ನಿಮಗೆ ಗೊತ್ತಿರದ ಸ್ಮಾರ್ಟ್ ಫೋನಿನ 10 ಬಳಕೆಗಳು

|

ಒಂದು ಅಂದಾಜು ಲೆಕ್ಕಾಚಾರದ ಪ್ರಕಾರ ನಾವು ಪ್ರತಿದಿನ 4 ತಾಸಿಗೂ ಅಧಿಕ ಸಮಯ ನಮ್ಮ ಸ್ಮಾರ್ಟ್ ಫೋನ್ ನ್ನು ಬಳಕೆ ಮಾಡುತ್ತೇವೆ.ಆದರೆ ಈ ಅಭ್ಯಾಸ ಹೊಂದಿದ್ದರೂ ಕೂಡ ಕೆಲವು ಕುತೂಹಲಕಾರಿ ಫಂಕ್ಷನ್ ಗಳ ಬಗ್ಗೆ ಮತ್ತು ಸ್ಮಾರ್ಟ್ ಫೋನಿನ ಕೆಲಸದ ಬಗ್ಗೆ ಮತ್ತು ಅನಿರೀಕ್ಷಿತ ಉಪಯೋಗದ ಬಗ್ಗೆ ನಮಗೆ ತಿಳಿದಿರುವುದೇ ಇಲ್ಲ.ಹೆಚ್ಚಿನ ಸಂದರ್ಬದಲ್ಲಿ ಡೆವಲಪರ್ ಗಳು ಸ್ಮಾರ್ಟ್ ಫೋನ್ ನಲ್ಲಿ ವಿಭಿನ್ನ ಆಪ್ ಗಳನ್ನು ಇಂಪ್ಲಿಮೆಂಟ್ ಮಾಡಿರುತ್ತಾರೆ ಮತ್ತು ಅವು ಸಾಕಷ್ಟು ಉತ್ತಮ ಐಡಿಯಾಗಳನ್ನು ಹೊಂದಿರುತ್ತದೆ.

ನಿಮಗೆ ಗೊತ್ತಿರದ ಸ್ಮಾರ್ಟ್ ಫೋನಿನ 10 ಬಳಕೆಗಳು

ಜೀವನದ ಕೆಲವು ಪ್ರಮುಖ ಸನ್ನಿವೇಶಗಳಲ್ಲಿ ನಿಮ್ಮ ಸ್ಮಾರ್ಟ್ ಫೋನ್ ನಿಮ್ಮ ನೆರವಿಗೆ ಬರುತ್ತದೆ. ಅಂತಹ ಹೆಲವು ಫೀಚರ್ ಗಳನ್ನು ನಾವಲ್ಲಿ ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ನಿಮ್ಮ ಕಾರಿನಲ್ಲಿ ಪ್ರೊಜೆಕ್ಟ್ ವರ್ಧಿತ ರಿಯಾಲಿಟಿ ಮ್ಯಾಪ್:

ಒಂದು ವೇಳೆ ನೀವು ರಾತ್ರಿಯಲ್ಲಿ, ಮಂಜಿನ ಹನಿಯಲ್ಲಿ, ಮಳೆಯಲ್ಲಿ ಅಥವಾ ಅಪರಿಚಿತ ಸ್ಥಳವೊಂದರಲ್ಲಿ ಕಾರ್ ಡ್ರೈವ್ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ ಆಗ Hudway ಯನ್ನು ನಿಮ್ಮ ಫೋನಿನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ ಮತ್ತು ನೀವು ತಲುಪಬೇಕಾಗಿರುವ ಸ್ಥಳವನ್ನು ಸೆಟ್ ಮಾಡಿ ಇಟ್ಟುಕೊಳ್ಳಿ ಮತ್ತು ನಿಮ್ಮ ಫೋನ್ ನ್ನು ಡ್ಯಾಷ್ ಬೋರ್ಡ್ ನಲ್ಲಿ ಇಟ್ಟುಬಿಡಿ. ಹೆಚ್ಚುವರಿ ಯಾವುದೇ ಇಕ್ವಿಪ್ ಮೆಂಟ್ ಗಳ ಅಗತ್ಯವಿಲ್ಲದೆ ನಿಮ್ಮ ಸ್ಮಾರ್ಟ್ ಫೋನ್ ಜಿಪಿಎಸ್ ಸಹಾಯ ಬಳಸಿ ಮ್ಯಾಪ್ ನ್ನು ಪ್ರೊಜೆಕ್ಟ್ ಮಾಡುತ್ತದೆ.

