ಹೊಸ ವರ್ಷಕ್ಕೆ ನೋಕಿಯಾ ಗಿಫ್ಟ್: ಅತೀ ವೇಗದ ಸ್ಮಾರ್ಟ್‌ಫೋನ್ ಲಾಂಚ್..!


ನೋಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಿದ್ದು, ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಕಿಯಾವನ್ನು ಮೆಚ್ಚಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನೋಕಿಯಾ ಮತ್ತೊಂದು ಟಾಪ್ ಎಂಡ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ. ಕ್ವಾಲ್ಕಮ್ ಹೊಸದಾಗಿ ಲಾಂಚ್ ಮಾಡಿರುವ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ಫೋನಿನಲ್ಲಿ ಅಳವಡಿಸಲು ಮುಂದಾಗಿದೆ.

Advertisement


2018ಕ್ಕೆ ನೋಕಿಯಾ 10 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದ್ದು, ಇದರಲ್ಲಿ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ಕಾಣಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುವ ಪ್ರೋಸೆಸರ್ ಇದಾಗಿದೆ.

ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ S 9 ಮತ್ತು ಗ್ಯಾಲಕ್ಸಿ S 9 +, LG G7 ಮತ್ತು G7 +, HTC U 12, HTC U 12 +, ಮೊಟೊ LG G7 Z (2019), ಗ್ಯಾಲಕ್ಸಿ ನೋಟ್ 9, ಸೋನಿ ಎಕ್ಸ್ಪೀರಿಯಾ XZ ಪ್ರೊ-A, ಎಕ್ಸ್ಪೀರಿಯಾ XZ 2, ಗೂಗಲ್ ಪಿಕ್ಸೆಲ್ 3 XL, LG V40, ನೋಕಿಯಾ 10 , ಸ್ಯಾಮ್ ಸಂಗ್ W2019 ಫ್ಲಿಪ್ ಫೋನ್, ZTE ನುಬಿಯಾ Z18 ಮತ್ತು ಶಿಯೋಮಿ ಮಿ ಮಿಕ್ಸ್ 3 ಸ್ಮಾರ್ಟ್ ಫೋನ್ ಗಳಲ್ಲಿ ಕ್ವಾಲ್ಕಮ್ ಹೊಸದಾಗಿ ಲಾಂಚ್ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ಕಾಣಬಹುದಾಗಿದೆ.

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
Advertisement

ಮಹಿಳೆಯರೇ ಮಾಲ್‌ಗಳಲ್ಲಿ ಬಟ್ಟೆ ಟ್ರೈ ಮಾಡಬೇಡಿ, ಸ್ಪೈ ಕ್ಯಾಮೆರಾಗಳಿವೆ: ಕಂಡುಹಿಡಿಯುವುದು ಹೇಗೆ..?

ಮೂಲಗಳ ಪ್ರಕಾರ ನೋಕಿಯಾ 10 ಸ್ಮಾರ್ಟ್ ಫೋನ್ 2018ರ ಆಗಸ್ಟ್ ನಲ್ಲಿ ಮಾರುಕಟ್ಟಗೆ ಬರಲಿದ್ದು, ಇದು ನೋಕಿಯಾದ ಟಾಪ್ ಎಂಡ್ ಫೋನ್ ಎನ್ನಿಸಿಕೊಳ್ಳಲಿದ್ದು, ಹೊಸದಾಗಿ ಮಾರುಕಟ್ಟೆಗೆ ಬರುವ ಫಾಗ್ ಶಿಪ್ ಫೋನ್ ಗಳಿಗೆ ಸಾಕಷ್ಟು ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.

ಆದರೆ ಈ ಹೊಸ ಫೋನಿನಲ್ಲಿ ಕ್ವಾಲ್ಕಮ್ ಹೊಸದಾಗಿ ಲಾಂಚ್ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅಳವಡಿಸಲಾಗುವುದು ಎನ್ನುವುದನ್ನು ಬಿಟ್ಟರೇ ಇತರೆ ಯಾವುದೇ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಕಂಪನಿಯೂ ನೀಡಿಲ್ಲ ಎನ್ನಲಾಗಿದೆ, ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಟ್ರೆಂಡ್ ಅನುಸಾರವಾಗಿ ಈ ಪೋನ್ ಬಿಡುಗಡೆಯಾಗಲಿದೆ.

Best Mobiles in India

Advertisement

English Summary

Nokia 10 with the Snapdragon 845 SoC might be launched in August 2018, claims a new report. HMD Global might unveil the Nokia 9 as its flagship model and the Nokia 6 (2018) at a press conference on January 19, 2018. Given that the company is likely to follow the same name every year, the Nokia 10 name is doubtful.