Home
ಸುದ್ದಿಜಾಲ

ಒನ್‌ಪ್ಲಸ್‌ 12R ಓಪೆನ್‌ ಸೇಲ್‌ ಪ್ರಾರಂಭ..ಏನಾದ್ರೂ ಡಿಸ್ಕೌಂಟ್‌ ಇದೆಯಾ?

ಒನ್‌ಪ್ಲಸ್‌ ಸಂಸ್ಥೆಯ ಹೊಸ ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನ್ ಓಪೆನ್‌ ಸೇಲ್‌ ಇಂದು ಅಮೆಜಾನ್‌ ಇ ಕಾಮರ್ಸ್‌ ತಾಣದ ಮೂಲಕ ಪ್ರಾರಂಭ ಆಗಿದೆ. ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಈ ಫೋನ್‌ ಈಗಾಗಲೇ ಮೊಬೈಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನಿನ ಓಪೆನ್‌ ಸೇಲ್‌ (ಇಂದು) ಫೆಬ್ರವರಿ 13 ರಂದು ಶುರುವಾಗಿದ್ದು, ಗ್ರಾಹಕರು ಒನ್‌ಪ್ಲಸ್‌ ಇಂಡಿಯಾ ವೆಬ್‌ಸೈಟ್, ಅಮೆಜಾನ್ ಇ ಕಾಮರ್ಸ್‌ ಹಾಗೂ ರಿಟೇಲ್‌ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಈ ಫೋನ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಸೌಲಭ್ಯ ಅನ್ನು ಪಡೆದುಕೊಂಡಿದೆ.

ಒನ್‌ಪ್ಲಸ್‌ 12R ಓಪೆನ್‌ ಸೇಲ್‌ ಪ್ರಾರಂಭ..ಏನಾದ್ರೂ ಡಿಸ್ಕೌಂಟ್‌ ಇದೆಯಾ?

ಒನ್‌ಪ್ಲಸ್‌ 12R ಮೊಬೈಲ್‌ನ ಆರಂಭಿಕ 8GB + 128GB ವೇರಿಯಂಟ್‌ ಬೆಲೆಯು 39,999ರೂ. ಆಗಿದೆ. ಈ ಫೋನ್‌ ಅನ್ನು ಐರನ್ ಗ್ರೇ ಮತ್ತು ಕೋಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಲು ಅವಕಾಶ ಇದೆ. ಇನ್ನುಳಿದಂತೆ ಒನ್‌ಪ್ಲಸ್‌ 12R ಫೋನಿನ ಇತರೆ ಫೀಚರ್ಸ್‌ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ 12R ಫೀಚರ್ಸ್‌ ಮಾಹಿತಿ

ಒನ್‌ಪ್ಲಸ್‌ನ ಈ ಫೋನ್‌ 6.78 ಇಂಚಿನ BOE X1 OLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 1,264 x 2,780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಪಡೆದುಕೊಂಡಿದೆ. ಅಲ್ಲದೇ ಇದು 120Hz ProXDR ರಿಫ್ರೆಶ್ ರೇಟ್ ಪಡೆದಿರುವ ಜೊತೆ LTPO 4.0 ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಇದು ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನೊಂದಿಗೆ ಲೇಯರ್ಡ್ ಆಗಿದೆ.

ಒನ್‌ಪ್ಲಸ್‌ 12R ಓಪೆನ್‌ ಸೇಲ್‌ ಪ್ರಾರಂಭ..ಏನಾದ್ರೂ ಡಿಸ್ಕೌಂಟ್‌ ಇದೆಯಾ?

ಒನ್‌ಪ್ಲಸ್‌ 12R ಮೊಬೈಲ್‌ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಪಡೆದಿದ್ದು, ಇದು ಆಂಡ್ರಾಯ್ಡ್ 14 ಆಧಾರಿತ Oxygen OS 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ ಈ ಫೋನ್ 8GB RAM + 128GB ಮತ್ತು 16GB RAM + 256GB ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳನ್ನು ಒಳಗೊಂಡಿರುವುದು ಆಕರ್ಷಕ ಎನಿಸಿದೆ.

ಒನ್‌ಪ್ಲಸ್‌ 12R ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾವನ್ನು ರಚನೆ ಅನ್ನು ಪಡೆದುಕೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಆಗಿದೆ. ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಮೊಬೈಲ್‌ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದಿದೆ.

ಒನ್‌ಪ್ಲಸ್‌ನ ಈ ಹೊಸ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 100W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್ 5.3, 5G ಬೆಂಬಲ, ವೈ-ಫೈ 6E, ಬ್ಲೂಟೂತ್ 5.3, NFC, USB-C 3.2 ಜೆನ್‌ 2, ಜಿಪಿಎಸ್‌ ಅನ್ನು ಸಪೋರ್ಟ್ ಹೊಂದಿದೆ.

ಈ ಫೋನ್‌ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್‌, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಇ-ಕಾಪಾಸ್‌ ಆಯ್ಕೆಗಳನ್ನು ಒಳಗೊಂಡಿದೆ. ಈ ಫೋನ್ ಮಾರುಕಟ್ಟೆಯಲ್ಲಿ 8GB + 128GB ಆಯ್ಕೆ ಹಾಗೂ 16GB + 256GB ಆಯ್ಕೆ ಪಡೆದಿದೆ. ಈ ಫೋನ್‌ ಐರನ್ ಗ್ರೇ ಮತ್ತು ಕೋಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

More from GizBot

Best Mobiles in India

English summary
OnePlus 12R now available on open sale on Amazon, OnePlus website and offline stores. other all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+