ಪ್ರವಾಸದ ಸವಿ ಹೆಚ್ಚಿಸಲು 10 ಬೆಸ್ಟ್ ಟ್ರಾವೆಲಿಂಗ್ ಆ್ಯಪ್ಸ್..!

By Avinash
|

ಪ್ರವಾಸ, ಊರೂರು ತಿರುಗಾಡೊದಂದ್ರೆ ಯಾರಿಗ್ ತಾನೇ ಇಷ್ಟ ಇಲ್ಲ. ಆದರೆ, ಜೇಬಲ್ಲೊಂದಿಷ್ಟು ಕಾಸು, ಸ್ವಲ್ಪ ಮಾರ್ಗದರ್ಶನ ಇದ್ರೇ ದೇಶ ಸುತ್ತಿ ಕೋಶ ಓದಿ ಬರಬಹುದು. ನಿಸರ್ಗದ ಸವಿ ಸವಿಬಹುದು, ಚಾರಣದ ಮಜಾ ಅನುಭವಿಸಬಹುದು, ವೈವಿಧ್ಯತೆಯಲ್ಲಿ ಏಕತೆ ಕಾಣಬಹುದು, ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು. ಆದರೆ, ಇಷ್ಟೆಲ್ಲ ಮಾಡೋದಕ್ಕೂ ದುಡ್ಡು ಮತ್ತು ಗೈಡ್ ಬೇಕಲ್ವಾ, ಕಾಸಿನ ವ್ಯವಸ್ಥೆ ನೀವ್ ಮಾಡ್ಕೋಳ್ಳಿ, ಗೈಡ್ ಸಮಸ್ಯೆ ನಾವ್ ಬಗೆಹರಿಸ್ತಿವಿ.

ಪ್ರವಾಸದ ಸವಿ ಹೆಚ್ಚಿಸಲು 10 ಬೆಸ್ಟ್ ಟ್ರಾವೆಲಿಂಗ್ ಆ್ಯಪ್ಸ್..!

ಹೌದು, ಅಂಗೈಯಲ್ಲಿ ಜಗತ್ತನ್ನೇ ನೋಡುವ ಕಾಲದಲ್ಲಿ ನಿಮ್ಮ ಪ್ರವಾಸ ಮತ್ತು ತಿರುಗಾಟದ ಕಲ್ಪನೆಗೆ ಬಣ್ಣ ಹಚ್ಚಿ ರೆಕ್ಕೆ ಕಟ್ಟಲು ಅನೇಕ ಆ್ಯಪ್ಸ್ ಮುಂದಾಗಿವೆ. ಯೆಸ್, ಗೂಗಲ್ ಮ್ಯಾಪ್ಸ್, ಟ್ರಿಪ್ ಅಡ್ವೈಸರ್, ಮೇಕ್ ಮೈ ಟ್ರಿಪ್ ನಂತಹ ಆ್ಯಪ್ಸ್ ನಾವೂ ಗೈಡ್ ಮಾಡ್ತೇವೆ ಎಂದು ಮುಂದೆ ಬಂದಿವೆ. ನಿಮ್ಮ ಪ್ರವಾಸವನ್ನು ಸರಳಗೊಳಿಸುವ 10 ಟ್ರಾವೆಲಿಂಗ್ ಆ್ಯಪ್ಸ್ ಪಟ್ಟಿ ಮಾಡಲಾಗಿದೆ. ಅವು ಯಾವುವು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

1. ಗೂಗಲ್ ಮ್ಯಾಪ್ಸ್ Google Maps

1. ಗೂಗಲ್ ಮ್ಯಾಪ್ಸ್ Google Maps

ಎಲ್ಲ ಸ್ಮಾರ್ಟ್ ಪೋನ್ ಗಳಲ್ಲಿ ಗೂಗಲ್ ಮ್ಯಾಪ್ಸ್ ಇದ್ದೇ ಇರುತ್ತೆ, ಜನರು ಬಹಳಷ್ಟು ಬಳಸುತ್ತಿರುವ ಆ್ಯಪ್ ಕೂಡ ಇದೇ ಆಗಿದೆ. ಪ್ರಪಂಚದ ಯಾವುದೇ ಸ್ಥಳವನ್ನು ಅಂಗೈಯಲ್ಲಿ ತೋರಿಸುತ್ತೆ. ಯಾವುದೇ ಸ್ಥಳದ ಸಾರಿಗೆ ವ್ಯವಸ್ಥೆ, ರೂಟ್, ಹೋಟೆಲ್, ಮೂವಿ ಥಿಯೇಟರ್, ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಿರುವ ಗೂಗಲ್ ಮ್ಯಾಪ್ಸ್ ಕಳೆದ ದಶಕದಿಂದ ಜನರ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಆನ್ ಲೈವ್ ಟ್ರಾಫಿಕ್ ಬಗ್ಗೆಯೂ ಮಾಹಿತಿ ನೀಡುತ್ತಿದ್ದು ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.

