Home
ಸುದ್ದಿಜಾಲ

ಲಾವಾದ ಈ ಫೋನ್‌ ಮೇಲೆ ಸಿಗ್ತಾ ಇದೆ ಭರ್ಜರಿ ಡಿಸ್ಕೌಂಟ್‌!.128GB ಸ್ಟೋರೇಜ್‌ ಆಯ್ಕೆ!

ಟೆಕ್‌ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಲಾವಾ ಸ್ಟಾರ್ಮ್ 5G ಫೋನ್‌ ಅಮೆಜಾನ್‌ನಲ್ಲಿ ಬಿಗ್‌ ಆಫರ್‌ ಪಡೆದುಕೊಂಡಿದೆ. ಅಮೆಜಾನ್‌ ತಾಣದಲ್ಲಿ ಭರ್ಜರಿ ಆಫರ್‌ ಪಡೆದುಕೊಳ್ಳುವ ಮೂಲಕ ಗ್ರಾಹಕರು ಅಚ್ಚರಿ ಪಡುವಂತೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಮಿಡಿಯಾಟೆಕ್‌ ಡೈಮೆನ್ಸಿಟಿ 6080SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಹಾಗಾದ್ರೆ ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಲಾವಾದ ಈ ಫೋನ್‌ ಮೇಲೆ ಸಿಗ್ತಾ ಇದೆ ಭರ್ಜರಿ ಡಿಸ್ಕೌಂಟ್‌!.128GB ಸ್ಟೋರೇಜ್‌ ಆಯ್ಕೆ

ಲಾವಾ ಸ್ಟಾರ್ಮ್ 5G ಮೇಲಿನ ಡಿಸ್ಕೌಂಟ್‌ ಎಷ್ಟು?
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನಿನ 8GB RAM ಮತ್ತು 128GB ಸ್ಟೋರೇಜ್‌ ಅಯ್ಕೆಯು ಅಮೆಜಾನ್‌ ತಾಣದಲ್ಲಿ 14,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಸ್ಮಾರ್ಟ್‌ಫೋನ್‌ ಮೇಲೆ 20% ಡಿಸ್ಕೌಂಟ್‌ ನೀಡುತ್ತಿರುವುದರಿಂದ ಇದನ್ನು ನೀವು ಕೇವಲ 11,999ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ವಿವಿಧ ಬ್ಯಾಂಕ್‌ ಕಾರ್ಡ್‌ಗಳ ಮೇಲೆ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಲಾವಾ ಸ್ಟಾರ್ಮ್ 5G ಫೀಚರ್ಸ್‌ ವಿವರ
ಲಾವಾ ಸ್ಟಾರ್ಮ್‌ 5G ಸ್ಮಾರ್ಟ್‌ಫೋನ್‌ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 396ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ. ಜೊತೆಗೆ ಡಿಸ್‌ಪ್ಲೇಯು Widevine L1 ಪ್ರಮಾಣೀಕರಣವನ್ನು ಹೊಂದಿದೆ.

ಲಾವಾ ಸ್ಟಾರ್ಮ್ 5G ಪ್ರೊಸೆಸರ್‌ ಮಾಹಿತಿ
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಲಾವಾ ಸ್ಟಾರ್ಮ್ 5G ಕ್ಯಾಮೆರಾ ರಚನೆ ವಿವರ
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾದೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾವ 8 ಮೆಗಾಪಿಕ್ ಅಲ್ಟ್ರಾವೈಡ್ ಲೆನ್ಸ್ ಜೊತೆಗೆ LED ಫ್ಲ್ಯಾಶ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ ಸ್ಕ್ರೀನ್ ಫ್ಲ್ಯಾಶ್ಡ್ಯುಯಲ್ ವೈಯಕ್ತಿಕ ಕ್ಯಾಮೆರಾ ರಿಂಗ್‌ಗಳನ್ನು ಮತ್ತು ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಷ್‌ಗಾಗಿ ಪ್ರತ್ಯೇಕ ರಿಂಗ್ ಅನ್ನು ನೀಡುತ್ತದೆ.

ಲಾವಾದ ಈ ಫೋನ್‌ ಮೇಲೆ ಸಿಗ್ತಾ ಇದೆ ಭರ್ಜರಿ ಡಿಸ್ಕೌಂಟ್‌!.128GB ಸ್ಟೋರೇಜ್‌ ಆಯ್ಕೆ

ಲಾವಾ ಸ್ಟಾರ್ಮ್ 5G ಬ್ಯಾಟರಿ ಸಾಮರ್ಥ್ಯ ಮತ್ತು ಇತರೆ ಸೌಲಭ್ಯ
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದರಿಂದ ಫೋನ್‌ ಅನ್ನು 82 ನಿಮಿಷಗಳಲ್ಲಿ 0 ರಿಂದ 100 ವರೆಗೆ ಚಾರ್ಜ್ ಮಾಡಬಹುದು ಎಂದು ಲಾವಾ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಒಟಿಜಿ ಸಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ 5.0, ಅನ್ನು ಬೆಂಬಲಿಸಲಿದೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಸಾಫ್ಟ್‌ವೇರ್ ಆಧಾರಿತ ಫೇಸ್ ಅನ್‌ಲಾಕ್ ಹೊಂದಿದೆ.

ಲಾವಾ ಸ್ಟಾರ್ಮ್ 5G ಕಲರ್‌ ಮತ್ತು ಲಭ್ಯತೆ ಆಯ್ಕೆ
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್‌ ಲಾವಾ ಥಂಡರ್ ಬ್ಲಾಕ್ ಮತ್ತು ಗೇಲ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Lava Storm 5G Smartphone Gets Massive Dicount on amazon website: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+