Home
Apps

ವಾಟ್ಸ್ ಆಪ್ ನಲ್ಲಿ ಯಾರನ್ನಾದರೂ ಬ್ಲಾಕ್ ಮಾಡಿದರೆ ಏನಾಗುತ್ತೆ ಗೊತ್ತಾ?

By Gizbot Bureau

ವಾಟ್ಸ್ ಆಪ್ ಪ್ರಸಿದ್ಧ ಮೆಸೇಜಿಂಗ್ ಆಪ್ ಮತ್ತು ತಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಉದ್ದೇಶದಿಂದ ಹೆಚ್ಚಿನವರು ವಾಟ್ಸ್ ಆಪ್ ನ್ನು ಬಳಕೆ ಮಾಡಿಯೇ ಮಾಡುತ್ತಾರೆ. ಮೀಡಿಯಾ ಫೈಲ್ಸ್, ಡಾಕ್ಯುಮೆಂಟ್, ಕಾಂಟ್ಯಾಕ್ಟ್ಸ್, ಲೊಕೇಷನ್ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ಇದು ಬಹಳ ಅತ್ಯುತ್ತಮವಾಗಿರುವ ಫ್ಲ್ಯಾಟ್ ಫಾರ್ಮ್ ಆಗಿದೆ.

ವಾಟ್ಸ್ ಆಪ್

ಆದರೆ ಕೆಲವು ಸಂದರ್ಬದಲ್ಲಿ ಕೆಲವರನ್ನು ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಒಂದು ವೇಳೆ ನೀವು ವಾಟ್ಸ್ ಆಪ್ ನಲ್ಲಿ ಯಾರನ್ನಾದರೂ ಬ್ಲಾಕ್ ಮಾಡಬೇಕು ಎಂದು ಬಯಸಿದ್ದೇ ಆದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳು ನಿಮ್ಮಲ್ಲಿ ಉದ್ಭವವಾಗುವ ಸಾಧ್ಯತೆ ಇದೆ.

ವಾಟ್ಸ್ ಆಪ್ ಆಂಡ್ರಾಯ್ಡ್ ಬೇಟಾದಲ್ಲಿ ನೋಟಿಫಿಕೇಷನ್ ನಲ್ಲಿ ಮ್ಯೂಟ್ ಬಟನ್ನಿನ ಲಭ್ಯತೆ

ವಾಟ್ಸ್ ಆಪ್ ಆಂಡ್ರಾಯ್ಡ್ ಬೇಟಾದಲ್ಲಿ ನೋಟಿಫಿಕೇಷನ್ ನಲ್ಲಿ ಮ್ಯೂಟ್ ಬಟನ್ನಿನ ಲಭ್ಯತೆ

ಯಾರನ್ನಾದರೂ ನೀವು ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡಿದ ನಂತರ ಏನೆಲ್ಲಾ ಬದಲಾವಣೆಗಳಾಗುತ್ತದೆ ಎಂಬ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಒಂದು ವೇಳೆ ಯಾವುದೋ ವ್ಯಕ್ತಿ ನಿಮ್ಮ ಪ್ರೊಫೈಲ್ ಪೋಟೋವನ್ನು ನೋಡಲು ಸಾಧ್ಯವಾಗುತ್ತಿದ್ದರೆ, ನೀವು ವಾಟ್ ಆಪ್ ನ್ನು ಕೊನೆಯ ಬಾರಿ ನೋಡಿದ್ದು ಯಾವಾಗ ಎಂಬೆಲ್ಲಾ ಅಂಶಗಳು ಇನ್ನೂ ಕೂಡ ನೋಡಲು ಸಾಧ್ಯವಾಗುತ್ತಿದ್ದಲ್ಲಿ ನೀವು ಅವರನ್ನು ಬ್ಲಾಕ್ ಮಾಡಿಲ್ಲದೇ ಇರುವ ಸಾಧ್ಯತೆಗಳಿವೆ. ಯಾವುದಕ್ಕೂ ಒಬ್ಬ ವ್ಯಕ್ತಿಯನ್ನು ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡಿದ ನಂತರ ಏನೆಲ್ಲಾ ಆಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ.

