ಈ ಕೂಡಲೇ ನೀವು ವಾಟ್ಸ್‌ಆಪ್ ಅಪ್‌ಡೇಟ್ ಮಾಡಿಕೊಂಡರೆ ಸಿಗಲಿರುವ 10 ಬೆಸ್ಟ್ ಫೀಚರ್ಸ್!!

|

ಮೊಬೈಲ್ ಜಮಾನದ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿರುವ ವಿಶ್ವದ ನಂಬರ್ ಒನ್ ಇನ್‌ಸ್ಟಂಟ್ ಮೆಸೆಜಿಂಗ್ ಕಂಪನಿ ವಾಟ್ಸ್‌ಆಪ್ ಬಳಕೆದಾರರಿಗೆ ಭಾರೀ ಅಪ್‌ಡೇಟ್ಸ್ ನೀಡುತ್ತಿದೆ. ಒಂದೇ ಆಪ್‌ನಲ್ಲಿ ಹಲವು ಸೆವೆಗಳನ್ನು ನೀಡುವಲ್ಲಿ ಯಶಸ್ವಿಯಾಗಿರುವ ವಾಟ್ಸ್ಆಪ್ ಒಂದೇ ಕಳೆದ 2 ತಿಂಗಳಿನಲ್ಲಿ ಕನಿಷ್ಟವೆಂದರೂ 10 ಅಪ್‌ಡೇಟ್ಸ್ ಪಡೆದುಕೊಂಡಿದೆ.

ಸುಳ್ಳು ಹಾಗೂ ಮೋಸದ ಮೆಸೇಜ್‌ಗಳ ಕಿರಿಕಿರಿಗೆ ಇನ್ನು ಬ್ರೇಕ್ ಹಾಕುವುದರಿಂದ ಹಿಡಿದು, ನೀವು ಆಡ್ಮಿನ್ ಆಗಿರುವ ಗ್ರೂಪ್‌ ಬಗ್ಗೆ ನೀವು ಮಾಹಿತಿ ಪಡೆಯಬಹುದಾದ ಹಾಗೂ ಆಡಿಯೋ ಕಾಲ್ ಅನ್ನು ವಿಡಿಯೋ ಕಾಲ್ ಆಗಿ ಪರಿವರ್ತನೆ ಮಾಡಿಕೊಳ್ಳಬಹುದಾದ ಅಪ್‌ಡೇಟ್‌ಗಳೆಲ್ಲವೂ ವಾಟ್ಸ್ಆಪ್‌ನಲ್ಲಿ ಸೇರಿಕೊಂಡಿರುವುದು ಬಳಕೆದಾರರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಕೂಡಲೇ ನೀವು ವಾಟ್ಸ್‌ಆಪ್ ಅಪ್‌ಡೇಟ್ ಮಾಡಿಕೊಂಡರೆ ಸಿಗಲಿರುವ 10 ಬೆಸ್ಟ್ ಫೀಚರ್ಸ್

ಬ್ಯಾಟರಿ ಚಾರ್ಜ್‌ ಮುಗಿದರೂ ಆ ವರೆಗಿನ ವಾಯ್ಸ್‌ ಮೆಸೇಜ್ ಸಹ ಸೇವ್ ಆಗುವಂತಹ ಫೀಚರ್ಸ್ ಬಳಕೆದಾರರಿಗೆ ಲಭ್ಯವಿವೆ. ಹಾಗಾಗಿ ಇಂದಿನ ಲೇಖನದಲ್ಲಿ ಈ ಕೂಡಲೇ ನೀವು ವಾಟ್ಸ್‌ಆಪ್ ಅಪ್‌ಡೇಟ್ ಮಾಡಿಕೊಂಡರೆ ಸಿಗಲಿರುವ 10 ಬೆಸ್ಟ್ ಫೀಚರ್ಸ್ ಯಾವುವು? ಅವುಗಳಿಂದ ಏನು ಉಪಯೋಗಗಳಿವೆ ಎಂಬುದನ್ನು ಮುಂದೆ ತಿಳಿಯಿರಿ.

