ಗೂಗಲ್ ಪೋಟೋಸ್‌ನಲ್ಲಿರುವ ಈ ಫೀಚರ್‌ಗಳು ನಿಮಗೆ ತಿಳಿದಿಲ್ಲ..!
ಇಂದಿನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವಂತೆ ಗೂಗಲ್ ಫೋಟೋಸ್ ಆಪ್ ನೀವು ತಿಳಿದುಕೊಂಡಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಿಮಗೆ ಲಾಭವನ್ನು ಮಾಡಿಕೊಡುತ್ತಿದೆ.

ನೀವು ತುಂಬಾ ದಿನದಿಂದ ಗೂಗಲ್ ಫೋಟೋಸ್ ಆಪ್ ಬಳಸುತ್ತಿದ್ದರೂ ನಿಮಗೆ ತಿಳಿದಂತಹ ಆಯ್ಕೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಅನಿಮೇಶನ್ ಕ್ರಿಯೇಟ್ ಮಾಡುತ್ತದೆ
ನೀವು ಗೂಗಲ್ ಫೋಟೋಸ್ ಆಪ್ ನಲ್ಲಿ ನಿಮ್ಮದೇ ಹತ್ತರಿಂದ ಹದಿನೈದು ಫೋಟೋಗಳನ್ನು ಸೆಲೆಕ್ಟ್ ಮಾಡಿಕೊಂಡು ಅನಿಮೇಶನ್ ಗಳನ್ನು ಕ್ರಿಯೇಟ್ ಮಾಡಿಕೊಳ್ಳುವ ಅವಕಾಶವನ್ನು ಗೂಗಲ್ ಫೋಟೋಸ್ ಆಪ್ ನಲ್ಲಿ ಕಾಣಬಹುದಾಗಿದೆ.

ಕೋಲೇಜ್ ಮಾಡುತ್ತದೆ
ಗೂಗಲ್ ಫೋಟೋಸ್ ಆಪ್ ನಿಮ್ಮ ಫೋಟೋಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ತನ್ನ ಆಪ್ ನಲ್ಲಿ ಕೊಲಾಜ್ ಗಳನ್ನು ಮಾಡಿಕೊಡಲಿದೆ. ಇವುಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಬಹುದಾಗಿದೆ. ಹೆಚ್ಚಿನ ಲೈಕ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

ಫೋಟೋ ಎಡಿಟ್
ಇದಲ್ಲದೆ ಗೂಗಲ್ ಫೋಟೋಸ್ ಆಪ್ ಸ ನಿಮಗೆ ಕ್ಷಣಮಾತ್ರದಲ್ಲಿ ಫೋಟೋಗಳನ್ನು ಎಡಿಟ್ ಮಾಡುವಂತಹ ಆಯ್ಕೆಯನ್ನು ಹೊಂದಿದೆ. ಹೀಗಾಗಿ ನೀವು ಫೋಟೋ ಎಡಿಟ್ ಗಾಗಿ ಬೇರೆ ಯಾವುದೇ ಆಪ್ ಬಳಕೆ ಮಾಡುವ ಅವಶ್ಯಕತೆ ಇಲ್ಲ.

ಸ್ಲೈಡ್ ಶೋ ನೋಡಬಹುದು
ಇದಲ್ಲದೇ ಗೂಗಲ್ ಫೋಟೋಸ್ ಆಪ್ ನಲ್ಲಿ ನೀವು ತೆಗೆದಿರುವ ಚಿತ್ರಗಳನ್ನು ಸ್ಲೈಡ್ ಶೋ ಮೂಲಕ ನೋಡಬಹುದು. ಇದು ಬೇರೆ ಆಪ್ ಗಳಿಗಿಂತ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಹಳೆ ಫೋಟೋಗಳನ್ನು ಸ್ಕ್ಯಾನ್ ಮಾಡಬಹುದು:
ಗೂಗಲ್ ಫೋಟೋಸ್ ಆಪ್ ನಲ್ಲಿ ನಿಮ್ಮ ಹಳೆಯ ಫೋಟೋಗಳನ್ನು ಸ್ಕ್ಯಾನ್ ಮಾಡಿ ಸ್ಟೋರe ಮಾಡಿಕೊಳ್ಳುವ ಅವಕಾಶವನ್ನು ಸಹ ಮಾಡಿಕೊಡಲಾಗಿದೆ. ಇದರಿಂದಾಗಿ ನಿಮ್ಮ ನೆನಪುಗಳು ಹೊಸಾಗಿ ಕಾಣಿಸಿಕೊಳ್ಳಲಿದೆ.

ಸ್ಪೇಸ್ ಉಳಿಸಿ
ಇದಲ್ಲದೆ ನಿಮ್ಮ ಮೊಬೈಲ್ ನಲ್ಲಿ ಬೇಡದ ರೀತಿಯಲ್ಲಿ ತುಂಬಿಕೊಂಡಿರುವ ಫೋಟೋಗಳನ್ನು ಡಿಲೀಟ್ ಮಾಡಿ ಜಾಗ ಮಾಡಿಕೊಡುವ ಆಯ್ಕೆಯನ್ನು ನೀವು ಗೂಗಲ್ ಫೋಟೋಸ್ ಆಪ್ ನಲ್ಲಿ ಕಾಣಬಹುದು.

ಸರ್ಚ್ ಮಾಡಬಹುದು
ಇದಲ್ಲದೆ ನೀವು ನಿಮ್ಮ ಫೋಟೋಗಳು ಯಾವುವು, ಅವು ಹೇಗಿದೆ ಎಂಬುದನ್ನು ಆರಾಮವಾಗಿ ಸರ್ಚ್ ಮಾಡುವಂತಹ ಆಯ್ಕೆಯನ್ನು ಸಹ ಗೂಗಲ್ ಫೋಟೋಸ್ ಆಪ್ ನೀಡಲಾಗಿದೆ. ನಿಮಗೆ ಬೇಕಾದಂತೆ ಫೋಟೋಗಳನ್ನು ಸರ್ಚ್ ಮಾಡಬಹುದು.

ಲಿಂಕ್ ಮಾಡಬಹುದು
ಇದಲ್ಲದೆ ನಿಮ್ಮ ಫೋಟೋಗಳನ್ನು ಗೂಗಲ್ ಡ್ರೈವ್ ಮುಖಾಂತರ ನೇರವಾಗಿ ಲಿಂಕ್ ಮಾಡಿ ನಿಮ್ಮ ಸ್ನೇಹಿತರಿಗೆ ಕಳುಹಿಸುವ ಅವಕಾಶವನ್ನು ಗೂಗಲ್ ಫೋಟೋಸ್ ಆಪ್ ನೀಡಲಾಗಿದೆ

ಬ್ಯಾಕಪ್ ತೆಗೆಯಬಹುದು
ಇದಲ್ಲದೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸೇವ್ ಆಗುವಂತಹ ಎಲ್ಲಾ ಫೋಲ್ಡರ್ಗಳನ್ನು ಗೂಗಲ್ ಫೋಟೋಸ್ ಆಪ್ ಬ್ಯಾಕಪ್ ಮಾಡುವ ಅವಕಾಶ ಮಾಡಿಕೊಡಲಾಗಿದೆ .ಇದರಿಂದಾಗಿ ನಿಮಗೆ ಬೇಕಾದ ಎಲ್ಲಾ ಫೋಟೋಗಳನ್ನು google ನೊಂದಿಗೆ ಲಿಂಕ್ ಮಾಡಿಕೊಳ್ಳಬಹುದು.


Click it and Unblock the Notifications