ನಿಮ್ಮ ಫೋನ್ ಬಾರ್ ಕೋಡ್ ಗಳನ್ನು ರೀಡ್ ಮಾಡುತ್ತದೆ

ಕ್ಯೂಆರ್ ಕೋಡ್ ಗಳನ್ನು ಕೂಡ ರೀಡ್ ಮಾಡುತ್ತದೆ. ಹೆಚ್ಚಿನ ಪ್ರಮುಖ ಮಳಿಗೆಗಳಲ್ಲಿ ಉಚಿತ ಬಾರ್ ಕೋಡ್ ರೀಡರ್ ಇರುತ್ತದೆ ಅದು ಮಾಹಿತಿಗಳನ್ನು ರಿಸೀವ್ ಮಾಡುವ ಪ್ರೊಸೆಸ್ ನ್ನು ಮಾಡುತ್ತದೆ. ಇದು ಎರಡು ಕಾರಣಗಳಿಂದ ಉಪಯುಕ್ತವಾಗಿರುತ್ತದೆ.

1. USPS, UPS , ಫೆಡ್ ಎಕ್ಸ್ ಸಿಸ್ಟಮ್ ನ ಹೆಚ್ಚಿನ ಪ್ಯಾಕೇಜ್ ಗಳಲ್ಲಿನ ಬಾರ್ ಕೋಡ್ ಗಳನ್ನು ಸ್ಕ್ಯಾನ್ ಮಾಡುವುದಕ್ಕೆ ಇದು ನೆರವಾಗುತ್ತದೆ ಮತ್ತು ನಿಮ್ಮ ಗೆಜೆಟ್ ಗೆ ಸ್ವಯಂಚಾಲಿತವಾಗಿ ಇದು ಮಾಹಿತಿಗಳನ್ನು ರವಾನಿಸುತ್ತದೆ.

2. ರೆಡ್ ಲೇಸರ್ ಸೇರಿದಂತೆ ಹಲವು ಆಪ್ ಗಳಲ್ಲಿ ನೀವು ಪ್ರೊಡಕ್ಟ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು ಮತ್ತು ಇತರೆ ಸ್ಟೋರ್ ಗಳಲ್ಲಿ ಇನ್ನೂ ಕಡಿಮೆ ಬೆಲೆಯಲ್ಲಿ ಅಥವಾ ಜವಾಬ್ದಾರಿಯುತವಾಗಿರುವ ಬೆಲೆಯಲ್ಲಿ ಲಭ್ಯವಿದೆಯೇ ಎಂಬುದನ್ನು ಪರೀಕ್ಷಿಸುವುದಕ್ಕೆ ಇದು ನೆರವಾಗುತ್ತದೆ.

ಟೆಲಿಸ್ಕೋಪ್ ಜೊತೆಗೆ ನಿಮ್ಮ ಫೋನ್ ಕೆಲಸ ಮಾಡಬಹುದು

ಇದು ಸಿಂಪಲ್ ಆಗಿದೆ ಆದರೆ ಬಳಹ ಪ್ರಯೋಜನಕಾರಿಯಾಗಿರುತ್ತದೆ ಮತ್ತು ಹೆಚ್ಚಿನವರು ಈ ಬಗ್ಗೆ ತಿಳಿದಿಲ್ಲ. ಫೋನಿನ ಲೆನ್ಸ್ ನ್ನು ನೆರವಾಗಿ ಟೆಲಿಸ್ಕೋಪ್ ನಲ್ಲಿ ಇಡಿ ಮತ್ತು ಇನ್ನೊಂದು ಸೈಡ್ ನಿಂದ ನೀವು ಎನ್ ಲಾರ್ಜ್ ಆಗಿರುವ ಇಮೇಜ್ ನ್ನು ಕ್ಯಾಪ್ಚರ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಈ ಟ್ರಿಕ್ ಬೈನಾಕ್ಯುಲರ್ ನಲ್ಲೂ ಕೂಡ ಕೆಲಸ ಮಾಡುತ್ತದೆ.

