Home
ಸುದ್ದಿಜಾಲ

ಲೋಕಸಭೆಯಲ್ಲಿ ಐಪ್ಯಾಡ್ ಬಳಕೆಗೆ MPಗಳಿಗೆ ಓಕೆ

By Varun
ಲೋಕಸಭೆಯಲ್ಲಿ ಐಪ್ಯಾಡ್ ಬಳಕೆಗೆ MPಗಳಿಗೆ ಓಕೆ

ಹಲವು ತಿಂಗಳುಗಳ ಕೆಳಗೆ ನಮ್ಮ ಬ್ಲೂ ಬಾಯ್ಸ್ ಶಾಸಕರು ಮೊಬೈಲ್ ನಲ್ಲಿನೀಲಿ ಚಿತ್ರ ನೋಡಿದ್ದ ಸುದ್ದಿ ಓದಿ ನೀವೂ ಮರೆತಿದ್ದೀರ. ಈಗ ಲೋಕಸಭೆಯ ಎಂಪಿಗಳಿಗೆ ಆಪಲ್ ಐಪ್ಯಾಡ್ ಟ್ಯಾಬ್ಲೆಟ್ ಅನ್ನು ಸಂಸತ್ತಿನ ಒಳಗೆ ಉಪಯೋಗಿಸಲು ಅನುಮೋದನೆ ದೊರೆತಿದೆ ಎಂದು ಲೋಕಸಭೆಯ ಕಾರ್ಯದರ್ಶಿ ಟಿ.ಕೆ ವಿಶ್ವನಾಥನ್ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ವೈಫೈ ಸಂಪರ್ಕವನ್ನು ನ್ಯಾಷನಲ್ ಇನ್ಫರ್ಮೆಟಿಕ್ಸ್ ಸೆಂಟರ್ ನ ಸಹಾಯದಿಂದ ಮೇಲ್ಮನೆಯಲ್ಲಿರುವ ವೈಫೈ (ನಿಸ್ತಂತು ಇಂಟರ್ನೆಟ್ ವ್ಯವಸ್ಥೆ ) ಅನ್ನು ಲೋಕಸಭೆಗೂ ವಿಸ್ತರಿಸಲು ಕೇಳಿಕೊಂಡಿದ್ದರಿಂದ ಇನ್ನು ಮೇಲೆ ಎಂಪಿಗಳು ತಮ್ಮ ಐಪ್ಯಾಡ್ ಅನ್ನು ಸದನದಲ್ಲಿ ಉಪಯೋಗಿಸಬಹುದಾಗಿದೆ.

ಸಾಮಾನ್ಯವಾಗಿ ಸದನದಲ್ಲಿ ನಡೆಯುವ ಚರ್ಚೆಗಳಿಗೆ ಸಂಬಂಧಿಸಿದಂತೆ ಸುಮಾರು ದಾಖಲಾತಿಗಳು ಎಲ್ಲ ಲೋಕಸಭೆ ಸದಸ್ಯರಿಗೂ ಪೂರೈಸಬೇಕಾಗಿರುವುದರಿಂದ ಸಾಕಷ್ಟು ಪೇಪರ್ ಗಳು ಖರ್ಚಾಗುವುದನ್ನು ತಪ್ಪಿಸಲು ಈ ರೀತಿ ಯೋಜಿಸಲಾಗಿದೆಯಂತೆ. ಅದೂ ಅಲ್ಲದೆ ನೋಟೀಸ್, ಪ್ರಶ್ನೋತ್ತರಗಳು, ಬುಲೆಟಿನ್ ಗೆ ಸಂಬಂಧಿಸಿದಂತೆ ವಿವರಗಳನ್ನೂ ಗಣಕೀಕೃತ ಮಾಡಲು ಅನುಕೂಲಕರವಾಗಲಿದೆ.

ಇದರಿಂದಾಗಿ ಈಗಾಗಲೇ ಐಪ್ಯಾಡನ್ನು ಖರೀದಿಸಿರುವ 300 ಕ್ಕೂ ಹೆಚ್ಚು ಎಂಪಿ ಗಳಿಗೆ ಇದರಿಂದ ಉಪಯೋಗವಾಗಲಿದೆ. ಲೋಕಸಭೆ ಹಾಗು ರಾಜ್ಯಸಭೆಯ ಪ್ರತಿಯೊಬ್ಬರಿಗೂ ಸರ್ಕಾರ ಐಪ್ಯಾಡ್ ಇಲ್ಲವೆ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಅನ್ನು ಖರೀದಿ ಮಾಡಲು 50,000 ಕೊಡುತ್ತದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಕ್ಯಾಮರಾ ಬಿಟ್ಟಿದ್ದಕ್ಕೇ ನಮ್ಮ ಶಾಸಕರು ನೋಡಬಾರದ್ದನ್ನು ನೋಡಿದ್ದಾರೆ. ಇನ್ನು ಟ್ಯಾಬ್ಲೆಟ್ ಅನ್ನು ಬಿಟ್ಟರೆ ಇನ್ನೇನು ನೋಡಬಹುದು ಅಂತಾ ನೀವೇ ಊಹಿಸಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+