Home
ಸುದ್ದಿಜಾಲ

UPI ಬಳಕೆದಾರರಿಗೆ ಹೊಸ 'Transfer Out' ಫೀಚರ್ ಲಭ್ಯ: ಏನಿದು ಹೊಸ ಸೇವೆ ನೋಡಿ!

ಭಾರತದಲ್ಲಿ ಯುಪಿಐ ಲೈಟ್ (UPI Lite) ಸೇವೆಯನ್ನು ಬಳಸುವವರರುವ ಗ್ರಾಹಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಯುಪಿಐ ಲೈಟ್ ಗ್ರಾಹಕರು ಬ್ಯಾಲೆನ್ಸ್ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹಣ ಪಾವತಸಿಕೊಳ್ಳಲು ಆಗುತ್ತಿದ್ದ ಸಮಸ್ಯೆಯನ್ನು ತಪ್ಪಿಸಲು 'ಟ್ರಾನ್ಸ್‌ಫರ್ ಔಟ್' (Transfer Out) ಎಂಬ ವೈಶಿಷ್ಟ್ಯವನ್ನು ಪರಿಚಯಿಸಲಾಗಿದ್ದು, ಈ ಹೊಸ ವೈಶಿಷ್ಟ್ಯದ ಸಹಾಯದಿಂದ, ಯುಪಿಐ ಲೈಟ್ ಬಳಕೆದಾರರು ತಮ್ಮ ಬ್ಯಾಲೆನ್ಸ್ ಅನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಬಹು ಎಂದು ತಿಳಿದುಬಂದಿದೆ.

'ಟ್ರಾನ್ಸ್‌ಫರ್ ಔಟ್' ಎಂದರೇನು?

ಈ ಹೊಸ ವೈಶಿಷ್ಟ್ಯದ ಮೂಲಕ, ಯುಪಿಐ ಲೈಟ್ ಬಳಕೆದಾರರು ತಮ್ಮ ಬ್ಯಾಲೆನ್ಸ್ ಅನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ,ಈ ಮೊದಲಿನಂತೆ ಯುಪಿಐ ಲೈಟ್ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವ ಅಗತ್ಯವಿಲ್ಲ. ಬಳಕೆದಾರರು ಯಾವುದೇ ತೊಂದರೆಯಿಲ್ಲದೆ ತಮ್ಮ ಯುಪಿಐ ಲೈಟ್ ಬ್ಯಾಲೆನ್ಸ್‌ನಿಂದ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದು.

ಯುಪಿಐ ಲೈಟ್ ಎಂದರೇನು?

ಯುಪಿಐ ಲೈಟ್ ಎಂಬುದು 500 ರೂ.ಗಿಂತ ಕಡಿಮೆ ಮೊತ್ತದ ಸಣ್ಣ ಮೊತ್ತಕ್ಕೆ ಪಿನ್-ರಹಿತ ವಹಿವಾಟುಗಳಿಗಾಗಿ ವಿನ್ಯಾಸಗೊಳಿಸಲಾದ ಪಾವತಿ ಪರಿಹಾರವಾಗಿದೆ. ಸಾಮಾನ್ಯವಾಗಿ, ಪ್ರತಿಯೊಂದು ಸಣ್ಣ ಅಥವಾ ದೊಡ್ಡ ಆನ್‌ಲೈನ್ ಪಾವತಿಗೆ ಪಿನ್ ಅಗತ್ಯವಿದೆ. ಆದರೆ, ಈ ಸಮಸ್ಯೆಯನ್ನು ಪರಿಹರಿಸಲು UPI ಲೈಟ್ ಸೇವೆ ಪರಿಚಯಿಸಲಾಗಿದೆ, ಇದರಲ್ಲಿ ಬಳಕೆದಾರರು ಇಂಟರ್ನೆಟ್ ಮತ್ತು ಪಿನ್ ಇಲ್ಲದೆ ಆನ್‌ಲೈನ್ ಪಾವತಿಗಳನ್ನು ಸುಲಭವಾಗಿ ಮಾಡಬಹುದು. ಇದು ಯುಪಿಐ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸುತ್ತದೆ, ವೇಗದ ಪಾವತಿಗಳನ್ನು ಖಚಿತಪಡಿಸುತ್ತದೆ.

UPI ಬಳಕೆದಾರರಿಗೆ ಹೊಸ 'Transfer Out' ಫೀಚರ್ ಲಭ್ಯ: ಏನಿದು ಹೊಸ ಸೇವೆ ನೋಡಿ!

