Home
ಸುದ್ದಿಜಾಲ

ಬಿಡುಗಡೆಗೂ ಎರಡು ದಿನಗಳ ಮೊದಲೇ Vivo T4x ಫೋನ್ ಬೆಲೆ ವಿವರ ಬಹಿರಂಗ!

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿ Vivo ಭಾರತದಲ್ಲಿ ತನ್ನ 6,500 mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ ಬಹುನಿರೀಕ್ಷಿತ Vivo T4x ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಿಸಿದೆ. ಬಹಳಷ್ಟು ಸೋರಿಕೆಗಳು ಮತ್ತು ಊಹಾಪೋಹಗಳ ನಂತರ, ಅಧಿಕೃತವಾಗಿ Vivo T4x ಸ್ಮಾರ್ಟ್‌ಫೋನ್ ಇದೇ ಮಾರ್ಚ್ 5 ರಂದು ಭಾರತದಲ್ಲಿ ಬಿಡುಗಡೆಗೊಳ್ಳಲಿದೆ ಎಂದು Vivo ಕಂಪೆನಿ ಈಗಾಗಲೇ ತಿಳಿಸಿತ್ತು. ಇದೀಗ ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಲಿದೆ ಎಂಬ ಕುರಿತಂತೆ ಸ್ಪಷ್ಟ ಮಾಹಿತಿಯನ್ನು ಸಹ ಹೊರಹಾಕಿದೆ.! ಹಾಗಾದರೆ, ನೂತನ Vivo T4x ಸ್ಮಾರ್ಟ್‌ಫೋನ್ ಹೇಗಿರಲಿದೆ ಮತ್ತು ಬೆಲೆ ಎಷ್ಟು ಇರಲಿವೆ ಎಂಬೆಲ್ಲಾ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.

ವಿವೋ T4x ಸ್ಮಾರ್ಟ್‌ಫೋನಿನ ಬೆಲೆ ಎಷ್ಟಿರಲಿದೆ?

ವಿವೋ T4x ಸ್ಮಾರ್ಟ್‌ಫೋನ್‌ನ ಬೆಲೆ 12,499 ರೂ.ಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಕಂಪೆನಿಯು ಸ್ಮಾರ್ಟ್‌ಫೋನ್ ಬೆಲೆಯು 12,XXX ಸಾವಿರ ಇರಲಿದೆ ಎಂದು ಪ್ರಚಾರ ಮಾಡಿದೆ. ಹಾಗಾಗಿ, 4GB RAM ಮಾದರಿಯ ಫೋನ್ ಬೆಲೆ 12,499 ರೂ., 6GB RAM ಮಾದರಿಯ ಫೋನ್ ಬೆಲೆ 13,999 ರೂ. ಮತ್ತು 8GB RAM ಮಾದರಿಯ ಫೋನ್ ಬೆಲೆ 15,499 ರೂ. ಆಗಿರಬಹುದು. ಇನ್ನು ಇದೇ ಮಾರ್ಚ್ 5 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್, ವಿವೋ ಸ್ಟೋರ್‌ಗಳು ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪೆನಿ ತಿಳಿಸಿದೆ.

Vivo T4x ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು

ಹೊಸ Vivo T4x ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ FHD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 6,500 mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ. ಆಂಡ್ರಾಯ್ಡ್ 15 ಆಧಾರಿತ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್, 2 ವರ್ಷಗಳ OS ನವೀಕರಣ ಮತ್ತು 3 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಪಡೆಯಲಿದೆ.

ಬಿಡುಗಡೆಗೂ ಎರಡು ದಿನಗಳ ಮೊದಲೇ Vivo T4x ಫೋನ್ ಬೆಲೆ ವಿವರ ಬಹಿರಂಗ!

ಕ್ಯಾಮೆರಾ ವಿಭಾಗದಲ್ಲಿ, 50MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 8MP ಸೆಲ್ಫಿ ಕ್ಯಾಮೆರಾ ಇರಲಿದೆ. AI ಎರೇಸ್ ಮತ್ತು ಫೋಟೋ ಎನ್‌ಹಾನ್ಸ್‌ನಂತಹ AI ವೈಶಿಷ್ಟ್ಯಗಳು ಕೂಡ ಇರಬಹುದೆಂದು ನಿರೀಕ್ಷಿಸಲಾಗಿದೆ. ಇನ್ನು ಈ ವಿವೋ T4x ಸ್ಮಾರ್ಟ್‌ಫೋನ್ ಪ್ರೊಂಟೊ ಪರ್ಪಲ್ ಮತ್ತು ಮೆರೈನ್ ಬ್ಲೂ ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗಿದ್ದು, ಸದ್ಯ ಈ ವರೆಗೂ ಇಷ್ಟು ನಿಖರ ಮಾಹಿತಿ ದೊರೆತಿದೆ.

ಈ ವಿವೋ T4x ಸ್ಮಾರ್ಟ್‌ಫೋನ್, ಉತ್ತಮ ವೈಶಿಷ್ಟ್ಯಗಳು ಮತ್ತು ಸ್ಪರ್ಧಾತ್ಮಕ ಬೆಲೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಜ್ಜಾಗಿದೆ. ದೀರ್ಘಕಾಲದ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳಿಂದಾಗಿ ಗ್ರಾಹಕರು ಈ ಸ್ಮಾರ್ಟ್‌ಫೋನ್‌ನ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಆಕರ್ಷಕ ವಿನ್ಯಾಸ ಮತ್ತು ಬಣ್ಣಗಳ ಆಯ್ಕೆಯೊಂದಿಗೆ ಈ ಸ್ಮಾರ್ಟ್‌ಫೋನ್ ಯುವಜನರನ್ನು ಸೆಳೆಯುವ ನಿರೀಕ್ಷೆಯಿದೆ. ಮಧ್ಯಮ ಬೆಲೆಯ ವಿಭಾಗದಲ್ಲಿ ಈ ಸ್ಮಾರ್ಟ್‌ಫೋನ್ ಉತ್ತಮ ಪ್ರತಿಕ್ರಿಯೆ ಪಡೆಯುವ ಸಾಧ್ಯತೆಯಿದೆ ಎಂದು ಹೇಳಬಹುದು.

Best Mobiles in India

English summary
Vivo T4x 5G Set to Launch in India on March 5: Price, Specifications, and More Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+