ಈ ಹತ್ತು ಆಂಡ್ರಾಯ್ಡ್ ಆಪ್‌ಗಳನ್ನು ಯಾವತ್ತೂ ಇನ್‌ಸ್ಟಾಲ್ ಮಾಡಬೇಡಿ!
ಈಗಂತೂ ಪ್ಲೇ ಸ್ಟೋರ್ ತೆರೆದರೆ ಒಂದು ಮಿಲಿಯನ್ ನಷ್ಟು ಆಪ್ಸ್ ಗಳು ತೆರೆದುಕೊಳ್ಳುತ್ತವೆ.ನಿ ಮಗೆ ಬೇಕನಿಸಿದ್ದಕ್ಕೆಲ್ಲ ಆಪ್ ಗಳನ್ನು ಹುಡುಕಬಹುದು. ಸೀರೆಯ ಬ್ಲೌಸ್ ಹೊಲಿಯೊದ್ರಿಂದ ಹಿಡಿದು, ತಲೆ ಬಾಚಿಕೊಳ್ಳೋದು, ಅಷ್ಟೇ ಯಾಕೆ ಲಿಪ್ ಸ್ಟಿಕ್ ಹಚ್ಚೋದು ತಿಳ್ಕೊಳ್ಳೋದಕ್ಕೆ ಬೇಕಿದ್ದರೂ ನೀವು ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಆದರೆ ಕೆಲವು ಆಪ್ ಗಳಿವೆ ಅವುಗಳನ್ನು ಇನ್ಸ್ಟಾಲ್ ಮಾಡಿಕೊಂಡರೆ ನಿಮ್ಮ ಮೊಬೈಲ್ ಗೆ ಒಳಿತಾಗುತ್ತೆ ಎಂಬ ಪ್ರಚಾರವಿದೆ.
ಅಲ್ಲಿ ಇಲ್ಲಿ ಮೊಬೈಲ್ ನಲ್ಲಿ ಕುಳಿತಿರುವ ಅನಗತ್ಯ ಫೈಲ್ ಗಳನ್ನು ಡಿಲೀಟ್ ಮಾಡುವುದು, ಬ್ಯಾಟರಿ ಉಳಿತಾಯ ಮಾಡಲು ಹೀಗೆ ಹತ್ತುಹಲವು ಕಾರಣಗಳಿಗೆ ಈ ಆಪ್ ಗಳನ್ನು ಕೆಲವರು ಇನ್ಸ್ಟಾಲ್ ಮಾಡುತ್ತಾರೆ. ಆದರೆ ನಿಜ ಹೇಳಬೇಕು ಎಂದರೆ ಇಂತಹ ಆಪ್ ಗಳು ಆ ಯಾವ ಕೆಲಸವನ್ನೂ ಮಾಡುವುದಿಲ್ಲ. ಬದಲಾಗಿ ನಿಮ್ಮ ಮೊಬೈಲ್ ನಲ್ಲಿ ಅನಗತ್ಯವಾಗಿ ಇನ್ಸ್ಟಾಲ್ ಆಗಿರುತ್ತೆ. ಅಂತಹ ಕೆಲವು ಆಪ್ ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಈ ಆಪ್ ಗಳು ಕೇವಲ ನಿಮ್ಮ ಫೋನನ್ನು ಟ್ರ್ಯಾಕ್ ಮಾಡುತ್ತಿರುತ್ತೆ ಮತ್ತು ನಿಮಗೆ ತಿಳಿಯದಂತೆ ತೊಂದರೆ ನೀಡುತ್ತಿರುತ್ತೆ. ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಗಳಿದ್ದಲ್ಲಿ ಕೂಡಲೇ ಅನ್ ಇನ್ಸ್ಟಾಲ್ ಮಾಡಿ.. ಯಾವ ಆಪ್ ಗಳು ಹೀಗೆ ಅನಗತ್ಯ ಎಂದು ತಿಳಿದುಕೊಳ್ಳಲು ಮುಂದೆ ಓದಿ..
• ಕ್ವಿಕ್ ಪಿಕ್
ಇದೊಂದು ಫೋನ್ ಗ್ಯಾಲರಿಯಾಗಿದ್ದು, ಸುಲಭವಾಗಿ ಬಳಕೆ ಮಾಡಬಹುದು ಎಂದು ನಂಬಿಸಲಾಗಿತ್ತು. ಕಳೆದ ವರ್ಷ ಚೀತಾ ಮೊಬೈಲ್ ಈ ಆಪನ್ನು ಹೊರಹಾಕಿತ್ತು.ನಂತರದ ದಿನಗಳಲ್ಲಿ ಈ ಆಪ್ ಬಳಕೆದಾರರ ಡಾಟಾವನ್ನು ತನ್ನ ಡಾಟಾಬೇಸ್ ನಲ್ಲಿ ಅಪ್ ಲೋಡ್ ಮಾಡಿಕೊಳ್ಳಲು ಆರಂಭಿಸಿತ್ತು.
