ದುರುದ್ದೇಶಪೂರಿತವಾಗಿದ್ದ 13 ಆಂಡ್ರಾಯ್ಡ್ ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದೆ

|

ಗೂಗಲ್ ಇತ್ತೀಚೆಗೆ 13 ಆಂಡ್ರಾಯ್ಡ್ ಆಪ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ. ಈ ಆಪ್ ಗಳು ಡಿವೈಸ್ ನಲ್ಲಿ ಮಾಲ್ವೇರ್ ಗಳನ್ನು ಇನ್ಸ್ಟಾಲ್ ಮಾಡುತ್ತಿದ್ದ ಬಗ್ಗೆ ಭದ್ರತಾ ರೀಸರ್ಚರ್ ಗಳು ತಿಳಿಸಿದ ನಂತರ ಈ ಹೆಜ್ಜೆಯನ್ನು ಗೂಗಲ್ ತೆಗೆದುಕೊಂಡಿದೆ. ರೀಸರ್ಚರ್ ಗಳು ತಿಳಿಸಿರುವ ಪ್ರಕಾರ ಈಗಾಗಲೇ ಈ ಆಪ್ ಗಳನ್ನು ಅರ್ಧ ಮಿಲಿಯನ್ ಗೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಹಾಗಾಗಿ ಈ ಆಪ್ ಗಳನ್ನು ಇನ್ಸ್ಟಾಲ್ ಮಾಡಿಕೊಂಡವರ ಡಿವೈಸ್ ಗಳಲ್ಲಿ ಮಾಲ್ವೇರ್ ಗಳು ಈಗಾಗಲೇ ಇನ್ಸ್ಟಾಲ್ ಆಗಿರುವ ಸಾಧ್ಯತೆಗಳು ದಟ್ಟವಾಗಿದೆ ಎಂದು ರೀಸರ್ಚರ್ ಗಳು ತಿಳಿಸಿದ್ದಾರೆ.

ದುರುದ್ದೇಶಪೂರಿತವಾಗಿದ್ದ 13 ಆಂಡ್ರಾಯ್ಡ್ ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್

ಇದಕ್ಕಿಂತ ದೊಡ್ಡ ಆಘಾತಕಾರಿ ವಿಚಾರವೇನೆಂದರೆ, ಇದರಲ್ಲಿದ್ದ ಎರಡು ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ನ “ಟ್ರೆಂಡಿಂಗ್ ಆಪ್” ವಿಭಾಗದಲ್ಲಿ ಗುರುತಿಸಲ್ಪಟ್ಟಿದ್ದವು. ಆದರೆ ಈ ಆಪ್ ಗಳು ಇನ್ನು ಮುಂದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಲಭ್ಯವಿರುವುದಿಲ್ಲ.

ಗೂಗಲ್ ಪ್ಲೇ ಸ್ಟೋರ್ ನಲ್ಲಿದ್ದವು 13 ದುರುದ್ದೇಶಪೂರಿತ ಆಪ್ ಗಳು

ಗೂಗಲ್ ಪ್ಲೇ ಸ್ಟೋರ್ ನಲ್ಲಿದ್ದವು 13 ದುರುದ್ದೇಶಪೂರಿತ ಆಪ್ ಗಳು

ESET ಭದ್ರತಾ ಅಧ್ಯಯನಕಾರಾದ ಲುಕಾಸ್ ಸ್ಟಿಫಾನ್ಕೋ ಟ್ವೀಟ್ ಮಾಡಿರುವಂತೆ,13 ದುರುದ್ದೇಶಪೂರಿತ ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸುಮಾರು ಅಂದಾಜು 560,000 ಮಂದಿ ಡೌನ್ ಲೋಡ್ ಮಾಡಿದ್ದಾರೆ. ಈ ಎಲ್ಲಾ ಆಪ್ ಗಳು ಲೂಯಿಝ್ ಪಿಂಟೋ ಹೆಸರಿನ ಡೆವಲಪರ್ ಡೆವಲಪ್ ಮಾಡಿರುವುದಾಗಿ ನಮೂದಿಸಲಾಗಿದೆ ಮತ್ತು ಇದನ್ನು ಗೇಮ್ ಗಳೆಂದು ತಿಳಿಸಲಾಗಿದೆ.