2. ಟ್ರಿಪ್ ಅಡ್ವೇಸರ್ Trip Advisor

2. ಟ್ರಿಪ್ ಅಡ್ವೇಸರ್ Trip Advisor

ಟ್ರಿಪ್ ಅಡ್ವೈಸರ್ ಹೆಸರನ್ನು ಕೇಳದವರಿಲ್ಲ ಅನ್ನಬಹುದು. ಈ ಆ್ಯಪ್ ಆಲ್ ಇನ್ ಒನ್ ಆಗಿದ್ದು, ಯಾವುದೇ ಸ್ಥಳದ ಬಗ್ಗೆ ಇತ್ತೀಚಿನ ಮಾಹಿತಿ, ರಿವ್ಯೂವ್ ನೀಡುತ್ತದೆ. ವಿಮಾನ ಬುಕ್ಕಿಂಗ್, ಬಸ್ ಬುಕ್ಕಿಂಗ್, ಹೋಟೆಲ್, ಜನಪ್ರಿಯ ಪ್ರವಾಸಿ ತಾಣಗಳ ಕುರಿತು ಟ್ರಿಪ್ ಅಡ್ವೈಸರ್ ಮಾಹಿತಿ ನೀಡುತ್ತದೆ. ಜಸ್ಟ್ ಲಾಗಿನ್ ಆಗಿ ಐಡಿ ಕ್ರಿಯೇಟ್ ಮಾಡಿಕೊಂಡ್ಬಿಟ್ರೇ ನಿಮಗೆ ಇಷ್ಟವಾದ ತಾಣಗಳನ್ನು ಸುತ್ತಬಹುದು.

3. ಲೊನ್ಲಿ ಪ್ಲಾನೆಟ್ Lonely Planet

3. ಲೊನ್ಲಿ ಪ್ಲಾನೆಟ್ Lonely Planet

ಭಾರತದ ಪ್ರಮುಖ ಟ್ರಾವೆಲ್ ಆ್ಯಪ್ ಇದಾಗಿದ್ದು, ಪ್ರವಾಸಿ ಸ್ಥಳದ ಮ್ಯಾಪ್ಸ್, ಟೆಕ್ಸ್ಟ್ ಮತ್ತು ವಿಡಿಯೋಗಳನ್ನು ಆಫ್ ಲೈನ್ ನಲ್ಲಿ ನೀಡುತ್ತಿರುವುದ ವಿಶೇಷ.. ವರ್ಲ್ಡ್ ಟ್ರಾವೆಲ್ ಗೈಡ್ ಅನ್ನು ಲೊನ್ಲಿ ಪ್ಲಾನೆಟ್ ಅಳವಡಿಸಿಕೊಂಡಿದ್ದು, ಪ್ರವಾಸದ ಆಸಕ್ತಿ ಇರುವವರಿಗೆ ಸ್ಥಳದ ಕುರಿತು ಸಂಪೂರ್ಣ ಮಾಹಿತಿ ನೀಡುವುದರಲ್ಲಿ ಬೆಸ್ಟ್ ಆಗಿದೆ.

4. ವೀ ಟ್ರಾವೆಲ್ ಸೊಲೊ We Travel Solo

4. ವೀ ಟ್ರಾವೆಲ್ ಸೊಲೊ We Travel Solo

ಪ್ರವಾಸ ಎನ್ನುವುದು ಕೇವಲ ಸಾಹಸ, ಸವಾಲಾಗಿದೆ. ನೀವು ಒಬ್ರೇ ಪ್ರವಾಸ ಕೈಗೊಳ್ಳುವಾಗ ನಿಮಗೆ ಉತ್ತಮ ಆಯ್ಕೆ ವೀ ಟ್ರಾವೆಲ್ ಸೊಲೊ. ನಿಮ್ಮ ಸ್ಮಾರ್ಟ್ ಪೋನ್ ನಲ್ಲಿ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡರೆ ಹೊಸ ಜನರನ್ನು ಭೇಟಿಯಾಗಬಹುದು. ಅದಲ್ಲದೇ ಪ್ರವಾಸಕ್ಕೋಸ್ಕರ ನೀವು ನಿಮ್ಮ ಸೌಲ್ ಮೆಟ್ ಹುಡುಕುವ, ಟ್ರಿಪ್ ಹೋಗುವ, ಪ್ರವಾಸದ ವಿಶಿಷ್ಟ ಐಡಿಯಾಗಳನ್ನು ಹಂಚಿಕೊಳ್ಳಲು ಆಯ್ಕೆ ನೀಡಿದೆ.

