ಬರ್ತಿದೆ WiFi 6..! ಮುಂದಿನ ವರ್ಷದಿಂದ ಸಿಗಲಿದೆ ರಾಕೆಟ್ ವೇಗದ ಇಂಟರ್‌ನೆಟ್‌..!


ವೇಗದ ಜಗತ್ತು ಮುಂದುವರೆದಂತೆಲ್ಲಾ ಸಾಧನಗಳು ಮತ್ತು ತಂತ್ರಜ್ಞಾನವೂ ವೇಗವಾಗಬೇಕಿದೆ. ಅದರಂತೆ, ಇಂಟರ್‌ನೆಟ್‌ ಜಗತ್ತಿನಲ್ಲೂ ಬದಲಾವಣೆಗಳಾಗುತ್ತಿವೆ. 2G ಬಳಸುತ್ತಿದ್ದವರಿಗೆ, 3G ಬಂತು, 3G ನಂತರ ಈಗ 4G ಬಳಸುತ್ತಿದ್ದೇವೆ. ಮುಂದಿನ ವರ್ಷ 5Gಗೂ ಮುಂದುವರೆಯುತ್ತಿದ್ದೇವೆ. ಹೀಗೆ ತಂತ್ರಜ್ಞಾನ ಜಗತ್ತಿನ ಬದಲಾವಣೆಗೆ ತಕ್ಕಂತೆ ವೇಗವೂ ಬದಲಾಗುತ್ತಿದೆ. ಬದಲಾವಣೆಯಲ್ಲಿ ಈಗ ವೈಫೈ ಸರದಿ.

Advertisement

ಹೌದು, ವೈಫೈ ಅಲಾಯನ್ಸ್‌ ವೈಫೈ ಸ್ಟ್ಯಾಂಡರ್ಡ್‌ಗಳನ್ನು ರಿ ಬ್ರಾಂಡ್‌ ಮಾಡುತ್ತಿದ್ದು, WiFi 3 ಯಿಂದ WiFi 6ವರೆಗೂ ರಿಬ್ರಾಂಡಿಂಗ್ ಮಾಡಿದೆ. ಸದ್ಯ ನಾವೂ WiFi 5ನ್ನು ಬಳಸುತ್ತಿದ್ದು, WiFi 6 ಇನ್ನು ಹೆಚ್ಚಿನ ವೇಗ ಹೊಂದಿರಲಿದೆ ಎಂದು WiFi ಅಲಾಯನ್ಸ್‌ ಹೇಳಿದೆ. ಸದ್ಯ ನಾವು ಬಳಸುತ್ತಿರುವ ವೈಫೈ ವೇಗಕ್ಕಿಂತ ದ್ವಿಗುಣ ವೇಗವನ್ನು WiFi 6 ನೀಡುತ್ತೆ ಎನ್ನಲಾಗಿದೆ. ಆಗಿದ್ರೆ WiFi 6 ಎಷ್ಟು ವೇಗ..? ಏನೇಲ್ಲಾ ವಿಶೇಷತೆ ಹೊಂದಿದೆ..? ಎಂಬುದನ್ನು ಮುಂದೆ ನೋಡಿ.

Advertisement

ಸ್ಟ್ಯಾಂಡರ್ಡ್‌ಗಳಿಗೆ ರಿಬ್ರಾಂಡಿಂಗ್‌

WiFi ಅಲಾಯನ್ಸ್‌ ವೈಫೈ ಸ್ಟ್ಯಾಂಡರ್ಡ್‌ಗಳನ್ನು ರಿಬ್ರಾಂಡ್‌ಗೊಳಿಸುತ್ತಿದ್ದು, WiFI 3, WiFi 4 ಎಂದು ರಿಬ್ರಾಂಡ್‌ ಮಾಡಿದೆ. ಅದರಂತೆ ನಾವೀಗ ಬಳಸುತ್ತಿರುವ ವೈಫೈ ಸ್ಟ್ಯಾಂಡರ್ಡ್‌ 802.11ac ಯನ್ನು WiFi 5 ಎಂದು ಕರೆದಿದೆ. ಹಾಗೂ ಇದರ ಮುಂದಿನ ವೈಫೈ ಸ್ಟ್ಯಾಂಡರ್ಡ್‌ 802.11ax ಯನ್ನು WiFi 6 ಎಂದು ರಿಬ್ರಾಂಡ್‌ ಮಾಡಿದೆ.

ಡಿವೈಸ್‌ ಖರೀದಿಗೆ ಸಹಕಾರಿ

ವೈಫೈ ಅಲಾಯನ್ಸ್‌ ವೈಪೈ ಸ್ಟ್ಯಾಂಡರ್ಡ್‌ಗಳನ್ನು ರಿಬ್ರಾಂಡಿಂಗ್‌ ಮಾಡಿರುವ ಉದ್ದೇಶವೇನೆಂದರೆ ವೈಫೈ ರೂಟರ್‌ ಅಥವಾ ವೈಫೈ ಡಿವೈಸ್‌ ಖರೀದಿಸುವಾಗ ಬಳಕೆದಾರರು ಅಪ್‌ಡೇಟ್‌ ಆಗಿರುವುದನ್ನು ತಿಳಿದುಕೊಳ್ಳಲು ವೈಫೈ ಸ್ಟ್ಯಾಂಡರ್ಡ್‌ ರಿಬ್ರಾಂಡಿಂಗ್‌ ಹೆಚ್ಚು ಸಹಕಾರಿಯಾಗುತ್ತದೆಯಂತೆ.