• ಈಎಸ್ ಫೈಲ್ ಎಕ್ಸ್ ಪ್ಲೋರರ್
ಇದು ಪ್ರಸಿದ್ಧ ಫೈಲ್ ಎಕ್ಸ್ ಪ್ಲೋರರ್ ಆಪ್ ಆಗಿದ್ದು, ನಿರ್ದಿಷ್ಟ ಫೈಲ್ ಮತ್ತು ಫೋಲ್ಡರ್ ನ್ನು ಸ್ಥಳಾಂತರಿಸಲು ಸುಲಭವಾಗುತ್ತೆ ಎಂದು ಬಳಕೆ ಮಾಡಲಾಗುತ್ತೆ. ಆದರೆ ಫ್ಲೀಯಾಗಿ ಲಭ್ಯವಾಗುವ ಈ ಆಪ್ ನಲ್ಲಿಅಡ್ವೇರ್ ಗಳು ಮತ್ತು ಬ್ಲೋಟ್ವೇರ್ ಗಳು ತುಂಬಿರುತ್ತವೆ. ಹಾಗಾಗಿ ಹೆಚ್ಚುವರಿ ಆಪ್ ಗಳನ್ನು ಡೌನ್ ಲೋಡ್ ಮಾಡುವಂತೆ ಕೇಳುತ್ತಲೇ ಇರುತ್ತದೆ.
• ಯುಸಿ ಬ್ರೌಸರ್
ಇದು ವೆಬ್ ಬ್ರೌಸರ್ ಆಗಿದ್ದು ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗಳಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ ಈ ಬ್ರೌಸರ್ ಅತೀ ಹೆಚ್ಚು ಡಾಟಾಗಳನ್ನು ಸೇವ್ ಮಾಡುವಂತೆ ಕೇಳುತ್ತೆ ಮತ್ತು ವೇಗವಾಗಿ ಡೌನ್ ಲೋಡ್ ಮಾಡುತ್ತೆ. ಆದರೆ ಈ ಬ್ರೌಸರ್ ನಿಮ್ಮ ಎಲ್ಲಾ ಮಾಹಿತಿಯ ಟ್ರ್ಯಾಕ್ ಇಟ್ಟುಕೊಂಡು ಅದನ್ನು ಅನ್ ಎನ್ಕ್ರಿಪ್ಟೆಡ್ ಆಗಿ ಇತರರಿಗೆ ಶೇರ್ ಮಾಡುತ್ತೆ.
• ಕ್ಲೀನ್ ಇಟ್
ಇದು ಕೇವಲ ಜಂಕ್ ಫೈಲ್ ಗಳನ್ನು ಕ್ಲೀನ್ ಮಾಡಿ ಸ್ಮಾರ್ಟ್ ಫೋನಿನಲ್ಲಿ ಜಾಗ ಮಾಡುವ ಒಂದು ಆಪ್. ಇದರಿಂದ ಪ್ರತಿಯೊಬ್ಬರೂ ದೂರವಿರುವುದು ಲೇಸು. ಯಾಕೆಂದರೆ ಆಪ್ ನಿಂದ ಸಮಸ್ಯೆಗಳು ಸರಪಳಿಯಂತೆ ಸೃಷ್ಟಿಯಾಗುತ್ತೆ. ಉದಾಹರಣೆಗೆ, ಸ್ಯಾಚೇ ಕ್ಲೀನ್ ಮಾಡುವುದರಿಂದ ನಿಮ್ಮ ಫೋನ್ ನಿಧಾನವಾಗುತ್ತೆ RAM ಕ್ಲೀನ್ ಮಾಡುವುದರಿಂದ ಬ್ಯಾಟರಿಯ ಬಳಕೆ ಅಧಿಕಗೊಳ್ಳುತ್ತೆ.
• ಮ್ಯೂಸಿಕ್ ಪ್ಲೇಯರ್
ಆಡಿಯೋ ಫೈಲ್ ಗಳನ್ನು ಪ್ಲೇ ಮಾಡಲು ಬಳಸುವ ಆಪ್ ಇದು, ಅತ್ಯಂತ ಕೆಟ್ಟ ಆಪ್ ಇದು. ಯಾಕೆಂದರೆ ಇದರಲ್ಲಿ ಜಾಹಿರಾತುಗಳು ತುಂಬಿಕೊಂಡಿರುತ್ತೆ. ಈ ಆಪ್ ಬಳಕೆಯಿಂದ ನಿಮ್ಮ ಬ್ಯಾಟರಿ ಬೇಗನೆ ಡೌನ್ ಆಗುತ್ತೆ, ನಿಮ್ಮಮೊಬೈಲ್ ಡಾಟಾ ಕೂಡ ಬೇಗ ಖಾಲಿಯಾಗುತ್ತೆ.
