ಲೆನೊವೊದಿಂದ TWS H10 ಪ್ರೋ ಇಯರ್‌ಬಡ್ಸ್‌ ಬಿಡುಗಡೆಗೆ ಸಿದ್ದತೆ!


ಚೀನಾ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ ಲೆನೊವೊ ಕಂಪೆನಿ ಈಗಾಗ್ಲೆ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ ಸೇರಿದಂತೆ ಇಯರ್‌ಬಡ್ಸ್‌ಗಳನ್ನ ಮಾರುಕಟ್ಟೆಗೆ ಲಾಂಚ್‌ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಇಯರ್‌ಬಡ್ಸ್‌ಗಳು ಲಭ್ಯವಿದ್ದರೂ ಗ್ರಾಹಕರು ಮಾತ್ರ ಬ್ರ್ಯಾಂಡ್‌ ಕಂಪೆನಿಗಳ ಇಯರ್‌ಬಡ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಲೆನೊವೊ ಕಂಪೆನಿ ತನ್ನ ಹೊಸ ಮಾದರಿಯ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

Advertisement

ಹೌದು, ಲೆನೊವೊ ಕಂಪೆನಿ ತನ್ನ ಹೊಸ TWS H10 ಪ್ರೊ ಇಯರ್‌ಬಡ್‌ಗಳನ್ನ ಪರಿಚಯಿಸಲು ವೇದಿಕೆ ಸಿದ್ದ ಪಡಿಸಿಕೊಂಡಿದೆ. ಇನ್ನು ಈ ಇಯರ್‌ಬಡ್‌ಗಳು ಇಕ್ಯೂ ಟೆಕ್ನಾಲಜಿಯನ್ನ ಹೊಂದಿದ್ದು, ಉತ್ತಮ ಆಡಿಯೋ ಅನುಭವವನ್ನ ನೀಡಲಿದೆ ಎನ್ನಲಾಗ್ತಿದೆ. ಈ ಟೆಕ್ನಾಲಜಿಯಿಂದ ಆಡಿಯೋ ಫ್ರೀಕ್ವೆನ್ಸಿಯನ್ನ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾಗಿದೆ. ಈ ಇಯರ್‌ಬಡ್ಸ್‌ 2019 ರಲ್ಲಿ ಬಿಡುಗಡೆಯಾದ TWS ಆವೃತ್ತಿಯ ಹೊಸ ಆಪ್ಡೇಟ್ಸ್‌ ಇಯರ್‌ಬಡ್ಸ್‌ ಆಗಿದೆ.

Advertisement
ಲೆನೊವೊ TWS H10 ಪ್ರೊ ಇಯರ್‌ಬಡ್

ಲೆನೊವೊ TWS H10 ಪ್ರೊ ಇಯರ್‌ಬಡ್ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಉತ್ತಮ ವಿನ್ಯಾಸವನ್ನ ಹೊಂದಿದೆ. ''ಪ್ಯೂರ್‌ ಮ್ಯೂಸಿಕ್‌'' ಮತ್ತು"ಎಕ್ಸ್ಟ್ರಾ ಬಾಸ್" ಬಟನ್ ಪ್ರೆಸ್‌ ಅನ್ನು ಹೊಂದಿದ್ದು, ಬಳಕೆದಾರರ ಮೋಡ್‌ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಬಳಕೆದಾರರ ಮೋಡ್‌ಗೆ ಅನುಗುಣವಾಗಿ ಹಾಡಿನ ಫ್ರಿಕ್ವೆನ್ಸಿಯನ್ನ ಬದಲಾಯಿಸುವ ಇಕ್ಯೂ ಟೆಕ್ನಾಲಜಿಯನ್ನ ಹೊಂದಿದೆ. ಇದಲ್ಲದೆ, ಬಳಕೆದಾರರು ಪ್ರಸ್ತುತ ಈಕ್ವಲೈಜರ್ ಫ್ರಿಕ್ವೆನ್ಸಿಗಳನ್ನು ಹೊಂದುವುದಕ್ಕೆ ಅವಕಾಶ ನೀಡಿದೆ.