ಮೆಸೇಜ್‌ಗಳ ಕಿರಿಕಿರಿಗೆ ಇನ್ನು ಬ್ರೇಕ್

ಮೆಸೇಜ್‌ಗಳ ಕಿರಿಕಿರಿಗೆ ಇನ್ನು ಬ್ರೇಕ್

ವಾಟ್ಸ್‌ಆಪ್ ಮೂಲಕ ಹರಿದಾಡುವ ಸುಳ್ಳು ಹಾಗೂ ಮೋಸದ ಮೆಸೇಜ್‌ಗಳ ಕಿರಿಕಿರಿಗೆ ಇನ್ನು ಬ್ರೇಕ್ ಬಿಳಲಿದೆ. ವಾಟ್ಸ್ಆಪ್ ಬಳಕೆದಾರರು ಸ್ವೀಕರಿಸಿರುವ ಮೆಸೇಜ್ ಅನ್ನು ಸ್ಪರ್ಶಿಸಿದ ಕೂಡಲೇ ಇದು ಫಾರ್ವರ್ಡ್ ಮೆಸೇಜ್ ಹೌದೋ ಅಥವಾ ಅಲ್ಲವೊ ಎಂಬುದುನೂತನ ವೈಶಿಷ್ಟ್ಯದಿಂದ ಗೊತ್ತಾಗಲಿದೆ.

ಮೇಸೆಜ್ ಡಿಲೀಟ್ ಮಾಡಿ

ಮೇಸೆಜ್ ಡಿಲೀಟ್ ಮಾಡಿ

ಇದಲ್ಲದೇ ನೀವು ಗ್ರೂಪ್‌ನಲ್ಲಿ ಇಲ್ಲವೇ ಸ್ನೇಹಿತರೊಂದಿಗೆ ಚಾಟ್ ಮಾಡುವ ಸಂದರ್ಭದಲ್ಲಿ ತಿಳಿಯದೆ ತಪ್ಪಾಗಿ ಮೇಸೆಜ್ ಗಳನ್ನು ಸೆಂಡ್ ಮಾಡಿದ ಸಂದರ್ಭದಲ್ಲಿ ಅವರು ನೋಡುವ ಮೊದಲೇ ನೀವು ಅದನ್ನು ಡಿಲೀಟ್ ಮಾಡಬಹುದಾಗಿದೆ. ಇದಕ್ಕಾಗಿ ಒಂದು ಗಂಟೆಗೂ ಹೆಚ್ಚು ಕಾಲಾವಕಾಶವನ್ನು ನೀಡಲಾಗಿದೆ. ಇದು ವಾಟ್ಸ್‌ಆಪ್ ನೀಡಿರುವ ಹೊಸ ಆಯ್ಕೆಯಾಗಿದೆ.

ಗ್ರೂಪ್ ಬಗ್ಗೆ ಮಾಹಿತಿ

ಗ್ರೂಪ್ ಬಗ್ಗೆ ಮಾಹಿತಿ

ಇದಲ್ಲದೇ ನೀವು ಆಡ್ಮಿನ್ ಆಗಿರುವ ಗ್ರೂಪ್‌ ಬಗ್ಗೆ ನೀವು ಮಾಹಿತಿಯನ್ನು ನೀಡಬಹುದಾಗಿದೆ. ನಿಮ್ಮ ಗ್ರೂಪ್ ಯಾವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ, ಉದ್ದೇಶಗಳೇನು, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಸದಸ್ಯರಿಗೆ ತಿಳಿಸಲು ಇದು ವೇದಿಕೆಯಾಗಲಿದೆ.

