ವಿಶ್ವಾದ್ಯಂತ ದಾಖಲೆ ಪ್ರಮಾಣದಲ್ಲಿ ಟಿಕ್‌ಟಾಕ್ ಡೌನ್‌ಲೋಡ್!


ಜನಪ್ರಿಯ ವಿಡಿಯೋ ಶೇರಿಂಗ್ ಆಪ್ ಟಿಕ್‌ಟಾಕ್ ವಿಶ್ವಾದ್ಯಂತ 1.5 ಬಿಲಿಯನ್ ಡೌನ್‌ಲೋಡ್‌ಗಳನ್ನು ತಲುಪಿದೆ ಮತ್ತು ಭಾರತದಲ್ಲಿ ಸುಮಾರು 466.8 ಮಿಲಿಯನ್ ಡೌನ್‌ಲೋಡ್ ಆಗುವ ಮೂಲಕ ಸುಮಾರು 31 ಪ್ರತಿಶತದಷ್ಟು ಮಾರುಕಟ್ಟೆ ಪಡೆದು ಅಗ್ರಸ್ಥಾನದಲ್ಲಿದೆ ಎಂದು ಇತ್ತಿಚಿನ ವರದಿಯೊಂದು ತಿಳಿಸಿದೆ. ಮೊಬೈಲ್ ಗುಪ್ತಚರ ಸಂಸ್ಥೆ ಸೆನ್ಸಾರ್‌ಟವರ್ ಪ್ರಕಾರ, ಟಿಕ್‌ಟಾಕ್ 2019 ರಲ್ಲಿ 614 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಖಲಿಸಿದೆ. ಇದು ಕಳೆದ ವರ್ಷಕ್ಕಿಂತ ಆರು ಪಟ್ಟು ಹೆಚ್ಚಾಗಿದ್ದು, ಟಿಕ್‌ಟಾಕ್‌ಗೆ ಜನರು ಮನಸೋತಿರುವುದನ್ನು ಸೂಚಿಸುತ್ತಿದೆ.

Advertisement

ಕಳೆದ ಫೆಬ್ರವರಿಯಲ್ಲಷ್ಟೇ 100 ಕೋಟಿ ಡೌನ್‌ಲೋಡ್‌ನ ಮೈಲುಗಲ್ಲನ್ನು ಟಿಕ್‌ಟಾಕ್ ದಾಟಿತ್ತು. ಅದಾಗಿ, 9 ತಿಂಗಳಲ್ಲಿಯೇ 50 ಕೋಟಿ ಡೌನ್‌ಲೋಡ್‌ಗಳು ದಾಖಲಾಗಿವೆ. ಭಾರತದಲ್ಲಿ ಇದರ ವೇಗವು ಹೆಚ್ಚಿದ್ದು, ಈ ವರ್ಷ 277.6 ಮಿಲಿಯನ್ ಡೌನ್‌ಲೋಡ್‌ಗಳನ್ನು ಕಂಡಿದೆ ಎಂದು ಸೆನ್ಸಾರ್ ಟವರ್‌ ವರದಿಯಲ್ಲಿ ಹೇಳಲಾಗಿದೆ. ಟಿಕ್‌ಟಾಕ್ ಪ್ರಸ್ತುತ 614 ಮಿಲಿಯನ್ ಡೌನ್‌ಲೋಡ್‌ ಗಳೊಂದಿಗೆ ಮೂರನೇ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಗೇಮಿಂಗ್ ಅಲ್ಲದ ಅಪ್ಲಿಕೇಶನ್‌ ಆಗಿದ್ದು, ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಮೆಸೆಂಜರ್ ಮೊದಲೆರಡು ಸ್ಥಾನಗಳಲ್ಲಿವೆ.

