ಶಿಯೋಮಿಯ ಸಬ್‌ಬ್ರ್ಯಾಂಡ್‌ ಪೊಕೊ ಇನ್ಮುಂದೆ ಸ್ವತಂತ್ರ ಕಂಪೆನಿ!


ಮಾರುಕಟ್ಟೆಯಲ್ಲಿ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ 2018 ರಲ್ಲಿ ಶಿಯೋಮಿ ಕಂಪೆನಿ ಪೊಕೊ ಅನ್ನುವ ಸಬ್‌-ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ ಅನ್ನು ಪರಿಚಯಿಸಿತ್ತು. ಅಷ್ಟೇ ಅಲ್ಲ ಪ್ರಮುಖ ಗೇಮರ್‌ ಸ್ಮಾರ್ಟ್‌ಫೋನ್‌ ಆಗಿಯೂ ಪೊಕೊ ಗಮನಸೆಳೆದಿತ್ತು. ಆದರೆ ಇನ್ಮುಂದೆ ಪೊಕೊ ಕಂಪೆನಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದ್ದು, ತನ್ನದೇ ಆದ ಸ್ಮಾರ್ಟ್‌ಫೋನ್‌ಗಳನ್ನ ಪೊಕೊ ಹೊರತರಲಿದ ಎಂದು ಹೇಳಲಾಗ್ತಿದೆ.

ಹೌದು ಅಲ್ಪಾವಧಿಯಲ್ಲಿಯೇ ಪ್ರಮುಖ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿದ್ದ ಪೊಕೊ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಇನ್ಮುಂದೆ ಶಿಯೋಮಿ ಕಂಪೆನಿಯ ಸಬ್‌ಬ್ರ್ಯಾಂಡ್‌ ಆಗಿರುವುದಿಲ್ಲ. ಬದಲಿಗೆ ತನ್ನದೇ ಆದ ಗುರುತನ್ನು ಹೊಂದಲಿದೆ ಎಂದು ಭಾರತದಲ್ಲಿನ ಶಿಯೋಮಿಯ ಮುಖ್ಯಸ್ಥ ಕುಮಾರ್‌ ಜೈನ್ ಹೇಳಿದ್ದಾರೆ. ಇನ್ನು ಈಗಾಗ್ಲೆ ಶಿಯೋಮಿ ಬ್ರಾಂಡ್‌ ನ ಅಡಿಯಲ್ಲಿ ಲಾಂಚ್‌ ಆಗಿರುವ POCO F1 ಅತ್ಯಂತ ಜನಪ್ರಿಯ ಫೋನ್ ಆಗಿದ್ದು, ಈಗ ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸಲು ಪೊಕೊಗೆ ಉತ್ತಮ ಸಮಯ ಇದಾಗಿದೆ, ಹೀಗಾಗಿ ಪೊಕೊ ಸ್ವತಂತ್ರ ಬ್ರ್ಯಾಂಡ್‌ ಆಗಿ ಹೊರಹೊಮ್ಮುತ್ತದೆ, ಅಂತಾ ಹೇಳಿದ್ದಾರೆ.

ಈ ಹಿಂದೆ ಒನ್‌ಪ್ಲಸ್ ಮತ್ತು ಸ್ಯಾಮ್‌ಸಂಗ್‌ನ ಪ್ರಮುಖ ಸ್ಮಾರ್ಟ್‌ಫೋನ್‌ಗಳೊಂದಿಗೆ ನೇರವಾಗಿ ಸ್ಪರ್ಧಿಸುವುದಕ್ಕಾಗಿ ಉನ್ನತ-ಮಟ್ಟದ, ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸಲು ಶಿಯೋಮಿ ಪೊಕೊ ಬ್ರ್ಯಾಂಡ್‌ ಅನ್ನು ಪ್ರಾರಂಭ ಮಾಡಿತ್ತು. ಅಷ್ಟೇ ಅಲ್ಲ ಪೊಕೊ ಬ್ರ್ಯಾಂಡ್‌ನ ಫೋನ್‌ಗಳು ಯಶಸ್ವಿ ಕೂಡ ಆಗಿತ್ತು. ಆದರೂ ಸಹ ಪೊಕೊ ಸ್ಮಾರ್ಟ್‌ಫೋನ್‌ಗಳನ್ನ ಶಿಯೋಮಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡಿಲ್ಲ ಅನ್ನೊದು ಕೂಡ ವಾಸ್ತವ.