ಬ್ಲಾಕ್ ಮಾಡಲಾಗಿರುವ ಕಾಂಟ್ಯಾಕ್ಟ್ ನಿಂದ ಡೆಲಿವರಿ ಮಾಡಲಾಗಿರುವ ಮೆಸೇಜ್ ಗಳು ಸೆಂಡ್ ಆಗುವುದಿಲ್ಲ

ಬ್ಲಾಕ್ ಮಾಡಲಾಗಿರುವ ಕಾಂಟ್ಯಾಕ್ಟ್ ನಿಂದ ಡೆಲಿವರಿ ಮಾಡಲಾಗಿರುವ ಮೆಸೇಜ್ ಗಳು ಸೆಂಡ್ ಆಗುವುದಿಲ್ಲ

ಒಂದು ವೇಳೆ ನೀವು ವಾಟ್ಸ್ ಆಪ್ ನಲ್ಲಿ ಯಾರನ್ನೋ ಬ್ಲಾಕ್ ಮಾಡಿದ್ದೀರಿ ಎಂದಾದರೆ ಆ ವ್ಯಕ್ತಿ ಬ್ಲಾಕ್ ಆಗಿರುವವರೆಗೆ ಅವರು ನಿಮಗೆ ಕಳುಹಿಸಿದ ಯಾವುದೇ ಮೆಸೇಜ್ ಗಳು ಕೂಡ ನಿಮಗೆ ತಲುಪುವುದಿಲ್ಲ.ಕಾಂಟ್ಯಾಕ್ಟ್ ನ್ನು ಅನ್ ಬ್ಲಾಕ್ ಮಾಡಿದ ನಂತರವೂ ಕೂಡ ಬ್ಲಾಕ್ ಆದ ಸಂದರ್ಬದಲ್ಲಿ ಕಳುಹಿಸಲಾದ ಮೆಸೇಜ್ ಗಳು ನಿಮಗೆ ಡೆಲಿವರ್ ಆಗುವುದಿಲ್ಲ.

ನಿಮ್ಮ ಲಾಸ್ಟ್ ಸೀನ್ ಅವರಿಗೆ ಕಾಣಿಸುವುದಿಲ್ಲ

ಬ್ಲಾಕ್ ಮಾಡಲಾದ ವ್ಯಕ್ತಿಯು ನಿಮ್ಮ ಆನ್ ಲೈನ್ ಮಾಹಿತಿಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ವಾಟ್ಸ್ ಆಪ್ ನ್ನು ನೀವು ಕೊನೆಯ ಬಾರಿ ಯಾವಾಗ ನೋಡಿದ್ದೀರಿ ಎಂಬುದು ಅವರಿಗೆ ತಿಳಿಯುವುದಿಲ್ಲ. ಇನ್ನು ನಿಮ್ಮ ಕಾಂಟ್ಯಾಕ್ಟ್ಸ್ ಗೆ ಲಾಸ್ಟ್ ಸೀನ್ ಆಯ್ಕೆಯನ್ನು ಹೈಡ್ ಮಾಡಿದಾಗಲೂ ಕೂಡ ನೋಡುವುದಕ್ಕೆ ಸಾಧ್ಯವಾಗುವುದಿಲ್ಲ.

