ಜಿಯೋದಿಂದ ಮತ್ತೊಂದು ಕ್ರಾಂತಿಕಾರಿ ಕಾರ್ಯ..! ದೇಶದೆಲ್ಲೆಡೆ 4G ನೆಟ್‌ವರ್ಕ್‌..!


ಪ್ರಾರಂಭವಾಗಿ ಕೇವಲ ಎರಡೇ ವರ್ಷಗಳಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿ ಇತರೆ ಟೆಲಿಕಾಂ ಆಪರೇಟರ್‌ಗಳ ನಿದ್ದೆಗೆಡಿಸಿದ್ದ ರಿಲಾಯನ್ಸ್‌ ಜಿಯೋ ಮತ್ತೊಂದು ಕ್ರಾಂತಿಕಾರಿ ಕಾರ್ಯಕ್ಕೆ ಮುಂದಾಗಿದೆ. 21ನೇ ಶತಮಾನದಲ್ಲಿ ಭಾರತ ಡಿಜಿಟಲೀಕರಣದ ಕಡೆ ನಡೆಯುತ್ತಿರುವಾಗ ದೇಶದಲ್ಲಿ ಇನ್ನು ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಟೆಲಿಕಾಂ ನೆಟ್‌ವರ್ಕ್‌ ಅಷ್ಟೊಂದು ಸರಿಯಾಗಿಲ್ಲ. 2G ನೆಟ್‌ವರ್ಕ್‌ ಕೂಡ ಸರಿಯಿಲ್ಲದ ಜಾಗಗಳು ಭಾರತದಲ್ಲಿವೆ. ಅಂತಹ ಪ್ರದೇಶಗಳಿಗೆ ಜಿಯೋ 4G ಸೇವೆಯನ್ನು ನೀಡಲು ಹೊಸ ತಂತ್ರಜ್ಞಾನ ಬಳಕೆಗ ಮಾಡಲು ಮುಂದಾಗಿದೆ.

Advertisement

ಹೌದು, ಮುಖೇಶ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ ತನ್ನ 4G LTE ಆಧಾರಿತ ಧ್ವನಿ ಮತ್ತು ಮಾಹಿತಿ ಸೇವೆಯನ್ನು ಭಾರತದ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಿಗೆ ನೀಡಲು ಜಿಯೋ ಉಪಗ್ರಹ ಆಧಾರಿತ ನೆಟ್‌ವರ್ಕ್‌ ಬಳಸಲು ಚಿಂತನೆ ನಡೆಸಿದೆ. ಈ ತಂತ್ರಜ್ಞಾನ ಹ್ಯೂಸ್ ಕಮ್ಯುನಿಕೇಶನ್ಸ್‌ (HCIL) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಿಂದ ಬಳಸಲ್ಪಪಡುತ್ತಿದೆ.

Advertisement

400ಕ್ಕಿಂತ ಹೆಚ್ಚು LTE ಸೈಟ್‌ಗಳು

ಮುಖೇಶ್‌ ಅಂಬಾನಿ ನೇತೃತ್ವದ 4G ಟೆಲಿಕಾಂ ಜಿಯೋ ಉಪಗ್ರಹ ಬ್ಯಾಕ್‌ಹೌಲ್ ಆಧಾರಿತ ನೆಟ್‌ವರ್ಕ್ ಮೂಲಕ 400ಕ್ಕಿಂತ ಹೆಚ್ಚು LTE ಸೈಟ್‌ಗಳನ್ನು ಭಾರತದಲ್ಲಿ ನಿರ್ಮಿಸುತ್ತಿದೆ. ಈ ಮೂಲಕ ನೆಟ್‌ವರ್ಕ್‌ ಸಿಗದ ಪ್ರದೇಶಗಳಿಗೆ 4G LTE ನೆಟ್‌ವರ್ಕ್‌ ನೀಡಲು ವಿಭಿನ್ನ ಹಂತಗಳ ನಿಯೋಜನೆಯ ಹಂತದಲ್ಲಿ ಜಿಯೋ ಕಾರ್ಯನಿರ್ವಹಿಸುತ್ತಿದೆ.

