ನೀವು ತಕ್ಷಣ ಸಕ್ರಿಯಗೊಳಿಸಬೇಕಾದ 10 ಗೂಗಲ್ ಕ್ರೋಮ್ ಫ್ಲ್ಯಾಗ್ ಗಳಿವು!
ಬಹು ಜನಪ್ರಿಯ ಬ್ರೌಸರ್ಗಳ ಪೈಕಿ ಕ್ರೋಮ್ ಮೊದಲನೆಯದಾಗಿದ್ದು ನೀವು ಅದನ್ನು ಮತ್ತಷ್ಟು ಉತ್ತಮವಾಗಿಸಬಹುದು. ನಿಮಗೆ ಗೂಗಲ್ ಕ್ರೋಮ್ ಅನ್ನು ಹೇಗೆಲ್ಲಾ ಬಳಸಬಹುದು ಎಂದು ತಿಳಿದಿದ್ದರೆ ನಿಮಗೆ ಅದರಲ್ಲಿ ಅವಿತಿರುವ ಅನೇಕ ಉತ್ತಮ ಆಯ್ಕೆಗಳ ಅರಿವಾಗಬಹುದು. ಇಂತಹ ಬಹುತೇಕ ಆಯ್ಕೆಗಳು ಫ್ಲ್ಯಾಗ್ ಮೆನುವಿನಲ್ಲಿ ಅಡಗಿದೆ. ನೀವು ಹೀಗೆ ಅವಿತಿರುವ ನೂತನ ಆಯ್ಕೆಗಳನ್ನು ಆಕ್ಸೆಸ್ ಮಾಡಬಯಸಿದರೆ chrome://flags ಎಂದು ಸರ್ಚ್ ಬಾರ್ ನಲ್ಲಿ ಟೈಪ್ ಮಾಡುವ ಮೂಲಕ ಕ್ರೋಮ್ ನ ಪ್ರಯೋಗಾತ್ಮಕ ಫೀಚರ್ಗಳ ಪಟ್ಟಿಯನ್ನು ಪಡೆಬಹುದು.

ಗೂಗಲ್ ಈ ಫ್ಲ್ಯಾಗ್ ಗಳನ್ನು ಬೇಕೆಂದಾಗ ಬದಲಿಸಬಹುದು ಅಥವಾ ತೆಗೆದುಹಾಕಬಹುದು. ಕೆಲವು ಸಂದರ್ಭಗಳಲ್ಲಿ ಈ ಫ್ಲ್ಯಾಗ್ ಗಳಿಗೆ ಸ್ಟೇಬಲ್ ರಿಲೀಸ್ ಗಳೂ ದೊರೆಯಬಹುದು. ಅದಕ್ಕಾಗಿ ನೀವು ಕ್ರೋಮ್ ಬ್ರೌಸರ್ ನ ಅಪ್ಡೇಟ್ಗಳನ್ನು ಆಗಾಗ ಪರಿಶೀಲಿಸುತ್ತಿರಿ. ಕ್ರೋಮ್ ನಲ್ಲಿ ವೇಗವಾದ ಮತ್ತು ಹೆಚ್ಚು ಆರಾಮದಾಯಕ ಅನುಭವವನ್ನು ಪಡೆಯಲು ಬಳಸಬಹುದಾದ ಫ್ಲ್ಯಾಗ್ ಗಳತ್ತ ಈ ಲೇಖನದಲ್ಲಿ ಗಮನಹರಿಸೋಣ.
ಪೇಜ್ ಟೈಟಲ್ಗಳು ಸೂಕ್ತ ಸಲಹೆಗಳೊಂದಿಗೆ
#omnibox-ui-vertical-layout ಎಂದು ಟೈಪ್ ಮಾಡುವ ಮೂಲಕ ನಿಮ್ಮ ಹಿಸ್ಟರಿ ಯಿಂದ ಪೇಜ್ ಸಲಹೆಗಳನ್ನು ಪಡೆಯಬಹುದು. ಈ ಫ್ಲ್ಯಾಗ್ ಸಲಹೆಗಳೊಂದಿಗೆ ಪೇಜ್ ಟೈಟಲ್ ಗಳನ್ನು ಕೂಡ ನೀಡುತ್ತದೆ.