ಸ್ಟೇಟಸ್ ಮೆಸೇಜ್ ಗಳು ಹಿಡನ್ ಆಗಿರುತ್ತದೆ

ಸ್ಟೇಟಸ್ ಮೆಸೇಜ್ ಗಳು ಹಿಡನ್ ಆಗಿರುತ್ತದೆ

ಲಾಸ್ಟ್ ಸೀನ್ ಮಾಹಿತಿಯಂತೆಯೇ ವಾಟ್ಸ್ ಆಪ್ ನ ಸ್ಟೇಟಸ್ ಮೆಸೇಜ್ ಗಳು ಪ್ಲ್ಯಾಟ್ ಫಾರ್ಮ್ ನಲ್ಲಿ ಬ್ಲಾಕ್ ಆಗಿರುವ ಕಾಂಟ್ಯಾಕ್ಟ್ ಗಳಿಗೆ ಹಿಡನ್ ಆಗಿರುತ್ತದೆ. ಬ್ಲಾಕ್ ಆಗಿರುವ ವ್ಯಕ್ತಿಯು ನಿಮ್ಮ ವಾಟ್ಸ್ ಆಪ್ ಸ್ಟೇಟಸ್ ನ್ನು ಆತ ಅನ್ ಬ್ಲಾಕ್ ಆದ ನಂತರ ಮಾತ್ರವೇ ನೋಡುವುದಕ್ಕೆ ಅವಕಾಶವಿರುತ್ತದೆ.

ನಿಮ್ಮ ಪ್ರೊಫೈಲ್ ಪಿಕ್ಚರ್ ಕೂಡ ವಿಸಿಬಲ್ ಆಗುವುದಿಲ್ಲ

ನಿಮ್ಮ ಪ್ರೊಫೈಲ್ ಪಿಕ್ಚರ್ ಕೂಡ ವಿಸಿಬಲ್ ಆಗುವುದಿಲ್ಲ

ವಾಟ್ಸ್ ಆಪ್ ನಲ್ಲಿ ಬ್ಲಾಕ್ ಆಗಿರುವ ಕಾಂಟ್ಯಾಕ್ಟ್ ನವರಿಗೆ ನಿಮ್ಮ ಪ್ರೊಫೈಲ್ ಫೋಟೋ ನೋಡುವುದಕ್ಕೆ ಅವಕಾಶವಿರುವುದಿಲ್ಲ. ಅವರಿಗೆ ನಿಮ್ಮ ವಾಟ್ಸ್ ಆಪ್ ಪ್ರೊಫೈಲ್ ನಲ್ಲಿ ಯಾವುದೇ ಚಿತ್ರವೂ ಕೂಡ ಕಾಣಿಸುವುದಿಲ್ಲ. ಬ್ಲ್ಯಾಂಕ್ ಆಗಿ ಇರುತ್ತದೆ.

ಅವರು ನಿಮಗೆ ಕರೆ ಮಾಡುವುದಕ್ಕೆ ಸಾಧ್ಯವಿಲ್ಲ

ಅವರು ನಿಮಗೆ ಕರೆ ಮಾಡುವುದಕ್ಕೆ ಸಾಧ್ಯವಿಲ್ಲ

ಬ್ಲಾಕ್ ಆಗಿರುವ ವಾಟ್ಸ್ ಆಪ್ ಕಾಂಟ್ಯಾಕ್ಟ್ ನವರು ಯಾವುದೇ ಮೆಸೇಜ್ ನ್ನು ಪ್ಲ್ಯಾಟ್ ಫಾರ್ಮ್ ನಲ್ಲಿ ನಿಮಗೆ ಕಳುಹಿಸುವುದಕ್ಕೆ ಅವಕಾಶವಿರುವುದಿಲ್ಲ. ಅವರನ್ನು ಅನ್ ಬ್ಲಾಕ್ ಮಾಡುವವರೆಗೆ ಕೇವಲ ಮೆಸೇಜ್ ಗಳನ್ನು ಮಾತ್ರವಲ್ಲ ಬದಲಾಗಿ ಕರೆಗಳನ್ನು (ವೀಡಿಯೋ/ಆಡಿಯೋ) ಮಾಡುವುದಕ್ಕೂ ಕೂಡ ಅವಕಾಶವಿರುವುದಿಲ್ಲ.

