ಫಿಟ್ನೆಸ್ ಪ್ರಿಯರೇ ಈ ಆಫರ್ ಬೆಸ್ಟ್.. ಮಿ ಸ್ಮಾರ್ಟ್ ಬ್ಯಾಂಡ್ ಬೆಲೆಯಲ್ಲಿ ಭರ್ಜರಿ ಇಳಿಕೆ!
ಜನಪ್ರಿಯ ಶಿಯೋಮಿ ಮೊಬೈಲ್ ಸಂಸ್ಥೆಯು ಸ್ಮಾರ್ಟ್ಫೋನ್ಗಳ ಜೊತೆಗೆ ಸ್ಮಾರ್ಟ್ ಡಿವೈಸ್ಗಳಿಂದ ಸದ್ದು ಮಾಡಿದೆ. ಸಂಸ್ಥೆಯ ಸ್ಮಾರ್ಟ್ ಬ್ಯಾಂಡ್ ಡಿವೈಸ್ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಗಮನ ಸೆಳೆದಿವೆ. ಅದರಲ್ಲಿಯೂ ಫಿಟ್ನೆಸ್ ಪ್ರಿಯರಿಗೆ ಮಿ ಸ್ಮಾರ್ಟ್ ಬ್ಯಾಂಡ್ ಅಧಿಕ ಆಕರ್ಷಕ ಎನಿಸಿವೆ. ಸದ್ಯ ಸಂಸ್ಥೆಯ ಮಿ ಸ್ಮಾರ್ಟ್ ಬ್ಯಾಂಡ್ 5 ಆಕರ್ಷಕ ಬೆಲೆ ಇಳಿಕೆ ಪಡೆದಿದೆ.
ಹೌದು, ಅಧಿಕೃತ ಮಿ ವೆಬ್ಸೈಟ್ ಪ್ಲಾಟ್ಫಾರ್ಮ್ ನಲ್ಲಿ ಶಿಯೋಮಿಯ ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ ಅತ್ಯುತ್ತಮ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಮಿ ಸ್ಮಾರ್ಟ್ ಬ್ಯಾಂಡ್ 5 ಸಾಧನದ ಬೆಲೆಯು 2,999ರೂ. ಆಗಿದ್ದು, ಆದರೆ ಕೊಡುಗೆಯಲ್ಲಿ ಗ್ರಾಹಕರು 2,499ರೂ. ಗಳಿಗೆ ಖರೀದಿ ಮಾಡಲು ಅವಕಾಶ ಇದೆ.

ಅಂದಹಾಗೆ ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ ಅಮೋಲೆಡ್ ಕಲರ್ ಡಿಸ್ಪ್ಲೇ ಹೊಂದಿದ್ದು, ಮ್ಯಾಗ್ನೇಟಿಕ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಇದರ ಜೊತೆಗೆ 11 ಸ್ಪೋರ್ಟ್ಸ್ ಮೋಡ್ ಆಯ್ಕೆಗಳನ್ನು ಕೂಡಾ ಪಡೆದಿದ್ದು, ಎರಡು ವಾರಗಳ ವರೆಗಿನ ಬ್ಯಾಟರಿ ಬ್ಯಾಕ್ಅಪ್ ಸಪೋರ್ಟ್ ಸಹ ಒಳಗೊಂಡಿದೆ. ಹಾಗಾದರೆ ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಮಿ ಸ್ಮಾರ್ಟ್ ಬ್ಯಾಂಡ್ 5 ಡಿಸ್ಪ್ಲೇ ಮಾಹಿತಿ
ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ 126 x 294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದಿದ್ದು, ಇದು 1.6 ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್ಪ್ಲೇ ಅನ್ನು ಹೊಂದಿದೆ. ಅಲ್ಲದೆ ಈ ಡಿಸ್ಪ್ಲೇ 16 ಬಿಟ್ ಕಲರ್ ಹಾಗೂ 450 ನಿಟ್ಸ್ ಬ್ರೈಟ್ನೆಸ್ ಅನ್ನು ಪಡೆದುಕೊಂಡಿದೆ. ಸಂಸ್ಥೆಯ ಈ ಹಿಂದಿನ ಮಿ ಸ್ಮಾರ್ಟ್ ಬ್ಯಾಂಡ್ 4 ಗಿಂತ ಸುಮಾರು 20% ಹೆಚ್ಚಿನ ಡಿಸ್ಪ್ಲೇ ಸ್ಥಳವನ್ನು ಪಡೆದಿದ್ದು, ಆಕರ್ಷಕ ಅಂಶ ಎನಿಸಿದೆ.
