ಈ 10 ಹೊಸತನಗಳಿಂದ ಐಪೋನ್ ಇನ್ನಷ್ಟು ಉತ್ತಮಗೊಳ್ಳಲಿದೆ..!

  ಆಪಲ್ ನ ಎರಡು ದಿನಾಂಕಗಳನ್ನು ಎಲ್ಲರೂ ಕಾಯುತ್ತಿರುತ್ತಾರೆ. ಒಂದು ಆಪಲ್ ಸಂಸ್ಥೆ ಯಾವಾಗ ಹೊಸ ಐಫೋನ್ ಬಿಡುಗಡೆಗೊಳಿಸುತ್ತೆ ಎಂಬುದನ್ನು ಇನ್ನೊಂದು WWDC ದಿನ ಅಂದರೆ ಆಪಲ್ ಸಂಸ್ಥೆ ಹೊಸ ಸಾಫ್ಟ್ ವೇರ್ ಗಳನ್ನು ಬಿಡುಗಡೆಗೊಳಿಸಿ ತಮ್ಮ ಡಿವೈಸ್ ಗಳ ಪವರ್ ನ್ನು ಹೆಚ್ಚಿಸುವ ದಿನ. ಜೂನ್ 4 ರಂದು WWDC 2018 ರ ಕಾರ್ಯಕ್ರಮದಲ್ಲಿ ಐಫೋನಿನಲ್ಲಿ ಸದ್ಯದಲ್ಲೇ ಬದಲಾಗುವ ವೈಶಿಷ್ಟ್ಯಗಳ ಬಗ್ಗೆ ವಿವರಣೆ ನೀಡಲಾಗಿದೆ.

  ಈ 10 ಹೊಸತನಗಳಿಂದ ಐಪೋನ್ ಇನ್ನಷ್ಟು ಉತ್ತಮಗೊಳ್ಳಲಿದೆ..!

  ಹೌದು ios 12 ಸದ್ಯದಲ್ಲೇ ಬಿಡುಗಡೆಗೊಳ್ಳುತ್ತಿದ್ದು, ಐಫೋನ್, ಐಪ್ಯಾಡ್ ಗಳಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಅವು ಐಫೋನನ್ನು ಇನ್ನಷ್ಟು ಸುಂದರಗೊಳಿಸಲಿದ್ದು. ನಿಮಗೆ ಅಧ್ಬುತ ಅನುಭವ ನೀಡಲಿವೆಯಂತೆ. ಹಾಗಾದ್ರೆ ಯಾವೆಲ್ಲ ಬದಲಾವಣೆಗಳಾಗುತ್ತೆ. ಹೇಗೆ ನಿಮ್ಮ ಐ ಪೋನ್ ಇನ್ನಷ್ಟು ಬೆಟರ್ ಆಗುತ್ತೆ ಎಂದು ತಿಳಿದುಕೊಳ್ಳಬೇಕಾ.. ಹಾಗಿದ್ರೆ ಮುಂದೆ ಓದಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1. ಫೋನಿನ ಪ್ರದರ್ಶನ ವೇಗ ಹೆಚ್ಚಳ ಮತ್ತು ಅಧ್ಬುತ

  ಆಪಲ್ ಮಾತು ನೀಡಿದಂತೆ iOS 12 ಮೂಲಕ ಐಫೋನ್ ಇನ್ನಷ್ಟು ವೇಗವಾಗಿ ಕೆಲಸ ಮಾಡಲಿದೆ. ಈಗಾಗಲೇ ಇರುವ ಐಫೋನ್ ಗಳೂ ಕೂಡ ಅಪ್ ಡೇಟ್ ಆಗಿ ಫಾಸ್ಟ್ ಆಗಲಿವೆ. ಅತಿಯಾಗಿ ಫೋನ್ ಬಳಕೆ ಮಾಡುವವರಿಗೂ ಇದು ನೆರವಿಗೆ ಬರಲಿದೆ. ಹಿಂದೆಲ್ಲ ಹೊಸ OS ಅಪ್ ಗ್ರೇಡ್ ಆದಾಗ ಐಫೋನ್ ಗಳು ನಿಧಾನಗತಿಯ ಪ್ರದರ್ಶನ ತೋರಿರುವುದನ್ನು ನಾವು ಗಮನಿಸಿದ್ದೇವೆ. ಆಪಲ್ ಆ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಂಡಿದ್ದು ಈ ಬಾರಿ ಅಂತಹ ಸಮಸ್ಯೆ ಎದುರಾಗುವುದಿಲ್ಲ.