How to recharge your Bangalore Metro card online - KANNADA
ಮಾರ್ಕೆಟಿಂಗ್‌ ಮಾಡಲು ಸುಲಭ

ವೈಫೈ ಅಲಾಯನ್ಸ್‌ ವೈರ್‌ಲೆಸ್‌ ನೆಟ್‌ವರ್ಕಿಂಗ್‌ಗೆ ಹೊಸ ದಾರಿ ತೋರಿಸಲು ಮುಂದಾಗಿದೆ. ವೈಫೈ ಸ್ಟ್ಯಾಂಡರ್ಡ್‌ ರಿಬ್ರಾಂಡಿಂಗ್‌ನಿಂದ ಡಿವೈಸ್‌ ಅಥವಾ ರೂಟರ್‌ ಉತ್ಪಾದಕರಿಗೆ, ಆಪರೇಟರ್‌ಗಳಿಗೆ ಮಾರ್ಕೆಟಿಂಗ್‌ ಮಾಡಲು ಬಹಳಷ್ಟು ಸುಲಭವಾಗಲಿದೆ ಎಂಬುದು ವೈಫೈ ಅಲಾಯನ್ಸ್‌ನ ಅಭಿಪ್ರಾಯವಾಗಿದೆ. ಅದಲ್ಲದೇ WiFi 5ನಂತೆ WiFi 6ಗೆ ಯಾವುದೇ ಪ್ರತ್ಯೇಕ ಆಂಟೇನಾ ಅಳವಡಿಸುವ ಅವಶ್ಯಕತೆ ಇಲ್ಲ ಎಂದಿದೆ.

WiFi 6ನ ವೇಗ ಎಷ್ಟು ಗೊತ್ತಾ..?

ಮುಂದಿನ ವರ್ಷ ಬಿಡುಗಡೆಯಾಗುವ WiFi 6 2.4GHz ಮತ್ತು 5GHz ಬ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಹೀಗಾಗಲೇ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು, WiFi 6 ಅನೇಕ ಡಿವೈಸ್‌ಗಳಲ್ಲಿ 11Gbps ವೇಗದೊಂದಿಗೆ ಕಾರ್ಯನಿರ್ವಹಿಸಿದೆ ಎಂದು ವೈಫೈ ಅಲಾಯನ್ಸ್‌ ಹೇಳಿದೆ.

ವೈಫೈ ಅಲಾಯನ್ಸ್‌ಗೆ ಖುಷಿ

ವೈಫೈ ಅಲಾಯನ್ಸ್‌ನ ಸಿಇಒ ಎಡ್ಗರ್‌ ಫಿಗ್ಯುಎರೋ ಹೇಳುವಂತೆ WiFi 6 ಪರಿಚಯಿಸುತ್ತಿರುವುದು ಮತ್ತು ಹೊಸ ಹೆಸರುಗಳ ಸ್ಕೀಂ ತರುತ್ತಿರುವುದು ಬಹಳ ಖುಷಿ ತಂದಿದೆ. ಇದರಿಂದ ಉದ್ಯಮ ಹಾಗೂ ವೈಫೈ ಬಳಕೆದಾರರಿಗೆ ವೈಫೈ ಜನರೇಶನ್‌ಗಳು ಬೇಗ ಅರ್ಥವಾಗುತ್ತವೆ ಎಂದು ಹೇಳಿದ್ದಾರೆ.

2019ರಿಂದ ಬಳಕೆಗೆ

ಹೊಸ ವರ್ಗಗಳನ್ನು WiFi Ecosystem ಎಂದು ಎಲ್ಲಾ ಕಡೆ ಬಳಸಲು ಕಂಪನಿ ಉತ್ಸುಕವಾಗಿದೆ. ಅದಲ್ಲದೇ ವೈಫೈನ ಆರಂಭಿಕ ಸ್ಟ್ಯಾಂಡರ್ಡ್‌ಗಳಾದ 802.11a, 802.11b ಮತ್ತು 802.11g ಗೆ WiFi 1 ರಿಂದ 3 ಎಂದು ಹೆಸರು ನೀಡಿಲ್ಲ. ಅವುಗಳನ್ನು ಅದೇ ರೀತಿ ಗುರುತಿಸಬೇಕಾಗಿದೆ. ಹೊಸ ಹೆಸರಿನ ವ್ಯವಸ್ಥೆ 2019ರಿಂದ ಪ್ರಾರಂಭವಾಗುತ್ತದೆ ಎಂದು ವೈಫೈ ಅಲಾಯನ್ಸ್‌ ಹೇಳಿದೆ.

Best Mobiles in India

English Summary

WiFi 6 is coming: Here is how it works, speed and other details. To know more this visit kannada.gizbot.com