ಟ್ಯಾಬ್ ಡಿಸ್ಕಾರ್ಡ್ ಮಾಡುವುದು/ತಿರಸ್ಕರಿಸುವುದು
#automatic-tab-discarding ಈ ಫ್ಲ್ಯಾಗ್ ಅನ್ನು ಸಕ್ರಿಯಗೊಳಿಸುವುದರಿಂದ ಕ್ರೋಮ್ ನಲ್ಲಿ ಸಧ್ಯಕ್ಕೆ ಬಳಕೆಯಾಗದಿರುವ ಟ್ಯಾಬ್ ಗಳು ತನ್ನಿಂತಾನೆ ನಿಷ್ಕ್ರಿಯಗೊಳ್ಳುತ್ತದೆ. ಆದು ಇನ್ನೂ ಕ್ರೋಮ್ ನ ಮೇಲ್ಭಾಗದಲ್ಲಿ ಲಭ್ಯವಿರುತ್ತದೆ ಮತ್ತು ಅದನ್ನು ಕ್ಲಿಕ್ ಮಾಡಿದ ಕೂಡಲೇ ಮತ್ತೆ ಲೋಡ್ ಆಗುತ್ತದೆ. ಟ್ಯಾಬ್ ಡಿಸ್ಕಾರ್ಡಿಂಗ್ ಕುರಿತು ಹೆಚ್ಚಿನ ಮಾಹಿತಿಗೆ chrome://discards ಎಂದು ಟೈಪ್ ಮಾಡಿ
ತಕ್ಷಣ ಟ್ಯಾಬ್ ಮ್ಯೂಟ್ ಮಾಡಿ
#enable-tab-audio-muting ಫ್ಲ್ಯಾಗ್ ಮೂಲಕ ಟ್ಯಾಬ್ ನ ಮೇಲೆ ಕಾಣಿಸುವ ಸ್ಪೀಕರ್ ಐಕಾನ್ ಅನ್ನು ಕ್ಲಿಕ್ ಮಾಡಿ ಟ್ಯಾಬ್ ಅನ್ನು ಮ್ಯೂಟ್ ಮಾಡಬಹುದು.
ತನ್ನಿಂತಾನೆ ಪಾಸ್ವರ್ಡ್ ಸೃಷ್ಟಿಸುವುದು
#enable-password-generation ಫ್ಲ್ಯಾಗ್ ಮೂಲಕ ಕ್ರೋಮ್ ನೀವು ನಿಮ್ಮ ಗೂಗಲ್ ಖಾತೆಗೆ ಲಾಗಿನ್ ಆಗಿರುವುದನ್ನು ಖಚಿತಪಡಿಸಿಕೊಂಡು ಅಕೌಂಟ್ ಕ್ರಿಯೇಷನ್ ಪೇಜ್ ಗಳಲ್ಲಿ ಪಾಸ್ವರ್ಡ್ ಸೃಷ್ಟಿಸುತ್ತದೆ. ಈ ಪಾಸ್ಟರ್ಡ್ಗಳು ತನ್ನಿಂತಾನೆ ನಿಮ್ಮ ಗೂಗಲ್ ಖಾತೆಯೊಂದಿಗೆ ಸಿಂಕ್ ಆಗುತ್ತದೆ. #enable-manual-password-generation ಫ್ಲ್ಯಾಗ್ ಜನರೇಟ್ ಪಾಸ್ವರ್ಡ್ ಲಿಂಕ್ ಎಂಬ ಆಯ್ಕೆಯನ್ನು ಮೆನುವಿಗೆ ಸೇರಿಸುತ್ತದೆ.
ನ್ಯಾವಿಗೇಶನ್ ಹೈಜ್ಯಾಕಿಂಗ್ ತಪ್ಪಿಸಿ
#enable-history-entry-requires-user-gesture ಫ್ಲ್ಯಾಗ್ ಸಕ್ರಿಯಗೊಳಿಸುವುದರಿಂದ ನೀವು ಪೇಜ್ಗಳೊಂದಿಗೆ ಸಂವಹನ ನಡೆಸುವ ತನಕ ನಿಮ್ಮ ಹಿಸ್ಟರಿಯಲ್ಲಿ ಹೊಸದಾಗಿ ಏನನ್ನೂ ನಮೂದಿಸುವ ಅನುಮತಿ ಕ್ರೋಮ್ ವೆಬ್ಸೈಟ್ಗಳಿಗೆ ನೀಡುವುದಿಲ್ಲ.
ವೆಬ್ಪೇಜ್ ಜಂಪ್ ಆಗುವುದನ್ನು ತಡೆಗಟ್ಟುವುದು
#enable-scroll-anchoring ಫ್ಲ್ಯಾಗ್ ಸಕ್ರಿಯಗೊಳಿಸುವುದರಿಂದ ವೆಬ್ ಪೇಜ್ ನಲ್ಲಿ ಹೊಸ ಕಂಟೆಂಟ್ ಲೋಡ್ ಆದಾಗಲೂ ನಿಮ್ಮ ಸ್ಥಾನವನ್ನು ಯಥಾವತ್ತಾಗಿ ಇರಿಸುತ್ತದೆ. ಇದರಿಂದಾಗಿ ಪ್ರತಿಬಾರಿ ಸ್ಕ್ರೋಲ್ ಮಾಡುವುದನ್ನು ತಪ್ಪಿಸಬಹುದು ಮತ್ತು ಹೆಚ್ಚು ಆರಾಮದಾಯಕ ಅನುಭವ ಪಡೆಯಬಹುದು.