  2. ಗ್ರೂಪ್ ಫೇಸ್ ಟೈಮ್ : 32 ಮಂದಿ ಒಂದೇ ಕರೆಯಲ್ಲಿ

  ಫೇಸ್ ಟೈಮ್ ಜಾರಿಗೆ ಬಂದು ಸರಿಸುಮಾರು 8 ವರ್ಷ ಕಳೆದಿದೆ. ಆದರೆ ಇದುವರೆಗೂ ಅಂತಹ ದೊಡ್ಡ ಮಟ್ಟದ ಅಪ್ ಗ್ರೇಡ್ ಆಗಿರಲಿಲ್ಲ. ಆದರೆ ಈಗ ಆಪಲ್ 32 ಜನರು ಒಟ್ಟಿಗೆ ಕರೆ ಮಾಡಬಹುದಾದ ಆಯ್ಕೆಯನ್ನು ಫೇಸ್ ಟೈಮ್ ಮೂಲಕ ಒದಗಿಸಿಕೊಡಲಿದೆ. ಎಮೋಜಿಗಳನ್ನು ಕೂಡ ಫೇಸ್ ಟೈಮ್ ನಲ್ಲಿ ಸೇರಿಸಬಹುದಾಗಿದೆ.

  3. ಸಿರಿ ಮತ್ತಷ್ಟು ಚುರುಕಾಗಿದೆ: ಮೂರನೇ ಪಾರ್ಟಿ ಆಕ್ಸಿಸ್ ಗೆ ಹೆಚ್ಚು ಅವಕಾಶವಿದೆ

  ಗೂಗಲ್ ಮತ್ತು ಅಮೇಜಾನ್ ಗಳು ಗಿರಾಕಿಗಳಿಗಾಗಿ ಮತ್ತಷ್ಟು ಚುರುಕಾದ ಸಹಾಯಕಗಳನ್ನು ಒದಗಿಸಿವೆ. ಅಸಿಸ್ಟೆಂಟ್ ಮತ್ತು ಅಲೆಕ್ಸಾಗಳು. ಅದೇ ರೀತಿ ಆಪಲ್ ಕೂಡ ಸಿರಿಗೆ ಇನ್ನಷ್ಟು ಪ್ರಗತಿಗಳನ್ನು ನೀಡಿದೆ. ಆ ಮೂಲಕ ಥರ್ಡ್ ಪಾರ್ಟಿ ಆಪ್ ಗಳನ್ನು ನಿಮ್ಮ ಕೆಲಸಗಳಿಗೆ ಬಳಸಬಹುದಾಗಿದೆ. ಉದಾಹರಣೆಗೆ ಸಿರಿಯಲ್ಲಿ ನೀವು ರಿಸರ್ವೇಷನ್, ನೋಟಿಫಿಕೇಷನ್ ಗಳನ್ನು ಮ್ಯಾನೇಜ್ ಮಾಡುವುದು ಇತ್ಯಾದಿಗಳನ್ನು ಸುಲಭದಲ್ಲಿ ಮಾಡಬಹುದು.

  4. ಫೋಟೋ ಹಂಚುವಿಕೆ – ಸುಲಭ ಮತ್ತು ಉತ್ತಮ

  ಇನ್ನು ಫೋಟೋ ಹಂಚಿಕೊಳ್ಳುವುದು ಐಫೋನಿನಲ್ಲಿ ಸುಲಭವಾಗಲಿದೆ ಯಾಕೆಂದರೆ ಆಪಲ್ "for you" ಅನ್ನೋ ಹೊಸ ಟ್ಯಾಬನ್ನು ಸೇರಿಸುತ್ತಿದೆ. ಒಂದೇ ಘಳಿಗೆಯಲ್ಲಿ ನೀವು ಸಮಾರಂಭದ ಇಲ್ಲವೇ ಗೆಳೆಯರ ಬಳಗದ ಫೋಟೋಗಳನ್ನು ಫೋಟೋಗಳ ಆಪ್ ಮೂಲಕ ಹಂಚಿಕೊಳ್ಳಬಹುದು.