ಯುಪಿಐ ಲೈಟ್‌ಗಾಗಿ ವಾಲೆಟ್ ಮಿತಿಯನ್ನು ರೂ. 2000 ರಿಂದ ರೂ. 5,000 ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಯುಪಿಐ ಲೈಟ್‌ಗೆ ಪ್ರತಿ ವಹಿವಾಟಿನ ಮಿತಿಯನ್ನು ರೂ. 100 ರಿಂದ ರೂ. 500 ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, ಯುಪಿಐ ಪೇಗೆ ಪ್ರತಿ ವಹಿವಾಟಿನ ಮಿತಿಯನ್ನು ಸಹ ಪರಿಷ್ಕರಿಸಲಾಗಿದೆ, ಇದು ಹಿಂದಿನ ಮಿತಿ ರೂ. 5,000 ರಿಂದ ರೂ. 10,000 ವರೆಗೆ ಪಾವತಿಗಳನ್ನು ಅನುಮತಿಸುತ್ತದೆ. ಅಕ್ಟೋಬರ್ 2024 ರಲ್ಲಿ ಆರ್‌ಬಿಐ ಯುಪಿಐ ಲೈಟ್ ಮಿತಿಯನ್ನು ವಿಸ್ತರಿಸಿತು. ಈ ಸೇವೆಯನ್ನು ಎನ್‌ಪಿಸಿಐ ಪರಿಚಯಿಸಿದೆ, ಇದರಲ್ಲಿ ಬಳಕೆದಾರರು ಪಿನ್ ನಮೂದಿಸದೆ ಆನ್‌ಲೈನ್ ಪಾವತಿ ಮಾಡಬಹುದು.

ಈ ವೈಶಿಷ್ಟ್ಯದಲ್ಲಿ ದೊರೆತಿರುವ ಪ್ರಯೋಜನಗಳು:
"ಎಲ್ಲಾ ವಿತರಕ ಬ್ಯಾಂಕ್‌ಗಳು, ಪಿಎಸ್‌ಪಿ ಬ್ಯಾಂಕ್‌ಗಳು ಮತ್ತು ಯುಪಿಐ ಅಪ್ಲಿಕೇಶನ್‌ಗಳು 'ಟ್ರಾನ್ಸ್‌ಫರ್ ಔಟ್' ಕಾರ್ಯವನ್ನು ಕಾರ್ಯಗತಗೊಳಿಸಬೇಕು. ಇದು ಯುಪಿಐ ಲೈಟ್ ಅನ್ನು ನಿಷ್ಕ್ರಿಯಗೊಳಿಸದೆ, ಬಳಕೆದಾರರು ತಮ್ಮ ಯುಪಿಐ ಲೈಟ್ ಬ್ಯಾಲೆನ್ಸ್‌ನಿಂದ ಅದನ್ನು ಲೋಡ್ ಮಾಡಿದ ಮೂಲ ಬ್ಯಾಂಕ್ ಖಾತೆಗೆ ಹಣವನ್ನು ಹಿಂಪಡೆಯಲು ಅನುಮತಿಸುತ್ತದೆ" ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಯುಪಿಐ ಲೈಟ್ ನೀಡುವ ಬ್ಯಾಂಕ್‌ಗಳು ಸರಿಯಾದ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಲೈಟ್ ರೆಫರೆನ್ಸ್ ನಂಬರ್ (LRN) ಮಟ್ಟದಲ್ಲಿ ಬ್ಯಾಲೆನ್ಸ್‌ಗಳನ್ನು ಟ್ರ್ಯಾಕ್ ಮಾಡಬೇಕು ಮತ್ತು ಅವುಗಳನ್ನು NPCI ಡೇಟಾದೊಂದಿಗೆ ಪ್ರತಿದಿನ ಹೊಂದಿಸಬೇಕು.

ಇಷ್ಟೇ ಅಲ್ಲದೇ, ಸುರಕ್ಷತೆಯನ್ನು ಹೆಚ್ಚಿಸಲು, ಸಕ್ರಿಯ ಯುಪಿಐ ಲೈಟ್ ಹೊಂದಿರುವ ಯುಪಿಐ ಅಪ್ಲಿಕೇಶನ್‌ಗಳಿಗೆ ಲಾಗಿನ್ ಆಗುವಾಗ ಪಾಸ್‌ಕೋಡ್, ಬಯೋಮೆಟ್ರಿಕ್ ಪರಿಶೀಲನೆ ಅಥವಾ ಪ್ಯಾಟರ್ನ್ ಆಧಾರಿತ ಲಾಕ್ ಮೂಲಕ ದೃಢೀಕರಣದ ಅಗತ್ಯವಿರುತ್ತದೆ.ಎಲ್ಲಾ ಸದಸ್ಯ ವೇದಿಕೆಗಳು ಮಾರ್ಚ್ 31, 2025 ರೊಳಗೆ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.ಈ ಬದಲಾವಣೆಗಳನ್ನು ಹೊರತುಪಡಿಸಿ, ಅಸ್ತಿತ್ವದಲ್ಲಿರುವ ಎಲ್ಲಾ ಯುಪಿಐ ಲೈಟ್ ಮಾರ್ಗಸೂಚಿಗಳು ಬದಲಾಗದೆ ಉಳಿಯುತ್ತವೆ ಎಂದು ತಿಳಿಸಲಾಗಿತ್ತು. ಹಾಗಾಗಿ, ಈ ಹೊಸ ವೈಶಿಷ್ಟ್ಯವು ಇದೀಗ ಜಾರಿಗೆ ಬಂದಿದೆ.

Best Mobiles in India

English summary
All issuing banks and UPI applications are required to make the necessary changes by March 31, 2025, as outlined in the NPCI circular dated February 21, 2025.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+