2019 ರಲ್ಲಿ ಈ 10 ವಿಧದಲ್ಲಿ ವಾಟ್ಸ್ ಆಪ್ ಬದಲಾಗಲಿದೆ

|

2018 ರಲ್ಲಿ ನಾವು ವಾಟ್ಸ್ ಆಪ್ ನಲ್ಲಿ ಹಲವು ಹೊಸ ಫೀಚರ್ ಗಳನ್ನು ಗಮನಿಸಿದ್ದೇವೆ. ವಾಟ್ಸ್ ಆಪ್ ಇದೀಗ ಮತ್ತಷ್ಟು ಸುಲಭ ಮತ್ತು ಬಳಕೆದಾರ ಸ್ನೇಹಿಯಾಗಿ ಬದಲಾಗಿದೆ. ಕೆಲವು ಫೀಚರ್ ಗಳು ಈಗಾಗಲೇ ಆನ್ ಲೈನ್ ಆಗಿದ್ದರೆ ಇನ್ನು ಕೆಲವು ಟೆಸ್ಟಿಂಗ್ ಹಂತದಲ್ಲಿದ್ದು ಬೆಟಾ ವರ್ಷನ್ ನಲ್ಲಿ ಲಭ್ಯವಿದೆ.

2019 ರಲ್ಲಿ ಈ 10 ವಿಧದಲ್ಲಿ ವಾಟ್ಸ್ ಆಪ್ ಬದಲಾಗಲಿದೆ

2019 ರಲ್ಲಿ ನಾವು ನಿರೀಕ್ಷಿಸಬಹುದಾಗಿರುವ ವಾಟ್ಸ್ ಆಪ್ ನ ಕೆಲವು ಫೀಚರ್ ಗಳು ಇಲ್ಲಿವೆ ನೋಡಿ.

ಕನ್ಸಿಗೇಟಿವ್ ವಾಯ್ಸ್ ಮೆಸೇಜ್

ಕನ್ಸಿಗೇಟಿವ್ ವಾಯ್ಸ್ ಮೆಸೇಜ್

ಈ ಫೀಚರ್ ನಿಮಗೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸ್ ಆಪ್ ಬಳಸುವ ಬಳಕೆದಾರರಿಗೆ ಕಂಟಿನ್ಯೂಯಸ್ ಆಗಿ ವಾಯ್ಸ್ ಮೆಸೇಜ್ ಗಳನ್ನು ಪ್ಲೇ ಮಾಡುವುದಕ್ಕೆ ನೆರವು ನೀಡುತ್ತದೆ. ವಾಟ್ಸ್ ಆಪ್ ನಲ್ಲಿ ಓದಿರದ ಎರಡು ಅಥವಾ ಅದಕ್ಕಿಂತ ಹೆಚ್ಚು ವಾಯ್ಸ್ ಮೆಸೇಜ್ ಗಳಿದ್ದಾಗ ಈ ಫೀಚರ್ ಆಕ್ಟಿವೇಟ್ ಆಗಿರುತ್ತದೆ.

ಸ್ಟಿಕ್ಕರ್ ಸರ್ಚ್

ಮತ್ತೊಂದು ಫೀಚರ್ ನ್ನು ವಾಟ್ಸ್ ಆಪ್ ಇದೀಗ ಟೆಸ್ಟ್ ಮಾಡುತ್ತಿದೆ. ನಿಮಗೆ ಅಗತ್ಯವಿರುವ ಸ್ಟಿಕ್ಕರ್ ಗಳನ್ನು ಸರ್ಚ್ ಮಾಡುವುದಕ್ಕೆ ಇದು ಅವಕಾಶ ನೀಡುತ್ತದೆ. ಆದಷ್ಟು ಬೇಗನೆ ಈ ಫೀಚರ್ ನಿಮಗೆ ಲಭ್ಯವಾಗುತ್ತದೆ.

ವೆಕೇಷನ್ ಅಥವಾ ಸೈಲೆಂಟ್ ಮೋಡ್:

ವೆಕೇಷನ್ ಅಥವಾ ಸೈಲೆಂಟ್ ಮೋಡ್:

ವಾಬೇಟಾ ಇನ್ಸ್ಫೋ ಐಓಎಸ್ ಆಪ್ ನಲ್ಲಿ ಈ ಫೀಚರ್ ನ್ನು ಕೆಲವು ವಾರಗಳ ಹಿಂದೆ ಗಮನಿಸಿದೆ. ಕೆಲವು ಬಳಕೆದಾರರಲ್ಲಿ ಈಗಾಗಲೇ ಲಭ್ಯವಿರುವ ಸೈಲೆಂಟ್ ಮೋಡ್ ಫೀಚರ್ ನಂತೆಯೇ ಸರಿ. ಬಳಕೆದಾರರು ಬಯಸುವವರೆಗೆ ಮ್ಯೂಟ್ ಆಗಿರುವ ಚಾಟ್ ಗಳು ಆರ್ಕೈವ್ ಆಗುವಂತೆ ಇದು ನೋಡಿಕೊಳ್ಳುತ್ತದೆ.