ಆದರೆ ಈ ಆಪ್ ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ ಮತ್ತು ಕ್ರ್ಯಾಷ್ ಆಗಿದೆ. ಯಾವಾಗ ಬಳಕೆದಾರರು ಇದನ್ನು ಲಾಂಚ್ ಮಾಡಲು ಪ್ರಯತ್ನಿಸುತ್ತಾರೋ ಆಗ ಫಂಕ್ಷನಾಲಿಟಿಗಳು ಕಾರ್ಯ ನಿರ್ವಹಿಸುವುದಿಲ್ಲ.

ವರದಿಯು ಹೇಳುವಂತೆ, ಈ ಆಪ್ ಗಳು ಬಳಕೆದಾರರಿಗೆ ಗೇಮ್ ಸೆಂಟರ್ ಎಂಬ ಎಪಿಕೆಯನ್ನು ಇನ್ಸ್ಟಾಲ್ ಮಾಡುವಂತೆ ರಿಕ್ವೆಸ್ಟ್ ಮಾಡುತ್ತದೆ. ಗೇಮ್ ಸೆಂಟರ್ ನ್ನು ಲಾಂಚ್ ಮಾಡುತ್ತಿದ್ದಂತೆ, ಇದು ತನ್ನಷ್ಟಕ್ಕೇ ಹೈಡ್ ಆಗುತ್ತದೆ ಮತ್ತು ಡಿವೈಸ್ ಅನ್ ಲಾಕ್ ಆಗುತ್ತಿದ್ದಂತೆ ಆಡ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. ಇದನ್ನು ತೋರಿಸುವ ವೀಡಿಯೋವನ್ನು ಕೂಡ ಅಧ್ಯಯನಕಾರರು ಪೋಸ್ಟ್ ಮಾಡಿದ್ದಾರೆ.

ಗೂಗಲ್ ತೆಗೆದುಹಾಕಿರುವ ದುರುದ್ದೇಶಪೂರಿತ ಆಪ್ ಗಳ ಪಟ್ಟಿ :

ಗೂಗಲ್ ತೆಗೆದುಹಾಕಿರುವ ದುರುದ್ದೇಶಪೂರಿತ ಆಪ್ ಗಳ ಪಟ್ಟಿ :

ಭದ್ರತಾ ರೀಸರ್ಚರ್ ಗಳು ಹಂಚಿಕೊಂಡಿರುವ ಸ್ಕ್ರೀನ್ ಶಾಟ್ ಗಳ ಆಧಾರದಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿರುವ ಆಪ್ ಗಳ ಪಟ್ಟಿ ಇಲ್ಲಿದೆ. ಟ್ರಕ್ ಕಾರ್ಗೋ ಸಿಮ್ಯುಲೇಟರ್, ಎಕ್ಸ್ ಟ್ರೀಮ್ ಕಾರ್ ಡ್ರೈವಿಂಗ್, ಸಿಟಿ ಟ್ರಾಫಿಕ್ಸ್ ಮೋಟೋ ರೇಸಿಂಗ್, ಮೋಟೋ ಕ್ರಾಸ್ ಎಕ್ಸ್ಟ್ರೀಮ್, ಹೈಪರ್ ಕಾರ್ ಡ್ರೈವಿಂಗ್ ಸಿಮ್ಯುಲೇಟರ್, ಎಕ್ಸ್ ಟ್ರೀಮ್ ಕಾರ್ ಡ್ರೈವಿಂಗ್, ಫೈಯರ್ ಫೈಟರ್-ಫೈಯರ್ ಟ್ರಕ್ ಸಿಮ್ಯುಲೇಟರ್, ಕಾರ್ ಡ್ರೈವಿಂಗ್ ಸಿಮ್ಯುಲೇಟರ್, ಎಕ್ಸ್ ಟ್ರೀಮ್ ಸ್ಪೋರ್ಟ್ ಕಾರ್, SUV 4x4 ಡ್ರೈವಿಂಗ್ ಸಿಮ್ಯುಲೇಟರ್, ಲಕ್ಸುರಿ ಕಾರ್ಸ್ SUV ಸಿಮ್ಯುಲೇಟರ್, ಲಕ್ಸುರಿ ಕಾರ್ ಪಾರ್ಕಿಂಗ್ ಮತ್ತು SUV ಸಿಟಿ ಕ್ಲೈಂಬ್ ಪಾರ್ಕಿಂಗ್.