5. ಟ್ರಿಪಾಸೋ Triposo

5. ಟ್ರಿಪಾಸೋ Triposo

ಭಾರತದ ನಗರಗಳಲ್ಲಿ ಯಾವೆಲ್ಲ ಪ್ರವಾಸಿ ತಾಣಗಳಿವೆ ಎಂಬುದನ್ನು ಬೆರಳ ತುದಿಯಲ್ಲಿ ತೋರಿಸುತ್ತೆ. ಹವ್ಯಾಸಿ ಪ್ರವಾಸಿಗರ ಗೈಡ್ ಬುಕ್ ನಂತೆ ಇಂಡಿಯಾ ಟ್ರಾವೆಲ್ ಗೈಡ್ ಅನ್ನು ವ್ಯವಸ್ಥಿತವಾಗಿ ಟ್ರಿಪಾಸೋ ಮೂಲಕ ತರಲಾಗಿದೆ. ಯಾವುದೇ ಪ್ರವಾಸಿ ಸ್ಥಳದ ಆಹಾರ, ಶಾಫಿಂಗ್, ರೂಟ್, ಹವಾಮಾನ ವರದಿ ಮತ್ತಿತರ ಮಾಹಿತಿಗಳನ್ನು ನೀಡುತ್ತದೆ. ಟ್ರಿಪಾಸೋ ಬೇರೆ ಬೇರೆ ದೇಶಗಳ ಕುರಿತು ಪ್ರತ್ಯೇಕ ಆ್ಯಪ್ಸ್ ಹೊಂದಿದೆ. ಮತ್ತು ವರ್ಲ್ಡ್ ಟ್ರಾವೆಲ್ ಗೈಡ್ ವೈಶಿಷ್ಟ್ಯ ಹೊಂದಿದೆ.

6. ಮೆಕ್ ಮೈ ಟ್ರಿಪ್ Make My Trip

6. ಮೆಕ್ ಮೈ ಟ್ರಿಪ್ Make My Trip

ಮೆಕ್ ಮೈ ಟ್ರಿಪ್ ಭಾರತದ ಪ್ರಮುಖ ಟ್ರಾವೆಲ್ ಬುಕಿಂಗ್ ಆ್ಯಪ್ ಆಗಿದೆ. ಉತ್ತಮ ವಿಮಾನ, ಟ್ರೈನ್, ಬಸ್ ಟಿಕೆಟ್, ಹೊಟೆಲ್ ಬುಕಿಂಗ್ ಆಯ್ಕೆ ಹೊಂದಿದೆ. ಆಫರ್ ಗಳು ಸಹ ಲಭ್ಯವಿರುವುದರಿಂದ ಬಜೆಟ್ ಯೋಚಿಸುವವರಿಗೆ ಉತ್ತಮ ಆಯ್ಕೆ. ಪ್ರಯಾಣದ ಕುರಿತ ಯಾವುದೇ ಅನುಮಾನಗಳಿಗೂ ಮೆಕ್ ಮೈ ಟ್ರಿಪ್ ಉತ್ತರಿಸುತ್ತಿದ್ದು, ಗ್ರಾಹಕ ಸ್ನೇಹಿಯಾಗಿದೆ.

7. ಟ್ರಿಪ್ ಗೇಟರ್ Tripgator

7. ಟ್ರಿಪ್ ಗೇಟರ್ Tripgator

ಟ್ರಿಪ್ ಗೇಟರ್ ಮತ್ತೊಂದು ಟ್ರಿಪ್ ಪ್ಲಾನರ್ ಆಗಿದ್ದು, ಭಾರತ ಸರ್ಕಾರದಿಂದ ಲಾಂಚ್ ಆಗಿದೆ. ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ನೀಡುತ್ತದೆ. ಆ್ಯಪ್ ನಲ್ಲಿ ಟ್ರಾವೆಲ್ ಸರ್ಚ್ ಇಂಜಿನ್ ಇದ್ದು, ಪ್ರವಾಸಿಗರಿಗೆ ತಮ್ಮ ಆಸಕ್ತಿ ಮತ್ತು ಬಜೆಟ್ ಗನುಗುಣವಾಗಿ ಮಾಹಿತಿ ನೀಡುತ್ತದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
8. ಟ್ರಾವೆಲ್ ಖಾನಾ TravelKhana