ನಿಮ್ಮ ಫೋನಿನ ಕ್ಯಾಮರಾ ಚರ್ಮದ ಒಳಗೆ ರಕ್ತ ಪಲ್ಸ್ ಮಾಡುವುದನ್ನು ನೋಡಬಹುದು

ಸ್ಮಾರ್ಟ್ ಫೋನ್ ಕ್ಯಾಮರಾ ಬಳಸಿ ನಿಮ್ಮ ಇನ್ಸೆಂಟ್ ಹಾರ್ಟ್ ರೇಟ್ (ಹೃದಯ ಬಡಿತ) ವನ್ನು ತಿಳಿಯುವುದಕ್ಕೆ ಸಾಧ್ಯವಿದೆ. ಇದು ಐಓಎಸ್, ಆಂಡ್ರಾಯ್ಡ್ ಮತ್ತು ವಿಂಡೋಸ್ ಗಳಲ್ಲೂ ಲಭ್ಯವಿದೆ. ಕ್ಯಾಮರಾದ ಮುಂಭಾಗದಲ್ಲಿ ನಿಮ್ಮ ಬೆರಳನ್ನು ಇಡಿ ಮತ್ತು ಆಪ್ ನಿಮ್ಮ ಚರ್ಮದ ಬಣ್ಣದಲ್ಲಿ ಸಣ್ಣ ಬದಲಾವಣೆ ಆಗುವುದನ್ನು ಗಮನಿಸುತ್ತದೆ ಅದು ರಕ್ತದ ಚಲನೆಯಿಂದಾಗಿ ನಡೆಯುವ ಪ್ರಕ್ರಿಯೆ ಆಗಿರುತ್ತದೆ. ಕೆಲವು ಸಮಯದ ನಂತರ, ಇದು ಹೃದಯ ಬಡಿತವನ್ನು ಲೆಕ್ಕಾಚಾರ ಹಾಕುವುದಕ್ಕೆ ಸಮರ್ಥವಾಗಿರುತ್ತದೆ.ಐಓಎಸ್ ನಲ್ಲಿರುವ ಕಾರ್ಡಿಯೋ ಆಪ್ ನಿಮ್ಮ ಹೃದಯದ ರೇಟ್ ನ್ನು ಕೂಡ ಲೆಕ್ಕಾಚಾರ ಹಾಕುತ್ತದೆ.

ಹಳೆಯ ನೆಗೆಟೀವ್ಸ್ ಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೈಜ್ ಮಾಡುವುದಕ್ಕೆ ಸ್ಮಾರ್ಟ್ ಫೋನ್ ಬಳಸಬಹುದು

ನೆಗೆಟೀವ್ಸ್ ಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೈಜ್ ಮಾಡುವುದಕ್ಕೆ ಇದೇನು ಬೆಸ್ಟ್ ವಿಧಾನವಲ್ಲ ಆದರೆ ಒಂದು ವೇಳೆ ನಿಮಗೆ ತುರ್ತಾಗಿ ಇದರ ಅಗತ್ಯಬಿದ್ದಿದ್ದರೆ ಖಂಡಿತ ಮೊಬೈಲ್ ಫೋನ್ ನ್ನು ಬಳಕೆ ಮಾಡಿ ನೆಗೆಟೀವ್ಸ್ ಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೈಜ್ ಮಾಡಬಹುದು. ಕೆಲವು ಲಭ್ಯವಿರುವ ಆಪ್ ಗಳನ್ನು ಕೂಡ ಇದಕ್ಕಾಗಿ ಬಳಕೆ ಮಾಡಬಹುದು ಉದಾಹರಣೆಗೆ HELMUT Film Scanner (ಆಂಡ್ರಾಯ್ಡ್ ನಲ್ಲಿ ಲಭ್ಯವಿದೆ).

ಫಾಂಟ್ಸ್, ವಸ್ತುಗಳು ಮತ್ತು ರೆಸ್ಟೊರೆಂಟ್ ಗಳನ್ನು ಫೋನ್ ಕ್ಯಾಮರಾ ಗುರುತಿಸುತ್ತದೆ.

