Home
Apps

ಓದಿ ..ನಿಮಗೆ ಅಚ್ಚರಿ ತರಬಲ್ಲ 10 ಟೆಕ್ ಹ್ಯಾಕ್ ಗಳು!

ಜನರಿಗೆ ಉಪಯೋಗವಾಗುವಂತಹ ಕೆಲವು ಸರಳ ಟೆಕ್ ಹ್ಯಾಕ್ಗಳ ಪಟ್ಟಿ ಇಲ್ಲಿ ನೀಡಲಾಗಿದೆ.

By Tejaswini P G

ಕೆಲವೊಂದು ಸರಳ ಹ್ಯಾಕ್ಗಳು ನಮ್ಮ ದಿನ ನಿತ್ಯದ ಅಗತ್ಯಗಳಿಗೆ ತುಂಬಾ ಉಪಯುಕ್ತವಾಗಿರುತ್ತವೆ. ಅಂತಹ ಕೆಲವು ಟೆಕ್ ಹ್ಯಾಕ್ ಗಳನ್ನು ನಿಮಗಾಗಿ ನಾವಿಲ್ಲಿ ಸಂಪಾದಿಸಿದ್ದೇವೆ. ತಪ್ಪದೆ ಓದಿ!

#1

#1

ವೆಬ್ ನಿಂದ ಚಿತ್ರವೊಂದನ್ನು ಡೌನ್ಲೋಡ್ ಮಾಡದೇ ಎಡಿಟ್ ಮಾಡಬೇಕೇ? ಹಾಗಾದರೆ ಆ ಚಿತ್ರದ URL ಅನ್ನು ಪೈಂಟ್ ಅಪ್ಲಿಕೇಶನ್ ನಲ್ಲಿ ತೆರೆಯಿರಿ ಮತ್ತು ಎಡಿಟ್ ಮಾಡಿ.

#2

#2

ಗೂಗಲ್ ಕ್ರೋಮ್ ನ ಎರರ್ ಪೇಜ್ ನ ಗೇಮ್ ಆಡಿ ಆಡಿ ಬೇಜಾರಾಗಿದೆಯೇ? ಗೂಗಲ್ ನ ಇಮೇಜ್ ಸರ್ಚ್ ನಲ್ಲಿ 'ಅಟಾರಿ ಬ್ರೇಕೌಟ್' ಎಂದು ಸರ್ಚ್ ಮಾಡಿ..ಆಟ ಆಡಿ!

#3

#3

ನಿಮಗೆ ಗೊತ್ತೇ? ಫೋಟೋಶಾಪ್ ನಂತಹದ್ದೇ ಉಚಿತ ಆನ್ಲೈನ್ ಫೋಟೋ ಎಡಿಟಿಂಗ್ ಆಪ್ಲಿಕೇಶನ್ ಒಂದಿದೆ..ಅದೇ SumoPaint.com

#4

#4

ಸದಾ ಕಂಪ್ಯೂಟರ್ ಮತ್ತು ಫೋನ್ಗಳ ಮಧ್ಯೆ ಸ್ವಿಚ್ ಮಾಡುತ್ತಾ ಇರುವುದು ಕಷ್ಟ ಅನಿಸುತ್ತಿದೆಯೇ? ಪ್ರಯತ್ನಿಸಿ pushbullet.com, ನಿಮ್ಮ ಫೋನ್ ನ ನೋಟಿಫಿಕೇಶನ್ಗಳನ್ನು ನಿಮ್ಮ ಕಂಪ್ಯೂಟರ್ ನಲ್ಲೇ ತೋರಿಸುತ್ತದೆ

#5

#5

ವಯಸ್ಸಿನ ಮಿತಿ ಇರುವ ಯೂಟ್ಯೂಬ್ ವೀಡಿಯೋಗಳನ್ನು ಸೈನ್-ಇನ್ ಮಾಡದೇ ನೋಡಬೇಕೇ? Youtube.com ನ ಮೊದಲು 'nsfw' ಸೇರಿಸಿ!

