Home
ಸುದ್ದಿಜಾಲ

Redmi: ನ.27ಕ್ಕೆ ಹೊಸ ಫೋನ್ ಬರುತ್ತೆ; 6500mAh ಬ್ಯಾಟರಿ.. 50MP ಟ್ರಿಪಲ್ ಕ್ಯಾಮೆರಾ.. ಬೆಲೆ ಎಷ್ಟಿರಲಿದೆ?

ರೆಡ್ಮಿ (Redmi) ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಇದು ರೆಡ್ಮಿ K80 ಪ್ರೊ (Redmi K80 Pro) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈಗಾಗಲೇ, ಕಂಪನಿಯು ಹೊಸ ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಜೊತೆಗೆ, ಮೊಬೈಲ್‌ನ ಡಿಸೈನ್, ಡಿಸ್ಪ್ಲೇ ಮತ್ತು ಪ್ರೊಸೆಸರ್ ಸೇರಿದಂತೆ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ರೆಡ್ಮಿ K80 ಪ್ರೊ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರಲಿದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ಇನ್ನಿತರ ವಿಶೇಷತೆಗಳನ್ನು ತಿಳಿಯೋಣ.

ಕಂಪನಿಯು ರೆಡ್ಮಿ K80 ಪ್ರೊ ಫೋನನ್ನು ಇದೇ ನವೆಂಬರ್ 27 ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಮೊಬೈಲ್ ತನ್ನ ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ಆಕರ್ಷಕ ಡಿಸೈನ್‌ನೊಂದಿಗೆ ಭಾರೀ ಸದ್ದು ಮಾಡುತ್ತಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಜೊತೆಗೆ, 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದಲ್ಲದೆ 6.67 ಇಂಚಿನ ಡಿಸ್ಪ್ಲೇ, 6500mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

ಶೀಘ್ರ Redmi K80 Pro ಲಾಂಚ್; 6500mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ನೋಡಿ

ರೆಡ್ಮಿ K80 ಪ್ರೊ ಫೋನಿನ ವಿನ್ಯಾಸ

ಮುಂಬರುವ ರೆಡ್ಮಿ K80 ಪ್ರೊ ಮೊಬೈಲ್ ಸ್ನೋ ವೈಟ್ ಬಣ್ಣದ ವಿನ್ಯಾಸವನ್ನು ಹೊಂದಿರಲಿದೆ. ಇದು 1.9 ಎಂಎಂ ಅಲ್ಟ್ರಾ ನ್ಯಾರೋ ಚಿನ್ ಮತ್ತು 50:50 ಗೋಲ್ಡನ್ ತೂಕದ ಅನುಪಾತದೊಂದಿಗೆ ಬರುತ್ತದೆ. ಜೊತೆಗೆ ಲೋಹದ ಚೌಕಟ್ಟನ್ನು ಕಾಣಬಹುದು.ಈ ಫೋನ್‌ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ ಎಂದು ಕಂಪನಿ ದೃಢಪಡಿಸಿದೆ. ಕಂಪನಿಯು ನೂತನ ಫೋನಿನ ಬೆಲೆಯನ್ನು ಬಹಿರಂಗಪಡಿಸಿಲ್ಲ.

ರೆಡ್ಮಿ K80 ಪ್ರೊ ಮೊಬೈಲ್‌ನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರೆಡ್ಮಿ K80 ಪ್ರೊ ಮೊಬೈಲ್‌ 6.67 ಇಂಚಿನ 2K ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 3200 × 1440 ಪಿಕ್ಸೆಲ್ ರೆಸಲ್ಯೂಶ್‌ನೊಂದಿಗೆ ಬರಲಿದೆ. ಡಿಸ್ಪ್ಲೇಯು 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ರೆಡ್ಮಿ K80 ಪ್ರೊ ಅನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡುವುದು ಖಚಿತವಾಗಿದೆ. ಈ ಫೋನ್ D1 ಗೇಮಿಂಗ್ ಪ್ರೊಸೆಸರ್ ಹೊಂದಿದೆ. ಇದು ಡ್ಯುಯಲ್ ಲೂಪ್ 3D ಐಸ್ ಕೂಲಿಂಗ್ ಸಿಸ್ಟಮ್ ಮತ್ತು ರೇಜ್ ಎಂಜಿನ್ 4.0ಗೆ ಬೆಂಬಲ ಹೊಂದಿದೆ.

ಶೀಘ್ರ Redmi K80 Pro ಲಾಂಚ್; 6500mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ನೋಡಿ

ಕ್ಯಾಮೆರಾ ಸೆಟಪ್

ಮುಂಬರುವ ರೆಡ್ಮಿ K80 ಪ್ರೊ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿರುವ ಸಾಧ್ಯತೆಯಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ರೆಡ್ಮಿ K80 ಪ್ರೊ ಫೋನಿನಲ್ಲಿ 6500mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ರೆಡ್ಮಿ K80 ಪ್ರೊ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್‌ ಪಡೆದಿರಲಿದೆ. ಜೊತೆಗೆ, ಶಿಯೋಮಿ ಸ್ಟಾರ್ ಕಮ್ಯುನಿಕೇಷನ್ (ಸಂವಹನ) ತಂತ್ರಜ್ಞಾನ ಮತ್ತು ಶಿಯೋಮಿ ಡ್ರ್ಯಾಗನ್ ಕ್ರಿಸ್ಟಲ್ ಗ್ಲಾಸ್ 2.0 ಅನ್ನು ಹೊಂದಿದೆ. ಈ ಮೊಬೈಲ್ ಕಾರ್ಯಕ್ಷಮತೆಗೆ 3,194,766 AnTuTu ಸ್ಕೋರ್‌ ಪಡೆದಿದೆ ಎಂದು ಕಂಪನಿ ತಿಳಿಸಿದೆ.

Best Mobiles in India

English summary
Redmi K80 Pro launching on november 27: Redmi K80 Pro key specs confirmed ahead of launch: know details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+