ರಿಯಲ್‌ಮಿಯಿಂದ ಬರಲಿದೆ ಟ್ರೂಲಿ ವೈಯರ್‌ಲೆಸ್‌ ಇಯರ್‌ಬಡ್ಸ್‌!


ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡ್ತಿರೋ ರಿಯಲ್‌ಮಿ ಇದೀಗ ಟ್ರೂಲಿ ವೈಯಾರ್‌ಲೆಸ್‌ ಇಯರ್‌ಬಡ್‌ಗಳನ್ನ ಮಾರುಕಟ್ಟೆಗೆ ಬಿಡಲು ಸಿದ್ದವಾಗ್ತಿದೆ. ಇನ್ನು ಈ ಏರ್‌ ಪಾಡ್‌ಗಳು ಆಪಲ್‌ ಸ್ಮಾರ್ಟ್‌ಫೋನ್‌ನ ಏರ್‌ಪಾಡ್‌ಗಳಿಗೆ ಪೈಪೋಟಿ ನಿಡಲಿವೆ ಅನ್ನೊ ಮಾತು ಕೇಳಿ ಬಂದಿದೆ. ಇನ್ನು ಕಳೆದ ತಿಂಗಳು ರಿಯಲ್‌ಮಿ ಎಕ್ಸ್‌ 2 ಪ್ರೊ ಮತ್ತು ರಿಯಲ್ಮೆ 5 ಎಸ್ ಅನ್ನು ಬಿಡುಗಡೆ ಮಾಡುವಾಗ ರಿಯಲ್‌ಮಿ ಸಿಇಒ ಮಾಧವ್ ಶೇಠ್ ಇಯರ್‌ಬಡ್‌ಗಳ ಪ್ರಾರಂಭದ ಬಗ್ಗೆ ಮಾಹಿತಿ ನೀಡಿದ್ದರು.

ಹೌದು ರಿಯಲ್‌ ಮಿ ಇದೀಗ ಟ್ರೂಲಿ ಇಯರ್‌ಬಡ್‌ಗಳ ಪ್ರಾರಂಭಕ್ಕೆ ಮುಂದಾಗಿದೆ. ಈ ಬಗ್ಗೆ ಈಗಾಗ್ಲೆ ಕಂಪೆನಿಯ ಸಿಇಒ ಮಾಧವ್ ಶೇಠ್ ಹೇಳಿದ್ದಾರೆ. ಇದಕ್ಕೆ ಪೂರಕ ಎಂಬಂತೆ ರಿಯಲ್‌ಮಿ ಕಂಪೆನಿಯ ಟ್ರೂಲಿ ಇಯರ್‌ ಬಡ್‌ ಧರಿಸಿರುವ ಚಿತ್ರವನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಿಯಲ್ ಮಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಹೊಸ ಇಯರ್‌ಬಡ್‌ಗಳ ವಿನ್ಯಾಸವನ್ನು ಸೂಚಿಸುವ ಟೀಸರ್ ಚಿತ್ರವನ್ನು ಸಹ ಬಿಡುಗಡೆ ಮಾಡಿದೆ.

ಇದೇ ತಿಂಗಳ ಕೊನೆಯಲ್ಲಿ ರಿಯಲ್‌ಮೆ ಎಕ್ಸ್‌ಟಿ 730 ಜಿ ಜೊತೆಗೆ ಭಾರತದಲ್ಲಿ ತನ್ನ ಇಯರ್‌ಬಡ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸದ್ಯ ಶೇಠ್ ಹಂಚಿಕೊಂಡ ಚಿತ್ರದ ಪ್ರಕಾರ, ರಿಯಲ್ಮೆ ಇಯರ್‌ಬಡ್‌ಗಳು ಏರ್‌ಪಾಡ್ಸ್ ಮತ್ತು, ಪೆರಿಸ್ಕೋಪ್ ಶೈಲಿಯ ವಿನ್ಯಾಸವನ್ನು ಹೊಂದಿರುವಂತೆ ಕಂಡುಬರುತ್ತದೆ. ಚಿತ್ರದಲ್ಲಿರುವ ಇಯರ್‌ಬಡ್‌ಗಳಲ್ಲಿ ಒಂದು ಹಳದಿ ಬಣ್ಣದ ಫಿನಿಶ್ ಹೊಂದಿದೆ. ಅಷ್ಟೇ ಅಲ್ಲ ಆಪಲ್‌ ಕಂಪೆನಿಯ ಇಯರ್‌ ಬಡ್‌ಗಳಿಗೆ ಪೈಫೋಟಿ ನೀಡೋದು ಖಂಡಿತ ಎನ್ನಲಾಗ್ತಿದೆ.