ಅಲ್ಲದೆ ಇದೇ ಸಂದರ್ಭದಲ್ಲಿ ಕಡಿಮೆ-ಮಟ್ಟದ ಮತ್ತು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸುವ ಶಿಯೋಮಿ ಸ್ವತಃ ಕೆ 20 ಪ್ರೊನಂತಹ ಹಲವಾರು ಉನ್ನತ-ಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತು. ಈಗಾಗ್ಲೆ ಮಾರುಕಟ್ಟೆಯಲ್ಲಿ ಶಿಯೋಮಿ ಬ್ರಾಂಡ್‌ ಸೃಷ್ಟಿಸಿಕೊಂಡಿರುವುದರಿಂದ ಪೊಕೊ ಬ್ರ್ಯಾಂಡ್‌ ಅನ್ನ ಪ್ರತ್ಯೆಕಿಸುತ್ತಿದೆ ಎಂದು ಹೇಳಲಾಗ್ತಿದೆ. ಇನ್ನು 2020 ರಲ್ಲಿ 'ಮಿ' ಬಳಕೆದಾರರ ಆಸಕ್ತಿಯನ್ನ ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ 'ಮಿ' ಲೈನ್‌ಅಪ್‌ನಿಂದ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ತರಲು ನಾವು ಉದ್ದೇಶಿಸಿದ್ದೇವೆ ಅಂತಾ ಶಿಯೋಮಿಯ ಭಾರತದ ಹೆಡ್‌ ಆಪ್‌ ದಿ ಕೆಟಗರಿಸ್‌ ಆಗಿರುವ ರಘು ರೆಡ್ಡಿ ಹೇಳಿದ್ದಾರೆ.

ಇನ್ನು ಚೀನಾದ ಸ್ಮಾರ್ಟ್‌ಫೋನ್ ತಯಾರಕರು ಇತ್ತೀಚಿನ ವರ್ಷಗಳಲ್ಲಿ ತಮ್ಮ ಕಂಪನಿಯ ಬ್ರ್ಯಾಂಡ್‌ ಇಮೇಜ್‌ನಿಂದ ವಿಮುಖವಾಗುವ ಹ್ಯಾಂಡ್‌ಸೆಟ್‌ಗಳನ್ನು ಪ್ರಾರಂಭಿಸಲು ಪ್ರಾರಂಭಿಸಿದ್ದಾರೆ. ಶಿಯೋಮಿ ಇದೀಗ ಸ್ವತಃ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸಲು ಪ್ರಾರಂಭಿಸಿರುವುದರಿಂದ ಪೊಕೊ ಸ್ವತತ್ರವಾದರೆ ಉತ್ತಮ ಮಾರ್ಕೆಟಿಂಗ್‌ ಮಾಡಬಹುದು ಅನ್ನೊದನ್ನ ಶಿಯೊಮಿ ಕಂಪೆನಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದಲ್ಲದೆ ಶಿಯೋಮಿ ಕಂಪೆನಿಯು ಸ್ಮಾರ್ಟ್‌ಫೋನ್ ವ್ಯವಹಾರ ಆದಾಯದಲ್ಲಿ ಕಳೆದ ವರ್ಷ ಕ್ಯೂ 3 ರಲ್ಲಿ 32.3 ಬಿಲಿಯನ್ ಯುವಾನ್ (6 4.6 ಬಿಲಿಯನ್) ಆಗಿದ್ದು, ಇದು ವರ್ಷಕ್ಕಿಂತ 7.8% ರಷ್ಟು ಕಡಿಮೆಯಾಗಿದೆ. ಈ ಅವಧಿಯಲ್ಲಿ 32.1 ಮಿಲಿಯನ್ ಸ್ಮಾರ್ಟ್‌ಫೋನ್ ಘಟಕಗಳನ್ನು ರವಾನಿಸಿದೆ. ಆದರೂ ಈ ಅವಧಿಯಲ್ಲಿ ಆದಾಯದಲ್ಲಿ ಕಡಿತಗೊಂಡಿರುವುದರಿಂದ ಇದು ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿಯ ಬ್ರ್ಯಾಂಡ್‌ ಕುಸಿತ ಎಂದೇ ವಿಶ್ಲೇಷಿಸಲಾಗ್ತಿದೆ. ಈ ಎಲ್ಲಾ ಕಾರಣದಿಂದಾ ಪೊಕೊ ಬ್ರ್ಯಾಂಡ್‌ ಅನ್ನ ಶಿಯೋಮಿ ಸ್ವತಂತ್ರಗೊಳಿಸಿದೆ ಅಂತಾ ಹೇಳಲಾಗ್ತಿದೆ.

Most Read Articles
Best Mobiles in India
Read More About: xiaomi poco smartphone price

Have a great day!
Read more...

English Summary

The move comes months after a top POCO executive — Jai Mani, a former Googler — and some other founding and core members left the sub-brand. The company today insisted that POCO F1, the only smartphone to be launched under the POCO brand, remains a “successful” handset. The POCO F1, a $300 smartphone, was launched in 50 markets.