ಗೂಗಲ್ ಅರ್ಥ್ ಮೂಲಕ ಪ್ರಪಂಚ ಸುತ್ತಿ..!
ಕೋಶ ಓದು ದೇಶ ಸುತ್ತು ಅನ್ನೋ ಮಾತೇ ಇದೆ. ಆದ್ರೆ ಪುಸ್ತಕವಾದರೂ ಓದಬಹುದು. ದೇಶ ಸುತ್ತೋಕೆ ಹಣ ಬೇಕಲ್ಲ ಅಂತ ಚಿಂತಿಸಬೇಡಿ. ನೀವೀಗ ಪ್ರಪಂಚ ಪರ್ಯಟನೆಯನ್ನು ಮನೆಯಲ್ಲೆ ಮಾಡಬಹುದು. ಅದ್ಹೇಗೆ ಗಣಪತಿ ಅಪ್ಪ ಅಮ್ಮನನ್ನು ಸುತ್ತಿ ಪ್ರಪಂಚ ಸುತ್ತಿದೆ ಎಂದು ಹೇಳೋಕೆ ಇದು ಕಲಿಯುಗ.

ಹೌದು. ನಾವು ಹೇಳುತ್ತಿರುವುದು ನಿಜ. ಪ್ರಪಂಚ ಪರ್ಯಟನೆ ಮಾಡಲು ಬೇಕಾಗಿರುವುದು ಕೇವಲ ನಿಮ್ಮ ಮೊಬೈಲ್ ಅಷ್ಟೆ. ನಿಮ್ಮ ಕೈಯಲ್ಲಿರುವ ಮೊಬೈಲ್ ಇಡೀ ವಿಶ್ವವನ್ನೆ ಗಿರಕಿ ಹೊಡೆಸುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿ ನಿಮಗೆ ಬೇಕಾಗಿರುವುದು ಗೂಗಲ್ ಅರ್ಥ್ ಅಷ್ಟೇ. ಅದ್ಹೇಗೆ ಎಂಬೆಲ್ಲಾ ವಿವರಗಳಿಗಾಗಿ ಈ ಲೇಖನ ಓದಿ.
ಗೂಗಲ್ ಅರ್ಥ್ ನಮಗೆ ಕರುಣಿಸುವ 10 ವೈಶಿಷ್ಟ್ಯತೆಗಳ ಬಗ್ಗೆ ನಾವಿಲ್ಲಿ ಪ್ರಸ್ತಾಪಿಸುತ್ತಿದ್ದೇವೆ.

1.
ಕೆಲವರಿಗೆ ಆಶ್ಚರ್ಯ ಆಗಬಹುದು. ಗೂಗಲ್ ಅರ್ಥ್ ನಿಮಗೆ ಹವಾಮಾನ ವರದಿಯನ್ನು ನೀಡುತ್ತದೆ. ಸ್ಯಾಟಲೈಟ್ ಚಿತ್ರಗಳನ್ನು ದೊರಕಿಸುತ್ತದೆ. ಹೀಗೆ ಹಲವು ವಿಶೇಷತೆಗಳನ್ನು ಇದು ಒಳಗೊಂಡಿದೆ.

2.
ತಾಜ್ ಮಹಲಿನ ಉತ್ತಮ ನೋಟವನ್ನು ಇದು ಕರುಣಿಸುತ್ತದೆ. ಗೂಗಲ್ ಅರ್ಥ್ ಈ ಭೂಮಿಯಲ್ಲಿರುವ ಯಾವುದನ್ನು ಬೇಕಿದ್ದರೂ ತೋರಿಸುತ್ತದೆ. ನಿಮ್ಮ ಮನೆಯಿಂದ ಹೊರಗೆ ಕಾಲಿಡದೆ ಪ್ರಪಂಚ ನೋಡಲು ಸಿಗುವ ಸದವಕಾಶ ಇದು.

3.
ಒಂದು ವೇಳೆ ನಿಮಗೆ ಬಹು ದೊಡ್ಡ ರೀಸರ್ಚ್ ಸ್ಕಿಲ್ ಇದ್ದಲ್ಲಿ ನಿಮ್ಮ ಇಷ್ಟದ ಸ್ಥಳವನ್ನು ಇಲ್ಲಿ ಹುಡುಕಾಡಬಹುದು. ಯಾವುದೋ ಚಲನಚಿತ್ರದಲ್ಲಿ ತೋರಿಸಿದ ಸ್ಥಳವನ್ನು ನೀವು ಗೂಗಲ್ ಅರ್ಥ್ ಮೂಲಕ ಹುಡುಕಾಡಬಹುದು.