#6

#6

ನಿಮ್ಮ ರಿಮೋಟ್ ಕಂಟ್ರೋಲ್ ಕೆಲಸ ಮಾಡುತ್ತಿದೆಯೇ ಇಲ್ವೇ ಎಂದು ಪರೀಕ್ಷಿಸಬೇಕೇ? ಕ್ಯಾಮೆರಾ ಒಂದನ್ನು ರಿಮೋಟ್ ಬಲ್ಬ್ ಎದುರು ಹಿಡಿದು ಬಟನ್ ಒತ್ತಿದಾಗ ಬೆಳಕು ಬರುತ್ತಿದೆಯೇ ಇಲ್ಲವೇ ಎಂದು ತಿಳಿಯಿರಿ.

#7

#7

ಪ್ರಾಜೆಕ್ಟ್ ನಾಪ್ತಾ ಒಂದು ಬ್ರೌಸರ್ ಎಕ್ಸ್ಟೆನ್ಶನ್ ಆಗಿದ್ದು, ಇದನ್ನು ಬಳಸಿ ಇಮೇಜ್ ನ ಮೇಲಿರುವ ಟೆಕ್ಸ್ಟ್ ಅನ್ನು ಆಯ್ಕೆ ಮಾಡಿ, ಅದನ್ನು ಕಾಪಿ ಮಾಡಬಹುದು, ಬದಲಾಯಿಸಬಹುದು, ಅಥವ ಬೇರೆ ಭಾಷೆಗಳಿಗೆ ಭಾಷಾಂತರಿಸಬಹುದು ಕೂಡ!

#8

#8

ಕ್ಯಾಲ್ಕ್ಯುಲೇಟರ್ ಅಪ್ಲಿಕೇಶನ್ ನಲ್ಲಿರುವ C ಮತ್ತು CE ಬಟನ್ಗಳ ವ್ಯತ್ಯಾಸ ಏನೆಂದು ಎಂದಾದರೂ ಯೋಚಿಸಿದ್ದೀರಾ? C(ಕ್ಲಿಯರ್) ಬಟನ್ ಇದುವರೆಗಿನ ಎಲ್ಲಾ ಎಂಟ್ರಿಗಳನ್ನು ಅಳಿಸಿಹಾಕಿದರೆ CE(ಕ್ಲಿಯರ್ ಎಂಟ್ರಿ) ಕೊನೆಯ ಎಂಟ್ರಿಯನ್ನಷ್ಟೇ ಅಳಿಸುತ್ತದೆ.

#9

#9

ಯೂಟ್ಯೂಬ್ ವೀಡಿಯೋ ಅನ್ನು ಜಿಫ್ ಗೆ ಬದಲಾಯಿಸುವ ಬಯಕೆಯೇ? ಹಾಗಾದರೆ "YouTube.com" ನ ಮೊದಲು "gif" ಸೇರಿಸಿ!

#10

#10

ನಿಮ್ಮ ಆಂಡ್ರಾಯ್ಡ್ ಫೋನ್ ಕಳೆದು ಹೋಗಿದೆಯೇ? "ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್" ಬಳಸಿ ಅದನ್ನು ದೂರದಿಂದಲೇ ರಿಂಗ್ , ಲಾಕ್ ಮಡಬಹುದಲ್ಲದೇ ಅದರಲ್ಲಿರುವ ಡೇಟಾವನ್ನು ಅಳಿಸಲೂ ಬಹುದು. ನಿಮ್ಮ ಫೋನ್ ಸೈಲೆಂಟ್ ಮೋಡ್ ನಲ್ಲಿದ್ದರೂ ರಿಂಗ್ ಆಗುತ್ತದೆ.

Best Mobiles in India

English summary
Here are the most intresting things you can actually do on google, youtube, paint and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+