10 ಮಿಲಿಯನ್ ಡಾಲರ್ ಒಪ್ಪಂದ

ಜಿಯೋದ ಈ ಯೋಜನೆಗೆ ಹ್ಯೂಸ್‌ ಕಮ್ಯುನಿಕೇಷನ್ಸ್‌ ಜತೆ 10 ಮಿಲಿಯನ್‌ ಡಾಲರ್‌ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಈ ಉಪಗ್ರಹ ಬ್ಯಾಕ್‌ಹಾಲ್‌ ಆಧಾರಿತ ನೆಟ್‌ವರ್ಕ್‌ ಸ್ಥಾಪಿಸಿ ಗ್ರಾಮೀಣ ಭಾರತಕ್ಕೆ 4G LTE ನೆಟ್‌ವರ್ಕ್‌ ಒದಗಿಸಲು ಜಿಯೋ ಈ ರೀತಿಯ ದೊಡ್ಡ ಮೊತ್ತವನ್ನು ವಿನಿಯೋಗಿಸುತ್ತಿರುವುದು ಭಾರತದ ಟೆಲಿಕಾಂ ಕ್ಷೇತ್ರವನ್ನು ಮತ್ತಷ್ಟು ಬದಲಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಸಾಂಪ್ರದಾಯಿಕ ವ್ಯವಸ್ಥೆ

ಜಿಯೋ ಸೇರಿದಂತೆ ಬಹಳಷ್ಟು ಟೆಲಿಕಾಂ ಆಪರೇಟರ್‌ಗಳು ಇನ್ನು ಸಾಂಪ್ರದಾಯಿಕವಾದ ಟವರ್‌ಗಳ ಮೂಲಕ ಸಂಪರ್ಕವನ್ನು ಸಾಧಿಸುತ್ತವೆ. ಇದು ವೆಚ್ಚದಾಯಕವಾಗಿದ್ದು, ದುರ್ಗಮ ಮಾರ್ಗಗಳಲ್ಲಿ ಫೈಬರ್ ತಂತಿ ಅಳವಡಿಸಲು ಬಹಳಷ್ಟು ಸಮಸ್ಯೆಯಾಗುತ್ತಿದ್ದು, ಇದರಿಂದ ಭಾರತದ ಅನೇಕ ಭಾಗಗಳಲ್ಲಿ ನೆಟ್‌ವರ್ಕ್‌ ದೊರೆಯುತ್ತಿಲ್ಲ. ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳು ಮತ್ತು ದ್ವೀಪಗಳಲ್ಲಿ ಸೂಕ್ಷ್ಮ ತರಂಗಗಳನ್ನು ಬಳಸಿಕೊಂಡು ಎತ್ತರ, ಕಠಿಣ ಭೂಪ್ರದೇಶ ಮತ್ತು ಉಪಗ್ರಹ-ಆಧಾರಿತ ನೆಟ್‌ವರ್ಕ್‌ಗೆ ಸರಿಹೊಂದುವಂತೆ ಸೇವೆ ನೀಡಲು ದೊಡ್ಡ ಹೂಡಿಕೆಯನ್ನು ಟೆಲಿಕಾಂ ಆಪರೇಟರ್‌ಗಳು ಮಾಡುತ್ತಿವೆ.

ದೇಶದ ಪ್ರತಿ ಭಾಗಕ್ಕೂ ನೆಟ್‌ವರ್ಕ್‌

ಜಿಯೋ ಒಪ್ಪಂದ ಮಾಡಿಕೊಂಡಿರುವ ಹ್ಯೂಸ್ ಕಮ್ಯುನಿಕೇಷನ್ಸ್‌ 4G ಸೈಟ್‌ಗಳನ್ನು ಸ್ಥಾಪಿಸಲು ಜ್ಯೂಪಿಟರ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದೆ. ಈ ಉಪಗ್ರಹ ವ್ಯವಸ್ಥೆಯಿಂದ ದೇಶದ ಪ್ರತಿ ಭಾಗದಲ್ಲೂ ತಡೆರಹಿತ ಹಾಗೂ ಸಾರ್ವತ್ರಿಕ ಸಂಪರ್ಕ ಒದಗಿಸುವುದಕ್ಕೆ ಅನುವು ಮಾಡಿಕೊಡುತ್ತದೆ ಎಂದು ಜಿಯೋ ಗ್ರೂಪ್ನ ಅಧ್ಯಕ್ಷ ಜ್ಯೋತಿಂದ್ರ ಥಾಕರ್ ತಿಳಿಸಿದ್ದಾರೆ.