4.
ನಿಮಗೆ ಆಶ್ಚರ್ಯ ಆಗಬಹುದು. ಗೂಗಲ್ ಅರ್ಥ್ ಬಿಲ್ಡಿಂಗ್, ಸ್ಟೇಡಿಯಂ ಇತ್ಯಾದಿಗಳನ್ನು 3 ಡೈಮೆನ್ಷನ್ ನಲ್ಲಿ ತೋರಿಸುತ್ತದೆ.

5.
ನಾವು ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿರುವ ವಿಶ್ವ ಪರ್ಯಟನೆಗೆ ಬಳಸಲಾಗುವ ಜಾಯ್ ಸ್ಟಿಕ್ ಬಳಕೆ ಮಾಡುವ ಸಾಮರ್ಥ್ಯ ವು ಗೂಗಲ್ ಅರ್ಥ್ ನ ಒಂದು ಬಹುಮುಖ್ಯ ವೈಶಿಷ್ಟ್ಯ ಗಳಲ್ಲಿ ಒಂದೆನಿಸಿದೆ.

6.
ಒಂದು ಎ ಸ್ಥಳದಿಂದ ಬಿ ಸ್ಥಳಕ್ಕೆ ತಲುಪಿ ಸಿ ಸ್ಥಳಕ್ಕೂ ತೆರಳಿ ಮತ್ತೆ ಪುನಃ ಎ ಸ್ಥಳಕ್ಕೆ ಬರುವುದು ಬಹಳ ಸುಲಭವಾಗುತ್ತದೆ.

7.
ಕಲ್ಪನೆಗೆ ಮೀರಿದ ಚಿತ್ರಣವನ್ನು ಗೂಗಲ್ ಅರ್ಥ್ ನಲ್ಲಿ ಕಾಣಬಹುದು. ಪೆರುವಿನ ಮರಳಿನ ದಿಬ್ಬದಲ್ಲಿ ಏಸುವಿನ ಚಿತ್ರಣ ಊಹಿಸಿಕೊಳ್ಳಿ. ಇಂತಹ ಕಲ್ಪನೆಗಳಿಗೆ ಜೀವ ನೀಡುತ್ತದೆ ಗೂಗಲ್ ಅರ್ಥ್.

8.
ಕೆಲವರು ಜಿಯೋಕ್ವೇಕ್ 2D ಡ್ರೈವಿಂಗ್ ನ್ನು ಆಟ ಎಂದು ಭಾವಿಸಿದ್ದಾರೆ.ಆದರೆ ವಿಶ್ವದ ಬೇರೆಬೇರೆ ಪ್ರದೇಶಗಳನ್ನು ಕಾರ್, ಟ್ರಕ್ ಗಳಲ್ಲಿ ಸುತ್ತುವುದು ಒಂದು ಫನ್. ಅದಕ್ಕೆ ಗೂಗಲ್ ಅರ್ಥ್ ಅವಕಾಶ ನೀಡುತ್ತದೆ.

9.
ಪ್ಲೇಸ್ ಐಡಿಯಾ ನಿಮಗೆ ಕರೆಟ್ ವಿಕಿಪೀಡಿಯ ಲೇಖನಗಳನ್ನು ಸ್ಥಳದ ಆಧಾರದಲ್ಲಿ ಹುಡುಕಲು ನೆರವಾಗುತ್ತದೆ.

10.
ನಿಮ್ಮ ಮನೆ, ಅಪಾರ್ಟ್ ಮೆಂಟ್, ಟೌನ್ ಹೌಸ್, ಔಟ್ ಹೌಸ್, ಸ್ಟುಡಿಯೋಗಳನ್ನು ಹುಡುಕುವುದು ಗೂಗಲ್ ಅರ್ಥ್ ನಿಂದ ಹುಡುಕುವುದು ಸರ್ವೇಸಾಮಾನ್ಯ.


Click it and Unblock the Notifications








