ಇನ್ಮುಂದೆ ಜಿಯೋ ಗ್ರಾಹಕರಿಗೆ ಫಸ್ಟ್‌ ಡೇ - ಫಸ್ಟ್‌ ಶೋ ಸಿನಿಮಾ..!


ರಿಲಾಯನ್ಸ್ ಜಿಯೋ, ಈ ಒಂದು ಹೆಸರು ಭಾರತೀಯ ಟೆಲಿಕಾಂ ಲೋಕವನ್ನು ಅಲುಗಾಡಿಸಿರುವುದಂತು ಸತ್ಯ. ಟೆಲಿಕಾಂ ಮಾರುಕಟ್ಟೆ ನಂತರ ಜಿಯೋ ಹೋಮ್‌ ಬ್ರಾಡ್‌ಬ್ಯಾಂಡ್‌ನಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಲು ಮುಂದಾಗಿದೆ. ಅದಕ್ಕಾಗಿಯೇ ಕಂಪನಿ ಇತ್ತೀಚೆಗೆ ಜಿಯೋ ಫೈಬರ್ ಯೋಜನೆಗಳನ್ನು ಘೋಷಿಸಿದ್ದು, ಮಾಸಿಕ 699 ರೂ.ಗಳಿಂದ ಪ್ರಾರಂಭವಾಗಿ 8,499 ರೂ.ಗಳವರೆಗೂ ಪ್ಲಾನ್‌ಗಳನ್ನು ತನ್ನ ಗ್ರಾಹಕರಿಗೆ ನೀಡಿದೆ.

Advertisement

ಫೈಬರ್-ಟು-ದಿ-ಹೋಮ್ ಇಂಟರ್‌ನೆಟ್ ಸೇವೆಗಳ ಹೊರತಾಗಿ, ಹಲವಾರು ಫೀಚರ್‌ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದ್ದು, ಉಚಿತ ಪ್ಯಾನ್-ಇಂಡಿಯಾ ವಾಯ್ಸ್ ಕಾಲಿಂಗ್, ಟಿವಿ ವಿಡಿಯೋ ಕಾಲಿಂಗ್, ತಡೆರಹಿತ ಗೇಮಿಂಗ್, ವರ್ಚುವಲ್‌ ರಿಯಾಲಿಟಿ, ರೂಟರ್ ಮತ್ತು ಸೆಟ್-ಟಾಪ್ ಬಾಕ್ಸ್‌ಗಳನ್ನು ನೀಡುತ್ತಿದೆ. ಇದರ ಜೊತೆ ಜಿಯೋ ಫೈಬರ್‌ನೊಂದಿಗೆ ರಿಲಯನ್ಸ್ ಜಿಯೋ ಫಸ್ಟ್‌ ಡೇ, ಫಸ್ಟ್‌ ಮೂವೀಸ್‌ನಂತಹ ಮೊದಲಾದ ಫೀಚರ್‌ಗಳನ್ನು ಕೂಡ ನೀಡುತ್ತಿದ್ದು, ಯಾವ ಆಫರ್‌ಗಳು ಏನೇನು ಫೀಚರ್‌ ಹೊಂದಿವೆ ಎಂಬುದನ್ನು ಮುಂದೆ ನೋಡಿ.

Advertisement
ಫಸ್ಟ್‌ ಡೇ-ಫಸ್ಟ್‌ ಶೋ ಫೀಚರ್ಸ್‌

ಫಸ್ಟ್‌ ಡೇ-ಫಸ್ಟ್‌ ಶೋ ಫೀಚರ್‌ನ್ನು ಗ್ರಾಹಕರಿಗೆ ಕೆಳಗಿನ ಮೂರು ಪ್ಲಾನ್‌ಗಳು ನೀಡುತ್ತವೆ. ಅವುಗಳೆಂದರೆ,

1. ಡೈಮಂಡ್‌ - ಮಾಸಿಕ 2,499 ರೂ.

2. ಪ್ಲಾಟಿನಂ - ಮಾಸಿಕ 3,999 ರೂ.

3. ಟೈಟಾನಿಯಂ - ಮಾಸಿಕ 8,499 ರೂ.

ಡೈಮಂಡ್‌ ಮಾಸಿಕ ಪ್ಲಾನ್‌

ರೂ. 2,499 ರಿಲಾಯನ್ಸ್ ಜಿಯೋ ಫೈಬರ್‌ನ ಡೈಮಂಡ್ ಮಾಸಿಕ ಪ್ಲಾನ್‌ ದೊರೆಯುತ್ತಿದೆ. ಇದು ಫಸ್ಟ್‌ ಡೇ-ಫಸ್ಟ್‌ ಶೋ ಫೀಚರ್‌ ನೀಡುತ್ತಿರುವ ಅಗ್ಗದ ಪ್ಲಾನ್‌ ಆಗಿದ್ದು, 500 Mbps ವರೆಗಿನ ವೇಗದಲ್ಲಿ ಡೌನ್‌ಲೋಡ್ ಮತ್ತು ಅಪ್‌ಲೋಡಿಂಗ್‌ ಫೀಚರ್‌ ನೀಡುತ್ತದೆ. ಇದರ ಜೊತೆ ಕಂಪನಿ 1,250 ಜಿಬಿ (1.25 ಟಿಬಿ) ಡೇಟಾ ನೀಡುತ್ತಿದ್ದು, ಹೆಚ್ಚುವರಿಯಾಗಿ 250 ಜಿಬಿ ಡೇಟಾ ಕೂಡ ಸಿಗಲಿದೆ. ನಿಗದಿತ ಡೇಟಾ ಬಳಕೆಯ ನಂತರ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗ ಕೇವಲ 1Mbps ಗೆ ಇಳಿಯಲಿದೆ.