ಸುರಕ್ಷಿತವಲ್ಲದ ಸೈಟ್ಗಳ ಕುರಿತು ಹೆಚ್ಚಿನ ಎಚ್ಚರಿಕೆ ನೀಡುತ್ತದೆ
#mark-non-secure-as flag ಫ್ಲ್ಯಾಗ್ ಅನ್ನು ಸಕ್ರಿಯಗೊಳಿಸುವುದರಿಂದ ಅದನ್ನು ತುಂಬ ಸೂಕ್ಷ್ಮ ಸೆಟ್ಟಿಂಗ್ ಗೆ ಸೆಟ್ ಮಾಡಬಹುದು. ಈ ಮೂಲಕ HTTP ಯನ್ನು ತುಂಬ ಅಪಾಯಕಾರಿ ಎಂದು ನಿಗದಿಪಡಿಸಬಹುದು ಮತ್ತು ಈ ಮೂಲಕ ಕ್ರೋಮ್ 'ನಾಟ್ ಸೆಕ್ಯೂರ್' ಎಂಬ ಟೆಕ್ಸ್ಟ್ ಅನ್ನು ಕೆಂಪು ಬಣ್ಣದಲ್ಲಿ ತೋರಿಸುತ್ತದೆ.
HDR ಸಕ್ರಿಯಗೊಳಿಸಿ
ನೀವು HDR ಮಾನಿಟರ್ ಹೊಂದಿದ್ದರೆ #enable-hdr ಫ್ಲ್ಯಾಗ್ ಅನ್ನು ಸಕ್ರಿಯಗೊಳಿಸುವ ಮೂಲಕ ಕ್ರೋಮ್ HDR ಕಂಟೆಂಟ್ ಅನ್ನು ಬೆಂಬಲಿಸುತ್ತದೆ.
ಕ್ಯಾಶ್ಡ್ ವೆಬ್ಸೈಟ್ ತೋರಿಸಿ
#show-saved-copy flag ಫ್ಲ್ಯಾಗ್ ಅನ್ನು ಸಕ್ರಿಯಗೊಳಿಸಿ ಅದನ್ನು ಎನೇಬಲ್: ಪ್ರೈಮರಿ ಎಂದು ಸೆಟ್ ಮಾಡುವ ಮೂಲಕ ಹೊಸತಾದ ಶೋ ಸೇವ್ಡ್ ಕಾಪಿ ಎಂಬ ಬಟನ್ ಮೂಡುತ್ತದೆ. ಈ ಬಟನ್ ಮೂಲಕ ನೀವು ವೆಬ್ಸೈಟ್ ಹೇಗೆ ಸೇವ್ ಆಗಿತ್ತೋ ಹಾಗೆ ಅದನ್ನು ನೋಡಬಹುದು . ನೀವಾಗಿ ಅದನ್ನು ಕ್ಲಿಯರ್ ಮಾಡುವ ತನಕ ಅದನ್ನು ನೋಡಬಹುದಾಗಿದೆ
ಕ್ರೆಡಿಟ್ ಕಾರ್ಡ್ ಬಳಕೆ
#enable-autofill-credit-card-last-used-date-display ಫ್ಲ್ಯಾಗ್ ನೀವು ಕ್ರೆಡಿಟ್ ಕಾರ್ಡ್ ಬಳಸಿದ ಕೊನೆಯ ದಿನಾಂಕವನ್ನು ತೋರಿಸುತ್ತದೆ. ಈ ಮೂಲಕ ಇತರರು ನಿಮಗೆ ಅರಿವಿಲ್ಲದಂತೆ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿದ್ದರೆ ಅದನ್ನು ತಿಳಿಯಬಹುದಾಗಿದೆ.
ಅಷ್ಟೇ ಅಲ್ಲದೆ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಗಾಗಿ #enable-picture-in-picture ಫ್ಲ್ಯಾಗ್ , ನಯವಾದ ಸ್ಕ್ರೋಲಿಂಗ್ ಅನುಭವಕ್ಕಾಗಿ #smooth-scrolling ಫ್ಲ್ಯಾಗ್ ಮೊದಲಾದ ಫ್ಲ್ಯಾಗ್ ಗಳು ಲಭ್ಯವಿದೆ.


Click it and Unblock the Notifications