  5. ಮೋಮೋಜಿ ಮತ್ತು ಅನಿಮೋಜಿ – ಐಫೋನ್ ಗೆ ಮತ್ತಷ್ಟು ಮೋಜು ಸೇರಿಕೊಳ್ಳಲಿದೆ

  ಐಫೋನ್ ಎಕ್ಸ್ ಮೂಲಕ ಆಪಲ್ ಅನಿಮೋಜಿಯನ್ನು ವಿಶ್ವಕ್ಕೆ ಪರಿಚಯಿಸಿದೆ. ಈಗ 4 ಹೊಸ ಅನಿಮೋಜಿಯನ್ನು ಸೇರಿಸಿದೆ. ಅದುವೇ - koala, t-rex, ಹುಲಿ ಮತ್ತು ದೆವ್ವ - ಈ ಅನಿಮೋಜಿಗಳು iOS 12 ನಲ್ಲಿ ಲಭ್ಯ. ಅಷ್ಟೇ ಅಲ್ಲ ಇದರ ಜೊತೆಗೆ ವಯಕ್ತಿಕ ಅನಿಮೋಜಿ ಅಂದರೆ ಮೆಮೋಜಿಗಳು iOS 12ನಲ್ಲಿ ಇರಲಿವೆ. ಈ ಮೂಲಕ ಮೋಜಿನ ಕೋಟೇಷನ್ ಗಳನ್ನು ಮಾಡಲು ಇದು ಐಫೋನಿನಲ್ಲಿ ನೆರವಾಗುತ್ತೆ.

  6. AR(Augmented reality) ಹೆಚ್ಚು ಒತ್ತು

  ಆಪಲ್ ಗೆ ದೊಡ್ಡ AR ಸಪೋರ್ಟ್ ಇದೆ. ಇದು ಇನ್ನು ಮುಂದೆ ಬಳಕೆದಾರರಿಗೆ ಹೆಚ್ಚು ಆಕ್ಸಿಸೇಬಲ್ ಆಗಲಿದೆ. ಹೊಸ 3ಡಿ ವೈಶಿಷ್ಟ್ಯವೊಂದನ್ನು AR ಸಪೋರ್ಟ್ ಮೂಲಕ ios 12 ನಲ್ಲಿ ಸೇರಿಸಲಾಗಿದೆ. ಈ ಹೊಸ ಫಾರ್ಮೆಟ್ ನ್ನು USDZ ನ್ನು ಸಫಾರಿ ಮತ್ತು ಮೆಸೇಜಸ್ ನಲ್ಲಿ ಸೇರಿಸಲಾಗಿದ್ದು, AR ಗೆ ಸಂಬಂಧಿಸಿದ ಆಪ್ ಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಲು ios 12 ನಲ್ಲಿ ನೆರವು ಸಿಗಲಿದೆ.

  7. ಸ್ಕ್ರೀನ್ ಟೈಮ್ – ಆಪಲ್ ನಿಂದ ಡಿಜಿಟಲ್ ಡೀಟಾಕ್ಸ್

  ಆಪ್ ಹೊಸ ವೈಶಿಷ್ಟ್ಯವೊಂದನ್ನು ಜಾರಿಗೆ ತಂದಿದೆ. ಇದು ನೀವು ಒಟ್ಟಾರೆಯಾಗಿ ಬಳಸುವ ಸ್ಮಾರ್ಟ್ ಫೋನ್ ಸಮಯವನ್ನು ಕಡಿತಗೊಳಿಸುವ ಉದ್ದೇಶ ಹೊಂದಿದೆ. ಹೇಗೆ ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಕಳೆಯುತ್ತೀದ್ದೀರಿ ಎಂಬುದನ್ನು ಇದು ತಿಳಿಸಲಿದೆ. ಯಾವ ಆಪ್ ನ್ನು ನೀವು ಅಧಿಕವಾಗಿ ಬಳಸಿದ್ದೀರಿ ಮತ್ತು ನೀವು ಎಷ್ಟು ಸಾಮಾನ್ಯವಾಗಿ ನಿಮ್ಮ ಮೊಬೈಲ್ ಮುಟ್ಟುತ್ತಿದ್ದೀರಿ ಎಂಬುದನ್ನು ತಿಳಿಸುತ್ತೆ. ಆ ಮೂಲಕ ನೀವು ವಿನಾಃಕಾರಣ ಯಾವುದಾದರೂ ಆಪ್ ಗೆ ಅಡಿಕ್ಟ್ ಆಗಿದ್ದರೆ ಅದನ್ನು ಡಿಲೀಟ್ ಮಾಡಲು ಸಲಹೆ ನೀಡುತ್ತೆ. ಇದು ನೋಟಿಫಿಕೇಷನ್ ಗಳ ಮೇಲೂ ನಿಗಾ ಇಡಲಿದೆ. ನೀವು ಮಾಡುವ ಕೆಲಸಕ್ಕೆ ಅದು ಅಗತ್ಯವಿಲ್ಲದೇ ಇದ್ದರೆ ಅವುಗಳನ್ನು ಕಡೆಗಣಿಸಲು ನೆರವು ನೀಡಲಿದೆ.