ಡೈಮಂಡ್‌ ಪ್ಲಾನ್‌ನ ಹೆಚ್ಚುವರಿ ಫೀಚರ್ಸ್‌

ಡೈಮಂಡ್‌ ಪ್ಲಾನ್‌ನಲ್ಲಿ ಕಂಪನಿಯು ಉಚಿತ ವಾಯ್ಸ್‌ ಕಾಲಿಂಗ್‌, ಟಿವಿ ವಿಡಿಯೋ ಕಾಲಿಂಗ್‌, ನಿಧಾನರಹಿತ ಗೇಮಿಂಗ್, ಮತ್ತು ಮನೆ ಮತ್ತು ಮನೆ ಹೊರಗೆ ವಿಷಯ ಹಂಚಿಕೆಯ ಫೀಚರ್‌ ಕೂಡ ದೊರೆಯಲಿದೆ. ಐದು ಸಾಧನಗಳಿಗೆ ನಾರ್ಟನ್ ಡಿವೈಸ್‌ ಸೆಕ್ಯುರಿಟಿಯೂ ಸಿಗಲಿದ್ದು, ವಿಆರ್ ಹೆಡ್‌ಸೆಟ್ ಮೂಲಕ ಜಿಯೋದ ವಿಆರ್ ಮನರಂಜನಾ ಪ್ಲಾಟ್‌ಫಾರ್ಮ್‌ಗೆ ಪ್ರವೇಶವಿದೆ. ಹೋಮ್‌ ಗೇಟ್‌ವೇ ಡಿವೈಸ್‌ ಮತ್ತು ಸೆಟ್-ಟಾಪ್ ಬಾಕ್ಸ್ ಜೊತೆಗೆ ಜಿಯೋ ಸಿನೆಮಾ, ಜಿಯೋ ಸಾವನ್‌, ಜಿಯೋ ನ್ಯೂಸ್‌ನಂತಹ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ನೀಡುತ್ತದೆ.

ಪ್ಲಾಟಿನಂ ಮಾಸಿಕ ಪ್ಲಾನ್‌

ಜಿಯೋ ಫೈಬರ್‌ನ ಫ್ಲಾಟಿನಂ ಯೋಜನೆ ಮಾಸಿಕ 3,999 ರೂ.ಗಳಿಗೆ ದೊರೆಯಲಿದೆ. ಹೆಚ್ಚಿನ ವೇಗದ ಡೇಟಾ ವರ್ಗಾವಣೆ ಬಯಸುವವರಿಗೆ ಮತ್ತು ಸಾಕಷ್ಟು ಡೌನ್‌ಲೋಡ್ ಮತ್ತು ಅಪ್‌ಲೋಡ್ ಮಾಡುವವರಿಗೆ ಈ ಪ್ಲಾನ್‌ ಹೇಳಿಮಾಡಿಸಿದಂತಿದೆ. ಇದು 2,500GB (2.5TB) ಡೌನ್‌ಲೋಡ್ + ಅಪ್‌ಲೋಡ್ ಮಿತಿಯನ್ನು ನೀಡುತ್ತಿದ್ದು, ಉಚಿತ ವಾಯ್ಸ್ ಕಾಲ್‌, ಟಿವಿ ವಿಡಿಯೋ ಕಾಲ್‌, ಯಾವುದೇ ನಿಧಾನವಿಲ್ಲದೆ ವೇಗದ ಮಲ್ಟಿಪ್ಲೇಯರ್ ಗೇಮಿಂಗ್ ಮತ್ತು ವಿಷಯ ಹಂಚಿಕೆಯನ್ನು ಸಹ ಮಾಡಬಹುದಾಗಿದೆ.