ಆಪ್ಸ್ ಗಳಾದ Amazon's Flow (ಐಓಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಲಭ್ಯವಿದೆ.) ಬಳಸಿ ವಸ್ತುಗಳು, ಪ್ಲೇಸ್, ಮತ್ತು ಟೆಕ್ಸ್ಟ್ ಗಳನ್ನು ಗುರುತಿಸುವ ಕೆಲಸವನ್ನು ಸಾಧಿಸಬಹುದು. ಗೂಗಲ್ ಲೆನ್ಸ್ ನ ಹೊಸ ಫಂಕ್ಷನ್ ಗೂಗಲ್ ಅಸಿಸ್ಟೆಂಟ್ ನ ಭಾರವಾಗಿರುವ ಇದು (ಸದ್ಯ ಐಓಎಸ್ ನಲ್ಲಿ ಲಭ್ಯ) ರೆಸ್ಟೋರೆಂಟ್ ನ ಫೋಟೋ ಗುರುತಿಸಿ ರೆಸ್ಟೊರೆಂಟ್ ನ ಸಂಪೂರ್ಣ ಮಾಹಿತಿ ನೀಡುತ್ತದೆ. ಈ ಮಾಹಿತಿಯು ಈ ಹಿಂದಿನ ವಿಸಿಟರ್ ಗಳ ಅಭಿಪ್ರಾಯವನ್ನು ಆಧರಿಸಿ ಇರುತ್ತದೆ.ಆಪ್ WhatTheFont ನಿಂದಾಗಿ ನೀವು ಯಾವುದೇ ಪಿಕ್ಚರ್ ನ್ನು ಸ್ಕ್ಯಾನ್ ಮಾಡಿದಾಗ ಅದರಲ್ಲಿರುವ ಅಕ್ಷನ್ ಯಾವುದು ಎಂಬುದನ್ನು ಗುರುತಿಸುವುದಕ್ಕೆ ಸಾಧ್ಯವಾಗುತ್ತದೆ.

ವೀಡಿಯೋ ರೆಕಾರ್ಡಿಂಗ್ ಮಾಡುತ್ತಲೇ ನಿಮ್ಮ ಫೋನ್ ಫೋಟೋ ಕ್ಲಿಕ್ಕಿಸುವುದಕ್ಕೆ ಸಹಾಯ ಮಾಡುತ್ತದೆ.

ಒಂದು ವೇಳೆ ನೀವು ಫೋಟೋ ಕ್ಲಿಕ್ಕಿಸಬೇಕು ಎಂದುಕೊಂಡಿದ್ದಾಗ ಅಚಾನಕ್ ಆಗಿ ವೀಡಿಯೋ ಮೋಡ್ ತೆಗೆದುಬಿಟ್ಟರೆ ಚಿಂತೆ ಮಾಡಬೇಡಿ. ಐಫೋನ್ ನಿಮಗೆ ಈ ಎರಡೂ ಆಕ್ಷನ್ ನ್ನು ಏಕಕಾಲದಲ್ಲಿ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಅದಕ್ಕಾಗಿ ನೀವು ಶಟರ್ ಬಟನ್ ನ್ನು ಪ್ರೆಸ್ ಮಾಡಬೇಕಾಗುತ್ತದೆ. ಅದು ವೀಡಿಯೋ ರೆಕಾರ್ಡಿಂಗ್ ಬಟನ್ ನ ಪಕ್ಕದಲ್ಲೇ ಇರುತ್ತದೆ. ಸಾಮಾನ್ಯವಾಗಿ ಕ್ಲಿಕ್ಕಿಸುವ ಫೋಟೋಗಳಷ್ಟು ಉತ್ತಮ ಕ್ವಾಲಿಟಿಯನ್ನು ಇದು ಹೊಂದಿಲ್ಲದೆ ಇರಬಹುದು ಆದರೆ ನೀವು ಯಾವುದೋ ಸನ್ನಿವೇಶದ ಕ್ಲಿಕ್ ನ್ನು ಮಿಸ್ ಮಾಡಿಕೊಳ್ಳುವುದನ್ನು ಇದರಿಂದ ತಪ್ಪಿಸಬಹುದು.