8. ಟ್ರಾವೆಲ್ ಖಾನಾ TravelKhana

ಬೆಸ್ಟ್ ಟ್ರಾವೆಲ್ ಆ್ಯಪ್ ಗಳಲ್ಲಿ ಟ್ರಾವೆಲ್ ಖಾನಾ ಹೊಂದಾಗಿದ್ದು, ಆಹಾರ ಪ್ರಿಯರಿಗಾಗಿಯೇ ರೈಲ್ವೇ ಆಹಾರ ಸೇವೆಯನ್ನು ನೀಡುತ್ತಿದೆ. 24 ಗಂಟೆ ಸೇವೆ ನೀಡುವ ಆ್ಯಪ್ ಗೆ ನಿಮ್ಮ PNR ನಂ ಹಾಕಿ, ಯಾವ ನಿಲ್ದಾಣದಲ್ಲಿ ಆಹಾರ ಬೇಕು ಎಂಬುದನ್ನು ನಮೂದಿಸಿ, ಮೆನುವಲ್ಲಿನ ನಿಮ್ಮ ನೆಚ್ಚಿನ ಆಯ್ಕೆಯನ್ನು ತಿಳಿಸಿದರೆ, ನಿಮ್ಮ ನಿಲ್ದಾಣದಲ್ಲಿ ಟ್ರಾವೆಲ್ ಖಾನಾದ ಆಹಾರ ಪೊಟ್ಟಣ ರೆಡಿಯಾಗಿರುತ್ತೆ.

9. ಆಡಿಯೋ ಕಂಪಾಸ್ AudioCompass

9. ಆಡಿಯೋ ಕಂಪಾಸ್ AudioCompass

ಭಾರತದ ಪ್ರವಾಸೋದ್ಯಮ ಮಂತ್ರಾಲಯ ಪ್ರಯಾಣವನ್ನು ಸರಳವಾಗಿಸಲು ಧ್ವನಿ ಮಾರ್ಗದರ್ಶನ ನೀಡುವ ಆಡಿಯೋ ಕಂಪಾಸ್ ಆ್ಯಪ್ ಬಿಡುಗಡೆಗೊಳಿಸಿದೆ. ಭಾರತದ ಹಲವಉ ಪ್ರವಾಸಿ ತಾಣಗಳ ಮಾಹಿತಿಯನ್ನು ಆಫ್ ಲೈನ್ ನಲ್ಲಿ ನೀಡುತ್ತಿದೆ. ವಿದೇಶಿಗರಿಗೆ ಹೇಳಿ ಮಾಡಿಸಿದಂತಿರುವ ಆ್ಯಪ್ ಆಗಿದೆ.

10. ಇನ್ ಕ್ರಿಡೆಬಲ್ ಇಂಡಿಯಾ Incredible India

10. ಇನ್ ಕ್ರಿಡೆಬಲ್ ಇಂಡಿಯಾ Incredible India

ಭಾರತದ ವೈವಿಧ್ಯತೆ ಮತ್ತು ಪ್ರವಾಸೋದ್ಯಮದ ಅನುಭವವನ್ನು ದವಿಯಲು ಭಾರತ ಸರ್ಕಾರ ಇನ್ ಕ್ರಿಡೆಬಲ್ ಇಂಡಿಯಾ ಆ್ಯಪ್ ಮೂಲಕ ಪ್ರವಾಸಿಗರಿಗೆ ಮಾಹಿತಿ ನೀಡುತ್ತಿದೆ. ಕರೆಂಟ್ ಲೋಕೆಷನ್ ನಿಂದ ಪ್ರವಾಸಿ ತಾಣಗಳಿಗೆ ಹೋಗುವ ರೂಟ್ ನೀಡುವುದಷ್ಟೇ ಅಲ್ಲದೇ, ಅನೇಕ ಮಾಹಿತಿಗಳನ್ನು ಪ್ರವಾಸಿಗರೊಂದಿಗೆ ಹಂಚಿಕೊಳ್ಳುತ್ತದೆ.

Best Mobiles in India

Read more about:
English summary
10 Best Travel Apps for Travelling in India. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X