ಪ್ಲಾಟಿನಂ ಪ್ಲಾನ್‌ನ ಹೆಚ್ಚುವರಿ ಫೀಚರ್ಸ್‌

ಪ್ಲಾಟಿನಂ ಯೋಜನೆಯಲ್ಲಿ ನಾರ್ಟನ್‌ ಡಿವೈಸ್‌ ಸೆಕ್ಯುರಿಟಿಯನ್ನು ಐದು ಸಾಧನಗಳಿಗೆ (ವಾರ್ಷಿಕ 999 ರೂ.) ನೀಡುತ್ತದೆ. ಕಂಪನಿಯ ವಿಆರ್ ಪ್ಲಾಟ್‌ಫಾರ್ಮ್‌ಗೆ ಗ್ರಾಹಕರಿಗೆ ಪ್ರವೇಶ ದೊರೆಯಲಿದೆ. (ಆದರೆ, ವಿಆರ್ ಹೆಡ್‌ಸೆಟ್ ನೀಡಲಾಗಿಲ್ಲ). ಸಹಜವಾಗಿ, ಈ ಯೋಜನೆಯ ಬಳಕೆದಾರರು ಫಸ್ಟ್‌ ಡೇ-ಫಸ್ಟ್‌ ಶೋ ಹಾಗೂ ಇತರ ವಿಡಿಯೋ ಕಂಟೆಂಟ್‌ಗೆ ಪ್ರವೇಶ ಪಡೆಯುತ್ತಾರೆ. ಇದರ ಜೊತೆ Jio Saavn, Jio Cinema ಮತ್ತು ಇತರ ಜಿಯೋದ ಇತರ ಅಪ್ಲಿಕೇಷನ್‌ಗಳಿಗೆ ಪ್ರವೇಶ ದೊರೆಯುತ್ತದೆ.

ಟೈಟಾನಿಯಂ ಮಾಸಿಕ ಪ್ಲಾನ್‌

ಜಿಯೋ ಫೈಬರ್‌ನ ಟೈಟಾನಿಯಂ ಮಾಸಿಕ ಪ್ಲಾನ್‌, 8,499 ರೂ.ಗೆ ದೊರೆಯುತ್ತಿದೆ.

ಈ ಪ್ಲಾನ್‌ 3,999 ರೂ.ಗಳ ಯೋಜನೆಯ ವೇಗ (1 ಜಿಬಿಪಿಎಸ್) ನೀಡಿದರೂ, 5000 ಜಿಬಿ (5 ಟಿಬಿ) ಡೌನ್‌ಲೋಡ್ ಮತ್ತು ಅಪ್‌ಲೋಡ್ ಡೇಟಾ ನೀಡುತ್ತಿದೆ. ಎಫ್‌ಯುಪಿ ಬಳಕೆಯ ನಂತರ ಡೇಟಾ ವೇಗ 1Mbps ಗೆ ಇಳಿಯುತ್ತದೆ. ಕಂಪನಿಯ ಇತರ ಯೋಜನೆಗಳಂತೆಯೇ, ಈ ಪ್ಲಾನ್‌ನಲ್ಲೂ ಪ್ಯಾನ್‌ ಇಂಡಿಯಾ ಉಚಿತ ವಾಯ್ಸ್‌ ಕಾಲಿಂಗ್‌, ವಿಡಿಯೋ ಕಾಲಿಂಗ್ ಸೇವೆಗಳು, ನಿಧಾನರಹಿತ ಗೇಮಿಂಗ್‌ ಮತ್ತು ವಿಷಯ ಹಂಚಿಕೆ ಸೌಲಭ್ಯ ಸಿಗಲಿದೆ.

ಟೈಟಾನಿಯಂನ ಹೆಚ್ಚುವರಿ ಫೀಚರ್ಸ್‌

ಈ ಯೋಜನೆಯು ಸಹ ಐದು ಸಾಧನಗಳಿಗೆ ನಾರ್ಟನ್‌ ಡಿವೈಸ್‌ ಸೆಕ್ಯುರಿಟಿಯನ್ನು ನೀಡುತ್ತದೆ. ಇದು ವಿಆರ್ ಕಂಟೆಂಟ್‌ ಮತ್ತು ಜಿಯೋ ಅಪ್ಲಿಕೇಶನ್‌ಗಳ ಮೂಲಕ ಪ್ರೀಮಿಯಂ ಕಂಟೆಂಟ್‌ಗೆ ಪ್ರವೇಶ ನೀಡುತ್ತದೆ. ಇದರ ಜೊತೆ ಫಸ್ಟ್‌ ಡೇ-ಫಸ್ಟ್‌ ಶೋ ಸಿನಿಮಾಗಳು ಮತ್ತು ಇತರ ಪ್ರೀಮಿಯಂ ವಿಡಿಯೋ ಕಂಟೆಂಟ್‌ಗಳಿಗೆ ಪ್ರವೇಶ ನೀಡುತ್ತದೆ. ನೀವು ದೊಡ್ಡ ಕುಟುಂಬ ಹೊಂದಿದ್ದರೂ ಮತ್ತು ಪ್ರತಿಯೊಬ್ಬರೂ 4ಕೆ ವಿಡಿಯೋ ವೀಕ್ಷಿಸಿದರು, ಪಿಸಿ ಅಥವಾ ಗೇಮಿಂಗ್ ಕನ್ಸೋಲ್‌ಗಳಲ್ಲಿ ದೊಡ್ಡ ಆಟಗಳನ್ನು ಡೌನ್‌ಲೋಡ್ ಮಾಡಿದರೂ ನಿಮಗೆ 5 ಟಿಬಿ ಡೇಟಾ ಸಾಕಾಗುತ್ತದೆ.

Best Mobiles in India

English Summary

These Jio Broadband Plans Are Eligible For "First Day First Show" Movies