Home
ಸುದ್ದಿಜಾಲ

Vivo X200 Ultra ಫೀಚರ್ಸ್ ಲೀಕ್! 200MP ಕ್ಯಾಮೆರಾ.. 6000mAh ಬ್ಯಾಟರಿ.. ಲಾಂಚ್ ಯಾವಾಗ?

ವಿವೋ ಶೀಘ್ರದಲ್ಲೇ ಹೊಸ ಫೋನನ್ನು ಬಿಡುಗಡೆ ಮಾಡಲಿದೆ. ಇದು ವಿವೋ X200 ಅಲ್ಟ್ರಾ (Vivo X200 Ultra) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹೌದು, ವಿವೋ ಈಗಾಗಲೇ Vivo X200 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಎರಡು ಹೊಸ ಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ, ನಾಲ್ಕನೇ ಮೊಬೈಲ್‌ ವಿವೋ X200 ಅಲ್ಟ್ರಾ ಅನ್ನು ರಿಲೀಸ್ ಮಾಡಲು ಸಜ್ಜಾಗಿದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯೋಣ.

ವಿವೋ X200 ಅಲ್ಟ್ರಾ ಮೊಬೈಲ್ ಟ್ರಿಪಲ್ ಕ್ಯಾಮೆರಾಗಳನ್ನು ಹೊಂದಿರುವ ನಿರೀಕ್ಷೆಯಿದೆ. ವಿವೋ X100 ಅಲ್ಟ್ರಾ ಫೋನಿಗೆ ಹೋಲಿಸಿದರೆ ನಾಲ್ಕು ಹೆಚ್ಚುವರಿ ವೃತ್ತಾಕಾರದ ಘಟಕಗಳನ್ನು ಹೊಂದಿರಲಿದೆ. ಈ ಫೋನಿನ ಕ್ಯಾಮೆರಾ ಮಾಡ್ಯೂಲ್ ವೃತ್ತಾಕಾರವಾಗಿದೆ. ಒಳಭಾಗ ಕಪ್ಪು ಮತ್ತು ಹೊರ ಭಾಗದಲ್ಲಿ ಬೆಳ್ಳಿ-ಬೂದು ಮಿಶ್ರಿತ ಬಣ್ಣ ಹೊಂದಿದೆ. ರೆಂಡರ್ ಫೋಟೋದಲ್ಲಿ ಫೋನನ್ನು ಬೂದು ಬಣ್ಣದಲ್ಲಿ ತೋರಿಸಲಾಗಿದೆ. ಈ ಫೋನ್ ಮೈಕ್ರೋ ಕ್ವಾಡ್ ಬಾಗಿದ ಡಿಸ್ಪ್ಲೇ ಹೊಂದಿರಲಿದೆ. ಬಲಭಾಗದಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಇದೆ.

Vivo X200 Ultra: 200MP ಕ್ಯಾಮೆರಾ, 6000mAh ಬ್ಯಾಟರಿ; ಯಾವಾಗ ಲಾಂಚ್

ವಿವೋ X200 ಅಲ್ಟ್ರಾ ಬಿಡುಗಡೆ ಯಾವಾಗ?

ವಿವೋ X200 ಅಲ್ಟ್ರಾ ಸ್ಮಾರ್ಟ್‌ಫೋನ್‌ ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದಕ್ಕೆ ಸಂಬಂಧಿಸಿದಂತೆ, ರೆಂಡರ್ ಫೋಟೋ ಮತ್ತು ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ವರ್ಷದ ಮೊದಲಾರ್ಧದಲ್ಲಿ ಈ ಸ್ಮಾರ್ಟ್‌ಫೋನ್ ರಿಲೀಸ್ ಆಗಲಿದೆ. ವರದಿಯ ಪ್ರಕಾರ, ಮಾರ್ಚ್ ಅಥವಾ ಏಪ್ರಿಲ್ 2025 ತಿಂಗಳಲ್ಲಿ ಲಾಂಚ್ ಮಾಡುವ ಸಾಧ್ಯತೆಯಿದೆ. ಕಳೆದ ಮೇ 2024ರಲ್ಲಿ ವಿವೋ X100 ಅಲ್ಟ್ರಾ ಫೋನನ್ನು ಬಿಡುಗಡೆ ಮಾಡಲಾಗಿತ್ತು.

ವಿವೋ X200 ಅಲ್ಟ್ರಾ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ X200 ಅಲ್ಟ್ರಾ ಮೊಬೈಲ್ 6.82 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಇದು ಓಎಲ್‌ಇಡಿ ಮೈಕ್ರೋ ಕ್ವಾಡ್ ಬಾಗಿದ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2K ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 5000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ವಿವೋ X200 ಅಲ್ಟ್ರಾ ಫೋನ್ ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿರುತ್ತದೆ. ಈ ಮೊಬೈಲ್ 24GB RAM ಮತ್ತು 2TB ಸ್ಟೋರೇಜ್‌ ಆಯ್ಕೆಯೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್

ವಿವೋ X200 ಅಲ್ಟ್ರಾ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿರುತ್ತದೆ. ಜೊತೆಗೆ 200 ಮೆಗಾಪಿಕ್ಸೆಲ್ HP ಸೂಪರ್ ಲಾರ್ಜ್ ಬೇಸ್ ಟೆಲಿಫೋಟೋ ಕ್ಯಾಮೆರಾ ಮತ್ತು 70 ಎಂಎಂ ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ X200 ಅಲ್ಟ್ರಾ ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರುತ್ತದೆ. ಇದನ್ನು ಚಾರ್ಜ್ ಮಾಡಲು, 90W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ವಿವೋ X200 ಅಲ್ಟ್ರಾ ಫೋನ್ ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುತ್ತದೆ. ಹಾಗೆಯೇ ಇನ್‌ಫ್ರಾರೆಡ್ ರಿಮೋಟ್ ಕಂಟ್ರೋಲ್, ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68/69 ರೇಟಿಂಗ್ ಹೊಂದಿರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಬ್ಲೂಟೂತ್ 5.4, ಎನ್‌ಎಫ್‌ಸಿ, ವೈ-ಫೈ, ಯುಎಸ್‌ಬಿ ಟೈಪ್‌ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

Best Mobiles in India

English summary
Vivo X200 Ultra Design and specifications Leaked: Snapdragon 8 Elite, Up to 24GB RAM/2TB Storage, 5000 Nits Display
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+