ವಾಟ್ಸ್ ಆಪ್ ಲಿಂಕ್ಡ್ ಅಕೌಂಟ್:

ಅಕೌಂಟ್ ಪಾಸ್ ವರ್ಡ್ ನ್ನು ರಿಕವರ್ ಮಾಡಿಕೊಳ್ಳುವುದಕ್ಕೆ ನೆರವು ನೀಡುತ್ತದೆ. ಇದುವರೆಗೂ ಪ್ರಕಟಿಸಿರದ ಫೀಚರ್ ಇದಾಗಿದ್ದು ಎಕ್ಸ್ ಟರ್ನಲ್ ಸರ್ವೀಸ್ ಜೊತೆಗೆ ಅಕೌಂಟ್ ಲಿಂಕ್ ಮಾಡುವುದಕ್ಕೆ ನೆರವು ನೀಡುತ್ತದೆ. ಇದು ವಾಟ್ಸ್ ಆಪ್ ಬ್ಯುಸಿನೆಸ್ ಆಪ್ ನ ಗುರಿಯಾಗಿದೆ ಆದರೆ ಕೆಲವು ರೆಫರೆನ್ಸ್ ಗಳನ್ನು ರೆಗ್ಯುಲರ್ ಆಪ್ ನಲ್ಲೂ ಗಮನಿಸುವ ಸಾಧ್ಯತೆ ಇದೆ.

ಡಾರ್ಕ್ ಮೋಡ್: ಯುಐ ನ ಸಂಪೂರ್ಣ ಚರ್ಯೆಯನ್ನೇ ಬದಲಿಸುತ್ತದೆ. ಹೆಸರೇ ಸೂಚಿಸುವಂತೆ ಇದು ವಾಟ್ಸ್ ಆಪ್ ನ್ನು ಕತ್ತಲೆಯಲ್ಲಿ ಚಾಟ್ ಮಾಡುವುದಕ್ಕೆ ಅನುವು ಮಾಡಿಕೊಡುವ ಫೀಚರ್. ಯುಟ್ಯೂಬ್, ಟ್ವೀಟರ್, ಗೂಗಲ್ ಮ್ಯಾಪ್ ನಲ್ಲಿ ಗಮನಿಸಬಹುದಾಗಿರುವ ಸೇಮ್ ಫೀಚರ್ ವಾಟ್ಸ್ ಆಪ್ ನಲ್ಲೂ ಬರುತ್ತದೆ.

ಕ್ಯೂಆರ್ ಮೂಲಕ ಕಾಂಟ್ಯಾಕ್ಟ್ ಮಾಹಿತಿ ಹಂಚಿಕೆ :

ಕ್ಯೂಆರ್ ಮೂಲಕ ಕಾಂಟ್ಯಾಕ್ಟ್ ಮಾಹಿತಿ ಹಂಚಿಕೆ :

ಸುಲಭದ ಮತ್ತು ಸೆಕ್ಯೂರ್ ಆಗಿರುವ ಮಾಹಿತಿ ಹಂಚಿಕೆಯ ತಂತ್ರಜ್ಞಾನವಿದು. ಕಾಂಟ್ಯಾಕ್ಟ್ ಮಾಹಿತಿಯನ್ನು ಸುಲಭದಲ್ಲಿ ಹಂಚಿಕೊಳ್ಳುವುದಕ್ಕೆ ನೆರವು ನೀಡುವ ಫೀಚರ್ ಇದು. ಈ ಫೀಚರ್ ಕ್ಯೂಆರ್ ಕೋಡ್ ನ್ನು ಜನರೇಟ್ ಮಾಡುತ್ತದೆ ಆ ಮೂಲಕ ನೀವು ನಿಮ್ಮ ಕಾಂಟ್ಯಾಕ್ಟ್ ಮಾಹಿತಿಯನ್ನು ಹಂಚಿಕೊಳ್ಳಬಹುದು. ಒಮ್ಮೆ ಕ್ಯೂಆರ್ ಕೋಡ್ ಹಂಚಿಕೆಯಾದರೆ, ವಾಟ್ಸ್ ಆಪ್ ಸ್ವಯಂಚಾಲಿತವಾಗಿ ಎಲ್ಲಾ ಫೀಲ್ಡ್ ಗಳನ್ನು ಬಳಕೆದಾರರ ಅಡ್ರೆಸ್ ಬುಕ್ ನಲ್ಲಿ ತುಂಬಿಸುತ್ತದೆ ಮತ್ತು ಸೇವ್ ಮಾಡಿಕೊಳ್ಳಲು ಸುಲಭವಾಗುತ್ತದೆ.

