ಜಿಯೋ 4G ಲ್ಯಾಪ್‌ಟಾಪ್‌ ಬಿಡುಗಡೆಗೆ ಸಮಯ ಫಿಕ್ಸ್!!


ಜಿಯೋ ಫೋನ್ 2 ಬಿಡುಗಡೆ ನಂತರ ಜಿಯೋ ಲ್ಯಾಪ್‌ಟಾಪ್‌ಗಳ ಬಿಡುಗಡೆಗೆ ರಿಲಾಯನ್ಸ್ ಜಿಯೋ ಕಂಪೆನಿ ಸಿದ್ದವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮಾಧ್ಯಮಗಳಿಗೆ ಸಿಕ್ಕಿರುವ ಖಚಿತ ಮಾಹಿತಿಗಳಂತೆ ಅತ್ಯಂತ ಕಡಿಮೆ ಬೆಲೆಗೆ ಜಿಯೋ ಲ್ಯಾಪ್‌ಟಾಪ್ ಶೀಘ್ರವೇ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಹೇಳಲಾಗಿದೆ.

4G VoLTE ಸ್ಮಾರ್ಟ್‌ಫೋನ್, ಜಿಯೋ ವೈ-ಫೈ, 4G ಫೀಚರ್ ಫೋನ್‌, ಜಿಯೋ ಫೋನ್ 2ನಂತರ ಜಿಯೋ ಇದೀಗ ಲ್ಯಾಪ್‌ಟಾಪ್‌ಗಳ ಬಿಡುಗಡೆಗೆ ತಯಾರಾಗಿದೆ. ಇದೇ ನವೆಂಬರ್ ತಿಂಗಳ ಒಳಗಾಗಿ ಅತ್ಯಂತ ಕಡಿಮೆ ಬೆಲೆಯ ಜಿಯೋ ಲ್ಯಾಪ್‌ಟಾಪ್‌ಗಳನ್ನು ಜಿಯೋ ಕಂಪೆನಿ ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

ಈಗಾಗಲೇ ಲೀಕ್ ಆಗಿರುವ ಜಿಯೋ ಲ್ಯಾಪ್‌ಟಾಪ್ ಫೀಚರ್ಸ್ ಜತೆಗೆ ಜಿಯೋ ಲ್ಯಾಪ್‌ಟಾಪ್ ಬಿಡುಗಡೆಯಾಗುವ ಸುದ್ದಿ ವೈರಲ್ ಆಗಿದೆ. ಹಾಗಾದರೆ, ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗುತ್ತಿರುವ 4G ಲ್ಯಾಪ್‌ಟಾಪ್ ಫೀಚರ್ಸ್ ಯಾವುವು? ಲ್ಯಾಪ್‌ಟಾಪ್ ಬೆಲೆ ಎಷ್ಟಿರಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

13.3 ಇಂಚಿನ Full HD ಡಿಸ್‌ಪ್ಲೇ!

ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ 13.3 ಇಂಚಿನ Full HD ಡಿಸ್‌ಪ್ಲೇ ಅಳವಡಿಸಲಾಗಿದ್ದು, 16:9 ಮಾದರಿಯಲ್ಲಿ 1920 x 1080 p ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದೆ. ವಿಡಿಯೋ ಕಾಲಿಂಗ್ ಮಾಡುವ ಸಲುವಾಗಿ HD ಕ್ಯಾಮೆರಾವನ್ನು ಈ ಲಾಪ್‌ಟಾಪ್‌ನಲ್ಲಿ ಅಳವಡಿಸಲಾಗಿದೆ.!

ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ 4GB RAM

ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ ವೇಗದ ಕಾರ್ಯಚರಣೆಗೆ 4GB RAM ಅಳವಡಿಸಲಾಗಿದೆ. ಇನ್‌ಟೆಲ್ ಪೆನ್‌ಟಿಮ್ ಕ್ವಾಡ್ ಕೋರ್ ಪ್ರೋಸೆಸರ್ ಇದೆ. 64 GB ಇಂಟರ್‌ನಲ್ ಮೆಮೊರಿ ಹೊಂದಿದ್ದು, ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.!

ವಿಂಡೋಸ್ 10 OS!