ಲೆನೊವೊ TWS H10 ಪ್ರೊ ವಿನ್ಯಾಸ

ಈ ವೈರ್‌ಲೆಸ್ ಇಯರ್‌ಬಡ್‌ಗಳು ಸ್ಟೀರಿಯೋ ಡ್ಯುಯಲ್ ಮೈಕ್ರೊಫೋನ್ ಹೊಂದಿದ್ದು, ವಾಟರ್‌ ಪ್ರೂಪ್‌ ವಿನ್ಯಾಸವನ್ನು ಹೊಂದಿದೆ. ಇದಲ್ಲದೆ ಲೆನೊವೊ TWS H10 ಪ್ರೊ ನಲ್ಲಿ ಕ್ಯೂಸಿಸಿ 3020 ಚಿಪ್‌ಸೆಟ್ ಅನ್ನು ಸೇರಿಸಲಾಗಿದ್ದು, ಈ ಚಿಪ್‌ಸೆಟ್ ಪ್ಲೇಬ್ಯಾಕ್ ಟೈಂನಲ್ಲಿ ಉತ್ತಮ ಗುಣಮಟ್ಟದ ಕ್ವಾಲ್ಕಾಮ್ ಆಪ್ಟಿಎಕ್ಸ್ ಆಡಿಯೊ ಕೊಡೆಕ್ ಅನ್ನು ಬೆಂಬಲಿಸುತ್ತದೆ. ಉತ್ತಮ ಆಡಿಯೊ ಅನುಭವವನ್ನು ಪಡೆಯುವುದಕ್ಕಾಗಿ ಹಿಪ್ ಹಾಪ್ ಫೀಚರ್ಸ ಅನ್ನು ಒಳಗೊಂಡಿದೆ.

ಲೆನೊವೊ TWS H10 ಪ್ರೊ ವಿಶೇಷತೆ

ಈ ಇಯರ್‌ಬಡ್ಸ್‌ ಉತ್ತಮ ಆಡಿಯೋ ಅನುಭವ ನೀಡುವ ತಂತ್ರಜ್ಞಾನವನ್ನು ಹೊಂದಿದೆ. ಇದಲ್ಲದೆ ಫ್ಯೂರ್‌ ಮ್ಯೂಸಿಕ್‌ ಮತ್ತು ಎಕ್ಸ್ಟ್ರಾ ಬಾಸ್ ಬಟನ್‌ ಹೊಂದಿರುವುದು ಹೊಸ ಮಾದರಿಯ ವಿನ್ಯಾಸವಾಗಿದೆ. ಅಲ್ಲದೆ ಬಳಕೆದಾರರ ಕಿವಿಯ ವಿನ್ಯಾಸಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನ ಈ ಇಯರ್‌ಬಡ್ಸ್‌ ಹೊಂದಿದೆ. ಅಲ್ಲದೆ ಈ ಇಯರ್‌ಬಡ್ಸ್‌ 20 ಮೀಟರ್ ವ್ಯಾಪ್ತಿಯ ವೈರ್‌ಲೆಸ್‌ ರೇಂಜ್‌ ಅನ್ನು ಹೊಂದಿದೆ.

ಬ್ಯಾಟರಿ ಮತ್ತು ಬೆಲೆ

ಇನ್ನು ಈ ಇಯರ್‌ಬಡ್ಸ್‌ ಉತ್ತಮ ಬ್ಯಾಟರಿ ಬ್ಯಾಕ್‌ಆಪ್‌ ಹೊಂದಿದ್ದು, ಸುಮಾರು 200 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಅಲ್ಲದೆ 48 ಗಂಟೆಗಳ ಪ್ಲೇಟೈಮ್ ಅನ್ನು ನೀಡುವ ಚಾರ್ಜಿಂಗ್ ಕೇಸ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.0, aptX ಆಡಿಯೊ ಕೊಡೆಕ್‌ಗಳನ್ನು ಬೆಂಬಲಿಸಲಿದೆ. ಸದ್ಯ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಈ ಇಯರ್‌ಬಡ್ಸ್‌ನ ಬೆಲೆ 4,499 ರೂ ಆಗಿದೆ ಎಂದು ಹೇಳಲಾಗ್ತಿದೆ.

Best Mobiles in India

English Summary

Lenovo TWS H10 Pro wireless earbuds will also feature waterproofing along with stereo dual microphones.to know more visit to kannada.gizbot.com