Vivo X200: ಮೂರು ಫೋನ್ ಬಿಡುಗಡೆಗೆ ಸಿದ್ಧ; 200MP ಕ್ಯಾಮೆರಾ.. 6000mAh ಬ್ಯಾಟರಿ ಖಚಿತ!
ವಿವೋ ತನ್ನ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ನೀಡಲು ಸಜ್ಜಾಗಿದೆ. ಶೀಘ್ರದಲ್ಲೇ ಮೂರು ಹೊಸ ಮೊಬೈಲ್‌ಗಳು ವಿವೋ ಪ್ರಿಯರ ಕೈ ಸೇರಲಿವೆ. ಹೌದು, ಕಂಪನಿಯು ವಿವೋ X200 (Vivo X200) ಸರಣಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಮೂಲಕ Vivo X200, Vivo X200 Pro ಮತ್ತು Vivo X200 Pro Mini ಫೋನ್‌ಗಳು ಜಾಗತಿಕ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಪ್ರಸ್ತುತ, ಕಂಪನಿಯು ಅಧಿಕೃತವಾಗಿ ವಿವೋ X200 ಸರಣಿಯ ಬಿಡುಗಡೆಯನ್ನು ಸ್ಪಷ್ಟಪಡಿಸಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕಂಪನಿಯು ಈಗಾಗಲೇ, ವಿವೋ X200 ಸರಣಿಯನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದು Vivo X100 ಸರಣಿಯ ಉತ್ತರಾಧಿಕಾರಿಯಾಗಿದೆ. ಈ ಫೋನ್‌ಗಳು ಭಾರತಕ್ಕೂ ಬರಲಿವೆ. ವರದಿಯ ಪ್ರಕಾರ, ಡಿಸೆಂಬರ್ ಅಥವಾ 2025ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಮುಂಬರುವ ಫೋನಿನ ಫೋಟೋವನ್ನು ಹಂಚಿಕೊಂಡಿದೆ. ಇದು ಮೊದಲು ಮಲೇಷ್ಯಾದಲ್ಲಿ ಬಿಡುಗಡೆಯಾಗಲಿದೆ. ಪೋಸ್ಟರ್‌ನಲ್ಲಿ 'ಕಮಿಂಗ್ ಸೂನ್' ಎಂದು ಬರೆಯಲಾಗಿದೆ. ವಿಶೇಷವೆಂದರೆ, ವಿವೋ X200 ಸರಣಿಯ ಫೋನ್‌ಗಳು ಮೀಡಿಯಾಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಅನ್ನು ಹೊಂದಿರಲಿದೆ.

ವಿವೋ X200 ಮತ್ತು ವಿವೋ X200 ಪ್ರೊ ವೈಶಿಷ್ಟ್ಯಗಳು
ಕಂಪನಿಯು ವಿವೋ X100 ಸರಣಿಯ ಫೋನ್‌ಗಳಿಗಿಂತ ವಿವೋ X200 ಸರಣಿ ವಿನ್ಯಾಸವನ್ನು ಸ್ವಲ್ಪ ಬದಲಾಯಿಸಿದೆ. ಹೊಸ ಫೋನ್‌ಗಳು ಫ್ಲಾಟ್ ಡಿಸ್ಪ್ಲೇ ಮತ್ತು ಬಾಕ್ಸ್ ವಿನ್ಯಾಸದೊಂದಿಗೆ ಬರುತ್ತವೆ. ಕ್ಯಾಮೆರಾ ಸೆಟಪ್ ವಿವೋ X100 ಸರಣಿಯ ಫೋನ್‌ಗಳಂತೆಯೇ ಕಂಡುಬರುತ್ತದೆ. ಬನ್ನಿ, ಚೀನಾದಲ್ಲಿ ಬಿಡುಗಡೆಯಾಗಿರುವ ವಿವೋ X200 ಮತ್ತು ವಿವೋ X200 ಪ್ರೊ ಮೊಬೈಲ್ ಯಾವೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ನೋಡೋಣ.
ಡಿಸ್ಪ್ಲೇ ವಿವರ
ವಿವೋ X200 ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಆದರೆ, ವಿವೋ X200 ಪ್ರೊ ಮೊಬೈಲ್ 6.78 ಇಂಚಿನ ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 120Hz ರಿಫ್ರೆಶ್ ದರ, 1.5K ರೆಸಲ್ಯೂಶನ್ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಎರಡೂ ವಿವೋ ಮೊಬೈಲ್ ಅನ್ನು ಮೀಡಿಯಾ ಟೆಕ್ ಡೈಮೆನ್ಶನ್ 9400 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇವು ಈ ಹೊಸ ಪ್ರೊಸೆಸರ್‌ನೊಂದಿಗೆ ಬಂದ ಮೊದಲ ಮೊಬೈಲ್‌ಗಳಾಗಿವೆ. ಎರಡು ಫೋನ್‌ಗಳು ಒರಿಜಿನ್ ಓಎಸ್ 5 ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ನಿರ್ವಹಿಸುತ್ತವೆ.
ಸ್ಟೋರೇಜ್ ಆಯ್ಕೆ
ವಿವೋ X200 ಮತ್ತು ವಿವೋ X200 ಪ್ರೊ ಫೋನ್ 16GB RAM ಮತ್ತು 1TB ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ
ಕ್ಯಾಮೆರಾ ಸೆಟಪ್
ವಿವೋ X200 ಮತ್ತು ವಿವೋ X200 ಪ್ರೊ ಸ್ಮಾರ್ಟ್‌ಫೋನ್ OIS ಜೊತೆಗೆ 50 ಮೆಗಾಪಿಕ್ಸೆಲ್ LYT 818 ಮುಖ್ಯ ಕ್ಯಾಮೆರಾ ಹೊಂದಿದೆ. 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 200 ಮೆಗಾಪಿಕ್ಸೆಲ್ ಝೈಸ್ (Zeiss) APO ಟೆಲಿಫೋಟೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಎರಡೂ ಫೋನ್‌ಗಳಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ವಿವೋ X200 ಮೊಬೈಲ್ 5800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ವಿವೋ X200 ಪ್ರೊ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದನ್ನು ಚಾರ್ಜ್ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 30W ವೈರ್‌ಲೆಸ್ ಸೌಲಭ್ಯ ಒದಗಿಸಲಾಗಿದೆ. ಎರಡೂ ಫೋನ್‌ಗಳು ನೀರು ಮತ್ತು ಧೂಳಿನ ರಕ್ಷಣೆಗೆ IP68+IP69 ರೇಟಿಂಗ್ ಹೊಂದಿವೆ.
ವಿವೋ X200 ಸರಣಿಯ ಬೆಲೆ ಎಷ್ಟು?
ವಿವೋ X200 ಬೆಲೆ = 50,800 ರೂ.
ವಿವೋ X200 ಪ್ರೊ ಮಿನಿ ಬೆಲೆ = 55,600 ರೂ.
ವಿವೋ X200 ಪ್ರೊ ಬೆಲೆ = 62,600 ರೂ.


Click it and Unblock the Notifications