  8. ಭದ್ರತಾ ವಿಚಾರ – ಕಳ್ಳರಿಗೆ ನೋ ಎಂಟ್ರಿ

  ಸೆಕ್ಯುರಿಟಿ ವಿಚಾರವು ಆಪಲ್ ನಲ್ಲಿ ಯಾವಾಗಲೂ ಪ್ರಾಮುಖ್ಯತೆ ಪಡೆದಿರುತ್ತೆ. ಅದು ios 12 ನಲ್ಲೂ ಮುಂದುವರಿದಿದೆ. ನಿಮ್ಮ ಆನ್ ಲೈನ್ ವಿಚಾರಗಳನ್ನು ಇತರೆ ವೆಬ್ ಸೈಟ್ ಗಳು ಟ್ರ್ಯಾಕ್ ಮಾಡುವುದನ್ನು ನಿಲ್ಲಿಸುವ ಉದ್ದೇಶವನ್ನು ಇದರಲ್ಲಿ ಹೊಂದಲಾಗಿದೆ. ಇದರ ಪರಿಣಾಮವಾಗಿ ಸಫಾರಿ ಬ್ರೌಸರ್ ಮೂಲಕ ನಿಮ್ಮ ಫೇಸ್ ಬುಕ್ ನ್ನು ಯಾರೂ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ.

  9. ಯಾರು ತೊಂದರೆ ನೀಡಬೇಡಿ : ಫೋನ್ ಬಳಕೆ ಕಡಿತಗೊಳಿಸುವಿಕೆ

  ಹೊಸದಾಗಿರುವ "do not disturb" ವೈಶಿಷ್ಟ್ಯವು ios 12 ನ ಒಂದು ಭಾಗವಾಗಲಿದೆ. ಇದು ನಿಮ್ಮ ನೋಟಿಫಿಕೇಷನ್ ಗಳನ್ನು ರಾತ್ರಿ ಹೊತ್ತು ಅಥವಾ ನೀವು ಇಚ್ಛೆ ಪಟ್ಟಾಗ ಕಾಣದಂತೆ ಮಾಡಲು ಸಾಧ್ಯವಿದೆ. ಇದು ಫೋನಿಗೆ ಅಡಿಕ್ಟ್ ಆಗುವುದನ್ನು ತಪ್ಪಿಸಲು ಇರುವ ಮತ್ತೊಂದು ಯೋಜನೆ. ಅಷ್ಟೇ ಅಲ್ಲ ನೀವು " do not disturb" ಆಯ್ಕೆಯನ್ನು ಚಲನಚಿತ್ರ ನೋಡುವಾಗಲೂ ಕೂಡ ಸೆಟ್ ಮಾಡಬಹುದು. ಲೋಕೋಷನ್ ಗೆ ಅನುಸಾರವಾಗಿ ಸೆಟ್ ಮಾಡುವ ಅವಕಾಶವಿರುತ್ತೆ.

  ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
  10. ಆಪಲ್ ಕಾರ್ ಪ್ಲೇ: ಗೂಗಲ್ ಮ್ಯಾಪ್ ಸದ್ಯದಲ್ಲೇ ಬರಲಿದೆ

  10. ಆಪಲ್ ಕಾರ್ ಪ್ಲೇ: ಗೂಗಲ್ ಮ್ಯಾಪ್ ಸದ್ಯದಲ್ಲೇ ಬರಲಿದೆ

  ಬಹಳ ಸಮಯದಿಂದ, ಆಪಲ್ ನ ಕಾರ್ ಪ್ಲೇ ಅಪೂರ್ಣವೆಂದೇ ಅನ್ನಿಸಿತ್ತು ಯಾಕೆಂದರೆ ಇದರ ನೇವಿಗೇಷನ್ ತುಂಬಾ ಇತ್ತು. ಆದರೆ ios 12 ಮೂಲಕ ಆಪಲ್ ಥರ್ಡ್ ಪಾರ್ಟಿ ಆಪ್ ಗೆ ಬೆಂಬಲ ನೀಡುತ್ತೆ. ಆ ಮೂಲಕ ಗೂಗಲ್ ಮ್ಯಾಪ್ ಆಪಲ್ ಕಾರ್ ಪ್ಲೇ ಗೆ ಸೇರಲಿದೆ. ಇದು ಯಾರು ತಮ್ಮ ಕಾರಿನಲ್ಲಿ ಮ್ಯಾಪ್ ಬಳಸುತ್ತಾರೋ ಅವರಿಗೆ ಬಹಳ ಅನುಕೂಲ ಮಾಡಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  10 ways your iPhone is set to get better. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more