ಆಂಡ್ರಾಯ್ಡ್ ಮಾಲ್ವೇರ್ ಆಪ್ಸ್ ತೆಗೆದುಹಾಕಲಾಗಿದೆ

ಆಂಡ್ರಾಯ್ಡ್ ಮಾಲ್ವೇರ್ ಆಪ್ಸ್ ತೆಗೆದುಹಾಕಲಾಗಿದೆ

ಪ್ಲೇ ಸ್ಟೋರ್ ನಲ್ಲಿ ಇದೇನು ಮೊದಲ ಬಾರಿಗೆ ಆಪ್ ಗಳನ್ನು ತೆಗೆದುಹಾಕಲಾಗಿರುವುದಲ್ಲ. ಕಳೆದ ತಿಂಗಳು ಸಿಸ್ಕೋ ಟಲಾಸ್ ಅಧ್ಯಯನಕಾರರು ಕಂಡುಹಿಡಿದಿರುವಂತೆ ಆಂಡ್ರಾಯ್ಡ್ ಮಾಲ್ವೇರ್ ಜಿಪ್ಲೇಯ್ಡ್ ನ್ನು ಡಬ್ ಮಾಡಿದ್ದು ಇದು ಪ್ಲೇ ಸ್ಟೋರ್ ನ ಐಕಾನ್ನೇ ಹೋಲುವ ಐಕಾನ್ ನ್ನು ಬಳಸಿತ್ತು. ಇದು ಬಳಕೆದಾರರ ಡಿವೈಸ್ ಇರುವ ಸ್ಥಳವನ್ನು ಮಾನಿಟರ್ ಮಾಡುವ ಸಾಮರ್ಥ್ಯವನ್ನು ಹೊಂದಿತ್ತು ಮತ್ತು ಅವರ ಬ್ಯಾಂಕಿಂಗ್ ದಾಖಲಾತಿಗಳನ್ನು ಕದಿಯುವ ಕೆಲಸವನ್ನು ಮಾಡುತ್ತಿತ್ತು.ಗೂಗಲ್ ಪ್ಲೇ ಮಾರ್ಕೆಟ್ ಪ್ಲೇಸ್ ಎಂದು ನಮೂದಿಸಿದ್ದ ಆಂಡ್ರಾಯ್ಡ್ ಟ್ರಾಝನ್ ಒಂದು ಇದ್ದು ಇದು ಕೂಡ ಬಳಕೆದಾರರಿಗೆ ಮಾಲ್ವೇರ್ ಗಳನ್ನು ಡಿಟೆಕ್ಟ್ ಮಾಡುವುದಕ್ಕೆ ಅವಕಾಶವೇ ಇಲ್ಲದಂತೆ ಮಾಡಿತ್ತು.

ಈ ವರ್ಷದ ಜನವರಿಯಲ್ಲಿ ಗೂಗಲ್ 700,000 ಆಪ್ಸ್ ಮತ್ತು 100,000 ಗೂಗಲ್ ಪ್ಲೇ ನಿಯಮಾವಳಿಗಳನ್ನು ಗಾಳಿಗೆ ತೂರಿದ ಡೆವಲಪರ್ ಗಳನ್ನು ರಿಮೂವ್ ಮಾಡಿರುವ ಬಗ್ಗೆ ಪ್ರಕಟಿಸಿತ್ತು. ಫೇಮಸ್ ಆಪ್ ಗಳನ್ನು ಕಾಪಿ ಮಾಡಿದ್ದ ಸುಮಾರು 250,000 ಮಿಲಿಯನ್ ಆಪ್ಸ್ ಗಳನ್ನು ಕಳೆದ ವರ್ಷದಿಂದ ಕಂಪೆನಿಯು ತೆಗೆದುಹಾಕಿದೆ ಎಂದು ಹೇಳಿದರೆ ನಿಮಗೆ ಆಶ್ಚರ್ಯ ಅನ್ನಿಸಬಹುದು.

Most Read Articles
Best Mobiles in India

Read more about:
English summary
13 malicious Android apps removed from Google Play Store

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X