ಭಾರತೀಯ ಟೆಲಿಕಾಂಗೆ ಉಪಗ್ರಹವೇ ಸೂಕ್ತ

ಹಿಂದುಳಿದ ಹಾಗೂ ಗ್ರಾಮೀಣ ಭಾರತಕ್ಕೆ 4G LTE ಸೇವೆಯನ್ನು ವಿಸ್ತರಿಸಲು ಉಪಗ್ರಹ ಆಧಾರಿತ ನೆಟ್‌ವರ್ಕ್‌ ಸೂಕ್ತ ತಂತ್ರಜ್ಞಾನವಾಗಿದೆ ಎಂದು ಹ್ಯೂಸ್ ಕಮ್ಯುನಿಕೇಷನ್ಸ್‌ ಇಂಡಿಯಾದ ಅಧ್ಯಕ್ಷ ಪಾರ್ಥೋ ಬ್ಯಾನರ್ಜಿ ತಿಳಿಸಿದ್ದಾರೆ.

ಸಣ್ಣ ಪ್ರಮಾಣದಲ್ಲಿ ಉಪಗ್ರಹ ತಂತ್ರಜ್ಞಾನ ಬಳಕೆ

BSNL, ವೊಡಾಫೋನ್ ಐಡಿಯಾ, ಏರ್‌ಟೆಲ್‌ಗಳು ಸಣ್ಣ ಪ್ರಮಾಣದಲ್ಲಿ 2G ಮತ್ತು 3G ಸೇವೆಗಳಿಗಾಗಿ ಸಣ್ಣ ಪ್ರಮಾಣದಲ್ಲಿ ಉಪಗ್ರಹ ಬ್ಯಾಕ್‌ಹಾಲ್‌ ಆಧಾರಿತ ನೆಟ್‌ವರ್ಕ್‌ನ್ನು ಬಳಸಿಕೊಳ್ಳುತ್ತಿವೆ.

4Gಯಲ್ಲಿ ಜಿಯೋ ಪ್ರಥಮ

4G ಸೇವೆ ಒದಗಿಸಲು ಉಪಗ್ರಹ ಬ್ಯಾಕ್‌ಹಾಲ್‌ ನೆಟ್‌ವರ್ಕ್‌ನ್ನು ಬಳಸಲು ಜಿಯೋ ಮುಂದಾಗಿರುವುದು ಭಾರತದಲ್ಲಿ ಹೊಸತನವಾಗಿದೆ. ಇಸ್ರೊದ ಎರಡು ಉಪಗ್ರಹಗಳ ಬೃಹತ್ ಸಾಮರ್ಥ್ಯ ತೆಗೆದುಕೊಂಡು ಹಾಗೂ ನಮ್ಮ ಉಪಗ್ರಹ ತಂತ್ರಜ್ಞಾನವನ್ನು 4G ಸೇವೆಗಳಿಗಾಗಿ ಬಳಸಿದ್ದಾರೆ. ಜಿಯೋ ತಮ್ಮದೇ ಆದ ಒಂದು ಬಂಧಿತ ಜಾಲ ನಿರ್ಮಿಸಿಕೊಳ್ಳಲು ಬಯಸಿದ್ದರು, ಮತ್ತು ಅದನ್ನು ಮಾಡುವಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಮೊದಲಿಗರಾಗಿದ್ದಾರೆ. ಹ್ಯೂಸ್‌ ಕಮ್ಯುನಿಕೇಷನ್ಸ್‌ ಇಂಡಿಯಾದ SVP ಹಾಗೂ ಎಂಟರ್‌ಪ್ರೈಸ್‌ ಬ್ಯುಸಿನೆಸ್‌ನ ಮುಖ್ಯಸ್ಥರಾಗಿರುವ ಶಿವಾಜಿ ಚಟರ್ಜಿ ಹೇಳಿದ್ದಾರೆ.