ಇನ್ನು ಶೇಠ್‌ ಪೋಸ್ಟ್ ಮಾಡಿರೋ ಚಿತ್ರದ ಜೊತೆಗೆ, ರಿಯಲ್‌ಮಿ ಕಂಪೆನಿ ಸಹ ಪ್ರತ್ಯೇಕ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದ್ದು, "ನಿಮ್ಮ ಪ್ರಪಂಚವನ್ನು ತಿರುಗಿಸಲು ತಡೆರಹಿತ ಅನುಭವವು ಕಾಯುತ್ತಿದೆ'' ನಿಮ್ಮ ನೈಜಧ್ವನಿಯನ್ನು ಹಿಡಿದಿಟ್ಟುಕೊಳ್ಳಲು ಸಿದ್ದರಾಗಿ ಎಂದು ಕಂಪನಿಯು ತನ್ನ ಟ್ವೀಟ್‌ನಲ್ಲಿ ಬರೆದು ಕೊಂಡಿದೆ. ಈ ಮೂಲಕ ತನ್ನ ಹೊಸ ಇಯರ್‌ಬಡ್‌ಗಳ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚುವಂತೆ ಮಾಡಿದೆ.

ಹಾಗೇ ನೋಡಿದ್ರೆ ಕಳೆದ ತಿಂಗಳು ದೆಹಲಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಶೇಠ್‌ ರಿಯಲ್‌ ಮಿ ಟ್ರೂಲಿ ಇಯರ್‌ಪಾಡ್‌ಗಳ ಬಗ್ಗೆ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲ ರಿಯಲ್‌ ಮಿ ಕಂಪೆನಿ ಮುಂದಿನ ದಿನಗಳಲ್ಲಿ ಕೇವಲ ಕೆಲ ಎರಡು ಉತ್ಪನ್ನಗಳಿಗೆ ಸೀಮಿತವಾಗೋದಿಲ್ಲ. ಸ್ಮಾರ್ಟ್‌ವಲಯದ ಎಲ್ಲಾ ಉತ್ಪನ್ನಗಳ ಬಗ್ಗೆಯೂ ಗಮನ ನೀಡುತ್ತೇವೆ. ಅದು ಯಾವುದು ಅನ್ನೊದನ್ನ ನೀವೇ ಕಾದು ನೋಡಿ ಅನ್ನೊದನ್ನ ಸೂಚ್ಯವಾಗಿ ಹೇಳಿದ್ದುಂಟು.

ಇನ್ನು ಆಪಲ್‌ಕಂಪೆನಿಯ ಟ್ರೂಲಿ ವೈಯಾರ್‌ ಲೆಸ್‌ ಇಯರ್‌ಬಡ್ಸ್‌ಗಳು 20-20,000Hz ಪ್ರೀಕ್ವೇನ್ಸಿ ರೆಸ್ಟಾನ್ಸ್‌ ಹೊಂದಿದ್ದು, ಇವುಗಳ ಬ್ಯಾಟರಿ ಸಾಮರ್ಥ್ಯ 5ಗಂಟೆಗಳ ಕಾಲ ಬರಲಿದೆ. ಅಲ್ಲದೆ 24 ಗಂಟೆಗಳ ಕಾಲದ ಬ್ಯಾಟರಿ ಲೈಫ್‌ ಹೊಂದಿದ್ದು NFC ಯನ್ನು ಹೊಂದಿದೆ. ಸಧ್ಯ ರಿಯಲ್‌ ಮಿ ಆಪಲ್‌ ಕಂಪೆನಿಯ ಟ್ರೂಲಿ ವೈಯಾರ್‌ಲೆಸ್‌ ಇಯರ್‌ಬಡ್ಸ್‌ಗಳಿಗೆ ಪೈಪೋಟಿ ನೀಡಲಿದೆ ಎನ್ನಲಾಗ್ತಿದ್ದು ಟ್ವೀಟ್ಟರ್‌ನಲ್ಲಿ ರಿಯಲ್‌ ಮಿ ಪೋಸ್ಟ್‌ ಮಾಡಿರೋ ಪೋಟೋ ಟೆಕ್‌ವಲಯದಲ್ಲಿ ಬಾರಿ ನೀರಿಕ್ಷೆಯನ್ನ ಹುಟ್ಟು ಹಾಕಿದೆ.

Most Read Articles
Best Mobiles in India

Have a great day!
Read more...

English Summary

Realme has started teasing truly wireless earbuds that could come as its answer to Apple's AirPods. Realme India CEO Madhav Sheth gave a sneak peek at the earbuds while launching the Realme X2 Pro and Realme 5s last month. Now, the executive has posted his image on Twitter featuring one of the new earbuds.