ಮಲ್ಟಿ-ಶೇರ್ ಫೈಲ್ಸ್: ಮಲ್ಟಿಪಲ್ ಫೈಲ್ ಗಳನ್ನು ಮಲ್ಟಿಪಲ್ ಕಾಂಟ್ಯಾಕ್ಟ್ ನೊಂದಿಗೆ ಹಂಚಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ. ಈ ಫೀಚರ್ ಮೂಲಕ ಪಿಡಿಎಫ್, ಆಡಿಯೋ ಇತ್ಯಾದಿ ಫೈಲ್ ಗಳನ್ನು ಬೇರೆ ಅಪ್ಲಿಕೇಷನ್ನಿನ ಎರಡು, ಮೂರು ಕಾಂಟ್ಯಾಕ್ಟ್ ಜೊತೆಗೆ ಹಂಚಿಕೊಳ್ಳಬಹುದು.

ಫುಶ್ ನೋಟಿಫಿಕೇಷನ್ ನಲ್ಲೇ ವೀಡಿಯೋ ನೋಡಿ :

ಫುಶ್ ನೋಟಿಫಿಕೇಷನ್ ನಲ್ಲೇ ವೀಡಿಯೋ ನೋಡಿ :

ಐಓಎಸ್ ನಲ್ಲಿ ಈಗಾಗಲೇ ಈ ಫೀಚರ್ ಲಭ್ಯವಿದೆ. ಫುಶ್ ನೋಟಿಫಿಕೇಷನ್ ನಲ್ಲೇ ವೀಡಿಯೋಗಳನ್ನು ಪ್ಲೇ ಮಾಡಿಕೊಂಡು ನೋಡಿಕೊಳ್ಳಬಹುದಾದ ಅವಕಾಶ ಬಳಕೆದಾರರಿಗೆ ಈ ಫೀಚರ್ ಮೂಲಕ ಲಭ್ಯವಾಗುತ್ತದೆ. ಅದಕ್ಕಾಗಿ ಅವರು ವಾಟ್ಸ್ ಆಪ್ ನ್ನು ತೆರೆಯಬೇಕಾಗಿರುವ ಅಗತ್ಯವಿರುವುದಿಲ್ಲ.

ಕಾಂಟ್ಯಾಕ್ಟ್ಸ್ ರ್ಯಾಂಕಿಂಗ್: ನೀವು ಚಾಟ್ ಮಾಡುವ ಆಧಾರದಲ್ಲಿ ಕಾಂಟ್ಯಾಕ್ಟ್ ಗಳಿಗೆ ರ್ಯಾಂಕ್ ಸಿಗುತ್ತದೆ. ಅಂದರೆ ನೀವು ಯಾರೊಂದಿಗೆ ಹೆಚ್ಚು ಚಾಟ್ ಮಾಡುತ್ತೀರೋ ಅವರಿಗೆ ನಂಬರ್ 1 ಸ್ಥಾನ. ಉತ್ತಮ ರ್ಯಾಕಿಂಗ್ ನ ಅರ್ಥ ನೀವು ಅತೀ ಹೆಚ್ಚು ಮೀಡಿಯಾ, ಟೆಕ್ಸ್ಟ್ ಫೈಲ್ ಗಳನ್ನು ಯಾರೊಂದಿಗೆ ಹಂಚಿಕೊಳ್ಳುತ್ತೀರೋ ಅವರು ನಿಮ್ಮ ಲಿಸ್ಟ್ ನ ಮೇಲ್ದರ್ಜೆಯಲ್ಲಿರುತ್ತಾರೆ.

ವಾಟ್ಸ್ ಆಪ್ ನಲ್ಲಿ ಮಾತ್ರವೇ ಕಾಂಟ್ಯಾಕ್ಟ್ ಆಡ್ ಮಾಡಿ: ವಾಟ್ಸ್ ಆಪ್ ಗೆ ಕಾಂಟ್ಯಾಕ್ಟ್ ಸೇರಿಸುವುದಕ್ಕೆ ಸುಲಭ ಮಾರ್ಗವಿದು. ವಾಟ್ಸ್ ಆಪ್ ನಲ್ಲಿಯೇ ಕಾಂಟ್ಯಾಕ್ಟ್ ನ್ನು ಸೇರಿಸಿಕೊಳ್ಳುವುದಕ್ಕೆ ಈ ಫೀಚರ್ ಸಹಾಯಕವಾಗಿರುತ್ತದೆ. ಒಮ್ಮೆ ಈ ಫೀಚರ್ ಬಿಡುಗಡೆಯಾದರೆ ವಾಟ್ಸ್ ಆಪ್ ನಿಮಗೆ ದೇಶವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹೇಳುತ್ತದೆ ಮತ್ತು ಕಾಂಟ್ಯಾಕ್ಟ್ ನಲ್ಲಿ ಸ್ವಯಂಚಾಲಿತವಾಗಿ ಫೋನ್ ನಂಬರ್ ಗೆ ಸಂಬಂಧಿಸಿದ ಕಂಟ್ರಿಕೋಡ್ ಆಡ್ ಆಗುತ್ತದೆ.

Best Mobiles in India

Read more about:
English summary
10 ways in which WhatsApp may change in 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X