ರೂಲರ್ ರೀತಿಯಲ್ಲಿ ನಿಮ್ಮ ಕ್ಯಾಮರಾವನ್ನು ಬಳಸಿ

Ruler App ನಂತಹ ಆಪ್ ಗಳು ಯಾವುದೇ ವಸ್ತುವಿನ ಫೋಟೋದಲ್ಲಿ ಸೈಜ್ ನ್ನು ಲೆಕ್ಕಾಚಾರ ಮಾಡುವುದಕ್ಕೆ ಅವಕಾಶ ನೀಡುತ್ತದೆ ಅಥವಾ ಸ್ಕ್ರೀನ್ ನಲ್ಲಿ ಕನ್ವೆನ್ಶನಲ್ ರೂಲರ್ ಬಳಸಿ ಸಣ್ಣ ವಸ್ತುವನ್ನು ಎಷ್ಟು ಅಳತೆ ಇದೆ ಎಂದು ಕಂಡುಹಿಡಿಯಲು ಅನುಕೂಲವಾಗುತ್ತದೆ. ಇದು ಆರ್ಕಿಟೆಕ್ಟ್ ಗಳಿಗೆ, ಬಿಲ್ಡರ್ ಗಳಿಗೆ ಬಹಳ ಉಪಯುಕ್ತವಾಗುತ್ತದೆ.

ಸೈನ್ಸ್ ಫಿಕ್ಷನ್ ಥರ್ಮಲ್ ಕ್ಯಾಮರಾದಂತೆ ನಿಮ್ಮ ಸ್ಮಾರ್ಟ್ ಫೋನ್ ನ್ನು ಬಳಕೆ ಮಾಡಿ.

ಮಿಲಿಟರಿ ಮತ್ತು ಇತರೆ ಅಧ್ಯಯನಕಾರರಿಗಾಗಿ Seek Thermal ತಂತ್ರಜ್ಞಾನವನ್ನು ಕ್ರಿಯೇಟ್ ಮಾಡಲಾಗಿದೆ ಮತ್ತು ಇದೀಗ ಎಲ್ಲರಿಗೂ ಲಭ್ಯವಿರುತ್ತದೆ. ಈ ಸಣ್ಣ ಕ್ಯಾಮರಾವನ್ನು ನಿಮ್ಮ ಫೋನಿಗೆ ಅಟ್ಯಾಚ್ ಮಾಡಬಹುದು ಮತ್ತು ಅದರಿಂದ ಥರ್ಮಲ್ ಇಮೇಜ್ ನ್ನು ಪಡೆಯಬಹುದು.

ಮೈಕ್ರೋಸ್ಕೋಪ್ ಆಗಿ ನಿಮ್ಮ ಸ್ಮಾರ್ಟ್ ಫೋನ್ ನ್ನು ಬಳಸಿ

ನಿಮ್ಮ ಫೋನ್ ಗೆ ಸಣ್ಣದೊಂದು ಲೆನ್ಸ್ ಅಳವಡಿಸಿಕೊಂಡರೆ ಸುಲಭವಾಗಿ ಕೊಂಡೊಯ್ಯಬಹುದಾದ ಡಿಜಿಟಲ್ ಮೈಕ್ರೋಸ್ಕೋಪ್ ಆಗಿ ಬಳಕೆ ಮಾಡಿಕೊಳ್ಳಬಹುದು. ಇದನ್ನು ನೀವು ಯಾವುದೇ ಲೇಸರ್ ಪಾಯಿಂಟರ್ ನಲ್ಲಿ ಕಾಣಬಹುದಾಗಿದೆ. ಈ ಅಧ್ಬುತ ಹ್ಯಾಕಿಂಗ್ ನಿಂದಾಗಿ ನೀವು ಮೈಕ್ರೋ ಜಗತ್ತನ್ನು ಕಾಣಬಹುದು ಮತ್ತು ಅಧ್ಬುತ ಮ್ಯಾಗ್ನಿಫೈಡ್ ಆಗಿರುವ ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.

Best Mobiles in India

English summary
apps use and tricks in smartphone.to know more visit to kannada,gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more