ಜಿಯೋ ಗಣೇಶ ಸ್ಪೇಷಲ್: ತಿಂಗಳಿಗೆ ರೂ.100ಕ್ಕೆ 42 GB ಡೇಟಾ..!


ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ತನ್ನ ಬಳಕೆದಾರರಿಗೆ ಹೊಸ ಆಫರ್ ಗಳನ್ನು ನೀಡಲು ಮುಂದಾಗಿದೆ. ಅಲ್ಲದೇ ಗಶೇಷ ಚತುರ್ಥಿಯ ಅಂಗವಾಗಿ ತನ್ನ ಬಳಕೆದಾರರಿಗೆ ಬೊಂಬಾಟ್ ಆಫರ್ ವೊಂದನ್ನು ಲಾಂಚ್ ಮಾಡಿದೆ. ಮಾರುಕಟ್ಟೆಯಲ್ಲಿ ಈ ಆಫರ್ ದೊಡ್ಡ ಮಟ್ಟದ ಸದ್ದು ಮಾಡಲಿದೆ ಎನ್ನಲಾಗಿದೆ. ಏರ್‌ಟೆಲ್‌ ಸಹ ಈ ಆಫರ್ ನೋಡಿ ಬೆಚ್ಚಿಬಿದ್ದಿದೆ ಎನ್ನುವ ಮಾತು ಮಾರುಕಟ್ಟೆಯಲ್ಲಿ ಕೇಳಿ ಬಂದಿದೆ.

ಕೇವಲ ರೂ.100ಕ್ಕೆ ಒಂದು ತಿಂಗಳ ವ್ಯಾಡಿಟಿಯನ್ನು ನೀಡಲು ಮುಂದಾಗಿದೆ. ಇದು ಮಾರುಕಟ್ಟೆಯಲ್ಲಿ ಅತೀ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಅಲ್ಲದೇ ಅತೀ ಹೆಚ್ಚಿನ ಮಂದಿ ಜಿಯೋ ಕಡೆಗೆ ಆಕರ್ಷಿತರಾಗುವಂತೆ ಮಾಡಲು ಇದು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಬಳಕೆದಾರರಿಗೆ ದೊಡ್ಡ ಮಟ್ಟದ ಲಾಭವು ಈ ಆಫರ್ ನಿಂದ ಲಭ್ಯವಾಗಲಿದೆ.

ರೂ.100 ಕಡಿತ:

ಸದ್ಯ ಮಾರುಕಟ್ಟೆಯಲ್ಲಿ ಬೆಸ್ಟ್ ಪ್ಲಾನ್ ಎಂದು ಕರೆಸಿಕೊಂಡಿರುವ ರೂ.399 ಪ್ಲಾನ್‌ನಲ್ಲಿ ಬಳಕೆದಾರರಿಗೆ ಜಿಯೋ ರೂ.100ಗಳ ಕಡಿತವನ್ನು ಮಾಡಿದೆ. ಇದರಿಂದಾಗಿ ಬಳಕೆದಾರರು ಈ ಆಫರ್ ಅನ್ನು ರೂ.299ಕ್ಕೆ ಪಡೆದುಕೊಳ್ಳಬಹುದಾಗಿದೆ.

ಲಾಭ ಹೇಗೆ:

ರೂ.100 ಕಡಿತದ ನಂತರದಲ್ಲಿ ರೂ.299ಕ್ಕೆ ಮಾರಾಟವಾಗಲಿರುವ ಜಿಯೋ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಹಿನ್ನಲೆಯಯಲ್ಲಿ ಈ ಪ್ಲಾನ್ ಎಫೆಕ್ಟ್‌ಟಿವ್‌ ಆಗಿ ರೂ.100ಕ್ಕೆ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ.

ಹೇಗೆ ಪಡೆದುಕೊಳ್ಳುವುದು:

ಈಗಾಗಲೇ ಜಿಯೋ ವೋಚರ್ ಅನ್ನು ಹೊಂದಿರುವ ಬಳಕೆದಾರರು ರೂ.50 ಕ್ಯಾಷ್ ಬ್ಯಾಕ್ ಈಗಾಗಲೇ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಹೊಸದಾಗಿ ಇನ್ನು ರೂ.50 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದರಿಂದಾಗಿ ಬಳಕೆದಾರರಿಗೆ ಒಟ್ಟು ರೂ.100 ಕ್ಯಾಷ್ ಬ್ಯಾಕ್ ಲಭ್ಯವಾಗಲಿದೆ.

ಮೈ ಜಿಯೋದಲ್ಲಿ ಮಾತ್ರ:

ಈ ಪ್ಲಾನ್‌ ಲಾಭವನ್ನು ಪಡೆದುಕೊಳ್ಳಬೇಕಾದಲ್ಲಿ ನೀವು ಮೈ ಜಿಯೋ ಆಪ್‌ ನಿಂದ ಮಾತ್ರವೇ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಬೇರೆ ಕಡೆಯಿಂದ ಮಾಡಿಸಿಕೊಂಡರೆ ಇಷ್ಟು ಮಟ್ಟದ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ. ಅಲ್ಲದೇ ನೀವು ಫೋನ್ ಪೇ ಮೂಲಕವೇ ಹಣವನ್ನು ಸಂದಾಯ ಮಾಡಬೇಕಾಗಿದೆ.

ಮಾರುಕಟ್ಟೆಯಲ್ಲಿ ಸಂಚಲನ:

ಜಿಯೋ ಲಾಂಚ್ ಮಾಡಿರುವ ಈ ಪ್ಲಾನ್ ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಠಿಸಲಿದೆ ಎನ್ನಲಾಗಿದೆ. ಈಗಾಗಲೇ ಆಫರ್ ನೀಡಿರುವ ಎಲ್ಲಾ ಟೆಲಿಕಾಂ ಕಂಪನಿಗಳಿಗೂ ಇದು ಸೆಡ್ಡು ಹೊಡೆಯುವುದು ಪಕ್ಕ..!


Read More About: reliance jio phonepe offer

Have a great day!
Read more...

English Summary

Reliance Jio, PhonePe offer 42GB monthly data for Rs 100: How it works. to know more visit kannada.gizbot.com