮಾರ್ಟ್‌ಫೋನಿಗೆ ಈಗ ಬಿಗ್‌ ಡಿಸ್ಕೌಂಟ್‌!

ಅಂದಹಾಗೆ ಈ ಫೋನ್‌ ಆಕ್ಟಾ-ಕೋರ್ Unisoc T603 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಅಲ್ಲದೇ ಇದರ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್‌ A70 ಸ್ಮಾರ್ಟ್‌ಫೋನ್‌ ಫೀಚರ್ಸ್‌

ಈ ಸ್ಮಾರ್ಟ್‌ಫೋನ್‌ 6.6 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ವರೆಗಿನ ರಿಫ್ರೆಶ್ ರೇಟ್‌ ಸಪೋರ್ಟ್‌ ಇದ್ದು, 500 ನಿಟ್ಸ್‌ನ ಬ್ರೈಟ್‌ನೆಸ್ ಲೆವೆಲ್‌ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಡೈನಾಮಿಕ್ ಬಾರ್ ಫೀಚರ್ಸ್‌ ಲಭ್ಯ.

ಐಟೆಲ್‌ A70 ಮೊಬೈಲ್‌ ಆಕ್ಟಾ-ಕೋರ್ Unisoc T603 ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿದ್ದು, ಇದು ಆಂಡ್ರಾಯ್ಡ್‌ 13 ಗೋ ಆವೃತ್ತಿ ಆಧಾರಿತ ಐಟೆಲ್‌ಓಎಸ್‌ 13 ನಲ್ಲಿ ರನ್‌ ಆಗಲಿದೆ. ಹಾಗೆಯೇ 4GB RAM ಮತ್ತು 256GB ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಲ್ಲಿ RAM ಅನ್ನು ವಾಸ್ತವಿಕವಾಗಿ ಹೆಚ್ಚುವರಿ 8GB ಯಿಂದ 12GB ವರೆಗೆ ವಿಸ್ತರಿಸಬಹುದಾಗಿದೆ. ಇದರೊಂದಿಗೆ ಮೆಮೊರಿ ಕಾರ್ಡ್‌ ಮೂಲಕ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಐಟೆಲ್‌ A70 ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಅಲ್ಲದೇ ಇದು ಅನಿರ್ದಿಷ್ಟ AI-ಬೆಂಬಲಿತ ಸೆಕೆಂಡರಿ ಸೆನ್ಸಾರ್‌ ಅನ್ನು ಹೊಂದಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಐಟೆಲ್‌ A70 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G, Wi-Fi 802.11, ಬ್ಲೂಟೂತ್ 5.0, GPS/GLONASS, ಮತ್ತು USB ಟೈಪ್-C ಹಾಗೂ ಹೆಡ್‌ಫೋನ್‌ ಜ್ಯಾಕ್‌ ಸಂಪರ್ಕವನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೆ ಭದ್ರತೆಗಾಗಿ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಸೌಲಭ್ಯದೊಂದಿಗೆ ಲಭ್ಯ.

ಐಟೆಲ್‌ A70 ಮೊಬೈಲ್‌ ಭಾರತದಲ್ಲಿ ಬೇಸ್‌ ಮಾಡೆಲ್‌ 4GB + 64GB ಆಯ್ಕೆ, 4GB + 128GB ಸ್ಟೋರೇಜ್‌ ಆಯ್ಕೆ ಹಾಗೂ 4GB + 256GB ರೂಪಾಂತರದ ಆಯ್ಕೆಗಳಲ್ಲಿ ಲಭ್ಯ. ಇನ್ನು ಇದು ಅಜೂರ್ ಬ್ಲೂ, ಬ್ರಿಲಿಯಂಟ್ ಗೋಲ್ಡ್, ಫೀಲ್ಡ್ ಗ್ರೀನ್ ಮತ್ತು ಸ್ಟೈಲಿಶ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
itel Days Sale: huge discount on itel A70 Smartphone. offer price and more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+