ಗ್ರೂಪ್ ವಿಡಿಯೋ ಕಾಲಿಂಗ್

ಗ್ರೂಪ್ ವಿಡಿಯೋ ಕಾಲಿಂಗ್

ಮೊದಲು ವಾಟ್ಸ್‌ಆಪ್ ಬಳಕೆದಾರರಿಗೆ 'ಒನ್ ಆನ್ ಒನ್' ವಿಡಿಯೋ ಕಾಲಿಂಗ್ ಮಾಡುವ ಆಯ್ಕೆಯನ್ನು ಮಾತ್ರವೇ ನೀಡಲಾಗಿತ್ತು. ಆದರೆ ಈಗ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವ ಹೊಸ ಆಯ್ಕೆಯೊಂದನ್ನು ನೀಡಲಾಗಿದೆ. ಇದರಲ್ಲಿ ನಿಮ್ಮ ಸ್ನೇಹಿತರೊಂದಿಗೆ ಒಟ್ಟಾಗಿ ಮಾತನಾಡಬಹುದಾಗಿದೆ.

ವಾಟ್ಸ್‌ಆಪ್ ಬಿಜಿನೆಸ್

ವಾಟ್ಸ್‌ಆಪ್ ಬಿಜಿನೆಸ್

ಇದಲ್ಲದೇ ನಿಮ್ಮ ವ್ಯವಹಾರವನ್ನು ಉತ್ತಮ ರೀತಿಯಲ್ಲಿ ಬೆಳಸಲು ವಾಟ್ಸ್ಆಪ್ ಸಹಾಯವನ್ನು ಮಾಡಲಿದ್ದು, ಇದಕ್ಕಾಗಿ ಬಿಜಿನೆಸ್ ಆಪ್ ವೊಂದನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದರಲ್ಲಿ ನಿಮ್ಮ ಬಿಸ್ನೆಸ್ ಬಗ್ಗೆ ಸಂಫೂರ್ಣ ಮಾಹಿತಿಯನ್ನು ನೀಡುವುದಲ್ಲದೇ ಗ್ರಾಹಕರೊಂದಿಗೆ ಸಂವಹನ ನಡೆಸಲು ಸಹಾಯಕಾರಿಯಾಗಿದೆ.

ವಿಡಿಯೋ ಕಾಲ್‌ನಿಂದ ಆಡಿಯೋ ಕಾಲ್‌

ವಿಡಿಯೋ ಕಾಲ್‌ನಿಂದ ಆಡಿಯೋ ಕಾಲ್‌

ನಿಮ್ಮ ಸ್ನೇಹಿತರಿಗೆ ಆಡಿಯೋ ಕಾಲ್ ಮಾಡಿ ಮಾತನಾಡುವ ಸಂದರ್ಭದಲ್ಲಿಯೇ ಆಡಿಯೋ ಕಾಲ್ ಅನ್ನು ವಿಡಿಯೋ ಕಾಲ್ ಆಗಿ ಪರಿವರ್ತನೆ ಮಾಡಿಕೊಳ್ಳಬಹುದಾಗಿದ್ದು, ಇದ್ಕಕಾಗಿಯೇ ವಾಟ್ಸ್ ಆಪ್ ಅವಕಾಶವನ್ನು ಮಾಡಿಕೊಟ್ಟಿದೆ. ಇಂದರಿಂದಾಗಿ ವಾಟ್ಸ್‌ಆಪ್ ಕಾಲಿಂಗ್ ಅನುಭವ ಉತ್ತಮವಾಗಲಿದೆ.

ವಾಟ್ಸ್‌ಆಪ್ ನಲ್ಲಿಯೇ ಯೂಟ್ಯೂಬ್

ವಾಟ್ಸ್‌ಆಪ್ ನಲ್ಲಿಯೇ ಯೂಟ್ಯೂಬ್

ಈ ಹಿಂದೆ ನಿಮ್ಮ ಸ್ನೇಹಿತರು ಯೂಟ್ಯೂಬ್ ವಿಡಿಯೋ ಲಿಂಕ್ ಶೇರ್ ಮಾಡಿದ ಸಂದರ್ಭದಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅದು ಯೂಟ್ಯೂಬ್ ಆಪ್‌ನಲ್ಲಿ ತೆರೆದುಕೊಳ್ಳುತಿತ್ತು. ಆದರೆ ಈಗ ಅದು ಬದಲಾಗಿದ್ದು, ನಿಮ್ಮ ಚಾಟ್ ವಿಂಡೋದಲ್ಲಿಯೇ ಯೂಟ್ಯೂಬ್ ವಿಡಿಯೋವನ್ನು ಪ್ಲೇ ಮಾಡಬಹುದಾಗಿದೆ.