ಮುಂಬೈ, ನಾಗ್ಪುರದಲ್ಲಿ ಭೂ ಕೇಂದ್ರಗಳ ಸ್ಥಾಪನೆ

ಹ್ಯೂಸ್‌ ಕಮ್ಯುನಿಕೇಷನ್ಸ್‌ ಸಹಭಾಗಿತ್ವದಲ್ಲಿ ಜಿಯೋ ಮುಂಬೈ ಮತ್ತು ನಾಗ್ಪುರದಲ್ಲಿ ಎರಡು ಭೂ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಮತ್ತು ಲೇಹ್ ಮತ್ತು ಪೋರ್ಟ್ ಬ್ಲೇರ್‌ನಲ್ಲಿ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇವು ಉಪಗ್ರಹ ಬ್ಯಾಕ್‌ಹಾಲ್ ಆಧಾರಿತ ಸೇವೆಗಳನ್ನು ವಿಶೇಷವಾಗಿ ಈಶಾನ್ಯ ಭಾಗಗಳು, ಜಮ್ಮು ಮತ್ತು ಕಾಶ್ಮೀರ, ಉತ್ತರಾಂಚಲ್, ಅಂಡಮಾನ್ ಮತ್ತು ನಿಕೋಬಾರ್ ಹಾಘೂ ಲಕ್ಷದ್ವೀಪಗಳಲ್ಲಿ ಸಂಪರ್ಕ ಒದಗಿಸುತ್ತದೆ.

ಕರ್ನಾಟಕದಲ್ಲೂ ಉಪಗ್ರಹ 4G ಸೇವೆ

ಹಿಂದುಳಿದ, ಗುಡ್ಡಗಾಡು ಹಾಗೂ ದ್ವೀಪ ಪ್ರದೇಶಗಳಲ್ಲಿ ಈ ತಂತ್ರಜ್ಞಾನ ಗಮನ ಕೇಂದ್ರೀಕರಿಸಿದರು, ಮಹಾರಾಷ್ಟ್ರ, ಒರಿಸ್ಸಾ, ಛತ್ತೀಸ್‌ಘಡ, ಕರ್ನಾಟಕ, ಹಿಮಾಚಲ ಪ್ರದೇಶದ ಅನೇಕ ಪ್ರದೇಶಗಳಲ್ಲಿ 4G ನೆಟ್‌ವರ್ಕ್‌ ಒದಗಿಸಲಾಗುತ್ತದೆ ಎಂದು ಚಟರ್ಜಿ ವಿವರಿಸಿದ್ದಾರೆ.

ಫೈಬರ್‌ಗೆ ಹೋಲಿಕೆಯಾಗಲ್ಲ

ಜಿಯೋದ ಉಪಗ್ರಹ ಬ್ಯಾಕ್‌ಹಾಲ್‌ ಆಧಾರಿತ ತಂತ್ರಜ್ಞಾನವು ಮೈಕ್ರೋವೇವ್‌ ಅಥವಾ ಫೈಬರ್‌ ನೆಟ್‌ವರ್ಕ್‌ಗೆ ಹೊಂದಾಣಿಕೆಯಾಗುವುದಿಲ್ಲ. ಆದರೆ ಪ್ರತಿ ಸೈಟ್ 10 Mbps ಮತ್ತು 30 Mbps ವೇಗ ಒದಗಿಸುವ ಬ್ಯಾಂಡ್‌ವಿಡ್ತ್‌ ನೀಡಲು ಸಾಕಷ್ಟು ಸಾಮರ್ಥ್ಯ ಒದಗಿಸುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಜಿಯೋ ಬಳಸುವ ಸ್ಯಾಟಲೈಟ್ ಪ್ಲಾಟ್‌ಫಾರ್ಮ್‌ LTE ಟ್ರಾಫಿಕ್‌ಗಾಗಿ ಕೆಲವು ರೀತಿಯ ಸಂಕುಚನ ಮತ್ತು ವೇಗವರ್ಧಕಗಳನ್ನು ಒದಗಿಸುತ್ತದೆ. ಬ್ಯಾಂಡ್‌ವಿಡ್ತ್‌ ಅನುಗುಣವಾಗಿ ಶೇ.50ರಷ್ಟು ಹೆಚ್ಚು ಪ್ರಯೋಜನ ಒದಗಿಸುತ್ತದೆ ಎಂದು ಚಟರ್ಜಿ ಹೇಳಿದ್ದಾರೆ.

Best Mobiles in India

English Summary

Reliance Jio using satellites to offer 4G services in rural, remote areas. To know more this visit kannada.gizbot.com