• ಡಿಯು ಬ್ಯಾಟರಿ ಸೇವರ್ ಮತ್ತು ಫಾಸ್ಟ್ ಚಾರ್ಜ್
ಇದು ನಿಮ್ಮ ಬ್ಯಾಟರಿಯನ್ನು ಸೇವ್ ಮಾಡುತ್ತೆ ಎಂದು ನಂಬಲಾಗಿದೆ ಜೊತೆಗೆ ಫಾಸ್ಟ್ ಚಾರ್ಜಿಂಗ್ ಗೆ ಇದು ನೆರವಾಗುತ್ತೆ ಅಂತಲೂ ಹೇಳಲಾಗುತ್ತೆ. ಆದರೆ ಸತ್ಯ ವಿಚಾರವೇನೆಂದರೆ ಯಾವುದೇ ಅಪ್ಲಿಕೇಷನ್ ಕೂಡ ಈ ಕೆಲಸ ನಿರ್ವಹಿಸಲಾರದು. ಇದು ತನ್ನ ನೋಟಿಫಿಕೇಷನ್ ನಲ್ಲಿ ಗಲವು ಆಪ್ ಗಳನ್ನು ತೋರಿಸುತ್ತಲೇ ಇರುತ್ತೆ ಮತ್ತು ಲಾಕ್ ಸ್ಕ್ರೀನ್ ಓಪನ್ ಮಾಡಲು ಕೂಡ ತೊಂದರೆ ನೀಡುವ ಸಾಧ್ಯತೆ ಇರುತ್ತೆ.
• ಡಾಲ್ಫಿನ್ ವೆಬ್ ಬ್ರೌಸರ್
ಅದು ಜಾಹಿರಾತುಗಳನ್ನು ನಿರ್ಭಂದಿಸುತ್ತೆ ಎಂದು ಹೇಳಲಾಗುತ್ತೆ. ಆದರೆ ಇದು ಬಳಕೆದಾರನ ಎಲ್ಲಾ ಆಕ್ಟಿವಿಟಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತೆ ಮತ್ತು ಕೆಟ್ಟ ವಿಚಾರವೇನೆಂದರೆ ಇದು ನೀವು ಇನ್ಕಾಗ್ನಿಟೋ ಮೋಡ್ ನಲ್ಲಿ ಮಾಡಿದ ಕಾರ್ಯಗಳನ್ನು ಟ್ರ್ಯಾಕ್ ಮಾಡುತ್ತೆ.
• ಫೋಟೋ ಕೋಲ್ಯಾಜ್
ಇದು ನಿಮ್ಮ ಹಲವು ಫೋಟೋಗಳನ್ನು ಒಟ್ಟಿಗೆ ಸೇರಿಸಿ ಒಂದೇ ಫ್ರೇಮ್ ತಯಾರಿಸಲು ನೆರವು ನೀಡುತ್ತೆ. ಸುಮಾರು 120 ವಿಧಧ ಫ್ರೇಮ್ ಗಳನ್ನು ಇದು ಒದಗಿಸುತ್ತೆ. ಇದು ಕೂಡ ಅಷ್ಟೇ ಹಲವು ಬೇರೆಬೇರೆ ಆಪ್ ಗಳನ್ನು ತೋರಿಸುತ್ತಲೇ ಇದ್ದು ನಿಮಗೆ ಹಿಂಸೆ ನೀಡುತ್ತೆ.
• ಕ್ಲೀನ್ ಮಾಸ್ಟರ್
ಬ್ಯಾಟರಿ ಸೇವ್ ಮಾಡಲು, ಫೋನಿನ ಸ್ಪೀಡ್ ಹೆಚ್ಚಿಸಲು, ಪೋನನ್ನು ಆಪ್ಟಿಮೈಸ್ ಮಾಡಲು ಬಳಕೆ ಮಾಡಲಾಗುತ್ತೆ.ಆದರೆ ಇದೆಲ್ಲವೂ ಒಂದು ಬಂಡಲ್ ಬಡಾಯಿ ಅಷ್ಟೇ. ಯಾವ ಘನಂದಾರಿ ಕೆಲಸವನ್ನೂ ಈ ಅಪ್ಲಿಕೇಷನ್ ಮಾಡುವುದಿಲ್ಲ. ಒಂದಾನೊಂದು ಕಾಲದಲ್ಲಿ ಅಲ್ಪಮಟ್ಟಿಗೆ ಈ ಆಪ್ ಸಹಾಯ ಮಾಡುತ್ತಿತ್ತು. ಆದರೆ ಈಗ RAM ಸ್ಮಾರ್ಟ್ ಫೋನ್ ಗಳಲ್ಲಿ ಒಂದು ಸಮಸ್ಯೆಯಾಗಿ ಉಳಿದಿಲ್ಲ.
• ಆಂಟಿ ವೈರಸ್ ಆಪ್

ಲೆಕ್ಕಕ್ಕೆ ಸಿಗದಷ್ಟು ಆಂಟಿ ವೈರಸ್ ಆಪ್ ಗಳಿವೆ ಆದರೆ ಅದ್ಯಾವುದೂ ನಿಮ್ಮ ಅಗತ್ಯಕ್ಕೆ ಬೇಕಾಗಿಲ್ಲ. ಇವು ಕೆಟ್ಟ ಆಪ್ ಗಳೇನಲ್ಲ ಆದರೂ ಈ ಆಪ್ ಗಳ ಅಗತ್ಯತೆ ನಿಮ್ಮ ಫೋನಿಗೆ ಇರುವುದಿಲ್ಲ.


Click it and Unblock the Notifications








