ಭಾರತಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ವಿವೋ V30 ಸರಣಿ: ಅತ್ಯಾಕರ್ಷಕ ಕ್ಯಾಮೆರಾ ಫೀಚರ್ಸ್
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ವಿವೋ V30 ಸರಣಿ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸರಣಿಯಲ್ಲಿ ವಿವೋ V30 ಮತ್ತು ವಿವೋ V30 ಪ್ರೊ ಫೋನ್‌ಗಳನ್ನು ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳು 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿವೆ. ಜೊತೆಗೆ 50MP ಆಟೋಫೋಕಸ್ ಫ್ರಂಟ್ ಕ್ಯಾಮೆರಾದೊಂದಿಗೆ ಪ್ಯಾಕ್ ಮಾಡುತ್ತವೆ.
ಹೌದು, ವಿವೋ V30 ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಎಂಟ್ರಿ ನೀಡಿವೆ. ಇದರಲ್ಲಿ ವಿವೋ V30 ಪೋನ್ ಸ್ನಾಪ್‌ಡ್ರಾಗನ್ 7 Gen 3 SoC ಪ್ರೊಸೆಸರ್‌ನಲ್ಲಿದೆ. ಆದರೆ ವಿವೋ V30 ಪ್ರೊ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ವಿವೋ V30 ಸರಣಿ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ವಿವೋ V30 ಸ್ಮಾರ್ಟ್‌ಫೋನ್ ಪೀಚರ್ಸ್ ಹೇಗಿದೆ?
vivo V30 ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 2800×1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ HDR10+ ಜೊತೆಗೆ, 20:9 ರಚನೆಯ ಅನುಪಾತದಲ್ಲಿ ಬರಲಿದೆ. ಇದು ಸ್ನಾಪ್‌ಡ್ರಾಗನ್ 7 Gen 3 (4nm) ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಹಾಗೂ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಬರಲಿದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋಟ್ರೇಟ್ ಲೆನ್ಸ್ ಹೊಂದಿದೆ. ಇದಲ್ಲದೆ 50 ಮೆಗಾಪಿಕ್ಸೆಲ್ ಆಟೋಫೋಕಸ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ವೇಗದ ಚಾರ್ಜಿಂಗ್‌ನೊಂದಿಗೆ ಬರಲಿದೆ. ಇದಲ್ಲದೆ ಯುಎಸ್‌ಬಿ ಟೈಪ್-ಸಿ ಆಡಿಯೋ, ಬಾಟಮ್-ಪೋರ್ಟ್ ಮಾಡಿದ ಸ್ಪೀಕರ್, ಹೈ-ರೆಸ್ ಆಡಿಯೋ ಒಳಗೊಂಡಿದೆ.
ವಿವೋ V30 ಪ್ರೊ ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿದೆ?
ವಿವೋ V30 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 100% DCI-P3 ಬಣ್ಣದ ಹರವು, 2800 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8200 4nm ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಹಾಗೂ 12GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ 2x ಟೆಲಿಫೋಟೋ ಪೋಟ್ರೇಟ್ ಲೆನ್ಸ್ ಅನ್ನು ಹೊಂದಿರಲಿದೆ. ಇದಲ್ಲದೆ 50 ಮೆಗಾಪಿಕ್ಸೆಲ್ ಆಟೋಫೋಕಸ್ ಸೆಲ್ಫಿ ಕ್ಯಾಮರಾವನ್ನು ಒಳಗೊಂಡಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ವೇಗದ ಚಾರ್ಜಿಂಗ್‌ನೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, Wi-Fi 6 802.11 ac (2.4GHz + 5GHz), ಬ್ಲೂಟೂತ್ 5.3, GPS, USB ಟೈಪ್-C, NFC ಬೆಂಬಲದೊಂದಿಗೆ ಬರಲಿದೆ.
ಬೆಲೆ ವಿವರಗಳು
vivo V30 ಸ್ಮಾರ್ಟ್‌ಫೋನ್ ಭಾರತದಲ್ಲಿ 8GB + 128GB ಮಾದರಿಯ ಆಯ್ಕೆಗೆ 33,999ರೂ ಬೆಲೆಯನ್ನು ಹೊಂದಿದೆ. ಇದರ 8GB + 256GB ಮಾದರಿಯು 35,999ರೂ ಬೆಲೆಯಲ್ಲಿದೆ. ಇನ್ನು ಟಾಪ್ ಎಂಡ್ ಮಾಡೆಲ್ 12GB + 256GB ಮಾದರಿಯು 37,999ರೂ ಬೆಲೆಯಲ್ಲಿ ಬರಲಿದೆ.
vivo V30 Pro ಸ್ಮಾರ್ಟ್‌ಫೋನ್ 8GB + 256GB ಮಾದರಿಯು 41,999ರೂ ಬೆಲೆಯನ್ನು ಪಡೆದುಕೊಂಡಿದೆ. ಇದರ 12GB + 512GB ಮಾದರಿಯ ಆಯ್ಕೆಯು 46,999ರೂ ಬೆಲೆಯನ್ನು ಹೊಂದಿದೆ.
ಕಲರ್ ಆಯ್ಕೆ ಮತ್ತು ಲಭ್ಯತೆ
ಈ ಸ್ಮಾರ್ಟ್‌ಫೋನ್ ಪ್ರಿ ಬುಕ್ಕಿಂಗ್ ಇಂದಿನಿಂದಲೇ (ಮಾರ್ಚ್ 7) vivo.com, Flipkart ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಪ್ರಾರಂಭವಾಗುತ್ತದೆ. ಈ ಸ್ಮಾರ್ಟ್‌ಫೋನ್‌ಗಳು ಮಾರ್ಚ್ 14 ರಿಂದ ಮಾರಾಟವಾಗಲಿದೆ. ಇದರಲ್ಲಿ vivo V30 ಅಂಡಮಾನ್ ಬ್ಲೂ ಆವೃತ್ತಿಯಲ್ಲಿ ಬರುತ್ತದೆ. ಇನ್ನು ವಿವೋ V30 Pro ಫ್ಲೋರೈಟ್ AG ಗ್ಲಾಸ್‌ನೊಂದಿಗೆ ಅಂಡಮಾನ್ ಬ್ಲೂ ಮತ್ತು ಕ್ಲಾಸಿಕ್ ಕಪ್ಪು ಬಣ್ಣಗಳಲ್ಲಿ ಬರುತ್ತದೆ.


Click it and Unblock the Notifications