ಮಿ ಸ್ಮಾರ್ಟ್ ಬ್ಯಾಂಡ್ 5 ಹೆಲ್ತ್ ಫೀಚರ್ಸ್ ಹೀಗಿವೆ
ಮಿ ಸ್ಮಾರ್ಟ್ ಬ್ಯಾಂಡ್ 5 ಅತ್ಯುತ್ತಮ ಆಯ್ಕೆಗಳನ್ನು ಒಳಗೊಂಡಿದೆ. ಇದು ಔಟ್ಡೋರ್ ರೇಸ್, ವಾಕಿಂಗ್, ರೈಡಿಂಗ್ ಇನ್ಡೋರ್ ರನ್ನಿಂಗ್, ಇನ್ಡೋರ್ ಸ್ವಿಮ್ಮಿಂಗ್, free exercise, ಯೋಗ, rowing machine, ಇನ್ಡೋರ್ ರೈಡಿಂಗ್, ರೂಪ್ ಸ್ಕಿಪ್ಪಿಂಗ್, ಸೇರಿದಂತೆ ಸುಮಾರು 11 ಸ್ಪೋರ್ಟ್ಸ್ ಮೋಡ್ಗಳನ್ನು ಒಳಗೊಂಡಿದೆ.
ಹಾಗೆಯೇ ಇದು ಹೆಲ್ತ್ ಮತ್ತು ಫಿಟ್ನೆಸ್ ಫೀಚರ್ಸ್ಗಳಿಗೆ ಸಂಬಂಧಿಸಿದಂತೆ 24x7 ಹೃದಯ ಬಡಿತ ಟ್ರ್ಯಾಕಿಂಗ್, ವಿಶ್ರಾಂತಿ ಹೃದಯ ಬಡಿತ, ನಿದ್ರೆಯ ಟ್ರ್ಯಾಕಿಂಗ್, ಗಾಡ ನಿದ್ರೆ, ಲಘು ನಿದ್ರೆ, ಒತ್ತಡ ಟ್ರ್ಯಾಕಿಂಗ್, ಕ್ಯಾಲೋರಿ ಎಣಿಕೆ ಮತ್ತು ಗುರಿ ನಿರ್ಧಾರದಂತಹ ಆಯ್ಕೆಗಳನ್ನು ಹೊಂದಿದೆ. ಇದರ ಜೊತೆಗೆ ಇದು ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್ ಮಾಡುವ ಆಯ್ಕೆ ಅನ್ನು ಇದು ಹೊಂದಿದೆ.
ಮಿ ಸ್ಮಾರ್ಟ್ ಬ್ಯಾಂಡ್ 5 ಬ್ಯಾಟರಿ ಬ್ಯಾಕ್ಅಪ್
ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ ನಿಯಮಿತ ಬಳಕೆಯಲ್ಲಿ 14 ದಿನಗಳ ಬ್ಯಾಟರಿ ಬ್ಯಾಕ್ಅಪ್ ಅನ್ನು ಒದಗಿಸುವ ಸಾಮರ್ಥ್ಯ ಪಡೆದಿದೆ. ಇನ್ನು ಇದನ್ನು ಪವರ್ ಸೇವ್ ಮೋಡ್ನಲ್ಲಿ ಬಳಕೆ ಮಾಡಿದರೆ ಸುಮಾರು 21 ದಿನಗಳ ಬ್ಯಾಟರಿ ಬ್ಯಾಕ್ಅಪ್ ಲಭ್ಯ ಆಗಲಿದೆ. ಇದು ಎರಡು ಗಂಟೆಗಳಿಂತ ಕಡಿಮೆ ಅವಧಿಯ ಫುಲ್ ಚಾರ್ಜಿಂಗ್ ಟೈಂ ಅನ್ನು ಹೊಂದಿದೆ. ಸಂಸ್ಥೆಯ ಮಿ ಸರಣಿಯ ಇತರೆ ಸ್ಮಾರ್ಟ್ ಬ್ಯಾಂಡ್ಗಳಿಗಿಂತ ಈ ಡಿವೈಸ್ನ ಬ್ಯಾಟರಿ ಬ್ಯಾಕ್ಅಪ್ ಸಹ ಉತ್ತಮ ಆಗಿದೆ.
ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ ಕಲರ್ ಹೀಗಿವೆ
ಮಿ ಸ್ಮಾರ್ಟ್ ಬ್ಯಾಂಡ್ 5 ಬೆಲೆಯು 2,499 ರೂ. ಆಗಿದೆ. ಇನ್ನು ಈ ಫಿಟ್ನೆಸ್ ಡಿವೈಸ್ ಅನ್ನು ಗ್ರಾಗಕರು ಕಪ್ಪು, ನೇವಿ ಬ್ಲೂ, ಟೀಲ್, ಪರ್ಪಲ್ ಮತ್ತು ಆರೆಂಜ್ ಸ್ಟ್ರಾಪ್ ಕಲರ್ ಆಯ್ಕೆಗಳಲ್ಲಿ ಖರೀದಿ ಮಾಡಲು ಅವಕಾಶ ಇದೆ.


Click it and Unblock the Notifications