ರೀಡ್ ರಿಸಿಪ್ಟ್ ಕಾಣಿಸುವುದಿಲ್ಲ

ರೀಡ್ ರಿಸಿಪ್ಟ್ ಕಾಣಿಸುವುದಿಲ್ಲ

ಈಗಾಗಲೇ ತಿಳಿಸಿರುವಂತೆ ಬ್ಲಾಕ್ ಆಗಿರುವ ಕಾಂಟ್ಯಾಕ್ಟ್ ನವರು ಯಾವುದೇ ರೀತಿಯ ಮೆಸೇಜ್ ಗಳನ್ನು ನಿಮಗೆ ಕಳುಹಿಸುವುದಕ್ಕೆ ಸಾಧ್ಯವಿಲ್ಲ ಎಂದಾದ ಮೇಲೆ ಅವರಿಗೆ ರೀಡ್ ರಿಸಿಪ್ಟ್ ಕೂಡ ಲಭ್ಯವಾಗುವುದಿಲ್ಲ. ನೀಲಿ ವರ್ಣದ ಟಿಕ್ ಮಾರ್ಕ್ ಅಥವಾ ನೀವು ಅವರ ಮೆಸೇಜ್ ನ್ನು ಓದಿದ್ದೀರಿ ಎಂಬ ಬಗೆಗಿನ ಯಾವುದೇ ಮಾಹಿತಿಯೂ ಕೂಡ ಅವರಿಗೆ ಸಿಗುವುದಿಲ್ಲ.

ಗ್ರೂಪ್ ಚಾಟ್ ಗೆ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ

ಗ್ರೂಪ್ ಚಾಟ್ ಗೆ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ

ಬ್ಲಾಕ್ ಮಾಡಲಾಗಿರುವ ವ್ಯಕ್ತಿಗಳು ವಯಕ್ತಿಕ ಮೆಸೇಜ್ ಗಳನ್ನು ಕಳುಹಿಸುವುದಕ್ಕೆ ಅವಕಾಶವಿರುವುದಿಲ್ಲ ಆದರೆ ಗ್ರೂಪ್ ಚಾಟ್ ಗೆ ಯಾವುದೇ ರೀತಿಯ ಪರಿಣಾಮವನ್ನೂ ಕೂಡ ಇದು ಮಾಡುವುದಿಲ್ಲ.ಬ್ಲಾಕ್ ಮಾಡಲಾಗಿರುವ ವ್ಯಕ್ತಿಗಳು ನಿಮ್ಮ ಯಾವುದಾದರೂ ಗುಂಪಿನಲ್ಲಿ ಇದ್ದಿದ್ದೇ ಆದಲ್ಲಿ ಅವರು ಗ್ರೂಪ್ ಮೆಸೇಜ್ ಗಳನ್ನು ಕಳುಹಿಸುವುದಕ್ಕೆ ಸಾಧ್ಯವಿರುತ್ತದೆ ಮತ್ತು ಅದು ಗ್ರೂಪಿನಲ್ಲಿ ನಿಮಗೆ ಕಾಣಿಸುತ್ತದೆ.

ಬ್ಲಾಕ್ ಮಾಡಿದವರನ್ನು ಅನ್ ಬ್ಲಾಕ್ ಮಾಡುವವರೆಗೆ ನೀವು ಅವರಿಗೆ ಮೆಸೇಜ್ ಅಥವಾ ಕರೆಗಳನ್ನು ಮಾಡುವುದಕ್ಕೆ ಸಾಧ್ಯವಿಲ್ಲ

ಬ್ಲಾಕ್ ಮಾಡಿದವರನ್ನು ಅನ್ ಬ್ಲಾಕ್ ಮಾಡುವವರೆಗೆ ನೀವು ಅವರಿಗೆ ಮೆಸೇಜ್ ಅಥವಾ ಕರೆಗಳನ್ನು ಮಾಡುವುದಕ್ಕೆ ಸಾಧ್ಯವಿಲ್ಲ

