Home
ಸುದ್ದಿಜಾಲ

Vivo Y400 Pro 5G: ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ, ನಿರೀಕ್ಷಿತ ಬೆಲೆ ನೋಡಿ!

Vivo ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ Vivo Y400 Pro 5G ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ X (ಹಿಂದಿನ Twitter) ಮೂಲಕ ಶುಕ್ರವಾರ ಘೋಷಿಸಿದೆ. ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿನ ಈವೆಂಟ್ ಪುಟದಲ್ಲಿ ಹೊಸ Y-ಸರಣಿಯ ಈ ಸ್ಮಾರ್ಟ್‌ಫೋನ್ ಆಗಮನವನ್ನು ಖಚಿತಪಡಿಸಿದ್ದು, ಈ ಹೊಸ ಸ್ಮಾರ್ಟ್‌ಫೋನ್ ಹಲವಾರು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸುವ ನಿರೀಕ್ಷೆಯಿದೆ. ಮುಂಬರುವ Vivo Y400 Pro 5G ಸ್ಮಾರ್ಟ್‌ಫೋನಿನ ವಿನ್ಯಾಸ, ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳು ಈ ಕೆಳಂಡಂತಿವೆ.

Vivo Y400 Pro 5G ಫೋನಿನ ವಿನ್ಯಾಸ ಅಧಿಕೃತ
Vivo ಬಿಡುಗಡೆ ಮಾಡಿರುವ ಟೀಸರ್ ವೀಡಿಯೊ ಮತ್ತು ಲ್ಯಾಂಡಿಂಗ್ ಪುಟಗಳಲ್ಲಿ Vivo Y400 Pro 5G ಫೋನಿನ ಹಿಂಭಾಗದ ವಿನ್ಯಾಸವನ್ನು ಪ್ರದರ್ಶಿಸಲಾಗಿದೆ. ಇದರಲ್ಲಿ Vivo Y400 Pro 5G ಫೋನ್ ಬಿಳಿ ಬಣ್ಣದ ಆಯ್ಕೆಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು ಮಾತ್ರೆ ಆಕಾರದ ಮಾಡ್ಯೂಲ್‌ನಲ್ಲಿ ಲಂಬವಾಗಿ ಜೋಡಿಸಲಾದ ಸಂವೇದಕಗಳನ್ನು ಮತ್ತು ರಿಂಗ್ LED ಫ್ಲ್ಯಾಷ್ ಅನ್ನು ಒಳಗೊಂಡಿದೆ. ವಿನ್ಯಾಸವು ಆಧುನಿಕ ಮತ್ತು ಸೊಗಸಾಗಿ ಕಾಣುತ್ತದೆ. ಇಷ್ಟೇ ಅಲ್ಲದೆ, ಈಗಾಗಲೇ Vivo Y400 Pro 5G ಫೋನಿನ ಕುರಿತು ಹಲವು ಸೋರಿಕೆಯ ಮಾಹಿತಿಗಳು ದೊರೆತಿವೆ.

Vivo Y400 Pro 5G: ನಿರೀಕ್ಷಿತ ವೈಶಿಷ್ಟ್ಯಗಳು
ಸೋರಿಕೆಗಳ ಮಾಹಿತಿಯಂತೆ, ಮುಂಬರುವ Vivo Y400 Pro 5G ಫೋನ್ 6.77-ಇಂಚಿನ ಪೂರ್ಣ-HD+ 3D ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದುವ ನಿರೀಕ್ಷೆಯಿದೆ. ಇದು 120Hz ರಿಫ್ರೆಶ್ ದರ ಮತ್ತು ಪ್ರಭಾವಶಾಲಿ 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ ಎಂದು ವದಂತಿಗಳಿವೆ. ಕಾರ್ಯಕ್ಷಮತೆಗಾಗಿ, ಈ ಸ್ಮಾರ್ಟ್‌ಫೋನ್ 8GB RAM ನೊಂದಿಗೆ 128GB ಮತ್ತು 256GB ಸಂಗ್ರಹಣೆಯ ಜೊತೆಗೆ MediaTek Dimensity 7300 ಚಿಪ್‌ಸೆಟ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ.ಆಂಡ್ರಾಯ್ಡ್ 15 ಆಧಾರಿತ Funtouch 15 ನೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.

Vivo Y400 Pro 5G: ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ, ನಿರೀಕ್ಷಿತ ಬೆಲೆ ನೋಡಿ!

ಕ್ಯಾಮೆರಾ ವಿಭಾಗದಲ್ಲಿ, Vivo Y400 Pro 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಮುಖ್ಯ ಸಂವೇದಕವು 50-ಮೆಗಾಪಿಕ್ಸೆಲ್ ಸೋನಿ IMX882 ಸೆನ್ಸರ್ ಆಗಿದ್ದು, ಇದು 2-ಮೆಗಾಪಿಕ್ಸೆಲ್ ಶೂಟರ್‌ನೊಂದಿಗೆ ಇರಲಿದೆ ಎಂದು ವದಂತಿಗಳಿವೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇರಬಹುದು ಎಂದು ಹೇಳಲಾಗಿದೆ.ಬ್ಯಾಟರಿ ಬಗ್ಗೆ ಮಾತನಾಡುವುದಾದರೆ, Vivo Y400 Pro 5G ಫೋನ್ 5,500mAh ಬ್ಯಾಟರಿಯನ್ನು ಹೊಂದಿರಬಹುದು, ಮತ್ತು ಇದು 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ

Vivo Y400 Pro 5G: ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
Vivo Y400 Pro 5G ಫೋನ್ ಬೆಲೆ ಭಾರತದಲ್ಲಿ ಸುಮಾರು 25,000 ರೂಪಾಯಿಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದು ಗೋಲ್ಡ್, ನೆಬ್ಯುಲಾ ಪರ್ಪಲ್ ಮತ್ತು ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುವ ಸಾಧ್ಯತೆಯಿದೆ. Vivo ಇನ್ನೂ ನಿಖರವಾದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ, ಆದರೆ 'ಶೀಘ್ರದಲ್ಲೇ ಬರಲಿದೆ' ಎಂಬ ಟ್ಯಾಗ್‌ಲೈನ್‌ನೊಂದಿಗೆ ಟೀಸ್ ಮಾಡಲಾಗಿದೆ. ಒಟ್ಟಾರೆಯಾಗಿ, Vivo Y400 Pro 5G ಪ್ರಬಲ ವೈಶಿಷ್ಟ್ಯಗಳು, ಆಕರ್ಷಕ ವಿನ್ಯಾಸ ಮತ್ತು ಸ್ಪರ್ಧಾತ್ಮಕ ಬೆಲೆಯೊಂದಿಗೆ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗಮನಾರ್ಹ ಪ್ರವೇಶವನ್ನು ಮಾಡಲು ಸಜ್ಜಾಗಿದೆ.

Best Mobiles in India

English summary
Vivo has revealed the upcoming Vivo Y400 Pro 5G in India through a teaser video. Additionally, the company has created a landing page on its Indian website that showcases the rear design of the new device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+