Advertisement

ಈ ವರ್ಷ ಹೆಚ್ಚಿನ ಡೌನ್‌ಲೋಡ್‌ಗಳನ್ನು ಕಂಡ ಅಪ್ಲಿಕೇಷನ್‌ಗಳಲ್ಲಿ ವಾಟ್ಸ್‌ಆಪ್‌ 70.4 ಕೋಟಿ ಡೌನ್‌ಲೋಡ್ ಕಾನುವ ಮೂಲಕ ಮೊದಲ ಸ್ಥಾನದಲ್ಲಿದೆ. 63.6 ಕೋಟಿ ಜನರು ಡೌನ್‌ಲೋಡ್ ಮಾಡಿರುವ ಫೇಸ್‌ಬುಕ್‌ ಮೆಸೆಂಜರ್‌ ಎರಡನೇ ಸ್ಥಾನದಲ್ಲಿದ್ದರೆ, ಟಿಕ್‌ಟಾಕ್ (61.4 ಕೋಟಿ) ನಂತರದ ಸ್ಥಾನದಲ್ಲಿರುವ ಫೇಸ್‌ಬುಕ್‌ ಅನ್ನು ಈ ವರ್ಷ 58.7 ಕೋಟಿ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ ಎಂದು ವರದಿಯು ಹೇಳಿದೆ. ಇನ್ನು ಈ ಅಂಕಿ ಅಂಶಗಳು ಮೂರನೇ ವ್ಯಕ್ತಿಯಿಂದ ಆದಂತಹ ಸ್ಥಾಪನೆಗಳನ್ನು ಒಳಗೊಂಡಿಲ್ಲ ಎಂದು ಸೆನ್ಸಾರ್ ಟವರ್ ಹೇಳಿದೆ.

ವರದಿಗಳ ಪ್ರಕಾರ, ಟಿಕ್‌ಟಾಕ್ ಹೊಸ ವೈಶಿಷ್ಟ್ಯವನ್ನು ರೂಪಿಸುತ್ತಿದೆ ಎಂದು ತಿಳಿದುಬಂದಿದೆ. ಹೊಸ ವೈಶಿಷ್ಟ್ಯವು ವಿಷಯ ರಚನೆಕಾರರಿಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು ತಮ್ಮ ಬಯೋ ಮತ್ತು ಅವರ ಪೋಸ್ಟ್‌ಗಳಲ್ಲಿ ಸೇರಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ. ಟಿಕ್‌ಟಾಕ್ ಬಳಕೆದಾರರು ಲಿಂಕ್ ಅನ್ನು ಅನುಸರಿಸಿದಾಗ ಅಥವಾ ಕ್ಲಿಕ್ ಮಾಡಿದಾಗ, ಅವರು ಬಯೋದಲ್ಲಿ ಉಲ್ಲೇಖಿಸಲಾದ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಆನ್‌ಲೈನ್ ಶಾಪಿಂಗ್ ವೈಶಿಷ್ಟ್ಯಗಳಂತಿದೆ.

ಈ ಬಗ್ಗೆ ಮಾತನಾಡಿರುವ ಟಿಕ್‌ಟಾಕ್‌ನ ಮಾತೃ ಕಂಪೆನಿ ಬೈಟ್‌ಡ್ಯಾನ್ಸ್ ವಕ್ತಾರರು, "ನಾವು ಯಾವಾಗಲೂ ಅಪ್ಲಿಕೇಶನ್ ಅನ್ನು ಸುಧಾರಿಸಲು ಹೊಸ ಮಾರ್ಗಗಳನ್ನು ಪ್ರಯೋಗಿಸುತ್ತೇವೆ. ಅಂತಿಮವಾಗಿ, ನಾವು ಸೃಜನಶೀಲತೆಯನ್ನು ಪ್ರೇರೇಪಿಸುವ, ಸಂತೋಷವನ್ನು ತರುವ ಮತ್ತು ನಮ್ಮ ಸಮುದಾಯಕ್ಕೆ ಮೌಲ್ಯವನ್ನು ಸೇರಿಸುವ ಮಾರ್ಗಗಳ ಮೇಲೆ ಕೇಂದ್ರೀಕರಿಸಿದ್ದೇವೆ. ಶಿಘ್ರದಲ್ಲೇ ಟಿಕ್‌ಟಾಕ್ ಇ-ಕಾಮರ್ಸ್ ಜಾಗವನ್ನು ಪ್ರವೇಶಿಸುತ್ತದೆ ಮತ್ತು ಇದು ವಿಷಯ ರಚನೆಕಾರರಿಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ.

Best Mobiles in India

English Summary

TikTok Now Has 150 Crore Users; Challenges Facebook, Instagram With This New Feature!. to know more visit to kannada.gizbot.com