ಕೂಡಲೇ ವಾಟ್ಸ್ಆಪ್ ಅಪ್‌ಡೇಟ್ ಮಾಡಲು ಕೇಂದ್ರ ಸರ್ಕಾರ ಸೂಚನೆ!..ಏಕೆ ಗೊತ್ತಾ?


ದೇಶದಲ್ಲೇ ಅತಿಹೆಚ್ಚು ಬಳಕೆಯಾಗುತ್ತಿರುವ ಮೆಸೇಜಿಂಗ್ ಆಪ್ ವಾಟ್ಸ್ಆಪ್ ಅನ್ನು ಈ ಕೂಡಲೇ ಅಪ್‌ಡೇಟ್ ಮಾಡಿ ಎಂದು ಕೇಂದ್ರ ಸರ್ಕಾರದ ಅಧೀನದ 'ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್-ಇಂಡಿಯಾ' (ಸಿಇಆರ್‌ಟಿ-ಇನ್‌) ಎಚ್ಚರಿಕೆ ನೀಡಿದೆ. ಇತ್ತೀಚಿಗಷ್ಟೇ ವಾಟ್ಸ್ಆಪ್ ಮತ್ತೂಮ್ಮೆ ವೈರಸ್‌ ದಾಳಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ, ವಾಟ್ಸ್ಆಪ್‌ನ ಎಲ್ಲಾ ಗ್ರಾಹಕರೂ ಕೂಡಲೇ ವಾಟ್ಸ್ಆಪ್ ಅನ್ನು ಅಪ್‌ಗ್ರೇಡ್‌ ಮಾಡಿಕೊಳ್ಳುವಂತೆ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್-ಇಂಡಿಯಾ' (ಸಿಇಆರ್ಟಿ-ಇನ್‌) ತಿಳಿಸಿದೆ.

Advertisement

ವಾಟ್ಸ್ ಆಪ್‌ ಬಳಸುವ ಎಲ್ಲಾ ಗ್ರಾಹಕರ ಮೊಬೈಲಿಗೆ ಬರುತ್ತಿರುವ ಎಂಪಿ 4 ಮಾದರಿಯ ವಿಡಿಯೋ ಕ್ಲಿಪಿಂಗ್ ಒಂದರ ಮೂಲಕ ಅಜ್ಞಾತ ಸ್ಥಳದಲ್ಲಿರುವ ಹ್ಯಾಕರ್‌ಗಳು, ವೈರಸ್‌ಗಳನ್ನು ಹರಿಬಿಡುತ್ತಿದ್ದಾರೆಂದು ವಾಟ್ಸ್ಆಪ್ ಸಂಸ್ಥೆ ಎಚ್ಚರಿಸಿತ್ತು. ಇದರಿಂದ ಎಚ್ಚೆತ್ತಿರುವ ಆನ್‌ಲೈನ್‌ ಮೂಲಕ ಆಗುವ ಹ್ಯಾಕಿಂಗ್‌, ಫಿಶಿಂಗ್ ಮುಂತಾದ ಅಪಾಯಗಳನ್ನು ನಿಭಾಯಿಸುವ ನೋಡಲ್ ಸಂಸ್ಥೆ ಸಿಇಆರ್ಟಿ-ಇನ್‌, ದೇಶದಾದ್ಯಂತ ಜನರು ಸುರಕ್ಷಿತವಾಗುರುವ ಸಲುವಾಗಿ ವಾಟ್ಸ್ಆಪ್ ಅನ್ನು ಈ ಕೂಡಲೇ ಅಪ್‌ಡೇಟ್ ಮಾಡಿ ಎಂದು ತಿಳಿಸಿದೆ.

Advertisement

ವಾಟ್ಸ್​​ಆಪ್​​​​​​​​ನಲ್ಲಿ ಎಂಡ್​ ಟು ಎಂಡ್​ ಎನ್ಕ್ರಿಪ್ಷನ್ ಸೆಕ್ಯುರಿಟಿ​ ಇರುವುದರಿಂದ ಮಾಹಿತಿಯನ್ನು ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹಲವರು ತಿಳಿಸದಿದ್ದಾರೆ. ಆದರೆ, ವಾಟ್ಸ್ಆಪ್‌ನ ಸೆಕ್ಯುರಿಟಿ ಪ್ಯಾಚ್ ಮಾಡದ ಆವೃತ್ತಿಗಳು ಅಸುರಕ್ಷಿತವಾಗಿ ಉಳಿಯುತ್ತವೆ. ಇಂಟರ್ನೆಟ್ ಪ್ರೊಟೊಕಾಲ್ ಮೇಲೆ ವಾಟ್ಸ್ಆಪ್‌ನ ವಾಯ್ಸ್‌ಕಾಲ್‌ನಲ್ಲಿ ದುರ್ಬಲತೆ ಕಂಡುಬಂದಿರುವುದು ಸ್ಪಷ್ಟವಾಗಿದೆ. ಇದರಿಂದ ವಾಟ್ಸ್ಆಪ್ ಅಪ್ ಅನ್ನು ಅಪ್‌ಡೇಟ್ ಮಾಡದಿದ್ದರೆ ಬಳಕೆದಾರರು ಭಾರೀ ದಂಡ ತೆರಬೇಕಾಗುತ್ತದೆ ಎಂದು ಇತ್ತೀಚಿನ ಹಲವು ವರದಿಗಳು ಹೇಳಿದೆ.

ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಮಾಹಿತಿಯನ್ನು ಸಂಗ್ರಹಿಸಲು ಬಳಸಲಾಗುವ ಸಾಫ್ಟ್‌ವೇರ್ ಅನ್ನು ಸ್ಪೈವೇರ್ ಎಂದು ಕರೆಯಲಾಗುತ್ತದೆ. ಆನ್‌ಲೈನ್ ಮೂಲಕ ಮೊಬೈಲ್ ಅಥವಾ ಯಾವುದೋ ಒಂದು ಆಪ್ ಸಹಾಯದಿಂದ ಬಳಕೆದಾರರಿಗೆ ಅವರಿಗೆ ತಿಳಿಯದಂತೆಯೇ ಹ್ಯಾಕ್ ಮಾಡುವ ತಂತ್ರಾಂಶವನ್ನೇ ಸ್ಪೈವೇರ್ ಎಂದು ನಾವು ಸುಲಭವಾಗಿ ತಿಳಿಯಬಹುದು. ಇವುಗಳು ಮೊಬೈಲ್ ಅಥವಾ ಆಪ್‌ಗಳಿಂದ ಬಳಕೆದಾರರ ಸಮ್ಮತಿ ಇಲ್ಲದೆ ಅವರ ಮಾಹಿತಿ, ಕುಕ್ಕೀಸ್​​ ಅಥವಾ ಇತರ ಎಲ್ಲಾ ಮಾಹಿತಿಗಳನ್ನು ಕದ್ದು ತನ್ನ ಮಾಲಿಕನಿಗೆ ಕಳುಹಿಸುತ್ತವೆ.

ಈ ಸ್ಪೈವೇರ್ ಮೂಲಕ ಸ್ಮಾರ್ಟ್​​ಫೋನ್​​ಗಳನ್ನು ಹ್ಯಾಕ್ ಮಾಡಿ, ಅವರ ಮೊಬೈಲ್ ಕ್ಯಾಮೆರಾಗಳನ್ನು ಕಂಟ್ರೋಲ್​ಗೆ ತೆಗೆದುಕೊಳ್ಳಬಹುದಾಗಿದೆ. ಈ ಸ್ಪೈವೇರ್ ವಾಟ್ಸ್ಆಪ್ ಅನ್ನು ಒಂದು ರೀತಿಯಲ್ಲಿ ಬಳಕೆದಾರರ ಕಣ್ಗಾವಲಿಗೆ ಬಳಸೋ ಪುಟಾಣಿ ಸಾಧನಗಳನ್ನಾಗಿ ಮಾಡಿಬಿಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ವಾಟ್ಸ್​​ಆಪ್ ಸಂಸ್ಥೆ ನೂತನ​ ಅಪ್​ಡೇಟ್​​ ಬಿಡುಗಡೆ ಮಾಡಿ. ಬಳಕೆದಾರರು ಸ್ಪೈವೇರ್​​ನಿಂದ ರಕ್ಷಣೆ ಪಡೆಯಲು ಕೂಡಲೇ ಲೇಟೆಸ್ಟ್​​ ವರ್ಷನ್​ಗೆ ​​ಆಪ್‌ಗೆ​​ ಅಪ್​ಡೇಟ್​ ಮಾಡುವುದು ಒಳ್ಳೆಯದು.

Best Mobiles in India

English Summary

ದೇಶದಲ್ಲೇ ಅತಿಹೆಚ್ಚು ಬಳಕೆಯಾಗುತ್ತಿರುವ ಮೆಸೇಜಿಂಗ್ ಆಪ್ ವಾಟ್ಸ್ಆಪ್ ಅನ್ನು ಈ ಕೂಡಲೇ ಅಪ್‌ಡೇಟ್ ಮಾಡಿ ಎಂದು ಕೇಂದ್ರ ಸರ್ಕಾರದ ಅಧೀನದ ‘ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್-ಇಂಡಿಯಾ' (ಸಿಇಆರ್‌ಟಿ-ಇನ್‌) ಎಚ್ಚರಿಕೆ ನೀಡಿದೆ. ಇತ್ತೀಚಿಗಷ್ಟೇ ವಾಟ್ಸ್ಆಪ್ ಮತ್ತೂಮ್ಮೆ ವೈರಸ್‌ ದಾಳಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ, ವಾಟ್ಸ್ಆಪ್‌ನ ಎಲ್ಲಾ ಗ್ರಾಹಕರೂ ಕೂಡಲೇ ವಾಟ್ಸ್ಆಪ್ ಅನ್ನು ಅಪ್‌ಗ್ರೇಡ್‌ ಮಾಡಿಕೊಳ್ಳುವಂತೆ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್-ಇಂಡಿಯಾ' (ಸಿಇಆರ್ಟಿ-ಇನ್‌) ತಿಳಿಸಿದೆ.