ನೀವು ಯಾವುದೇ ವ್ಯಕ್ತಿಯನ್ನು ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡಿದಾಗ ಕೇವಲ ಅವರು ಮಾತ್ರವೇ ಅಲ್ಲ ಬದಲಾಗಿ ನೀವೂ ಕೂಡ ಆ ವ್ಯಕ್ತಿಗೆ ಮೆಸೇಜ್ ಗಳನ್ನು ಅಥವಾ ಕರೆಗಳನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಮೆಸೇಜ್ ಅಥವಾ ಕರೆಗಳನ್ನು ಮಾಡಬೇಕು ಎಂದಾದಲ್ಲಿ ಅವರನ್ನು ನೀವು ಅನ್ ಬ್ಲಾಕ್ ಮಾಡಿದ ನಂತರವಷ್ಟೇ ಅವಕಾಶವಿರುತ್ತದೆ.

ವಾಟ್ಸ್ ಆಪ್ ನಿಂದ ಕಾಂಟ್ಯಾಕ್ಟ್ ನ್ನು ರಿಮೂವ್ ಮಾಡುವುದಕ್ಕೆ ಸಾಧ್ಯವಿಲ್ಲ

ವಾಟ್ಸ್ ಆಪ್ ನಿಂದ ಕಾಂಟ್ಯಾಕ್ಟ್ ನ್ನು ರಿಮೂವ್ ಮಾಡುವುದಕ್ಕೆ ಸಾಧ್ಯವಿಲ್ಲ

ನೀವು ಬ್ಲಾಕ್ ಮಾಡಲಾಗಿರುವ ವ್ಯಕ್ತಿಯ ಕಾಂಟ್ಯಾಕ್ಟ್ ಮಾಹಿತಿಯು ವಾಟ್ಸ್ ಆಪ್ ನ ಕಾಂಟ್ಯಾಕ್ಟ್ ನಿಂದ ರಿಮೂವ್ ಆಗಿರುವುದಿಲ್ಲ. ಕೇವಲ ಅವರ ಆಕ್ಟಿವಿಟಿಗಳು ಬ್ಲಾಕ್ ಆಗಿರುತ್ತದೆ ಅಷ್ಟೇ.ಕಾಂಟ್ಯಾಕ್ಟ್ ಅಳಿಸಿಹೋಗಬೇಕು ಎಂದಾದರೆ ನೀವು ನಿಮ್ಮ ಫೋನ್ ಬುಕ್ ಅಥವಾ ಅಡ್ರೆಸ್ ಬುಕ್ ನಿಂದ ಕಾಂಟ್ಯಾಕ್ಟ್ ನ್ನು ರಿಮೂವ್ ಮಾಡಿರಬೇಕು.

ಪ್ರತಿಯೊಂದು ನಿಮ್ಮ ಕೈಯಲ್ಲೇ ಇರುತ್ತದೆ

ಪ್ರತಿಯೊಂದು ನಿಮ್ಮ ಕೈಯಲ್ಲೇ ಇರುತ್ತದೆ

ಯಾವುದೇ ವ್ಯಕ್ತಿಯನ್ನು ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡುವುದು ಅಥವಾ ಅನ್ ಬ್ಲಾಕ್ ಮಾಡುವುದು ನಿಮ್ಮ ಕೈಯಲ್ಲೇ ಇರುತ್ತದೆ. ನೀವು ಇದನ್ನು ಸುಲಭದಲ್ಲಿ ಮಾಡಬಹುದು.ಕಾಂಟ್ಯಾಕ್ಟ್ ನ್ನು ಲಾಂಗ್ ಪ್ರೆಸ್ ಮಾಡುವು ಮೂಲಕ ನೀವು ಬ್ಲಾಕ್ ಮಾಡಿರುವ ವ್ಯಕ್ತಿಯನ್ನು ಅನ್ ಬ್ಲಾಕ್ ಮಾಡಬಹುದು ಮತ್ತು ಅವರೊಂದಿಗೆ ಮಾತುಕತೆಯನ್ನು ಮುಂದುವರಿಸಬಹುದು.

Best Mobiles in India

English summary
10 Things That’ll happen if you block someone on WhatsApp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+