ಜಿಯೋ ಅಭಿವೃದ್ಧಿಪಡಿಸುತ್ತಿರುವ ಜಿಯೋ 4G ಲಾಪ್‌ಟಾಪ್‌ನಲ್ಲಿ ವಿಂಡೋಸ್ 10 OS ಇರಲಿದೆ ಎನ್ನಲಾಗಿದ್ದು, ಈಗಾಗಲೇ ಟೆಸ್ಟಿಂಗ್ ನಲ್ಲಿ ಬಳಸುತ್ತಿರುವ ಲಾಪ್‌ಟಾಪ್‌ಗಳಲ್ಲಿ ವಿಂಡೋಸ್ 10 OS ಇದ್ದು, ಫೈನಲ್ ಮಾರುಕಟ್ಟೆಗೆ ಬರುವ ಲಾಪ್‌ಟಾಪ್‌ನಲ್ಲಿ ಇದು ಬದಲಾಗುವ ಸಾಧ್ಯತೆಯೂ ಇದೇ ಎನ್ನಲಾಗಿದೆ.

ಲ್ಯಾಪ್‌ಟಾಪ್‌ನ ಇತರೆ ವಿಶೇಷತೆಗಳು!

4G LTE ಸಪೋರ್ಟ್‌ ಮಾಡುವ ಜಿಯೋ 4G ಲಾಪ್‌ಟಾಪ್‌ಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಾಟ್‌ಟಾಪ್‌ಗಳಿಗಿಂತ ಕೊಂಚ ಭಿನ್ನವಾಗಿರಲಿದ್ದು, ಬ್ಲೂಟೂಟ್ 4.0, ಎರಡು USB 3.0 ಪೋರ್ಟ್‌ಗಳು, ಮೈಕ್ರೋ HDMI ಪೋರ್ಟ್‌ಗಳು, ಹಾಗೂ ಮೈಕ್ರೋ SD ಕಾರ್ಡ್ ಹಾಕುವ ಸ್ಲಾಟ್ ಗಳನ್ನು ಹೊಂದಿರಲಿದೆ.

ಆಂಡ್ರಾಯ್ಡ್ ಆಪ್ ಸಫೋರ್ಟ್

ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ ಆಂಡ್ರಾಯ್ಡ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾದ ಫೀಚರ್ ಅನ್ನು ತರಲಾಗುತ್ತಿದೆ ಎನ್ನಲಾಗಿದೆ. ಸಾಮಾನ್ಯರಿಗೆ ಲ್ಯಾಪ್‌ಟಾಪ್‌ನಲ್ಲಿ ಆಪರೇಟಿಂಗ್ ಸಿಸ್ಟಮ್ ಬಳಕೆಯನ್ನು ಸಾಕಷ್ಟು ಸುಲಭಗೊಳಿಸಲು ಇದು ಸಹಾಯಕವಾಗಲಿದೆ ಎಂದು ಹೇಳಲಾಗಿದೆ.!!

Jio-Fi ಪಾಸ್‌ವರ್ಡ್ ಬದಲಾಯಿಸುವುದು ಹೇಗೆ,,?
ಶೀಘ್ರವೇ ಮಾರುಕಟ್ಟೆಗೆ, ಬೆಲೆಯೂ ಕಡಿಮೆ!

ಜಿಯೋ ಕಂಪೆನಿ ತಯಾರಿಕೆಗೆ ನೀಡಿರುವ ಲ್ಯಾಪ್‌ಟಾಪ್‌ಗಳು ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇದೇ ಮಾರ್ಚ್ ತಿಂಗಳ ಒಳಗಾಗಿ ಜಿಯೋ ಕಂಪೆನಿ ಬಿಡುಗಡೆಗೆ ಸಿದ್ದವಾಗಿದೆ ಎಂದು ಹೇಳಲಾಗಿದೆ. ಇನ್ನು ಲ್ಯಾಪ್‌ಟಾಪ್‌ಗಳ ಬೆಲೆಯೂ ಕಡಿಮೆ ಇರಲಿದ್ದು, ಲ್ಯಾಪ್‌ಟಾಪ್ ಬೆಲೆ ರೂ.5000 ದಿಂದ ಶುರುವಾಗಿದೆ ಎಂದು ತಿಳಿದುಬಂದಿದೆ.!!

ಓದಿರಿ:ಅಶ್ಲೀಲ ವೀಡಿಯೊ ನೋಡುವ ಶೇ 90% ಜನರಿಗೆ ಗೊತ್ತಿಲ್ಲದ ಶಾಕಿಂಗ್ ವಿಷಯಗಳು!!


Read More About: reliance smartphone jio laptop
Have a great day!
Read more...

English Summary

We all know very well that Reliance Jio had dominated the Indian telecom sector by providing mind-blowing offers at a very cheap price. to know more visit to kannada.gizbot.com