ವಾಟ್ಆಪ್ ಐಕಾನ್ ಬದಲಾಯಿಸಿ

ವಾಟ್ಆಪ್ ಐಕಾನ್ ಬದಲಾಯಿಸಿ

ಆಂಡ್ರಾಯ್ಡ್ ಒರಿಯೋ ಬಳಕೆದಾರರು ತನ್ನ ವಾಟ್ಸ್ ಆಪ್ ಐಕಾನ್ ಅನ್ನು ಬದಲಾಯಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ ಮತ್ತು ಅದನ್ನು ಸ್ನೇಹಿತರೊಂದಿಗೆ ಶೇರ್ ಸಹ ಮಾಡಬಹುದಾಗಿದೆ.

ಲೈವ್ ಲೋಕೆಷನ್ ಶೇರ್

ಲೈವ್ ಲೋಕೆಷನ್ ಶೇರ್

ನಿಮ್ಮ ವಾಟ್ಸ್‌ಆಪ್ ಮೂಲಕ ನೀವು ಲೈವ್ ಲೋಕೆಷನ್ ಅನ್ನು ಶೇರ್ ಮಾಡಬಹುದಾಗಿದೆ. ನೀವು ಎಲ್ಲಿದ್ದೀರಿ ಎಂಬುದನ್ನು ಸ್ನೇಹಿತರು ರಿಯಲ್ ಟೈಮಿನಲ್ಲಿ ನೋಡಬಹುದಾಗಿದೆ.

ಸ್ಟೇಟಸ್

ಸ್ಟೇಟಸ್

ಫೇಸ್‌ಬುಕ್‌ನಲ್ಲಿ ಇದ್ದಂತಹ ಬಣ್ಣಬಣ್ಣದ ಸ್ಟೆಟಸ್ ಬ್ಯಾಕ್‌ ಗ್ರೌಂಡ್ ಅನ್ನು ವಾಟ್ಸ್‌ಆಪ್ ನಲ್ಲಿಯೂ ಬಳಕೆ ಮಾಡಿಕೊಳ್ಳುವ ಅವಕಾಶವು ಇದೆ. ಅಲ್ಲದೇ ಫಾಂಟ್ ಗಳನ್ನು ಬದಲಾಯಿಸಿಕೊಳ್ಳೂವ ಅವಕಾಶವನ್ನು ಮಾಡಿಕೊಡಲಾಗಿದೆ.

How to Send Message to Multiple Contacts on WhatsApp - GIZBOT KANNADA
ವಾಟ್ಸ್‌ಆಪ್ ನಲ್ಲಿಯೇ ಹಣ ಪಾವತಿಸಿ

ವಾಟ್ಸ್‌ಆಪ್ ನಲ್ಲಿಯೇ ಹಣ ಪಾವತಿಸಿ

ವಾಟ್ಸ್ಆಪ್ ಬಳಕೆದಾರರಿಗೆ ನೀಡಿರುವ ಹೊಸ ಸೇವೆಯೂ ಇದಾಗಿದ್ದು, UPI ಬಳಕೆಯ ಮೂಲಕ ವಾಟ್ಸ್‌ಆಪ್ ನಲ್ಲಿ ನಿಮ್ಮ ಸ್ನೇಹಿತರಿಗೆ ಹಣವನ್ನು ಕಳುಹಿಸಬಹುದು ಮತ್ತು QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ವ್ಯಾಪಾರಿಗಳಿಗೆ ಪೇಮೆಂಟ್ ಸಹ ಮಾಡಬಹುದಾಗಿದೆ.

Best Mobiles in India

English summary
10 Features of WhatsApp 2018 that You May Not Know.Whatsapp the Latest Version 2018 and update new feature. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X